ಗೆಲುವಿನ ಹಾದಿ ಹಿಡಿಯೋ ಲೆಕ್ಕಾಚಾರದಲ್ಲಿರುವ ಬಿಎಫ್‌ಸಿಗೆ ಮುಂಬೈ ಸವಾಲು

By Isl Media

ಗೋವಾ: ಮಾಜಿ ಚಾಂಪಿಯನ್ಸ್‌ ಬೆಂಗಳೂರು ಎಫ್‌ಸಿ ತಂಡ ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್‌ ಲೀಗ್‌ ಟೂರ್ನಿಯಲ್ಲಿ ತನ್ನ ಕೊನೆಯ 2 ಲೀಗ್ ಪಂದ್ಯಗಳಲ್ಲಿ ಬ್ಯಾಕ್‌ ಟು ಬ್ಯಾಕ್‌ ಸೋಲನುಭವಿಸಿದೆ. ಈ ಬಗ್ಗೆ ಮಾತನಾಡಿರುವ ಕೋಚ್‌ ಕಾರ್ಲೆಸ್ ಕೌಡಾರ್ಟ್‌, ಅಂಕ ಕಳೆದುಕೊಂಡಿರುವುದಕ್ಕಿಂತಲೂ ತಂಡದಲ್ಲಿ ಹಲವು ಸಂಗತಿಗಳ ಕಡೆಗೆ ಕಾಳಜಿ ವಹಿಸುವ ಅಗತ್ಯವಿದೆ ಎಂದಿದ್ದಾರೆ. ಇದೇ ವೇಳೆ ಇಂಡಿಯನ್ ಸೂಪರ್‌ ಲೀಗ್‌ ಟೂರ್ನಿಯ ಇತಿಹಾಸದಲ್ಲಿ ಬೆಂಗಳೂರು ಎಫ್‌ಸಿ ತಂಡ ಸತತ ಎರಡು ಪಂದ್ಯಗಳಲ್ಲಿ ಗೋಲ್‌ ದಾಖಲಿಸುವಲ್ಲಿ ವಿಫಲವಾಗಿರುವುದು ಇದೇ ಮೊದಲ ಬಾರಿ ಆಗಿದೆ.

ಭಾರತ vs ಆಸ್ಟ್ರೇಲಿಯಾ: ಮೂರನೇ ಟೆಸ್ಟ್‌ಗೆ ವೀಕ್ಷಕರ ಸಂಖ್ಯೆ ಕಡಿತ

ಹೀಗಾಗಿ ಮುಂಬೈ ಸಿಟಿ ಎಫ್‌ಸಿ ನಡುವೆ ನಡೆಯಲಿರುವ ಮುಂದಿನ ಪಂದ್ಯದಲ್ಲಿ ತಂಡ ಈ ಸೋಲಿನ ಕೊಂಡಿ ಕಳಚುವ ಗುರಿ ಹೊಂದಿದೆ ಎಂದು ಬಿಎಫ್‌ಸಿ ಮುಖ್ಯ ಕೋಚ್‌ ಕೌಡಾರ್ಟ್‌ ಹೇಳಿದ್ದಾರೆ. ಮಂಗಳವಾರ ಫತೋರ್ಡ ಸ್ಟೇಡಿಯಂನಲ್ಲಿ ಬಿಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ. ಇತ್ತಂಡಗಳಿಗೆ ಒಂದು ವಾರ ವಿರಾಮ ಸಿಕ್ಕಿದ್ದು ಇದರ ಸಂಪೂರ್ಣ ಲಾಭ ಪಡೆದುಕೊಂಡಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಸೌರವ್ ಗಂಗೂಲಿ ಕಾಲೆಳೆದ ಮಾಜಿ ಕ್ರಿಕೆಟರ್ ಕೀರ್ತಿ ಅಝಾದ್

"ಈವಾರ ನಮಗೆ ಹೆಚ್ಚಿನ ಸಮಯ ಸಿಕ್ಕಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಸಂಪೂರ್ಣ ಮೂರು ಅಂಕಗಳನ್ನು ಕಲೆಹಾಕಲು ಪ್ರಯತ್ನ ಮಾಡಲಿದ್ದೇವೆ. ಕಳೆದ ಎರಡೂ ಪಂದ್ಯಗಳಲ್ಲಿ ನಮ್ಮ ತಂಡ ಹೆಚ್ಚು ಅವಕಾಶಗಳನ್ನು ಸೃಷ್ಟಿಸುವ ಪ್ರಯತ್ನ ಮಾಡಿತು. ಆದರೆ ಅದರಲ್ಲಿ ಗೋಲ್ ಬಾರಿಸಲು ಸಾಧ್ಯವಾಗದೇ ಇರುವುದು ದುರದೃಷ್ಟವೇ ಸರಿ. ಹೀಗಾಗಿ ಸೋಲು ಎದುರಾಗಿದೆ. ಪ್ರಮುಖ ಆಟಗಾರರಿಂದ ಗೋಲ್‌ ಬರದೇ ಇದ್ದರೂ ಬೇರೆ ಆಟಗಾರರು ಯಶಸ್ಸು ಕಂಡಿದ್ದಾರೆ. ಇದರರ್ಥ ನಮ್ಮ ತಂಡ ಗೋಲ್‌ ಗಳಿಕೆಗೆ ಕೇವಲ ಕೆಲವೇ ಆಟಗಾರರ ಮೇಲೆ ಅವಲಂಭಿಸಿಲ್ಲ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ," ಎಂದು ಕೌಡಾರ್ಟ್‌ ವಿವರಿಸಿದ್ದಾರೆ.

11 ಗೋಲ್‌ಗಳನ್ನು ಗಳಿಸಿದೆ

11 ಗೋಲ್‌ಗಳನ್ನು ಗಳಿಸಿದೆ

ಬೆಂಗಳೂರು ತಂಡ ಟೂರ್ನಿಯಲ್ಲಿ ಈವರೆಗೆ ಆಡಿರುವ 8 ಪಂದ್ಯಗಳಿಂದ ಒಟ್ಟು 11 ಗೋಲ್‌ಗಳನ್ನು ಗಳಿಸಿದೆ. ಜೊತೆಗೆ 9 ಗೋಲ್‌ಗಳನ್ನು ಬಿಟ್ಟುಕೊಟ್ಟಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಮುಂದಿನ ಪಂದ್ಯಗಳಲ್ಲಿ ಮೈಮರೆಯಬಾರದು ಎಂದು ಕೌಡಾರ್ಟ್‌ ತಮ್ಮ ತಂಡಕ್ಕೆ ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.

"ನಾವು ಉತ್ತಮ ಆಟವಾಡುವ ಅಗತ್ಯವಿದೆ. ಪ್ರಮುಖವಾಗಿ ಗೋಲ್‌ ಬಿಟ್ಟುಕೊಡದೇ ಇರುವಂತೆ ಗಮನ ನೀಡಬೇಕಿದೆ. ಏಕೆಂದರೆ ಕಳೆದ ಎರಡೂ ಪಂದ್ಯಗಳಲ್ಲಿ ನಾವು 0-1 ಗೋಲ್‌ಗಳಿಂದ ಸೋತಿದ್ದೇವೆ. ಗೋಲ್‌ ಬಿಟ್ಟುಕೊಟ್ಟರೆ ಸೋಲು ಖಚಿತ. ಇದನ್ನು ಆಟಗಾರರು ಅರ್ಥಮಾಡಿಕೊಳ್ಳಬೇಕಿದೆ. ಅದಕ್ಕೆ ತಕ್ಕಂತೆ ಧನಾತ್ಮಕ ಆಟವಾಡುವ ಅಗತ್ಯವಿದೆ," ಎಂದಿದ್ದಾರೆ.

ಕಳಪೆ ಪ್ರದರ್ಶನದ ದಾಖಲೆ

ಕಳಪೆ ಪ್ರದರ್ಶನದ ದಾಖಲೆ

ಬೆಂಗಳೂರು ತಂಡ ಮುಂಬೈ ಸಿಟಿ ಎಫ್‌ಸಿ ಎದುರು ಅತ್ಯಂತ ಕಳಪೆ ಪ್ರದರ್ಶನದ ದಾಖಲೆ ಹೊಂದಿದೆ. ಇತ್ತಂಡಗಳ ಮುಖಾಮುಖಿ ದಾಖಲೆಯಲ್ಲಿ ಅರ್ಧದಷ್ಟು ಪಂದ್ಯಗಳನ್ನು ಮುಂಬೈ ಗೆದ್ದುಕೊಂಡಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಮುಂಬೈ ತಂಡ ಬೆಂಗಳೂರು ವಿರುದ್ಧ ಸೋತಿಲ್ಲ. ಇನ್ನು ಈ ವರ್ಷ ಕೂಡ ಮುಂಬೈ ತಂಡ ಅಮೋಘ ಲಯದಲ್ಲಿದ್ದು, ಬಿಎಫ್‌ಸಿ ವಿರುದ್ಧದ ಗೆಲುವಿನ ದಾಖಲೆಯನ್ನು ವಿಸ್ತರಿಸಿಕೊಳ್ಳಲಿದೆ ಎಂದೇ ಎಣಿಸಲಾಗಿದೆ.

ಈ ವರ್ಷ ಮುಂಬೈ ಸಿಟಿ ಎಫ್‌ಸಿ ಗೆಲುವಿನ ನಾಗಾಲೋಟದಲ್ಲಿ ಮುನ್ನಡೆಯುತ್ತಿದೆ. ಕಳೆದ ಏಳು ಪಂದ್ಯಗಳಲ್ಲಿ ಸೋಲಿಲ್ಲದ ಸರದಾರನಂತೆ ಮೆರೆದಿದೆ. ಹೀಗಾಗಿ ಅಂಕಪಟ್ಟಿಯ ಅಗ್ರಸ್ಥಾನದಲ್ಲಿ ವಿರಾಜಮಾನವಾಗಿದೆ.

ಸವಾಲು ಎದುರಾಗಲಿದೆ

ಸವಾಲು ಎದುರಾಗಲಿದೆ

ಮುಂಬೈ ತಂಡದ ಕೋಚ್‌ ಸರ್ಗಿಯೊ ಲೊಬೆರಾ ಪ್ರಕಾರ ಬೆಂಗಳೂರು ವಿರುದ್ಧ ಕಠಿಣ ಸವಾಲು ಎದುರಾಗಲಿದೆಯಂತೆ. "ನನ್ನ ಪ್ರಕಾರ ಈ ಪಂದ್ಯ ಸಂಪೂರ್ಣ ವಿಭಿನ್ನವಾಗಿರಲಿದೆ. ಬೆಂಗಳೂರು ಅಪಾಯಕಾರಿ ತಂಡ. ಡಿಫೆನ್ಸ್‌ನಲ್ಲಿ ಶ್ರೇಷ್ಠತೆ ಹೊಂದಿದೆ. ಹೀಗಾಗಿ ಪಂದ್ಯ ಗೆಲ್ಲುವುದು ನಮ್ಮ ಪಾಲಿಗೆ ಸುಲಭವಲ್ಲ. ಪರಿಸ್ಥಿತಿಗಳನ್ನು ನಿಭಾಯಿಸಿ ಆಡುವ ಅಗತ್ಯವಿದೆ," ಎಂದು ಸರ್ಗಿಯೋ ಹೇಳಿದ್ದಾರೆ.

ಮುಂಬೈ ತಂಡ ಕಳೆದ 7 ಪಂದ್ಯಗಳಲ್ಲಿ ಗೋಲ್‌ ಬಾರಿಸಿದ್ದು, ಒಟ್ಟು 13 ಗೋಲ್‌ಗಳನ್ನು ಹೊಂದಿದೆ. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಗೋಲ್ ಬಾರಿಸಿದ ತಂಡ ಎನಿಸಿಕೊಂಡಿದೆ. ಅದ್ಭುತ ಎನ್ಜುವ ರೀತಿಯಲ್ಲಿ ಈವರೆಗೆ ಕೇವಲ 3 ಗೋಲ್‌ಗಳನ್ನು ಮಾತ್ರವೇ ತಂಡ ಬಿಟ್ಟುಕೊಟ್ಟಿದೆ. "ಫುಟ್ಬಾಲ್ ಆಟವನ್ನು ಆನಂದಿಸಬೇಕು ಅಷ್ಟೆ. ಆಟದ ಮೇಲೆ ಏಕಾಗ್ರತೆ ಕಾಯ್ದುಕೊಂಡು ಬೆಂಗಳೂರು ವಿರುದ್ಧದ ಸವಾಲನ್ನು ಎದುರು ನೋಡುತ್ತಿದ್ದೇವೆ. ಹಂತ ಹಂತವಾಗಿ, ಒಂದೊಂದೇ ಪಂದ್ಯದ ಕಡೆಗೆ ಗಮನ ನೀಡಿ ಆಟ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ," ಎಂದಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, January 4, 2021, 21:23 [IST]
Other articles published on Jan 4, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X