ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಚೆನ್ನೈಯಿನ್‌ ಎಫ್‌ಸಿಗೆ ಒಡಿಶಾ ಎದುರು ಗೆಲುವಿನ ತವಕ

By Isl Media
ISL 2020 21, chennaiyin fc vs odisha fc match 57 preview

ಗೋವಾ, ಜನವರಿ 12: ಚೆನ್ನೈಯಿನ್‌ ಎಫ್‌ಸಿ ಮತ್ತು ಒಡಿಶಾ ಎಫ್‌ಸಿ ತಂಡಗಳು ಕಳೆದ ಬಾರಿ ಮುಖಾಮುಖಿಯಾಗಿದ್ದಾಗ ಗೋಲ್‌ ರಹಿತ ಸಮಬಲ ಸಾಧಿಸಿದ್ದವು. ಇದೀಗ ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್‌ ಲೀಗ್‌ ಟೂರ್ನಿಯ ಎರಡನೇ ಘಟ್ಟದಲ್ಲಿ ಇತ್ತಂಡಗಳು ಮತ್ತೆ ಮುಖಾಮುಖಿಯಾಗುತ್ತಿವೆ.

ಇಲ್ಲಿನ ಜಿಎಮ್‌ಸಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಚೆನ್ನೈಯಿನ್‌ ಎಫ್‌ಸಿ ಸಂಘಟಿತ ಹೋರಾಟ ಪ್ರದರ್ಶಿಸುವ ಮೂಲಕ ಒಡಿಶಾ ಎಫ್‌ಸಿ ತಂಡವನ್ನು ಮಣಿಸಿ ಸಂಪೂರ್ಣ 3 ಅಂಕಗಳನ್ನು ಬಾಚಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಅಂಕಪಟ್ಟಿಯಲ್ಲಿ ಒಡಿಶಾ ತಂಡ ಕೊನೆಯ ಸ್ಥಾನದಲ್ಲಿದ್ದರೆ, ಚೆನ್ನೈಯಿನ್‌ ತಂಡ 11ನೇ ಸ್ಥಾನದಲ್ಲಿದೆ. ಕೆಲ ದಿನಗಳ ಹಿಂದಷ್ಟೇ ಈ ತಂಡಗಳು ಮುಖಾಮುಖಿಯಾಗಿವೆ. ಹೀಗಾಗಿ ಈ ಬಾರಿ ಡ್ರಾ ಅಲ್ಲ ಗೆಲುವಿಗಾಗಿ ಇತ್ತಂಡಗಳು ಕಣ್ಣಿಟ್ಟಿವೆ. ಯಾವುದೇ ತಂಡ ಗೆದ್ದರೂ ಅಂಕಪಟ್ಟಿಯಲ್ಲಿ ಕೊಂಚ ಪ್ರಗತಿ ಕಾಣಲಿವೆ.

ಐಎಸ್‌ಎಲ್: ಮುಂಬೈ ಸಿಟಿ ಎಫ್‌ಸಿಗೆ ತಲೆ ಬಾಗಿದ ಮೋಹನ್‌ ಬಗಾನ್ಐಎಸ್‌ಎಲ್: ಮುಂಬೈ ಸಿಟಿ ಎಫ್‌ಸಿಗೆ ತಲೆ ಬಾಗಿದ ಮೋಹನ್‌ ಬಗಾನ್

ನಾಲ್ಕು ದಿನಗಳ ಅಂತರದಲ್ಲಿ 2ನೇ ಬಾರಿ ಮುಖಾಮುಖಿ

ನಾಲ್ಕು ದಿನಗಳ ಅಂತರದಲ್ಲಿ 2ನೇ ಬಾರಿ ಮುಖಾಮುಖಿ

ಈ ಬಗ್ಗೆ ಮಾತನಾಡಿರುವ ಒಡಿಶಾ ತಂಡದ ಕೋಚ್‌ ಸ್ಟುವರ್ಟ್‌ ಬ್ಯಾಕ್‌ಸ್ಟರ್‌, ನಾಲ್ಕು ದಿನಗಳ ಅಂತರದಲ್ಲಿ ಮತ್ತೆ ಅದೇ ತಂಡದ ವಿರುದ್ಧ ಪೈಪೋಟಿ ನಡೆಸುವಂತ್ತಾಗಿರುವುದಕ್ಕೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಇದು ಎರಡೂ ತಂಡಕ್ಕೆ ಒಂದೇ ಆಗಿದೆ ಎಂದು ಹೇಳಿದ್ದಾರೆ. "ಲೋಟದಲ್ಲಿ ನೀಡು ಅರ್ಧ ಇದೆಯೋ ಅಧವಾ ಖಾಲಿ ಇದೇಯೋ? ಎಂಬುದನ್ನು ನೀವೇ ನೋಡಬೇಕು. ಎರಡೂ ತಂಡಕ್ಕೆ ಇದು ಒಂದೇ ಆಗಿರುತ್ತದೆ. ಒಂದಂತ್ತೂ ನಿಜ ಈ ಪಂದ್ಯ ಎರಡೂ ತಂಡಗಳಿಗೆ ಅತ್ಯಂತ ಕಠಿಣವಾಗಿರಲಿದೆ," ಎಂದು ಬ್ಯಾಕ್‌ಸ್ಟರ್‌ ಹೇಳಿದ್ದಾರೆ.

ಸುಳಿವು ನೀಡದ ಕೋಚ್

ಸುಳಿವು ನೀಡದ ಕೋಚ್

ಇನ್ನು ಈ ಪಂದ್ಯಕ್ಕೆ ತಂಡ ತನ್ನ ತಂತ್ರಗಾರಿಕೆಯನ್ನು ಬದಲಾವಣೆ ಮಾಡಲಿದೆಯೇ ಎಂಬುದಕ್ಕೆ ಬ್ಯಾಕ್‌ಸ್ಟರ್‌ ಸುಳಿವು ನೀಡಲು ನಿರಾಕರಿಸಿದ್ದಾರೆ. ಹೀಗಾಗಿ ಚೆನ್ನೈ ತಂಡದ ಮುಂದಿನ ನಡೆ ಏನೆಂಬುದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. "ಹೌದು ಈ ಸಾಧ್ಯತೆ ಇದೆ. ಅದರಲ್ಲು ಬ್ಯಾಕ್‌ ಟು ಬ್ಯಾಕ್‌ ಒಂದೇ ತಂಡದ ಎದುರು ಆಡುವಾಗ ಬದಲಾವಣೆ ಬೇಕಾಗುತ್ತದೆ. ಕೆಲವೊಮ್ಮೆ ಯಾವುದೇ ಬದಲಾವಣೆ ಮಾಡದೇ ಇರುವ ಅಗತ್ಯವೂ ಇರುತ್ತದೆ. ಗಾಯದ ಸಮಸ್ಯೆಗಳ ಕಡೆಗೆ ಗಮನ ನೀಡಿ ಸಂಪೂರ್ಣ ಫಿಟ್‌ ಇರುವ ಆಟಗಾರರನ್ನು ಆಡಿಸಬೇಕಾಗುತ್ತದೆ. ಜಾಕೋಬ್‌ ಟ್ರಾಟ್ ನಿಷೇಧ ಎದುರಿಸಿದ್ದಾರೆ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಬಾಕಿಯಿದೆ," ಎಂದಿದ್ದಾರೆ.

ಚೆನ್ನೈ ತಂಡಕ್ಕೆ ಗೋಲ್‌ಗಳ ಬರ

ಚೆನ್ನೈ ತಂಡಕ್ಕೆ ಗೋಲ್‌ಗಳ ಬರ

ಚೆನ್ನೈಯಿನ್‌ ಎಫ್‌ಸಿ ತಂಡ ಟೂರ್ನಿಯಲ್ಲಿ ತನ್ನ ಗೋಲ್‌ಗಳ ಬರವನ್ನು ಮುಂದುವರಿಸಿದೆ. ಸ್ಟಾರ್‌ ಆಟಗಾರರಾದ ರಹಿಇಮ್ ಅಲಿ ಮತ್ತು ಯಾಕುಬ್ ಸಿಲ್ವೆಸ್ಟರ್‌ ಇಬ್ಬರೂ ಕೂಡ ಗೋಲ್‌ ಗಳಿಸುವ ಸುಲಭದ ಅವಕಾಶಗಳನ್ನು ಕೈಚೆಲ್ಲಿದರು. ಇನ್ನು ಟೂರ್ನಿಯಲ್ಲಿ ಅತಿ ಕಡಿಮೆ ಗೋಲ್‌ ಗಳಿಸಿರುವ ತಂಡ ಚೆನ್ನೈ. ಆಟಿರುವ ಒಟ್ಟು ಪಂದ್ಯಗಳಲ್ಲಿ ಅರ್ಧದಷ್ಟು ಪಂದ್ಯಗಳಲ್ಲಿ ಒಂದು ಗೋಲ್‌ ಕೂಡ ಗಳಿಸಿಲ್ಲ. ಸ್ಟಾರ್‌ ಆಟಗಾರ ರಫಾಯೆಲ್ ಕ್ರಿವೆಲಾರೊ ಟೂರ್ನಿಯಿಂದಲೇ ಹೊರಬಿದ್ದ ಹಿನ್ನೆಲೆಯಲ್ಲಿ ತಂಡದ ಫಾರ್ವರ್ಡ್‌ ವಿಭಾಗ ಬಲಹೀನವಾಗಿದೆ.

ಪಂದ್ಯ ಗೆಲ್ಲುವುದು ಕಷ್ಟವಾಗಿದೆ

ಪಂದ್ಯ ಗೆಲ್ಲುವುದು ಕಷ್ಟವಾಗಿದೆ

ಒಡಿಶಾ ತಂಡದ ಕೋಚ್‌ ಸಾಬಾ ಲಾಝ್ಲೋ ತಂಡದ ಪ್ರಮುಖ ಸಮಸ್ಯೆಯನ್ನು ಗುರುತಿಸಿದ್ದಾರೆ. "ಗೋಲ್‌ ಗಳಿಸುವುದೇ ನಮ್ಮ ತಂಡಕ್ಕೆ ಇರುವ ಬಹುದೊಡ್ಡ ಸಮಸ್ಯೆ. ಹೆಚ್ಚು ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ. ಆದರೆ, ಅದರಲ್ಲಿ ತೃಪ್ತಿಯಾಗುವಷ್ಟು ಗೋಲ್‌ಗಳು ಮಾತ್ರವೇ ಸಿಕ್ಕಿಲ್ಲ. ಹೀಗಾಗಿ ಪಂದ್ಯಗಳನ್ನು ಗೆಲ್ಲುವುದು ಬಹಳಾ ಕಷ್ಟವಾಗಿದೆ," ಎಂದು ಹೇಳಿಕೊಂಡಿದ್ದಾರೆ.

Story first published: Tuesday, January 12, 2021, 19:31 [IST]
Other articles published on Jan 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X