ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಅಂಕ ಹಂಚಿಕೊಂಡ ನಾರ್ಥ್ ಈಸ್ಟ್ ಹಾಗೂ ಗೋವಾ

By Isl Media
ISL 2020-21: Gallego runs the show as Highlanders battle back to hold Goa

ಗೋವಾ: ನಾರ್ಥ್ ಈಸ್ಟ್ ಯುನೈಟೆಡ್ ಮತ್ತು ಎಫ್ ಸಿ ಗೋವಾ ತಂಡಗಳು ಅತ್ಯಂತ ರೋಚಕ ಪಂದ್ಯದಲ್ಲಿ 2-2 ಗೋಲುಗಳಿಂದ ಸಮಬಲ ಸಾಧಿಸಿವೆ. ನಾರ್ಥ್ ಈಸ್ಟ್ ತಂಡದ ಪರ ಫೆಡರಿಕೊ ಗಲ್ಲೆಗೊ ಪೆನಾಲ್ಟಿ ಮೂಲಕ (41 ಮತ್ತು 83 ನಿಮಿಷ) ಗಳಿಸಿದ ಗೋಲು ಹಾಗೂ ಎಫ್ ಸಿ ಗೋವಾ ಪರ ಅಲೆಕ್ಸಾಂಡರ್ ರೊಮಾರಿಯೊ ಜೆಸುರಾಜ್ (21ನೇ ನಿಮಿಷ) ಹಾಗೂ ಅಮರ್ಜಿತ್ ಸಿಂಗ್ (80ನೇ ನಿಮಿಷ) ಗೋಲು ಗಳಿಸಿದರು.

ಈ ಫಲಿತಾಂಶದೊಂದಿಗೆ ಎಫ್ ಸಿ ಗೊವಾ ಮೂರನೇ ಸ್ಥಾನಕ್ಕೇರಿದರೆ, ನಾರ್ಥ್ ಈಸ್ಟ್ ಐದನೇ ಸ್ಥಾನದಲ್ಲೇ ಉಳಿಯಿತು. ಮೂರನೇ ಸ್ಥಾನದಲ್ಲಿದ್ದ ಹೈದರಾಬಾದ್ ನಾಲ್ಕನೇ ಸ್ಥಾನಕ್ಕೆ ಕುಸಿಯಿತು.

ಸಮಬಲದ ಪ್ರಥಮಾರ್ಧ

ಸಮಬಲದ ಪ್ರಥಮಾರ್ಧ

21ನೇ ನಿಮಿಷದಲ್ಲಿ ಅಲೆಕ್ಸಾಂಡರ್ ರೊಮಾರಿಯೊ ಜೆಸುರಾಜ್ ಗಳಿಸಿದ ಅದ್ಭುತ ಗೋಲಿನ ನೆರವಿನಿಂದ ಗೋವಾ ಮುನ್ನಡೆ ಕಾಯ್ದಯಕೊಂಡಿತ್ತು, ಆದರೆ ಈ ಸಂಭ್ರಮ ಕೇವಲ ಕೆಲವು ನಿಮಿಷಗಳಿಗೆ ಮಾತ್ರ ಸೀಮಿತವಾಗಿತ್ತು. ಏಕೆಂದರೆ ಫೆಡರಿಕೊ ಗಲ್ಲೆಗೋ 41ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಗಳಿಸಿದ ಗೋಲು ಪ್ರಥಮಾರ್ಧವನ್ನು 1-1ರಲ್ಲಿ ಸಮಬಲಗೊಳಿಸಿತು. 36ನೇ ನಿಮಿಷದಲ್ಲಿ ದೆಶ್ರಾನ್ ಬ್ರೌನ್ ಅವರಿಗೆ ಗೋಲು ಗಳಿಸುವ ಅವಕಾಶ ಸುಲಭವಾಗಿತ್ತು. ಆದರೆ ಚೆಂಡನ್ನು ಧೀರಜ್ ಸಿಂಗ್ ತಡೆಯವಲ್ಲಿ ಯಶಸ್ವಿಯಾದರು, ಇದಕ್ಕಾಗಿ ನಾರ್ಥ್ ಈಸ್ಟ್ ಪೆನಾಲ್ಟಿಗೆ ಮನವಿ ಮಾಡಿದರೂ ರೆಫರಿ ಅದನ್ನು ತಳ್ಳಿಹಾಕಿದರು. ನಾರ್ಥ್ ಈಸ್ಟ್ ಇದಕ್ಕೂ ಮುನ್ನ ಸಿಕ್ಕ ಎರಡು ಅವಕಾಶಗಳಲ್ಲಿ ಗೋಲು ಗಳಿಸುವಲ್ಲಿ ವಿಫಲವಾಗಿತ್ತು.

ಗೋವಾಕ್ಕೆ ಮುನ್ನಡೆ

ಗೋವಾಕ್ಕೆ ಮುನ್ನಡೆ

ಅಲೆಕ್ಸಾಂಡರ್ ರೊಮಾರಿಯೊ ಜೆಸುರಾಜ್ (21ನೇ ನಿಮಿಷ) ಗಳಿಸಿದ ಗೋಲಿನಿಂದ ಗೋವಾ ತಂಡ ನಾರ್ಥ್ ಈಸ್ಟ್ ವಿರುದ್ಧ ಮುನ್ನಡೆ ಕಾಯ್ದುಕೊಂಡಿತು. ಸಾಮಾನ್ಯವಾಗಿ ಹೆಚ್ಚಿನ ಪಂದ್ಯಗಳಲ್ಲಿ ಗೋವಾ ತಂಡ ಪ್ರಥಮಾರ್ಧಲ್ಲಿ ಹಿನ್ನಡೆ ಕಾಣುತ್ತಿತ್ತು. ಎದುರಾಳಿ ತಂಡವೇ ಮೊದಲು ಗೋಲು ಗಳಿಸಿರುತ್ತಿತ್ತು. ಆದರೆ ಈ ಬಾರಿ ಹಾಗೆ ಆಗಲಿಲ್ಲ. ಗೋವಾ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಮುನ್ನಡೆ ಕಾಯ್ದುಕೊಂಡಿತು.

ನಾಲ್ಕರಲ್ಲಿ ಭದ್ರರಾಗಲು ಹೋರಾಟ

ನಾಲ್ಕರಲ್ಲಿ ಭದ್ರರಾಗಲು ಹೋರಾಟ

ಹೀರೋ ಇಂಡಿಯನ್ ಸೂಪರ್ ಲೀಗ್ ನ 82ನೇ ಪಂದ್ಯದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ಹಾಗೂ ಎಫ್ ಸಿ ಗೋವಾ ತಂಡಗಳು ಅಂತಿಮ ನಾಲ್ಕರಲ್ಲಿ ಸ್ಥಾನ ಭದ್ರಪಡಿಸಕಿಕೊಳ್ಳಲು ಮುಖಾಮುಖಿಯಾದವು. ಗೋವಾ ನಾಲ್ಕನೇ ಸ್ಥಾನದಲ್ಲಿದ್ದರೆ ನಾರ್ಥ್ ಈಸ್ಟ್ ಐದನೇ ಸ್ಥಾನದಲ್ಲಿದೆ. ಖಾಲೀದ್ ಜಮಿಲ್ ಕೋಚ್ ಆದ ನಂತರ ನಾರ್ಥ್ ಈಸ್ಟ್ ಯಶಸ್ಸಿನ ಹಾದಿ ಹಿಡಿದಿದೆ. ಸತತ ಮೂರು ಪಂದ್ಯಗಳಲ್ಲಿ ಗೆದ್ದಿರುವ ತಂಡ ಈಗ ಋತುವಿನಲ್ಲಿ ಸತತ ನಾಲ್ಕನೇ ಜಯದ ಗುರಿ ಹೊಂದಿದೆ. ಫೆಡರಿಕೊ ಗಲ್ಲೆಗೋ ಅವರು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ತಂಡ ಗೆದ್ದಿರುವಾಗ ಗಳಿಸಿದ ಆರು ಗೋಲುಗಳಲ್ಲಿ ಗಲ್ಲೆಗೊ ನಾಲ್ಕು ಗೋಲುಗಳಲ್ಲಿ ಭಾಗಿಯಾಗಿದ್ದಾರೆ. ಇಂದು ಜಯ ಗಳಿಸಿದರೆ ನಾರ್ಥ್ ಈಸ್ಟ್ ಮೂರನೇ ಸ್ಥಾನ ತಲುಪಲಿದೆ. ಕಳೆದ ಮೂರು ಪಂದ್ಯಗಳಲ್ಲಿ ಕೇವಲ ಡ್ರಾ ಕಂಡಿರುವ ಗೊವಾ ತಂಡಕ್ಕೆ ನಾಯಕ ಎಡು ಬೇಡಿಯಾ ಹೊರಗಿರುವುದು ಚಿಂತೆಯಾಗಿದೆ. ಹಿಂದಿನ ಪಂದ್ಯದಲ್ಲಿ ಧೀರಜ್ ಸಿಂಗ್ ಗೋಲ್ ಕೀಪರ್ ಆಗಿ ಪದಾರ್ಪಣೆ ಮಾಡಿದ್ದರು. ಈಸ್ಟ್ ಬೆಂಗಾಲ್ ವಿರುದ್ಧದ ಪಂದ್ಯ 1-1ರಲ್ಲಿ ಡ್ರಾಗೊಂಡಿತ್ತು. ಆದರೆ ಈ ಪಂದ್ಯದಲ್ಲಿ ಇವಾನ್ ಗೊನ್ಸಾಲೀಸ್ ಆಗಮಿಸಿರುವುದರಿಂದ ತಂಡದ ಬಲ ಹೆಚ್ಚಿದೆ.

Story first published: Thursday, February 4, 2021, 23:43 [IST]
Other articles published on Feb 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X