ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಗೋವಾದ ಜಯದ ಓಟಕ್ಕೆ ಬ್ರೇಕ್ ಹಾಕಲು ಎಟಿಕೆಎಂಬಿ ಸಜ್ಜು

By Isl Media
ISL 2020 21, fC goa vs ATK Mohun bagan FC, preview

ಗೋವಾ, ಜನವರಿ 16: ಹೀರೋ ಇಂಡಿಯನ್ ಸೂಪರ್ ಲೀಗ್ ನ 62ನೇ ಪಂದ್ಯದಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಾದ ಹಾಲಿ ಚಾಂಪಿಯನ್ ಎಟಿಕೆಎಂಬಿ ಹಾಗೂ ಎಫ್ ಸಿ ಗೋವಾ ತಂಡಗಳು ಮುಖಾಮುಖಿಯಾಗಲಿವೆ. ಲೀಗ್ ನಲ್ಲಿ ಉತ್ತಮ ಅಟ್ಯಾಕ್ ವಿಭಾಗವನ್ನು ಹೊಂದಿರುವ ಮತ್ತು ಉತ್ತಮ ಡಿಫೆನ್ಸ್ ವಿಭಾಗವನ್ನು ಹೊಂದಿರುವ ತಂಡಗಳ ಮುಖಾಮುಖಿಯಾಗಿದೆ. ಓಪನ್ ಪ್ಲೇ ಮೂಲಕ ಗೋವಾ 13 ಗೋಲುಗಳನ್ನು ಗಳಿಸಿದ್ದರೆ, ಎಟಿಕೆಎಂಬಿ ಗಳಿಸಿದ್ದು ಕೇವಲ 4 ಗೋಲುಗಳು.

ಅತ್ಯಂತ ನಿರಾಶದಾಯಕವಾಗಿ ಋತುವನ್ನು ಆರಂಭಿಸಿದರೂ ಜುವಾನ್ ಫೆರಾಂಡೊ ಪಡೆ ಉತ್ತಮ ರೀತಿಯಲ್ಲಿ ಚೇತರಿಕೆ ಕಂಡಿತು. ಕಳೆದ ನಾಲ್ಕು ಪಂದ್ಯಗಳಲ್ಲಿ ತಂಡ ಅಜೇಯವಾಗಿ ಸಾಗಿ ಬಂದಿತ್ತು. ಅದರಲ್ಲಿ ಮೂರು ಜಯ ಕಂಡಿತ್ತು. ಹಿಂದಿನ ಪಂದ್ಯದಲ್ಲಿ ಜಯ ಗಳಿಸುವ ಮೂಲಕ ಗೋವಾ ಮೂರನೇ ಸ್ಥಾನಕ್ಕೆ ತಲುಪಿತು. ಇಲ್ಲಿ ಜಯ ಗಳಿಸಿದರೆ ಮುಂಬೈ ಸಿಟಿ ಮತ್ತು ಎಟಿಕೆಎಂಬಿ ನಡುವೆ ಅಗ್ರ ಸ್ಥಾನಕ್ಕಾಗಿ ಸ್ಪರ್ಧೆ ನಡೆಸಲಿದೆ.

ನಮ್ಮ ಗುರಿ ಪ್ಲೇ ಆಫ್

ನಮ್ಮ ಗುರಿ ಪ್ಲೇ ಆಫ್

"ನಾಳೆಯದ್ದು ಉತ್ತಮ ಪಂದ್ಯ, ಏಕೆಂದರೆ ಮೂರು ಅಂಕಗಳನ್ನು ಗಳಿಸಲು ಉತ್ತಮ ಅವಕಾಶ. ತಂಡವಾಗಿ ಸುಧಾರಣೆ ಕಾಣಲು ಇದು ಮತ್ತೊಂದು ಅವಕಾಶ," ಎಂದು ಹೇಳಿರುವ ಫೆರಾಂಡೊ, "ಇಲ್ಲಿ ಲೀಗ್ ಅತ್ಯಂತ ಚಿಕ್ಕದ್ದಾಗಿದೆ. ನಿನ್ನೆ ನಾನು ತಂಡದ ಮ್ಯಾನೇಜರ್ ಜತೆ ಕೇರಳ ಬ್ಲಾಸ್ಟರ್ಸ್ ತಂಡದ ಮುಂದಿನ ಸ್ಥಾನದ ಬಗ್ಗೆ ಮಾತನಾಡುತ್ತಿದ್ದೆ. ಆ ತಂಡ ಜಯ ಗಳಿಸುತ್ತ ನಡೆದರೆ ಪ್ಲೇ ಆಫ್ ಗೆ ಮೂರು ಅಂಕ ಕಡಿಮೆಯಾಗಿ ಉಳಿಯಲಿದೆ. ಪ್ರತಿಯೊಂದು ಪಂದ್ಯವೂ ಪ್ರಮುಖವಾದುದು, ಅದೇ ರೀತಿ ಮೂರು ಅಂಕಗಳನ್ನು ಗಳಿಸುವುದು ಕೂಡ ಪ್ರಮುಖವಾಗಿದೆ, ನಮ್ಮ ಗುರಿ ಪ್ಲೇ ಆಫ್ ಆಡುವುದೆಂದು ಎಲ್ಲರಿಗೂ ಗೊತ್ತು," ಎಂದರು.

ಕಠಿಣ ಸವಾಲು

ಕಠಿಣ ಸವಾಲು

ಆದರೂ ಫೆರಾಂಡೋ ಒಂದೆರಡು ಕಠಿಣ ಪ್ರಶ್ನೆಗಳನ್ನು ಎದುರಿಸಿದರು. ಹಿಂದಿನ ಪಂದ್ಯದಲ್ಲಿ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ್ದ ಐಗರ್ ಆಂಗುಲೊ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಅವರ ಸ್ಥಾನದಲ್ಲಿ ಜಾರ್ಜ್ ಆರ್ಟಿಜ್ ಮೆಂಡೊನ್ಸಾ ಅವರು ಆಡಿ ಜಯದ ರೂವಾರಿ ಎನಿಸಿದ್ದರು. ಸೆಟ್ ಫಿಸ್ ಮೂಲಕ ತಮ್ಮ ತಂಡ ಎಷ್ಟು ಗೋಲುಗಳನ್ನು ನಿಡಲಿದೆ ಎಂಬುದು ಫೆರಾಂಡೊ ಅವರ ಯೋಚನೆಯಾಗಿದೆ. ಈಗಾಗಲೇ ತಂಡ 8 ಗೊಲುಗಳನ್ನು ನೀಡಿದೆ.

ಹೋರಾಟ ನೀಡಲಿದ್ದೇವೆ

ಹೋರಾಟ ನೀಡಲಿದ್ದೇವೆ

ಭಾನುವಾರದ ಜಯ ತಂಡವನ್ನು ಅಗ್ರ ಸ್ಥಾನಕ್ಕೆ ಕೊಡೊಯ್ಯಲಿದೆ, ಮುಂಬೈ ಸಿಟಿ ತಂಡದ ಜತೆ ಅಂಕ ಹಂಚಿಕೊಳ್ಳಲಿದೆ. ಎಟಿಕೆಎಂಬಿ ಕೋಚ್ ಆಂಟೊನಿಯೊ ಹಬ್ಬಾಸ್ " ನಾವು ಹೋರಾಟ ನೀಡಲಿದ್ದೇವೆ, ಮತ್ತು ನಾವು ಪ್ರತಿಯೊಂದು ಪಂದ್ಯವನ್ನೂ ಗೆಲ್ಲಲಿದ್ದೇವೆ, ನಾವು ಹಿಂದಿನ ಪಂದ್ಯದ ಬಗ್ಗೆ ಯೋಚಿಸುವುದಿಲ್ಲ," ಎಂದು ಹೇಳಿದರು. " ಗೋವಾ ತಂಡದಲ್ಲು ಉತ್ತಮ ಆಟಗಾರರಿದ್ದಾರೆ, ನಮ್ಮ ತಂಡದಲ್ಲೂ ಉತ್ತಮ ಆಟಗಾರರಿದ್ದಾರೆ, ನಾವು ಮುಂದಿನ 90 ನಿಮಿಷಗಳ ಹೋರಾಟಕ್ಕೆ ಸಜ್ಜಾಗಿದ್ದೇವೆ," ಎಂದರು.

Story first published: Sunday, January 17, 2021, 9:01 [IST]
Other articles published on Jan 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X