ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಹೈದರಾಬಾದ್‌ ಅಬ್ಬರಕ್ಕೆ ನಲುಗಿದ ಚೆನ್ನೈಯಿನ್ ಎಫ್‌ಸಿ

By Isl Media
ISL 2020-21: Hyderabad bounce back with dominant win over Chennai

ಗೋವಾ: ದ್ವಿತೀಯಾರ್ಧದಲ್ಲಿ ಗೋಲ್‌ ಸುರಿಮಳೆಗೈದ ಹೈದರಾಬಾದ್‌ ಎಫ್‌ಸಿ ತಂಡ ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್‌ ಲೀಗ್‌ ಟೂರ್ನಿಯ 47ನೇ ಲೀಗ್‌ ಪಂದ್ಯದಲ್ಲಿ ಅಪಾಯಕಾರಿ ಚೆನ್ನೈಯಿನ್‌ ಎಫ್‌ಸಿ ತಂಡವನ್ನು 4-1 ಗೋಲ್‌ಗಳ ಭಾರಿ ಅಂತರದಲ್ಲಿ ಬಗ್ಗು ಬಡಿದಿದೆ. ಇಲ್ಲಿನ ಜಿಎಮ್‌ಸಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಹೈದರಾಬಾದ್‌ ಎಫ್‌ಸಿ ತಂಡದ ಪರ ಮಿಡ್‌ಫೀಲ್ಡರ್‌ ಹಲಿಚರಣ್ ನರ್ಝಾರಿ (53ನೇ ಮತ್ತು 79ನೇ ನಿ.) ಡಬಲ್‌ ಗೋಲ್‌ ದಾಖಲಿಸಿ ಅಬ್ಬರಿಸಿದರೆ, ಮಿಡ್‌ಫೀಲ್ಡರ್‌ಗಳಾದ ಜೊಯೆಲ್‌ ಚೈನೀಸ್‌ (50ನೇ ನಿ.) ಮತ್ತು ಜಾವೋ ವಿಕ್ಟರ್‌ (74ನೇ ನಿ.) ಚೆಂಡನ್ನು ಗುರಿ ಮುಟ್ಟಿಸಿ ಭರ್ಜರಿ ಗೆಲುವಿನ ರೂವಾರಿಗಳಾದರು.

ಸ್ಟೋಯ್ನಿಸ್ ಬ್ಯಾಟಿಂಗ್ ಆರ್ಭಟ, ಹೊಬರ್ಟ್ ವಿರುದ್ಧ ಮೆಲ್ಬರ್ನ್‌ಗೆ ಜಯಸ್ಟೋಯ್ನಿಸ್ ಬ್ಯಾಟಿಂಗ್ ಆರ್ಭಟ, ಹೊಬರ್ಟ್ ವಿರುದ್ಧ ಮೆಲ್ಬರ್ನ್‌ಗೆ ಜಯ

ಸೋತು ಸುಣ್ಣವಾಗಿ ಅಂಕಪಟ್ಟಿಯಲ್ಲಿ ಜಾರಿದ ಚೆನ್ನೈಯಿನ್‌ ಎಫ್‌ಸಿ ಪರ ಗಮನ ಸೆಳೆದ ಮಿಡ್‌ಫೀಲ್ಡರ್‌ ಅನಿರುದ್ಧ ಥಾಪ 67ನೇ ನಿಮಿಷಯದಲ್ಲಿ ಚೆಂಡನ್ನು ಗುರಿ ಮುಟ್ಟಿಸುವ ಮೂಲಕ ಸೋಲಿನ ಅಂತರವನ್ನು ಕೊಂಚ ಕಡಿಮೆ ಮಾಡುವಷ್ಟಕ್ಕೆ ಮಾತ್ರವೇ ಶಕ್ತರಾದರು.

ಭಾರತ vs ಆಸ್ಟ್ರೇಲಿಯಾ: ಮೂರನೇ ಟೆಸ್ಟ್‌ಗೆ ವೀಕ್ಷಕರ ಸಂಖ್ಯೆ ಕಡಿತಭಾರತ vs ಆಸ್ಟ್ರೇಲಿಯಾ: ಮೂರನೇ ಟೆಸ್ಟ್‌ಗೆ ವೀಕ್ಷಕರ ಸಂಖ್ಯೆ ಕಡಿತ

ಈ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಚೆನ್ನೈಯಿನ್‌ ಎಫ್‌ಸಿ ತಂಡ 8ನೇ ಸ್ಥಾನಕ್ಕೆ ಜಾರಿದೆ. ಮತ್ತೊಂದೆಡೆ ಗೆದ್ದು ಮೂರು ಅಂಕಗಳನ್ನು ಖಾತೆಗೆ ಸೇರಿಸಿಕೊಂಡ ಹೈದರಾಬಾದ್‌ ಎಫ್‌ಸಿ ತಂಡ 9 ಪಂದ್ಯಗಳಿಂದ ಒಟ್ಟು 12 ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿದಿದೆ.

ಪಂದ್ಯದ ಪ್ರಥಮಾರ್ಧದಲ್ಲಿ ಗೋಲ್‌ ಬರ

ಪಂದ್ಯದ ಪ್ರಥಮಾರ್ಧದಲ್ಲಿ ಗೋಲ್‌ ಬರ

ಎರಡೂ ತಂಡಗಳು ಪಂದ್ಯದ ಮೊದಲಾರ್ಧದಲ್ಲಿ ಗೋಲ್‌ ಗಳಿಸುವಲ್ಲಿ ವಿಫಲವಾದವು. ಆರಂಭದಲ್ಲೇ ಮೈಮರೆತರೆ ಎದುರಾಳಿ ಮುನ್ನಡೆ ಗಳಿಸುವ ಸಾಧ್ಯತೆ ಇರುವುದರಿಂದ ಇತ್ತಂಡಗಳು ತಮ್ಮ ಡಿಫೆನ್ಸ್‌ ಕಡೆಗೆ ಭಾರಿ ಬಿಗಿ ನೀಡಿದ್ದವು. ಹೀಗಾಗಿ ಸ್ಟ್ರೈಕರ್‌ಗಳ ಆಟ ನಡೆಯಲೇ ಇಲ್ಲ. ಆಗಾಗ ಅಲ್ಪ ಅವಕಾಶಗಳು ಸಿಕ್ಕರೂ ಯಶಸ್ಸು ಕೈಹಿಡಿಯಲಿಲ್ಲ.

ದ್ವಿತೀಯಾರ್ಧದಲ್ಲಿ ಒಟ್ಟು 5 ಗೋಲ್

ದ್ವಿತೀಯಾರ್ಧದಲ್ಲಿ ಒಟ್ಟು 5 ಗೋಲ್

ಮೊದಲ ಅವಧಿ ಗೋಲ್ ರಹಿತವಾಗಿ ಬೇಸರ ಮೂಡಿಸಿದರೆ. ಎರಡನೇ ಅವಧಿ ವೀಕ್ಷಕಕರಿಗೆ ಭರಪೂರ ಮನೋರಂಜನೆ ಒದಗಿಸಿತು. ಈ ಅವಧಿಯಲ್ಲಿ ಒಟ್ಟು 5 ಗೋಲ್‌ಗಳು ಮೂಡಿಬಂದವು. ಹೈದರಾಬಾದ್‌ ನಾಲ್ಕು ಬಾರಿ ಯಶಸ್ಸು ಕಂಡರೆ, ಚೆನ್ನೈಗೆ ಏಕೈಕ ಯಶಸ್ಸು ಕೈಹಿಡಿಯಿತು.

ಗೋಲ್‌ಗಳಿಸದಂತೆ ಎಚ್ಚರಿಕೆ

ಗೋಲ್‌ಗಳಿಸದಂತೆ ಎಚ್ಚರಿಕೆ

ಎರಡೂ ತಂಡದ ಡಿಫೆಂಡರ್‌ಗಳು ಸ್ಟ್ರೈಕರ್‌ಗಳು ಗೋಲ್‌ಗಳಿಸದಂತೆ ಎಚ್ಚರಿಕೆ ವಹಿಸಿದ್ದರು. ಆದರೆ, ಹೈದರಾಬಾದ್ ತಂಡ ಇಲ್ಲಿ ತನ್ನ ರಣತಂತ್ರ ಬದಲಾಯಿಸಿ ಮಿಡ್‌ಫೀಲ್ಡರ್‌ಗಳಿಗೆ ಹೆಚ್ಚು ಆಕ್ರಮಣಕಾರಿ ಆಟವಾಡುವಂತೆ ಚೂ ಬಿಟ್ಟಿತ್ತು. ಪರಿಣಾಮ ನೋಡ ನೋಡುತ್ತಿದ್ದಂತೆಯೇ ಹೈದರಾಬಾದ್‌ ಮಿಡ್‌ಫೀಲ್ಡರ್‌ಗಳು ಒಟ್ಟು ನಾಲ್ಕು ಗೋಲ್‌ಗಳನ್ನು ಬಾರಿಸಿದರು. ಈ ತಂತ್ರವನ್ನು ಚೆನ್ನೈಯಿನ್ ಕೂಡ ಅಳವಡಿಸಿಕೊಂಡಿತಾದರೂ ಕೇವಲ ಒಂದಷ್ಟೇ ಗೋಲ್‌ ಗಳಿಸಲು ಶಕ್ತವಾಯಿತು.

Story first published: Tuesday, January 5, 2021, 0:00 [IST]
Other articles published on Jan 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X