ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಮೂರು ಗೋಲುಗಳಿಂದ ಮೂರನೇ ಸ್ಥಾನಕ್ಕೆ ಜಿಗಿದ ಗೋವಾ

By Isl Media
Isl 2020 21, fc goa vs jamshedpur fc highlights

ಗೋವಾ,ಜನವರಿ 14 : ಜಾರ್ಜ್ ಆರ್ಟಿಜ್ ಮೆಂಡೊನ್ಸಾ ( 19 ಮತ್ತು 52ನೇ ನಿಮಿಷ) ಮತ್ತು ಐವಾನ್ ಗ್ಯಾರಿಡೊ ಗೊನ್ಸಾಲೀಸ್ (89ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಜೆಮ್ಷೆಡ್ಪುರ ಎಫ್ ಸಿ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಮಣಿಸಿದ ಎಫ್ ಸಿ ಗೋವಾ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. ಗೋವಾದ ಗೋಲ್ ಕೀಪರ್ ನವೀನ್ ಕುಮಾರ್ ಅವರು ಉತ್ತಮ ರೀತಿಯಲ್ಲಿ ಗೋಲ್ ಕೀಪಿಂಗ್ ಮಾಡಿದುದರ ಪರಿಣಾಮ ಜೆಮ್ಷೆಡ್ಪುರ ತಂಡ ಗೋಲು ಗೋಲಿನ ಖಾತೆ ತೆರೆಯುವಲ್ಲಿ ವಿಫಲವಾಯಿತು. 13 ಅಂಕಗಳನ್ನು ಗಳಿಸಿ ಜೆಮ್ಷೆಡ್ಪುರ ಏಳನೇ ಸ್ಥಾನಕ್ಕೆ ಕುಸಿಯಿತು.

ದ್ವಿತಿಯಾರ್ಧದಲ್ಲೂ ಮೆಂಡೊನ್ಸಾ ಮಿಂಚು: 52ನೇ ನಿಮಿಷದಲ್ಲಿ ಜಾರ್ಜ್ ಮೆಂಡೊನ್ಸಾ ಗಳಿಸಿದ ವೈಯಕ್ತಿಕ ಎರಡನೇ ಗೋಲು ಗೋವಾ ತಂಡಕ್ಕೆ ಗೆಲ್ಲಲು ಅಗತ್ಯವಿರುವ ವೇದಿಕೆ ಸೃಷ್ಟಸಿತು. ಬ್ರೆಂಡಾನ್ ಫೆರ್ನಾಂಡೀಸ್ ನೀಡಿದ ಪಾಸ್ ಮೂಲಕ ಮೆಂಡೊನ್ಸಾ ಗಳಿಸಿದ ಈ ಗೋಲನ್ನು ತಡೆಯವಲ್ಲಿ ಟಾಟಾ ಪಡೆಯ ಗೋಲ್ ಕೀಪರ್ ಟಿಪಿ ರೆಹನೇಶ್ ವಿಫಲರಾದರು. ಆಟದ ಕಾವು ಏರುತ್ತಿದ್ದಂತೆ ಇತ್ತಂಡಗಳ ಆಟಗಾರರು ಕೆಲ ಹೊತ್ತು ಮಾತಿನ ಚಕಚಕಿಗೆ ಇಳಿದ ಪರಿಣಾಮ ಇಬ್ಬರು ಆಟಗಾರರು ಹಳದಿ ಕಾರ್ಡ್ ಗಳಿಸಬೇಕಾಯಿತು.

ಮೆಗಾ ಮಿಲಿಯನ್ ಜಾಕ್‌ಪಾಟ್‌ ಮೌಲ್ಯ ಈಗ 640 ಮಿಲಿಯನ್‌ ಡಾಲರ್‌ಮೆಗಾ ಮಿಲಿಯನ್ ಜಾಕ್‌ಪಾಟ್‌ ಮೌಲ್ಯ ಈಗ 640 ಮಿಲಿಯನ್‌ ಡಾಲರ್‌

ಮೆಂಡೊನ್ಸಾ ನೀಡಿದ ಮುನ್ನಡೆ

ಮೆಂಡೊನ್ಸಾ ನೀಡಿದ ಮುನ್ನಡೆ

ಮೂರನೇ ಸ್ಥಾನ ತಲುಪಲು ಇದು ಸೂಕ್ತ ಸಮಯ ಎಂದು ಅರಿತ ಗೋವಾದ ಆಟಗಾರರು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮನಮಾಡಿದರು, ಪರಿಣಾಮ 19ನೇ ನಿಮಿಷದಲ್ಲಿ ಜಾರ್ಜ್ ಮೆಂಡೋನ್ಸಾ ಗಳಿಸಿದ ಗೋಲಿನಿಂದ ಗೋವಾಕ್ಕೆ ಅಮೂಲ್ಯ ಮುನ್ನಡೆ ಲಭಿಸಿತು. ಜಾರ್ಜ್ ಮೆಂಡೊನ್ಸಾ ಗಳಿಸಿದ ಗೋಲು ಗೋವಾದ ಪ್ರಥಮಾರ್ಧದ ಮುನ್ನಡೆಗೆ ಕಾರಣವಾಯಿತು.

ಮೂರನೇ ಸ್ಥಾನಕ್ಕಾಗಿ ಸೆಣಸು

ಮೂರನೇ ಸ್ಥಾನಕ್ಕಾಗಿ ಸೆಣಸು

ಫಟೋರ್ಡಾ ಅಂಗಣದಲ್ಲಿ ಎಫ್ ಸಿ ಗೋವಾ ಮತ್ತು ಜೆಮ್ಷೆಡ್ಪುರ ತಂಡಗಳು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮುಖಾಮುಖಿಯಾದವು. ನಾಲ್ಕನೇ ಸ್ಥಾನದಲ್ಲಿರುವ ಗೋವಾ ಇನ್ನೊಂದು ಅಂಕ ಗಳಿಸಿದರೆ ಮೂರನೇ ಸ್ಥಾನ ತಲುಪಲಿದೆ. ಜುವಾನ್ ಫೆರಾಂಡೋ ಪಡೆ ಹಿಂದಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿತ್ತು. ಐಗರ್ ಆಂಗುಲೋ ದ್ವಿತಿಯಾರ್ಧದಲ್ಲಿ ಎರಡೂ ಗೋಲುಗಳನ್ನು ಗಳಿಸಿದ್ದರು. ಫೆರಾಂಡೋ ಪಡೆ ಹೆಚ್ಚಿನ ಪಂದ್ಯಗಳಲ್ಲಿ ದ್ವಿತಿಯಾರ್ಧದಲ್ಲಿ ಗೋಲು ಗಳಿಸಿ ಪಂದ್ಯವನ್ನು ಗೆದ್ದಿತ್ತು. 13 ಗೋಲುಗಳಲ್ಲಿ ತಂಡ 9 ಗೋಲುಗಳನ್ನು ದ್ವಿತಿಯಾರ್ಧದಲ್ಲಿ ಗಳಿಸಿತ್ತು.

ಜೆಮ್ಷೆಡ್ಪುರ ವಿರುದ್ಧ ಗೆದ್ದರೆ 3ನೇ ಸ್ಥಾನ

ಜೆಮ್ಷೆಡ್ಪುರ ವಿರುದ್ಧ ಗೆದ್ದರೆ 3ನೇ ಸ್ಥಾನ

ಗೋವಾ 10 ಪಂದ್ಯಗಳಲ್ಲಿ ಕೇವಲ ಒಂದು ಬಾರಿ ಮಾತ್ರ ಕ್ಲೀನ್ ಶೀಟ್ ಸಾಧನೆ ಮಾಡಿತ್ತು. ಜೆಮ್ಷೆಡ್ಪುರ ಎಫ್ ಸಿ ಜಯ ಗಳಿಸಿದರೆ ಮೂರನೇ ಸ್ಥಾನ ತಲುಪಲಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧ 2-3 ಅಂತರದಲ್ಲಿ ಸೋಲು ಅನುಭವಿಸಿತ್ತು. ದ್ವಿತಿಯಾರ್ಧದಲ್ಲಿ ರೆಡ್ ಮೈನರ್ಸ್ ಪಡೆ ಕೇರಳ 10 ಮಂದಿ ಆಟಗಾರರನ್ನೊಳಗೊಂಡಿದ್ದಾಗ 2 ಗೋಲುಗಳನ್ನು ಗಳಿಸಿತ್ತು. ಜೆಮ್ಷೆಡ್ಪುರ ಎಫ್ ಸಿ ತಂಡದ ಜೆರಿಜಸ್ ವಾಸ್ಕಿಸ್ ಹಾಗೂ ಗೋವಾದ ಐಗರ್ ಆಂಗುಲೊ ಗೋಲ್ಡನ್ ಪೂಟ್ ಸ್ಪರ್ಧೆಯಲ್ಲಿರುವ ಆಟಗಾರರು. ಇಬ್ಬರೂ ಅನುಕ್ರಮವಾಗಿ 8 ಮತ್ತು 9 ಗೋಲುಗಳನ್ನು ಗಳಿಸಿರುತ್ತಾರೆ. ಲೀಗ್ ನಲ್ಲಿ ಕೊನೆಯ ಬಾರಿಗೆ ಸ್ಪರ್ಧಿಸುತ್ತಿರುವ ತಂಡಗಳು ಇಲ್ಲಿ ಜಯವನ್ನೇ ಗುರಿಯಾಗಿಸಿಕೊಂಡು ಅಂಗಣಕ್ಕಿಳಿದವು.

Story first published: Friday, January 15, 2021, 9:25 [IST]
Other articles published on Jan 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X