ಜೆಮ್ಷೆಡ್ಪುರಕ್ಕೆ ಮುನ್ನಡೆ
ಸ್ಟೀಫನ್ ಈಜಿ (16ನೇ ನಿಮಿಷ), ಲೆನ್ ಕುಕಿ (24ನೇ ನಿಮಿಷ) ಮತ್ತು ಡೇವಿಡ್ ಗ್ರಾಂಡೆ (41ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಬಲಿಷ್ಠ ಬೆಂಗಳೂರು ಎಫ್ ಸಿ ವಿರುದ್ಧ ಜೆಮ್ಷೆಡ್ಪುರ ಎಫ್ ಸಿ ಪ್ರಥಮಾರ್ಧದಲ್ಲಿ 3-0 ಗೋಲುಗಳ ಅಂತರದಲ್ಲಿ ಮುನ್ನಡೆ ಕಂಡಿದೆ. ಜೆಮ್ಷೆಡ್ಪುರ ತಂಡ ಇದೇ ಮೊದಲ ಬಾರಿಗೆ ಪ್ರಥಮಾರ್ಧದಲ್ಲಿ 3-0 ಗೋಲುಗಳಿಂದ ಮೇಲುಗೈ ಸಾಧಿಸಿತು. ಬೆಂಗಳೂರಿಗೆ ಗೋಲು ಗಳಿಸಲು ಯಾವುದೇ ಅವಕಾಶ ಸಿಗಲಿಲ್ಲ. ಟಾಟಾ ಪಡೆ ಹೆಚ್ಚಿನ ಸಮಯ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತು ಮಾತ್ರವಲ್ಲ, ಬೆಂಗಳೂರು ಯಾವುದೇ ವಿಭಾಗದಲ್ಲೂ ತನ್ನ ನೈಜ ಶಕ್ತಿ ಪ್ರದರ್ಶಿಸುವಲ್ಲಿ ವಿಫಲವಾಯಿತು. ಎರಡು ಗೋಲುಗಳು ಹೆಡರ್ ಮೂಲಕ ದಾಖಲಾದರೆ ಒಂದು ಗೋಲು ಫಿಲ್ಡ್ ಗೋಲಾಗಿತ್ತು. ಇದರೊಂದಿಗೆ ಐಎಎಸ್ ಎಲ್ ಇತಿಹಾದಲ್ಲೇ ಮೊದಲ ಬಾರಿಗೆ ಪ್ರಥಮಾರ್ಧದಲ್ಲಿ ಮೂರು ಗೋಲುಗಳನ್ನು ಗಳಿಸಿ ಕ್ಲಬ್ ದಾಖಲೆ ಬರೆಯಿತು.
ಕೊನೆಯಲ್ಲೊಂದು ಜಯದ ಗುರಿ
ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪ್ಲೇ ಆಫ್ ತಲಪುವಲ್ಲಿ ವಿಫಲವಾಗಿ ಕೊನೆಯ ಪಂದ್ಯವನ್ನು ಆಡುತ್ತಿರುವ ಜೆಮ್ಷೆಡ್ಪುರ ಮತ್ತು ಬೆಂಗಳೂರು ತಂಡಗಳು ಕೊನೆಯಲ್ಲಿ ಜಯ ಗಳಿಸಿ ನಿರ್ಗಮಿಸುವ ಗುರಿಯೊಂದಿಗೆ ಅಂಗಣಕ್ಕಿಳಿದವು. ಇಲ್ಲಿ ಗೆಲ್ಲುವು ತಂಡವು ಆರನೇ ಸ್ಥಾವನ್ನು ಖಚಿತಪಡಿಸಿಕೊಳ್ಳಲಿದೆ. ಈಗ ಜೆಮ್ಷೆಡ್ಪುರ ತಂಡ ಆರನೇ ಸ್ಥಾನದಲ್ಲಿದೆ. ಮುಂಬೈ ಸಿಟಿ ವಿರುದ್ಧ ಜಯ ಗಳಿಸಿದ ಆತ್ಮವಿಶ್ವಾಸದಲ್ಲಿ ಜೆಮ್ಷೆಡ್ಪುರ ಈ ಪಂದ್ಯಕ್ಕೆ ಆಗಮಿಸಿದೆ. ಬೋರಿಸ್ ಸಿಂಗ್ ಮತ್ತು ಡೇವಿಡ್ ಗ್ರಾಂಡೆ ಗಳಿಸಿದ ಗೋಲು ತಂಡಕ್ಕೆ ಜಯ ತಂದುಕೊಟ್ಟಿತ್ತು.
ಗೌರವಕ್ಕಾಗಿ ಜಯದ ಅನಿವಾರ್ಯತೆ
ಕಳೆದ 9 ಪಂದ್ಯಗಳಲ್ಲಿ ಓವೆನ್ ಕೊಯ್ಲ್ ಪಡೆ 3 ಜಯ ಹಾಗೂ 2 ಡ್ರಾ ಕಂಡಿತ್ತು. ಬೆಂಗಳೂರು ತಂಡ ಗೋಲು ಗಳಿಸಬೇಕಾದರೆ ಉತ್ತಮ ಡಿಫೆನ್ಸ್ ವಿಭಾಗವನ್ನು ಹೊಂದಿರು ಜೆಮ್ಷೆಡ್ಪುರದ ವಿರುದ್ಧ ಮೇಲುಗೈ ಸಾಧಿಸಬೇಕಾಗಿದೆ. ಈ ಋತುವಿನಲ್ಲಿ ಒಟ್ಟು 7 ಗೋಲುಗಳನ್ನು ಗಳಿಸಿರುವ ಸುನಿಲ್ ಛೆಟ್ರಿ ಹಾಗೂ ಕ್ಲೈಟನ್ ಸಿಲ್ವಾ ಅವರ ಮೇಲೆ ತಂಡ ಹೆಚ್ಚು ಅವಲಂಭಿತವಾಗಿದೆ. ಮೊದಲ ಬಾರಿಗೆ ಪ್ಲೇ ಆಫ್ ತಲಪುವಲ್ಲಿ ವಿಫಲವಾಗಿರುವ ಬೆಂಗಳೂರು ತಂಡಕ್ಕೆ ಗೌರವ ಕಾಯ್ದುಕೊಳ್ಳಲು ಜಯದ ಅನಿವಾರ್ಯತೆ ಇದೆ.