ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಈಸ್ಟ್ ಬೆಂಗಾಲ್ ವಿರುದ್ಧ ಜಯದ ನಿರೀಕ್ಷೆಯಲ್ಲಿ ಚೆನ್ನೈಯಿನ್

By Isl Media
ISL 2020 21: east bengal vs chennaiyin fc match 63 preview

ಗೋವಾ, ಜನವರಿ 16: ಜಯದ ನಡೆಯಲ್ಲಿ ಮುನ್ನಡೆಯುತ್ತಿರುವ ಎಸ್ ಸಿ ಈಸ್ಟ್ ಬೆಂಗಾಲ್ ವಿರುದ್ಧ ಸೋಮವಾರ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ತಂಡದ ಕೋಚ್ ಸಾಬಾ ಲಾಜ್ಲೋ ಜಯದ ನಿರೀಕ್ಷೆ ಹೊಂದಿದ್ದಾರೆ. ಕಳೆದ ಏಳು ಪಂದ್ಯಗಳಲ್ಲಿ ಚೆನ್ನೈಯಿನ್ ತಂಡ ಸೋತಿರುವುದು ಕೇವಲ ಒಂದು ಬಾರಿ. ಇದು ಉತ್ತಮ ಸಾಧನೆ ಎಂದು ಕಂಡು ಬಂದರೂ ಎರಡು ಬಾರಿ ಚಾಂಪಿಯನ್ ತಂಡ 11 ಪಂದ್ಯಗಳಲ್ಲಿ 5 ಡ್ರಾ ಕಂಡಿದೆ. ಈಸ್ಟ್ ಬೆಂಗಾಲ್ ಆರು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಈ ಎರಡು ತಂಡಗಳಿಗಿಂತ ನಾರ್ಥ್ ಈಸ್ಟ್ ಹೆಚ್ಚಿನ ಪಂದ್ಯಗಳಲ್ಲಿ ಡ್ರಾ ಕಂಡಿದೆ.

ಕೋಚ್ ಲಾಜ್ಲೋ ತಮ್ಮ ತಂಡ ಉತ್ತಮ ಪ್ರದರ್ಶನ ನೀಡಬಹುದೆಂಬ ನಂಬಿಕೆಯಲ್ಲಿದ್ದಾರೆ, "ನಾವು ಗೆಲ್ಲಬೇಕಾದ ಪಂದ್ಯಗಳಲ್ಲಿ ಡ್ರಾ ಕಂಡಿದ್ದೇವೆ. ಆದರೆ ನಾವು ಋತುವಿನ ೆರಡನೇ ಹಂತದಲ್ಲಿ ಬಲಿಷ್ಠರಾದೆವು. ನಮ್ಮ ತಂಡ ಸ್ಫೂರ್ತಿಯ ಪ್ರದರ್ಶನ ತೋರುವುದು ಮಾತ್ರವಲ್ಲ ಸಾಕಷ್ಟು ಗೋಲುಗಳನ್ನು ಗಳಿಸಿ ಪಂದ್ಯ ಗೆಲ್ಲುವುದೆಂಬ ನಂಬಿಕೆ ಇದೆ,' ಎಂದರು.

ನೀವೂ ಕೋಟ್ಯಾಧಿಪತಿಯಾಗಬಹುದು; ಹಣ ಗಳಿಸಲು ಇಲ್ಲಿದೆ ಸುಲಭ ದಾರಿ!ನೀವೂ ಕೋಟ್ಯಾಧಿಪತಿಯಾಗಬಹುದು; ಹಣ ಗಳಿಸಲು ಇಲ್ಲಿದೆ ಸುಲಭ ದಾರಿ!

ಮಿಡ್ ಫೀಲ್ಡ್ ವಿಭಾಗದಲ್ಲಿ ಬಲಿಷ್ಠ

ಮಿಡ್ ಫೀಲ್ಡ್ ವಿಭಾಗದಲ್ಲಿ ಬಲಿಷ್ಠ

ಬ್ರೈಟ್ ಎನೋಬಾರ್ಖರೆ ಅವರನ್ನು ತಂಡಕ್ಕೆ ಸೇರಿಸಿಕೊಂಡ ನಂತರ, ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿದೆ. ಲೀಗ್ ನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ತಂಡ ಈಗ ಚೇತರಿಸಿಕೊಂಡಿದೆ. ಏನಿದ್ದರೂ ಚೆನ್ನೈಯಿನ್ ತಂಡ ನಾಳೆಯ ಪಂದ್ಯಕ್ಕೆ ಸಜ್ಜಾಗಿದ್ದು, ಸವಾಲನ್ನು ಸ್ವೀಕರಿಸಲು ಸನ್ನದ್ದರಾಗಿದ್ದಾರೆ, "ಎಸ್ ಸಿ ಈಸ್ಟ್ ಬೆಂಗಾಲ್ ತಂಡ ಕೆವಲು ಉತ್ತಮ ಆಟಗಾರರನ್ನು ಸೇರಿಸಕೊಂಡು ಬಲಿಷ್ಠವಾಗಿದೆ. ಅಫೆನ್ಸ್ ಮತ್ತು ಡಿಫೆನ್ಸ್ ವಿಭಾಗದಲ್ಲಿ ತಂಡ ಉತ್ತಮ ಪ್ರದರ್ಶನ ತೋರಿದೆ. ನಮ್ಮ ತಂಡ ಮಿಡ್ ಫೀಲ್ಡ್ ವಿಭಾಗದಲ್ಲಿ ಬಲಿಷ್ಠವಾಗಿದೆ. ಎಸ್ ಸಿ ಇಬಿ ವಿರುದ್ಧ ಪಂದ್ಯವನ್ನು ಗೆಲ್ಲಲು ನಮ್ಮ ತಂಡ ಶಕ್ತವಾಗಿದೆ," ಎಂದರು.

ಗಾಯದ ಸಮಸ್ಯೆಯಲ್ಲಿ ಚೆನ್ನೈಯಿನ್

ಗಾಯದ ಸಮಸ್ಯೆಯಲ್ಲಿ ಚೆನ್ನೈಯಿನ್

ಈ ಋತುವಿನಲ್ಲಿ ಚೆನ್ನೈಯಿನ್ ತಂಡ ಸಾಕಷ್ಟು ಗಾಯದ ಸಮಸ್ಯೆಗಳನ್ನು ಎದುರಿಸಿತ್ತು. ಆದರೆ ತಂಡದ ಕೋಚ್ ಇವೆಲ್ಲದರ ನಡುವೆಯೂ ಇರುವ ಆಟಗಾರರ ಬಗ್ಗೆ ನಂಬಿಕೆ ಇಟ್ಟಿದ್ದಾರೆ. " ನಮ್ಮಲ್ಲಿ ಉಳಿದಿರುವ ಆಟಗಾರರು ತಮ್ಮ ನೈಜ ಪ್ರದರ್ಶನ ತೋರುಲು ಉತ್ಸುಕರಾಗಿದ್ದಾರೆ. ಉತ್ತಮ ಹೊಂದಾಣಿಕೆ ಇರುವುದು ತಂಡದ ದೃಷ್ಟಿಯಿಂದ ಉತ್ತಮ," ಎಂದರು.

ಗೆಲ್ಲುವ ನಂಬಿಕೆಯೊಂದಿಗೆ ಆಡುತ್ತೇವೆ

ಗೆಲ್ಲುವ ನಂಬಿಕೆಯೊಂದಿಗೆ ಆಡುತ್ತೇವೆ

ಎಸ್ ಸಿಇ ಬಿ ತಂಡ ಕಳೆದ ಆರು ಪಂದ್ಯಗಳಲ್ಲಿ ಅಜೇಯವಾಗಿತ್ತು. ಐದು ಅಂಕಗಳನ್ನು ಗಳಿಸಿದರೆ ರಾಬಿ ಫ್ಲವರ್ ಪಡೆ ಪ್ಲೇ ಆಫ್ ತಲುಪಲಿದೆ. ತಮ್ಮ ತಂಡ ಪ್ಲೇ ಆಫ್ ಹಂತ ತಲಪುವ ಸಾಮರ್ಥ್ಯವನ್ನು ಹೊಂದಿದೆ. ಎಂಬ ಆತ್ಮವಿಶ್ವಾಸವನ್ನು ಫ್ಲವರ್ ತೋರಿದ್ದಾರೆ, "ನಮ್ಮಲ್ಲಿ ಹಲವಾರು ಧನಾತ್ಮಕ ಅಂಶಗಳನ್ನು ಹೊಂದಿರುವ ಆಟಗಾರರಿದ್ದಾರೆ. ನಮ್ಮ ಸಮ್ಮಿಲನವೇ ಧನಾತ್ಮಕದ ಸಮ್ಮಿಲನವಾಗಿದೆ. ಹಲವಾರು ಅಂಕಗಳನ್ನು ಗಳಿಸಬೇಕಾಗಿದೆ, ಅದಕ್ಕೆ ಸಾಕಷ್ಟು ಪಂದ್ಯಗಳನ್ನು ಗೆಲ್ಲಬೇಕಾಗಿದೆ, ಆ ಪಂದ್ಯಗಳನ್ನು ಗೆಲ್ಲುವ ಪ್ರಯತ್ನ ಮಾಡುತ್ತೇವೆ. ಲೆಕ್ಕಾಚಾರದಲ್ಲಿ ಅದು ಕಷ್ಟವಾಗಿದ್ದರೂ ನಾವು ಗೆಲ್ಲುತ್ತೇವೆಂಬ ನಂಬಿಕೆಯೊಂದಿಗೆ ಆಡುತ್ತೇವೆ, " ಎಂದು ಫ್ಲವರ್ ಹೇಳಿದರು.

Story first published: Monday, January 18, 2021, 12:56 [IST]
Other articles published on Jan 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X