ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಐಎಸ್‌ಎಲ್: ಬಿಎಫ್‌ಸಿ ವಿರುದ್ಧ ಗೆದ್ದು ಅಗ್ರ ಸ್ಥಾನ ಕಾಯ್ದುಕೊಳ್ಳುವ ಹಂಬಲದಲ್ಲಿ ಮುಂಬೈ

By Isl Media
isl 2020 21, bengaluru fc vs mumbai city fc, match 95 preview

ಗೋವಾ : ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಈಗಾಗಲೇ ಪ್ಲೇ ಆಫ್ ಹಂತ ತಲುಪಿರುವ ಮುಂಬೈ ಸಿಟಿ ಎಫ್ ಸಿ ತಂಡ ಸುಸ್ಥಿತಿಯಲ್ಲಿದೆ. ಋತುವಿನ ಹೆಚ್ಚಿನ ಸಮಯವನ್ನು ಅಗ್ರ ಸ್ಥಾನದಲ್ಲೇ ಕಳೆದರುವ ಸರ್ಗಿಯೊ ಲೊಬೆರಾ ಪಡೆ ಇತ್ತೀಚಿನ ಪಂದ್ಯಗಳಲ್ಲಿ ಅಮೂಲ್ಯ ಅಂಕಗಳನ್ನು ಕಳೆದುಕೊಂಡಿತ್ತು. ಇದರಿಂದಾ ಅಗ್ರ ಸ್ಥಾನ ಆತಂಕದಲ್ಲಿದೆ. ಆದರೆ ಇದು ಮುಂಬೈ ತಂಡಕ್ಕೆ ಯಾವುದೇ ರೀತಿಯಲ್ಲಿ ಚಿಂತೆಯ ವಿಷಯವಾಗಿಲ್ಲ, ಏಕೆಂದರೆ ಸೋಮವಾರ ಸಂಕಷ್ಟದಲ್ಲಿರುವ ಬೆಂಗಳೂರು ಎಫ್ ಸಿ ವಿರುದ್ಧ ಪಂದ್ಯವನ್ನಾಡಿ ಜಯದೊಂದಿಗೆ ಅಗ್ರ ಸ್ಥಾನ ಕಾಯ್ದುಕೊಳ್ಳುವ ಗುರಿಹೊಂದಿದೆ.

ಹಿಂದಿನ ನಾಲ್ಕು ಪಂದ್ಯಗಳಲ್ಲಿ ಮುಂಬೈ ತಂಡ ಋತುವಿನಲ್ಲಿಯೇ ಕಳಪೆ ಎನ್ನಬಹುದಾದ ದಾಖಲೆಯನ್ನು ಹೊಂದಿತ್ತು. ಆ ನಾಲ್ಕು ಪಂದ್ಯಗಳಲ್ಲಿ ಯಾವುದೇ ಕ್ಲೀನ್ ಶೀಟ್ ಸಾಧನೆಯನ್ನು ತಂಡ ಮಾಡಿಲ್ಲ. ಅಲ್ಲದೆ ಏಳು ಗೋಲುಗಳನ್ನು ನೀಡಿದೆ. ಹಿಂದಿನ 12 ಪಂದ್ಯಗಳಲ್ಲಿ ನೀಡಿದ್ದು ಕೇವಲ 7 ಗೋಲುಗಳು. ಲೊಬೆರಾ ಪಡೆ ನಾಲ್ಕು ಪಂದ್ಯಗಳು 22 ಬಾರಿ ಗೋಲ್ ಗೆ ಗುರಿಇಟ್ಟಿದೆ.

"ನನ್ನ ಪ್ರಕಾರ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ನಾವು ಈ ಹಿಂದೆಯೇ ಉತ್ತಮ ರೀತಿಯಲ್ಲಿ ಆಡಿದ ಕಾರಣ ಈಗ ಉತ್ತಮ ಸ್ಥಿತಿಯಲ್ಲಿರಲು ಕಾರಣ. ನಾವು ನಮ್ಮ ತಪ್ಪನ್ನು ಅರಿತು ಅದನ್ನು ಸರಿಪಡಿಸಿಕೊಂಡಿದ್ದೇವೆ. ಆಟಗಾರರ ವರ್ತನೆ ಖುಷಿಕೊಟ್ಟಿದೆ. ಮುಂಬರುವ ಪಂದ್ಯದ ಬಗ್ಗೆ ನಾವ ಧನಾತ್ಮಕವಾಗಿ ಸ್ಪಂದಿಸುತ್ತೇವೆ," ಎಂದು ಲೊಬೆರಾ ಹೇಳೀದರು.

ಕುಸಿತಕ್ಕೆ ಆಸ್ಪದ ನೀಡಲಾರೆವು

ಕುಸಿತಕ್ಕೆ ಆಸ್ಪದ ನೀಡಲಾರೆವು

ತಮ್ಮ ತಂಡವು ಎಎಫ್ ಸಿ ಚಾಂಪಿಯನ್ಷಿಪ್ ನ ಗುರಿಹೊಂದಿರುವುದರಿಂದ ಇನ್ನು ಯಾವುದೇ ರೀತಿಯ ಕುಸಿತಕ್ಕೆ ಆಸ್ಪದ ನೀಡುವುದು ಸೂಕ್ತವಲ್ಲ ಎಂದಿದ್ದಾರೆ. ಬೆಂಗಳೂರು ತಂಡ ಅತ್ಯಂತ ಅಪಾಯಕಾರಿ ಎಂದಿದ್ದಾರೆ. "ಪ್ರತಿಯೊಂದು ಪಂದ್ಯವೂ ಕಠಿಣವಾದುದು, ಬಿಎಫ್ ಸಿ ವಿರುದ್ಧ ಆಡುವುದು ಕಠಿಣವಾದುದು, ಏಕೆಂದರೆ ಅಲ್ಲಿ ಉತ್ತಮ ಆಟಗಾರಿದ್ದಾರೆ. ಹೊಸ ಕೋಚ್ ಆಗಮನದ ನಂತರ ತಂಡದಲ್ಲಿ ಸ್ಫೂರ್ತಿ ತುಂಬಿರುತ್ತದೆ. ಇದರಿಂದ ಪಂದ್ಯ ಕಠಿಣವಾಗಲಿದೆ, ಆದರೂ ನಾವು ನಿಭಾಯಿಸುತ್ತೇವೆ," ಎಂದು ಲೊಬೆರಾ ಹೇಳಿದರು.

ಬೆಂಗಳೂರಿಗೆ ಗೆಲುವು ಅನಿವಾರ್ಯ

ಬೆಂಗಳೂರಿಗೆ ಗೆಲುವು ಅನಿವಾರ್ಯ

ಅಮಾನತುಗೊಂಡಿರುವ ಹ್ಯುಗೋ ಬೌಮಾಸ್ ಅವರ ಅನುಪಸ್ಥಿತಿಯಲ್ಲಿ ಮುಂಬೈ ನಾಳೆಯ ಪಂದ್ಯವನ್ನಾಡಲಿದೆ. 9 ಗೋಲುಗಳನ್ನು ಗಳಿಸಿರು ಫ್ರಾನ್ಸ್ ನ ಆಟಗಾರ 38 ಅವಕಾಶಗಳನ್ನು ನಿರ್ಮಿಸಿದ್ದಾರೆ. ಪ್ಲೇ ಆಫ್ ಆಸೆಯನ್ನ ಜೀವಂತವಾಗಿರಿಸಕೊಳ್ಳಬೇಕಾದರೆ ಬೆಂಗಳೂರು ತಂಡಕ್ಕೆ ಇಲ್ಲಿ ಗೆಲ್ಲಲೇಬೇಕಾದ ಅಗತ್ಯ ಇದೆ. ಮುಂಬೈ ವಿರುದ್ಧ ಬೆಂಗಳೂರಿನ ಟ್ರ್ಯಾಕ್ ರೆಕಾರ್ಡ್ ಉತ್ತಮವಾಗಿಲ್ಲ. ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಬಾರಿ ಸೋಲು ಕಂಡಿರುವ ಬೆಂಗಳೂರು ಒಂದು ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿದೆ.

ಅಂಕ ಕಳೆದುಕೊಳ್ಳುತ್ತಿದೆ ಅಗ್ರ ತಂಡಗಳು

ಅಂಕ ಕಳೆದುಕೊಳ್ಳುತ್ತಿದೆ ಅಗ್ರ ತಂಡಗಳು

ಇತ್ತೀಚಿನ ಪಂದ್ಯಗಳಲ್ಲಿ ಅಗ್ರ ನಾಲ್ಕರಲ್ಲಿ ತಂಡಗಳು ಅಂಕಗಳನ್ನು ಕಳೆದುಕೊಳ್ಳುತ್ತಿರುವ ಕಾರಣ ಮೂರು ಮತ್ತು ನಾಲ್ಕನೇ ಸ್ಥಾನಗಳಿಗೆ ಅವಕಾಶ ಹೆಚ್ಚಿದೆ. ಮಧ್ಯಂತರ ಕೋಚ್ ನೌಶಾದ್ ಮೂಸಾ ಸದ್ಯ ಒಂದು ಪಂದ್ಯದ ಕಡೆಗೆ ಗುರಿ ಇಡಬೇಕು ಎಂದಿದ್ದಾರೆ. "ಫಲಿತಾಂಶಗಳು ಎಲ್ಲರ ಪರವಾಗಿ ಬರುತ್ತಿದೆ. ನಾವು ಪಂದ್ಯದ ಕಡೆಗೆ ಗಮನ ಹರಿಸುವುದು ಮುಖ್ಯ. ಡಿಫೆನ್ಸ್ ನಮ್ಮ ಸಮಸ್ಯೆಯಾಗಿದೆ, ಅದರ ಬಗ್ಗೆ ನಾವು ಕೆಲಸ ಮಾಡುತ್ತಿದ್ದೇವೆ, "ಎಂದರು.

Story first published: Monday, February 15, 2021, 16:17 [IST]
Other articles published on Feb 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X