ಐಎಸ್‌ಎಲ್: ಚೆನ್ನೈಯಿನ್ ವಿರುದ್ಧ ಒತ್ತಡವೇ ಇಲ್ಲವೆಂದ ಬಾಗನ್ ಕೋಚ್

By Isl Media

ಗೋವಾ,ಜನವರಿ 20: ಕಳೆದ ಎರಡು ಪಂದ್ಯಗಳಲ್ಲಿ ಐದು ಅಂಕಗಳನ್ನು ಕಳೆದುಕೊಂಡಿರುವ ಎಟಿಕೆ ಮೋಹನ್ ಬಾಗನ್ ತಂಡ ಗುರುವಾರ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮತ್ತೆ ಚೇತರಿಸಿಕೊಳ್ಳಲು ಚೆನ್ನೈಯಿನ್ ಎಫ್ ಸಿ ವಿರುದ್ಧ ಸೆಣಸಲಿದೆ. ಕೋಲ್ಕೊತಾದ ಬಲಿಷ್ಠ ತಂಡ ಎಟಿಕೆಎಂಬಿ ಮುಂಬೈ ಸಿಟಿ ವಿರುದ್ಧ ಸೋತ ನಂತರ ಎಫ್ ಸಿ ಗೋವಾ ವಿರುದ್ಧ ಡ್ರಾ ಸಾಧಸಿದ್ದು ತಂಡ ಎರಡನೇ ಸ್ಥಾನಕ್ಕೆ ಕುಸಿಯಿತು. ಆದರೆ ಗುರುವಾರ ಚೆನ್ನೈಯಿನ್ ವಿರುದ್ಧ ನಡೆಯಲಿರುವ ಪಂದ್ಯದ ಬಗ್ಗೆ ಯಾವುದೇ ರೀತಿಯ ಒತ್ತಡ ಇಲ್ಲವೆಂದು ಎಟಿಕೆಎಂಬಿ ಕೋಚ್ ಆಂಟಟೋನಿಯೊ ಹಬ್ಬಾಸ್ ಹೇಳಿದ್ದಾರೆ.

"ಯಾವುದೇ ಹೆಚ್ಚುವರಿ ಒತ್ತಡವಿಲ್ಲ. ಚಾಂಪಿಯನ್ಷಿನಲ್ಲಿ ನೀವು ಒಮ್ಮೆ ಉತ್ತಮ ಕ್ಷಣಗಳನ್ನು ಕಂಡರೆ ಕೆಲವೊಮ್ಮೆ ಕೆಟ್ಟ ಸಮಯವನ್ನು ಕಾಣಬೇಕಾಗುತ್ತದೆ. ನಾವು ಹಿಂದಿನ ಎರಡು ಪಂದ್ಯಗಳಲ್ಲಿ ಬಲಿಷ್ಠ ತಂಡಗಳ ವಿರುದ್ಧ ಆಡಿದ್ದೇವೆ. ಲೀಗ್ ಗೆಲ್ಲುವಂಥ ಸಾಮರ್ಥ್ಯವಿರುವ ತಂಡಗಳಾದ ಗೋವಾ ಮತ್ತು ಮುಂಬೈ ಸಿಟಿ ತಂಡಗಳ ವಿರುದ್ಧ ಆಡಿರುವೆವು. ನಾವು ಪಟ್ಟಿಯ ಅಗ್ರ ಸ್ಥಾನದ ಅರ್ಧದಲ್ಲಿ ಇದ್ದೆವು. ನಾವು ಸುಧಾರಿಸಬೇಕಾದ ಅಗತ್ಯ ಇದೆ,' ಎಂದು ಹಬ್ಬಾಸ್ ಹೇಳಿದರು.

ಐಎಸ್‌ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್

ಹಬ್ಬಾಸ್ ಪಡೆ ಈ ಋತುವಿನಲ್ಲಿ ಕಡಿಮೆ ಅವಕಾಶ (81)ಗಳನ್ನು ನಿರ್ಮಿಸಿದೆ, ಅದೇ ರೀತಿ 35 ಬಾರಿ ಟಾರ್ಗೆಟ್ ಶಾಟ್ ಗಳನ್ನು ದಾಖಲಿಸಿದೆ. ಆದೇ ರೀತಿ ಲೀಗ್ ನಲ್ಲಿ ಎರಡನೇ ಅತಿ ಕಡಿಮೆ ಎನಿಸಿರುವ 11 ಗೋಲುಗಳನ್ನಷ್ಟೇ ದಾಖಲಿಸಿದೆ. "ನಾವು ಅಟ್ಯಾಕ್ ಮತ್ತು ಡಿಫೆನ್ಸ್ ನಲ್ಲಿ ಸಮನ್ವಯತೆಯನ್ನು ಕಾಯ್ದುಕೊಳ್ಳಬೇಕಾಗಿದೆ. ನಾನು 25 ಗೋಲುಗಳನ್ನು ನೀಡಿ ಅಷ್ಟೇ ಗೋಲುಗಳನ್ನು ಗಳಿಸುವುದನ್ನು ಇಷ್ಟಪಡವುದಿಲ್ಲ. ಸದು ನನಗೆ ಇಷ್ಟವಾಗುದಿಲ್ಲ," ಎಂದರು.

ಪ್ರತಿ ಪಂದ್ಯದಲ್ಲೂ 3 ಅಂಕ ಗುರಿ

ಪ್ರತಿ ಪಂದ್ಯದಲ್ಲೂ 3 ಅಂಕ ಗುರಿ

ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿರುವ ರಾಯ್ ಕೃಷ್ಣ ಮೊದಲ ಆರು ಪಂದ್ಯಗಳಲ್ಲಿ 5 ಗೋಲು ಗಳಿಸಿದ್ದರು, ಆದರೆ ಕಳೆದ ಐದು ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ ಒಂದು ಗೋಲು. ಫಿಜಿಯ ಆಟಗಾರನ ಈ ಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಹಬ್ಬಾಸ್, "ಚಿಂತಿಸಬೇಡಿ, ಇಂಥ ಪರಿಸ್ಥಿತಿ ಸಹಜವಾದುದು, ನನಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ. ಇದು ಫುಟ್ಬಾಲ್," ಎಂದರು. "ನಾವು ನಿರಂತರವಾಗಿ ಕೆಲಸ ಮಾಡಬೇಕು. ಪ್ರತಿಯೊಂದು ಪಂದ್ಯದಲ್ಲೂ ಮೂರು ಅಂಕಗಳನ್ನು ಗೆಲ್ಲುವುದು ನಮ್ಮ ಯೋಜನೆ, ಆ ನಂತರ ನಾವು ಪ್ಲೇ ಆಫ್ ಬಗ್ಗೆ ಯೋಚಿಉತ್ತೇವೆ," ಎಂದರು.

ಕ್ರಿವಿಲ್ಲೆರೋ ಗಾಯ ತಂಡಕ್ಕೆ ನಷ್ಟ

ಕ್ರಿವಿಲ್ಲೆರೋ ಗಾಯ ತಂಡಕ್ಕೆ ನಷ್ಟ

ಹಿಂದಿನ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾದಾಗ ಪಂದ್ಯ ಗೋಲಿಲ್ಲದೆ ಡ್ರಾಗೊಂಡಿತ್ತು. ಪ್ಲೇ ಆಫ್ ಸ್ಪರ್ಧೆಯಲ್ಲಿರುವ ಸಾಬಾ ಲಾಜ್ಲೋ ಪಡೆ ಡಿಫೆನ್ಸ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವುದು ಗಮನಾರ್ಹ. ಕಳೆದ ಋತುವಿನಲ್ಲಿ ಗಳಿಸಿರುವ ಕ್ಲೀನ್ ಶೀಟ್ ಗಿಂತ ಹೆಚ್ಚು ಕ್ಲೀನ್ ಶೀಟ್ ಸಾಧನೆಯನ್ನು ಚೆನ್ನೈಯಿನ್ ತಂಡ ಈಗಾಗಲೇ ಮಾಡಿದೆ. ಗಾಯದ ಸಮಸ್ಯೆ ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಉತ್ತಮ ಆಟಗಾರ ರಫಾಯಲ್ ಕ್ರಿವಿಲ್ಲೆರೋ ಗಾಯಗೊಂಡಿರುವುದು ತಂಡಕ್ಕೆ ತುಂಬಲಾರದ ನಷ್ಟವಾಗಿದೆ.

ದುರಾದೃಷ್ಟ ನಮ್ಮನ್ನು ಕಾಡುತ್ತಿದೆ

ದುರಾದೃಷ್ಟ ನಮ್ಮನ್ನು ಕಾಡುತ್ತಿದೆ

"ನನಗೆ ನನ್ನ ತಂಡದ ಬಗ್ಗೆ ಗೊತ್ತಿದೆ, ತಂಡದ ನೈಜ ಸ್ಥತಿಯ ಬಗ್ಗೆಯೂ ಗೊತ್ತಿದೆ. ನಾವು ಗಾಯದ ಕಾರಣ ನಾಯಕ ಕ್ರಿವೆಲ್ಲೊರೊ ಅವರನ್ನು ಕಳೆದುಕೊಂಡೆವು. ನಮ್ಮ ತಂಡವನ್ನು ಯಶಸ್ಸಿನಲ್ಲಿ ಮುನ್ನಡೆಸಲು ರಾಫಾ ಅವರ ಪಾತ್ರ ಪ್ರಮುಖವಾಗಿತ್ತು. ಕಳೆದ ಋತುವಿನಲ್ಲಿ ಆವರು ಉತ್ತಮ ಆಟಗಾರರಲ್ಲಿ ಒಬ್ಬರಾಗಿದ್ದರು. ನಮ್ಮನ್ನು ಗಾಯದ ಸಮಸ್ಯೆ ಕಾಡುತ್ತಿದೆ. ನಮ್ಮನ್ನು ದುರಾದೃಷ್ಟವೂ ಕಾಡುತ್ತಿದೆ. ಆದರೆ ಇದನ್ನು ನಾವು ದೂರುತ್ತಿಲ್ಲ. ಪ್ರತಿಯೊಂದನ್ನೂ ಧನಾತ್ಮಕವಾಗಿ ಸ್ವೀಕರಿಸುವೆ. ಇದ್ದುದರಲ್ಲೇ ಉತ್ತಮ ಆಯ್ಕೆ ನಮ್ಮದಾಗಬೇಕು," ಎಂದರು.

For Quick Alerts
ALLOW NOTIFICATIONS
For Daily Alerts
Story first published: Thursday, January 21, 2021, 8:50 [IST]
Other articles published on Jan 21, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X