ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಅಂಕ ಹಂಚಿಕೊಂಡ ಬೆಂಗಳೂರು ಹಾಗೂ ಚೆನ್ನೈಯಿನ್

By Isl Media
ISL 2020-21: Bengaluru ride their luck to frustrate Chennaiyin with a goalless draw

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ 83ನೇ ಪಂದ್ಯದಲ್ಲಿ ಜಯದ ಅನಿವಾರ್ಯತೆಯಲ್ಲಿದ್ದ ಬೆಂಗಳೂರು ಎಫ್ ಸಿ ಹಾಗೂ ಚೆನ್ನೈಯಿನ್ ಎಫ್ ಸಿ ತಂಡಗಳು ಉತ್ತಮ ಹೋರಾಟದ ನಡುವೆಯೂ ಗೋಲಿಲ್ಲದೆ ಡ್ರಾ ಮಾಡಿಕೊಂಡಿವೆ. ತಲಾ ಒಂದು ಅಂಕ ಪಡೆದ ತಂಡಗಳು ಈಗಿರುವ ಸ್ಥಾನದಲ್ಲೇ ಉಳಿದುಕೊಂಡಿವೆ. ಚೆನ್ನೈಯಿನ್ ತಂಡ 8ನೇ ಸ್ಥಾನದಲ್ಲಿ ಉಳಿದರೆ, ಬೆಂಗಳೂರು 6ನೇ ಸ್ಥಾನದಲ್ಲೇ ಉಳಿಯಿತು.

ಈ ಫಲಿತಾಂಶ ಇತ್ತಂಡಗಳ ನಿರೀಕ್ಷೆಯಾಗಿರಲಿಲ್ಲ. ದ್ವಿತಿಯಾರ್ಧದಲ್ಲಿ ಚೆನ್ನೈಯಿನ್ ತಂಡಕ್ಕೆ ಎರಡು ಬಾರಿ ಫ್ರೀಕಿಕ್ ಮೂಲಕ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು. ಒಮ್ಮೆ ಚೆಂಡು ಗೋಲ್ ಬಾಕ್ಸ್ ನ ಮೇಲಿಂದ ಸಾಗಿ ಹೋದರೆ, ಮತ್ತೊಮ್ಮೆ ಗೋಲ್ ಬಾಕ್ಸ್ ನ ಅಂಚಿಗೆ ತಗಲಿತು. ಬೆಂಗಳೂರು ಕೂಡ ಅಂತಿಮ ಕ್ಷಣದಲ್ಲಿ ಫ್ರೀ ಕಿಕ್ ಮೂಲಕ ಗೋಲು ಗಳಿಸುವ ಅವಕಾಶವನ್ನು ಕೈ ಚೆಲ್ಲಿತು.

ಗೋಲಿಲ್ಲದ ಪ್ರಥಮಾರ್ಧ

ಗೋಲಿಲ್ಲದ ಪ್ರಥಮಾರ್ಧ

ಚೆನ್ನೈಯಿನ್ ತಂಡ ಪಂದ್ಯದ ಮೇಲೆ ಹೆಚ್ಚಿನ ಪ್ರಭುತ್ವ ಸಾಧಿಸಿತ್ತು. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಯಿತು. ಬೆಂಗಳೂರಿನ ಗೋಲ್ ಕೀಪರ್ ಗುರ್ ಪ್ರೀತ್ ಸಿಂಗ್ ಸಂಧೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದು ತಂಡವನ್ನು ಹಲವು ಬಾರಿ ಅಪಾಯದಿಂದ ಪಾರು ಮಾಡಿದರು. ಟಾರ್ಗೆಟ್ ಮೇಲೆ ಗುರಿ ಇಟ್ಟಿದ್ದು ಚೆನ್ನೈಯಿನ್ ತಂಡವೇ ಹೆಚ್ಚು. ಇತ್ತಂಡಗಳ ನಡುವಿನ ಹೋರಾಟ ಹೆಚ್ಚಾಗಿ ಮಿಡ್ ಫೀಲ್ಡ್ ವಿಭಾಗದಲ್ಲೇ ಕಂಡು ಬಂದಿತ್ತು. ಲಾಲ್ ರಿಯಾಂಜುವಾಲಾ ಚಾಂಗ್ಟೆ ಗೋಲು ಗಳಿಸಲು ಹಲವು ಅವಕಾಶಗಳನ್ನು ನಿರ್ಮಿಸಿದರೂ ಫಾರ್ವರ್ಡ್ ಆಟಗಾರರು ಉತ್ತಮ ರೀತಿಯಲ್ಲಿ ಸ್ಪಂದಿಸದ ಕಾರಣ ಗೋಲು ದಾಖಲಾಗಲಿಲ್ಲ.

ಕುತೂಹಲದ ಪಂದ್ಯ

ಕುತೂಹಲದ ಪಂದ್ಯ

ದಕ್ಷಿಣದ ಡರ್ಬಿ ಎಂದೇ ಕರೆಯಲ್ಪಡುವ ಬೆಂಗಳೂರು ಎಫ್ ಸಿ ಹಾಗೂ ಚೆನ್ನೈಯಿನ್ ಎಫ್ ನಡುವಿನ ಪಂದ್ಯ ಕುತೂಹಲದಿಂದ ಕೂಡಿರುವುದು ಸಹಜ. ಎಂಟು ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಫಲವಾಗಿದ್ದ ಬೆಂಗಳೂರು ತಂಡ ಈ ಪಂದ್ಯಕ್ಕೆ ಹಿಂದಿನ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ವಿರುದ್ಧ 2-0 ಗೋಲಿನಿಂದ ಜಯ ಗಳಿಸಿ ಆತ್ಮವಿಶ್ವಾಸ ಪಡೆದಿತ್ತು. ಕೇವಲ ಮೂರು ಅಂಕಗಳನ್ನು ಗಳಿಸಿರುವುದು ಮಾತ್ರವಲ್ಲ 11 ಪಂದ್ಯಗಳ ನಂತರ ಕ್ಲೀನ್ ಶೀಟ್ ಸಾಧನೆ ಮಾಡಿದೆ. ಡಿಸೆಂಬರ್ ನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈಯಿನ್ ವಿರುದ್ಧ ಕ್ಲೀನ್ ಶೀಟ್ ಯಶಸ್ಸಿನ ನಂತರ ಬೆಂಗಳೂರು ಈ ಯಶಸ್ಸು ಕಂಡಿರಲಿಲ್ಲ.

ಒತ್ತಡ ದೂರವಾಗಿದೆ

ಒತ್ತಡ ದೂರವಾಗಿದೆ

ಮೊದಲ ಜಯ ಕಂಡಿರುವ ನೌಶಾದ್ ಮೂಸಾ ಅವರಿಗೆ ಈಗ ಸ್ವಲ್ಪ ಮಟ್ಟಿಗೆ ಒತ್ತಡ ದೂರವಾಗಿದೆ. ಕ್ಲಿಟಾನ್ ಸಿಲ್ವಾ ಮತ್ತು ಸುನಿಲ್ ಛೆಟ್ರಿ ಮುಂಭಾಗದಲ್ಲಿ ನಿಭಾಯಿಸಿದ್ದು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿತು. ಇದುವರೆಗೂ ಕೇವಲ 11 ಗೋಲುಗಳನ್ನು ಗಳಿಸಿರುವ ಚೆನ್ನೈಯಿನ್ ವಿರುದ್ಧ ಜಯ ಗಳಿಸುವ ಗುರಿಹೊಂದಿದೆ. ಈ ಋತುವಿನಲ್ಲಿ ಚೆನ್ನೈಯಿನ್ ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಮೂರು ಪಂದ್ಯಗಳಲ್ಲಿ ಗೆದ್ದಿರುವ ಚೆನ್ನೈಯಿನ್ ತಂಡದ ಸಾಧನೆ ನಾಲ್ಕು ಪಂದ್ಯಗಳಲ್ಲಿ ಸೋಲುವ ಮೂಲಕ ಹಿನ್ನಡೆಗೆ ಕಾರಣವಾಯಿತು. ಇಂದಿನ ಪಂದ್ಯದಲ್ಲಿ ಗೆದ್ದರೆ ಚೆನ್ನೈಯಿನ್ 6ನೇ ಸ್ಥಾನ ತಲುಪಲಿದೆ.

Story first published: Friday, February 5, 2021, 23:43 [IST]
Other articles published on Feb 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X