ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಒಡಿಶಾ ಮಣಿಸಿದ ಎಫ್‌ಸಿ ಗೋವಾ ಮತ್ತೆ ನಾಲ್ಕನೇ ಸ್ಥಾನಕ್ಕೆ

By Isl Media
ISL 2020-21: Goa breaks jinx of draws, stakes claim for top four with win against Odisha

ಗೋವಾ: ಹೀರೋ ಅಲ್ಬೆರ್ಟೋ ನುವೆರಾ (18ನೇ ನಿಮಿಷ), ಆರ್ಟಿಸ್ ಮೆಂಡೊನ್ಸಾ (26ನೇ ನಿಮಿಷ) ಮತ್ತು ಇವಾನ್ ಗೊನ್ಸಾಲೀಸ್ (75ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಎಫ್ ಸಿ ಗೋವಾ 3-1 ಗೋಲುಗಳ ಅಂತರದಲ್ಲಿ ಒಡಿಶಾ ಎಫ್ ಸಿ ವಿರುದ್ಧ ಜಯ ಗಳಿಸಿ ಮತ್ತೆ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಿತು. ಒಡಿಶಾ ಪರ ಮೌರಾಸಿಯೋ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ಈ ಫಲಿತಾಂಶದಿಂದ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಐದನೇ ಸ್ಥಾನಕ್ಕೆ ಕುಸಿಯಿತು.

ಗೋವಾಕ್ಕೆ ಮುನ್ನಡೆ: ಗೋವಾ ತಂಡ ಕಳೆದ ಎರಡು ಪಂದ್ಯಗಳಲ್ಲಿ ರೋಚಕ ಡ್ರಾ ಗಳಿಸದೇ ಇರುತ್ತಿದ್ದರೆ ಇಂದು ಪ್ಲೇ ಆಫ್ ಸ್ಪರ್ಧೆಯಿಂದ ದೂರ ಸರಿದಿರುತ್ತಿತ್ತು. ಆದರೆ ಅಂತಿಮ ಕ್ಷಣದಲ್ಲಿ ಗಳಿಸಿದ ಗೋಲು ತಂಡವನ್ನು ಸೋಲಿನಿಂದ ಪಾರು ಮಾಡಿತ್ತು. ಇದರಿಂದ ಪಾಠ ಕಲಿತ ಗೋವಾ ಈಗ ಒಡಿಶಾ ವಿರುದ್ಧ ಮೊದಲಾರ್ಧದಲ್ಲೇ ಎರಡು ಗೋಲು ಗಳಿಸಿ 2-1 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು.

ಗೋಲು ಗಳಿಸುವ ಅವಕಾಶವಿತ್ತು

ಗೋಲು ಗಳಿಸುವ ಅವಕಾಶವಿತ್ತು

ಪಂದ್ಯ ಆರಂಭಗೊಂಡ ನಾಲ್ಕನೇ ನಿಮಿಷದಲ್ಲೇ ಅಲ್ಬರ್ಟೋ ನೊವೆರಾಗೆ ನೇರವಾಗಿ ಗೋಲು ಗಳಿಸುವ ಅವಕಾಶವಿದ್ದಿತ್ತು. ಆದರೆ ಆರ್ಶದೀಪ್ ಸಿಂಗ್ ಉತ್ತಮ ರೀತಿಯಲ್ಲಿ ತಡೆದು ತಂಡಕ್ಕೆ ನೆರವಾದರು. ಆದರೆ ಅಲ್ಬೆರ್ಟೋ ನೊವೆರಾ 18ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಇವಾನ್ ಗೊನ್ಸಾಲೀಸ್ ಅವರು ನಿಖರವಾದ ಪಾಸೊಂದನ್ನು ಇನ್ ಬಾಕ್ಸ್ ಗೆ ಕಳುಸಿದರು. ಅದನ್ನು ನೆಟ್ ಗೆ ತಲುಪಿಸುವನ್ನು ನೊವೆರಾ ಯಶಸ್ವಿಯಾದರು. 26ನೇ ನಿಮಿಷದಲ್ಲಿ ಗೋವಾ ಎರಡನೇ ಗೋಲು ದಾಖಲಿಸಿತು. ಈ ಬಾರಿ ಜಾರ್ಜ್ ಆರ್ಟಿಸ್ ಮೆಂಡೊನ್ಸಾ ಗಳಿಸಿದ ಗೋಲು ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟಿತ್ತು.

ಒಡಿಶಾ ತಕ್ಕ ತಿರುಗೇಟು

ಒಡಿಶಾ ತಕ್ಕ ತಿರುಗೇಟು

30ನೇ ನಿಮಿಷದಲ್ಲಿ ಒಡಿಶಾ ತಕ್ಕ ತಿರುಗೇಟು ನೀಡಿತು. ರಾಕೇಶ್ ಪ್ರಧಾನ್ ನೀಡಿದ ಈ ಪಾಸಿನ ಮೂಲಕ ದಾಖಲಾದ ಗೋಲು ಒಡಿಶಾ ತಂಡದಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿತು. ಡಿಗೋ ಮೌರಾಸಿಯೋ ಗಳಿಸಿದ ಗೋಲು ಪಂದ್ಯವನ್ನು 2-1ರಲ್ಲಿ ತಂದು ನಿಲ್ಲಿಸಿತು. ಗೋವಾ ನಂತರ ಪಂದ್ಯದ ಮೇಲೆ ಹೆಚ್ಚು ಪ್ರಭುತ್ವ ಸಾಧಿಸಿದರೂ ಗೋಲಿಗೆ ಅವಕಾಶ ಇರಲಿಲ್ಲ. ಗೋವಾಕ್ಕೆ ಇಲ್ಲಿ ಜಯ ದಾಖಲಿಸಲೇಬೇಕಾಗಿದೆ. ಒಂದು ವೇಳೆ ಒಡಿಶಾ ಇನ್ನೊಂದು ಗೋಲು ದಾಖಲಿಸಿದರೆ ಪಂದ್ಯ ಸಮಬಲಗೊಳ್ಳುತ್ತದೆ. ಗೋವಾದ ಪ್ಲೇ ಆಫ್ ಹಾದಿ ಕಠಿಣವಾಗುತ್ತದೆ, ಏಕೆಂದರೆ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳು ಜಯ ಗಳಿಸಿದರೆ ಹಾದಿ ಮತ್ತಷ್ಟು ಕಠಿಣವಾಗಲಿದೆ.

ಜಯದ ಅನಿವಾರ್ಯತೆಯಲ್ಲಿ ಗೋವಾ

ಜಯದ ಅನಿವಾರ್ಯತೆಯಲ್ಲಿ ಗೋವಾ

ಇಂಡಿಯನ್ ಸೂಪರ್ ಲೀಗ್ ನ ಪ್ಲೇ ಆಫ್ ಹಂತ ಸಮೀಪಿಸುತ್ತಿದ್ದಂತೆ ಎಫ್ ಸಿ ಗೋವಾ ಸೆಮಿಫೈನಲ್ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸುವ ತವಕದಲ್ಲಿದೆ. ಕಳೆದ ಆರು ಪಂದ್ಯಗಳಲ್ಲಿ ಕೇವಲ ಡ್ರಾಗೆ ತೃಪ್ತಿಪಟ್ಟಿರುವ ಗೋವಾ ಈಗ ಅತ್ಯಂತ ಸಂಕಷ್ಟದ ಸ್ಥಿತಿ ಎದುರಿಸುತ್ತದೆ. ಇಂದು ಫಟೋರ್ಡಾ ಅಂಗಣದಲ್ಲಿ ಒಡಿಶಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜುವಾನ್ ಫೆರಾಂಡೊ ಪಡೆ ಡ್ರಾಗಳಿಗೆ ಬ್ರೇಕ್ ಹಾಕಿ ಜಯದ ಹಾದಿ ಕಂಡುಕೊಳ್ಳುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು.
24 ಅಂಕ ಗಳಿಸಿರುವ ಗೋವಾ ಈಗ ಐದನೇ ಸ್ಥಾನದಲ್ಲಿದೆ ಕೊನೆಯ ಸ್ಥಾನದಲ್ಲಿರುವ ಒಡಿಶಾ ವಿರುದ್ಧ ಮೂರು ಅಂಕಗಳನ್ನು ಗಳಿಸಿ, ಉಳಿದಿರುವ ಮೂರು ಪಂದ್ಯಗಳಲ್ಲೂ ಅದೇ ಯಶಸ್ಸನ್ನು ಕಂಡುಕೊಳ್ಳುವ ಯತ್ನದಲ್ಲಿದೆ. ಒಡಿಶಾ ಜಯ ಗಳಿಸಿ ಗೌರವದೊಂದಿಗೆ ನಿರ್ಗಮಿಸುವ ಗುರಿಹೊಂದಿದೆ.

Story first published: Thursday, February 18, 2021, 0:02 [IST]
Other articles published on Feb 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X