ಗೋವಾ: ಗೋವಾದ ಜಿಎಂಸಿ ಸ್ಟೋಡಿಯಂ ಬಂಬೋಲಿಮ್ನಲ್ಲಿ ನಡೆಯುತ್ತಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) 63ನೇ ಪಂದ್ಯದಲ್ಲಿ ಚೆನ್ನೈಯಿನ್ ಎಫ್ಸಿ ಮತ್ತು ಈಸ್ಟ್ ಬೆಂಗಾಲ್ ತಂಡಗಳು ಕಾದಾಡುತ್ತಿವೆ. ಇಂದಿನ ಪಂದ್ಯದಲ್ಲಿ ಚೆನ್ನೈ ಗೆಲ್ಲುವ ಸಾಧ್ಯತೆ ಹೆಚ್ಚಿದೆ.
ಆ ಒಂದು ಕರೆ ನನ್ನಲ್ಲಿ ಆತ್ಮ ವಿಶ್ವಾಸ ತುಂಬಿತ್ತು: 5 ವಿಕೆಟ್ ಕಿತ್ತ ಸಿರಾಜ್ ಭಾವುಕ ಪ್ರತಿಕ್ರಿಯೆ
ಚೆನ್ನೈಯಿನ್ ಎಫ್ಸಿ ತಂಡ ಆಡಿರುವ 11 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 5ರಲ್ಲಿ ಡ್ರಾ ಗಳಿಸಿ, 3ರಲ್ಲಿ ಸೋತು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇತ್ತ ಎಸ್ಸಿ ಈಸ್ಟ್ ಬೆಂಗಾಲ್ ತಂಡ ಆಡಿರುವ 11 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 5ರಲ್ಲಿ ಡ್ರಾ ಸಾಧಿಸಿ, 4ರಲ್ಲಿ ಸೋತು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಚೆನ್ನೈಯಿನ್ ಎಫ್ಸಿ: ವಿಶಾಲ್ ಕೈತ್ (ಜಿಕೆ), ರೇಗನ್ ಸಿಂಗ್, ಎನೆಸ್ ಸಿಪೋವಿಕ್, ಎಲಿ ಸಬಿಯಾ (ಸಿ), ಜೆರ್ರಿ ಲಾಲ್ರಿನ್ಜುವಾಲಾ, ಎಡ್ವಿನ್ ವ್ಯಾನ್ಸ್ಪಾಲ್, ಅನಿರುದ್ಧ್ ಥಾಪಾ, ಲಲಿಯನ್ಜುವಾಲಾ ಚಾಂಗ್ಟೆ, ಮೆಮೋ ಮೌರಾ, ರಹೀಮ್ ಅಲಿ, ಎಸ್ಮೇಲ್ ಗೊನ್ಕಾಲ್ವ್ಸ್.
ಎಸ್ಸಿ ಈಸ್ಟ್ ಬೆಂಗಾಲ್: ಡೆಬ್ಜಿತ್ ಮಜುಂದರ್ (ಜಿಕೆ), ನಾರಾಯಣ್ ದಾಸ್, ಸ್ಕಾಟ್ ನೆವಿಲ್ಲೆ, ಡೇನಿಯಲ್ ಫಾಕ್ಸ್ (ಸಿ), ಅಂಕಿತ್ ಮುಖರ್ಜಿ, ಸುರ್ಚಂದ್ರ ಸಿಂಗ್, ಮಿಲನ್ ಸಿಂಗ್, ಆಂಥೋನಿ ಪಿಲ್ಕಿಂಗ್ಟನ್, ಅಜಯ್ ಛೆಟ್ರಿ, ಜಾಕ್ವೆಸ್ ಮಾಘೋಮಾ, ಬ್ರೈಟ್ ಎನೋಬಖರೆ.