ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಹೈದರಾಬಾದ್ ವಿರುದ್ಧ ಜಯದ ಹಂಬಲದಲ್ಲಿ ಚೆನ್ನೈಯಿನ್

By Isl Media
isl 2020 21, chennayin fc vs hyderabad fc preview match 47

ಗೋವಾ,ಜನವರಿ 3 : ಚೆನ್ನೈಯಿನ್ ಎಫ್ ಸಿ ಮತ್ತು ಹೈದರಾಬಾದ್ ಎಫ್ ಸಿ ತಂಡಗಳು ಹೊಸ ವರುಷದ ಆರಂಭದಲ್ಲಿ ಅಂಕಪಟ್ಟಿಯಲ್ಲಿ ಅಂತಿಮ ನಾಲ್ಕರಲ್ಲಿ ಸ್ಥಾನ ಗಳಿಸುವ ಉದ್ದೇಶದಿಂದ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಇತ್ತಂಡಗಳಲ್ಲಿ ಎರಡೂ ಕಡೆ ಕಂಡು ಬರುತ್ತಿರುವ ಸಮಸ್ಯೆಗಳಿಗೆ ಕೊನೆ ಹಾಡಿ, ಜಯದ ಲಯದಲ್ಲಿ ಮುನ್ನಡೆಯಬೇಕಾದ ಅನಿವಾರ್ಯತೆ ಇದೆ.

ಚೆನ್ನೈಯಿನ್ ತಂಡ ಈ ಬಾರಿ ಉತ್ತಮ ರೀತಿಯಲ್ಲಿ ಆಡಿ, ಅವಕಾಶಗಳನ್ನು ನಿರ್ಮಿಸುತ್ತಿದ್ದರೂ ಜಯ ಗಳಿಸುವಲ್ಲಿ ವಿಫಲವಾಗಿದೆ. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ತಂಡ ಸಂಪೂರ್ಣ ವಿಫಲವಾಗಿದೆ. ಸಾಬಾ ಲಾಜ್ಲೊ ಪಡೆ ಇದುವರೆಗೂ 93 ಆವಕಾಶಗಳನ್ನು ನಿರ್ಮಿಸಿದೆ. ಇದು ಜಂಟಿಯಾಗಿ ಅತಿ ಹೆಚ್ಚು ಅವಕಾಶಗಳನ್ನು ನಿರ್ಮಿಸಿದ ತಂಡಗಳಲ್ಲಿ ಅಗ್ರ ಸ್ಥಾನವಾಗಿದೆ.

ಐಎಸ್‌ಎಲ್: ಹೊಸ ವರುಷ, ಈಸ್ಟ್ ಬೆಂಗಾಲ್ ಗೆ ಮೊದಲ ಜಯದ ಹರುಷಐಎಸ್‌ಎಲ್: ಹೊಸ ವರುಷ, ಈಸ್ಟ್ ಬೆಂಗಾಲ್ ಗೆ ಮೊದಲ ಜಯದ ಹರುಷ

ಪ್ರತಿಯೊಂದು ಪಂದ್ಯದಲ್ಲೂ ಸರಾಸರಿ 14.6ರಷ್ಟು ಶಾಟ್ ಗಳನ್ನು ದಾಖಲಿಸಿದೆ. ಮುಂಭಾಗದಲ್ಲಿ ಅವಕಾಶಗಳನ್ನು ಕೈಚೆಲ್ಲುತ್ತಿರುವುದು ತಂಡದ ಹಿನ್ನೆಡೆಗೆ ಪ್ರಮುಖ ಕಾರಣವಾಗಿದೆ. ಆಡಿರುವ ಎಂಟು ಪಂದ್ಯಗಳಲ್ಲಿ ಬರೇ ನಾಲ್ಕು ಬಾರಿ ಗೋಲನ್ನು ತಡೆಯವಲ್ಲಿ ತಂಡ ಸಫಲವಾಗಿದೆ. ಇದು ತಂಡವೊಂದರ ಕಳಪೆ ಪ್ರದರ್ಶನದಲ್ಲಿ ಎರಡನೇ ಸ್ಥಾನವಾಗಿದೆ. ತಂಡ ನಾಳೆಯ ಪಂದ್ಯದಲ್ಲಿ ಈ ಸಮಸ್ಯೆಯನ್ನು ಪರಿಹರಿಸಿಕೊಂಡರೆ ಜಯದ ಹಾದಿ ಸಿಗಬಹುದು. ಸ್ಟ್ರೈಕರ್ ಜಾಕುಬ್ ಸಿಲ್ವಸ್ಟರ್ ಮತ್ತು ಲಾಲಿಯಾನ್ಜುವಾಲಾ ಚಾಂಗ್ಟೆ ಅವಕಾಶಗಳನ್ನು ಸದುಪಯೊಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. "ಫುಟ್ಬಾಲ್ ಎಂಬುದು ಮನಶಾಸ್ತ್ರೀಯ ಆಟವಾಗಿದೆ," ಎಂದು ಲಾಜೊಲ್ ಹೇಳಿದ್ದಾರೆ.

"ದೈಹಿಕ ಮತ್ತು ಮಾನಸಿಕ ಅಂಶಗಳು ಫುಟ್ಬಾಲ್ ನಲ್ಲಿ ಪ್ರಮುಖವಾಗಿವೆ. ಕಳೆದ ಋತುವಿನಲ್ಲಿ ನಮ್ಮಲ್ಲಿ ಸಾಕಷ್ಟು ಗೋಲುಗಳನ್ನು ಗಳಿಸಿರುವ ನಿರಿಜಸ್ ವಾಸ್ಕಿಸ್ ಅವರಿದ್ದರು. ಆದರೆ ಅವರು ಈಗ ಬೇರೆ ತಂಡದಲ್ಲಿದ್ದಾರೆ, ಇಂಥ ಸಂದರ್ಭದಲ್ಲಿ ಇತರ ಆಟಗಾರರ ಬಗ್ಗೆ ಅರಿವಿರದೆ ಒತ್ತಡ ಹೇರಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇದರ್ಥ ಒಬ್ಬರನ್ನೇ ಆತುಕೊಂಡಿರುವುದು ಎಂದಲ್ಲ. ಆಡುವ ಹನ್ನೊಂದು ಮಂದಿಯನ್ನು ಆಗಾಗ ಬದಲಾಯಿಸುತ್ತಿದ್ದರೆ ಹೊಂದಾಣಿಕೆಯ ಕೊರತೆ ಕಾಣಿಸಿಕೊಳ್ಳುತ್ತದೆ. ಇದುವರೆಗೂ ಐಎಸ್ಎಲ್ ಆಡಿದರದ ಆಟಗಾರರು ಅಂಗಣಕ್ಕಿಳಿದಾಗ ಅವರಲ್ಲಿ ಒತ್ತಡ ಹುಟ್ಟಿಕೊಳ್ಳುವುದು ಸಹಜ. ಎಲ್ಲರೂ ಒಂದಾಗಿ ಮುನ್ನಡೆಯಬೇಕಾದರೆ ಸ್ವಲ್ಪ ಸಮಯದ ಅವಕಾಶ ಬೇಕಾಗುವುದು ಸಹಜ,''ಎಂದು ಲಾಜ್ಲೋ ಹೇಳಿದ್ದಾರೆ.

ಐಎಸ್‌ಎಲ್: ಜಯದೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿದ ಮುಂಬೈ ಸಿಟಿಐಎಸ್‌ಎಲ್: ಜಯದೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿದ ಮುಂಬೈ ಸಿಟಿ

ಚೆನ್ನೈಯಿನ್ ರೀತಿಯಲ್ಲೇ ಹೈದರಾಬಾದ್ ತಂಡ ಏಳು ಗೋಲುಗಳನ್ನು ಗಳಿಸಿದೆ. ಅತಿ ಕಡಿಮೆ ಗೋಲು ಗಳಿಸಿದ್ದು ಒಡಿಶಾ ಮತ್ತು ಈಸ್ಟ್ ಬೆಂಗಾಲ್ ತಂಡಗಳು. ವೈಯಕ್ತಿಕವಾದ ವೈಫಲ್ಯಗಳು ನಿಜಾಮರ ಪಡೆಯ ಹಿನ್ನೆಡೆಗೆ ಪ್ರಮುಖ ಕಾರಣವಾಯಿತು. ಡಿಫೆನ್ಸ್ ವಿಭಾಗದಲ್ಲಿ ತಂಡ ಹೆಚ್ಚಿನ ವೈಫಲ್ಯ ಕಂಡಿರುವುದು ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. "ಚೆನ್ನೈಯಿನ್ ತಂಡ ಉತ್ತಮ ಆಟಗಾರರಿಂದ ಕೂಡಿದ ಬಲಿಷ್ಠ ತಂಡವಾಗಿದೆ, " ಎಂದಿರುವ ಕೋಚ್ ಮಾರ್ಕ್ವೀಜ್, "ಅವರು ಆಕ್ರಮಣಕಾರಿ ಆಟಗಾರರು. ಸೆಟ್ ಪೀಸ್ ನಲ್ಲಿ ಅವರು ಅತ್ಯಂತ ಅಪಾಯಕಾರಿ ತಂಡ. ಎನೆಸ್ ಸಿಪೊವಿಕ್, ಎಲಿ ಸಾಬಿಯಾ ಅವರಂಥ ಎತ್ತರದ ಆಟಗಾರರಿಂದ ಕೂಡಿದ ತಂಡ. ಸಿಲ್ವಸ್ಟರ್, ರಹೀಮ್, ತಾಂಗ್ರಿ, ಅನಿರುದ್ಧ್ ಥಾಪಾ ಅವರಂಥ ಉತ್ತಮ ಆಟಗಾರರಿದ್ದಾರೆ. ಚೆನ್ನೈಯಿನ್ ಹಾಗೂ ಹೈದರಾಬಾದ್ ತಂಡಗಳು ಅಂಕಪಟ್ಟಿಯಲ್ಲಿ ಮೇಲಿರಬೇಕಾದ ತಂಡಗಳು, ಈಗಿರುವುದು ನಮ್ಮ ನಿಜವಾದ ಸ್ಥಾನವಲ್ಲ, "ಎಂದರು.

Story first published: Monday, January 4, 2021, 12:50 [IST]
Other articles published on Jan 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X