ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಡಿಫೆನ್ಸ್‌ ಕಳೆಗುಂದಿರುವ ಗೋವಾಗೆ ಶಾಕ್‌ ನೀಡುವ ಲೆಕ್ಕಾಚಾರದಲ್ಲಿ ಹೈದರಾಬಾದ್

By Isl Media
ISL 2020-21: Hyderabad FC vs FC Goa prediction, preview

ಗೋವಾ: ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್‌ ಲೀಗ್‌ ಟೂರ್ನಿಯಲ್ಲಿ ಹೈದರಾಬಾದ್‌ ಫುಟ್ಬಾಲ್‌ ಕ್ಲಬ್‌ ತಂಡವು ಮಿಶ್ರ ಫಲಿತಾಂಶ ಕಂಡಿದೆ. ಮ್ಯಾನುಯೆಲ್ ಮಾರ್ಕಸ್‌ ಪಡೆ ಟೂರ್ನಿಯ ಆರಂಭಿಕ 5 ಲೀಗ್‌ ಪಂದ್ಯಗಳಲ್ಲಿ ಸೋಲಿಲ್ಲದ ಸರದಾರನಂತೆ ಮುನ್ನಡೆದಿತ್ತು. ಆದರೆ, ನಂತರ ಎದುರಾದ ಬ್ಯಾಕ್‌ ಟು ಬ್ಯಾಕ್‌ ಸೋಲಿನ ಪರಿಣಾಮ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಾರಿದೆ.

ಹೈದರಾಬಾದ್‌ ಎಫ್‌ಸಿ ತಂಡಕ್ಕೆ ಇದೀಗ ಮತ್ತೊಂದು ಕಠಿಣ ಸವಾಲು ಎದುರಾಗಿದ್ದು ಬಲಿಷ್ಠ ಎಫ್‌ಸಿ ಗೋವಾ ತಂಡದ ಎದುರು ಇಲ್ಲಿನ ತಿಲಕ್‌ ಮೈದಾನ್ ಕ್ರೀಡಾಂಗಣದಲ್ಲಿ ಬುಧವಾರ ಕಾದಾಟ ನಡೆಸಲಿದೆ. ಅಂದಹಾಗೆ ಗೋವಾ ತಂಡ ತನ್ನ ಡಿಫೆನ್ಸ್‌ ವಿಭಾಗದಲ್ಲಿ ಕೊಂಚ ಕಳೆಗುಂದಿದಂತೆ ಕಂಡುಬಂದಿದ್ದು, ಇದು ಹೈದರಾಬಾದ್‌ ತಂಡಕ್ಕೆ ಗೆಲ್ಲುವ ಅಲ್ಪ ಅವಕಾಶವನ್ನು ತೆರೆದುಕೊಟ್ಟಂತ್ತಾಗಿದೆ.

ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿ ಇರುವ ಎಫ್‌ಸಿ ಗೋವಾ ತಂಡ ಟೂರ್ನಿಯ ಶ್ರೇಷ್ಠ ಆಕ್ರಮಣಕಾರಿ ತಂಡಗಳಲ್ಲಿ ಒಂದಾಗಿದೆ. ಇದಕ್ಕೆ ತಂಡ ಈವರೆಗೆ ಒಟ್ಟು 10 ಗೋಲ್‌ಗಳನ್ನು ಬಾರಿಸಿರುವುದು ಸಾಕ್ಷಿಯಾಗಿದೆ. ಆದರೆ, ತಂಡಕ್ಕೆ ಬಹುದೊಡ್ಡ ಹಿನ್ನಡೆ ತಂದೊಡ್ಡಿರುವುದು ಡಿಫೆನ್ಸ್‌ ವಿಭಾಗ. ಏಕೆಂದರೆ ರಕ್ಷಣೆಯಲ್ಲಿ ಮೈಮರೆತ ಪರಿಣಾಮ 9 ಗೋಲ್‌ಗಳನ್ನು ಬಿಟ್ಟುಕೊಡುವಂತ್ತಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಈ ದಾಖಲೆ ಮಾಡಿದ ಮೊದಲ ಭಾರತೀಯ ಪಂತ್ಆಸ್ಟ್ರೇಲಿಯಾ ವಿರುದ್ಧ ಈ ದಾಖಲೆ ಮಾಡಿದ ಮೊದಲ ಭಾರತೀಯ ಪಂತ್

ಗೋವಾ ತಂಡ ಡಿಫೆನ್ಸ್‌ ವಿಭಾಗದಲ್ಲಿ ಒದ್ದಾಡುತ್ತಿರುವ ಸಂಗತಿಯನ್ನು ಮಾರ್ಕಸ್‌ ಚೆನ್ನಾಗಿ ಬಲ್ಲವರಾಗಿದ್ದಾರೆ. ಹೀಗಾಗಿ ತಮ್ಮ ತಂಡಕ್ಕೆ ಈ ಪಂದ್ಯದಲ್ಲಿ ಗೆಲ್ಲುವ ಅತ್ಯುತ್ತಮ ಅವಕಾಶ ಇರುವುದನ್ನು ತಿಳಿದಿದ್ದಾರೆ. ನಿಜಾಮರ ಪಡೆ ಟೂರ್ನಿಯಲ್ಲಿ ಈವರೆಗೆ ಗೋಲ್‌ ಗಳಿಕೆಯ ಹಲವು ಅವಕಾಶಗಳನ್ನು ಕೈಚೆಲ್ಲಿದೆ. ಆದರೆ ಗೋವಾ ಎದುರು ಇಂಥದ್ದೇ ಅವಕಾಶ ಕೈಚೆಲ್ಲಿದರೆ 3 ಅಂಕ ಬಾಚಿಕೊಳ್ಳುವ ಅವಕಾಶದಿಂದ ವಂಚಿತವಾಗಲಿದೆ.

"ಗೋಲ್‌ಗಳನ್ನು ಬಿಟ್ಟುಕೊಡುವುದು ಫುಟ್ಬಾಲ್‌ನಲ್ಲಿ ಸಾಮಾನ್ಯ ಸಂಗತಿ," ಎಂದು ಎಫ್‌ಸಿ ಗೋವಾ ಬಗ್ಗೆ ಮಾರ್ಕಸ್‌ ಮಾತನಾಡಿದ್ದಾರೆ. "ನಿಮ್ಮದು ಆಕ್ರಮಣಕಾರಿ ತಂಡವಾಗಿದ್ದರೆ ಅಲ್ಲಿ ಡಿಫೆನ್ಸ್‌ ವಿಭಾಗ ಕೊಂಚ ದುರ್ಬಲವಾಗಿರುತ್ತದೆಗೋವಾ ತಂಡದಲ್ಲಿ ಆಕ್ರಮಣ ಮಾಡುವ ಆಟಗಾರರೇ ಹೆಚ್ಚಿರುವ ಕಾರಣ ಅವರದ್ದು ದಾಳಿ ನಡೆಸುವಂತಹ ತಂಡವಾಗಿದೆ. ಗೋವಾ ತಂಡದಲ್ಲಿ ಶ್ರೇಷ್ಠ ಆಟಗಾರರ ದಂಡೇ ಇದೆ ಎಂಬುದು ಎಲ್ಲರಿಗೂ ಗೊತ್ತು. ಇಗೋರ್ ಅಂಗುಲು ಮಾತ್ರವಲ್ಲ ತಂಡದ ಮಿಡ್‌ ಫೀಲ್ಡರ್‌ಗಳು ಮತ್ತು ಫಾರ್ವರ್ಡ್‌ ಆಟಗಾರರು ಕೂಡ ಅಷ್ಟೇ ಅಪಾಯಕಾರಿ. ಆದರೆ ಎದುರಾಳಿ ತಂಡ ಕೌಂಟರ್‌ ಅಟ್ಯಾಕ್‌ ಮಾಡುವ ಸಂದರ್ಭದಲ್ಲಿ ಗೋವಾದ ಡಿಫೆನ್ಸ್‌ ತೀರಾ ಕಳಪೆಯಾಗಿದೆ. ಡಿಫೆಂಡರ್‌ಗಳಿಗಿಂತ ಅಟ್ಯಾಕರ್‌ಗಳು ಹೆಚ್ಚಿರುವ ಸಂದರ್ಭದಲ್ಲಿ ಡಿಫೆನ್ಸ್‌ ಭದ್ರ ಪಡಿಸಲು ಸಾಧ್ಯವಿಲ್ಲ," ಎಂದು ಮಾರ್ಕಸ್‌ ಹೇಳಿದ್ದಾರೆ.

ಹೈದರಾಬಾದ್‌ ತಂಡ ಈ ಬಾರಿ ಕೇವಲ 6 ಗೋಲ್‌ಗಳನ್ನು ಮಾತ್ರವೇ ಗಳಿಸಿದೆ. ಕೇರಳ ಬ್ಲಾಸ್ಟರ್ಸ್‌ ಮತ್ತು ಎಸ್‌ಸಿ ಈಸ್ಟ್‌ ಬೆಂಗಾಲ್‌ ತಂಡಗಳು ಮಾತ್ರವೇ ಈ ಬಾರಿ ಹೈದರಾಬಾದ್‌ ತಂಡಕ್ಕಿಂತಲೂ ಕಡಿಮೆ ಗೋಲ್‌ ಗಳಿಸಿವೆ. ಆದರೆ, ಹೈದರಾಬಾದ್‌ ತಂಡ ಅತ್ಯಂತ ಅಪಾಯಕಾರಿ ತಂಡ ಎಂಬುದನ್ನು ಸಾಬೀತು ಪಡಿಸಿದೆ.

ಗೋವಾ ತಂಡಕ್ಕೆ ಈಗ ಕಠಿಣ ಸವಾಲು ಎದುರಾಗಿದೆ. ಆದರೆ ಕೋಚ್‌ ಜುವಾನ್ ಫರ್ನಾಂಡೊ ತಂಡದ ಡಿಫೆನ್ಸ್‌ ಕಡೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. "ಮೊದಲಿಗೆ ನಾವು ಮೂರು ಗೋಲ್‌ ಬಿಟ್ಟುಕೊಟ್ಟರು ಕೂಡ ನನಗೆ ಯಾವುದೇ ಚಿಂತೆಯಿಲ್ಲ. ನಾವು ಡಿಫೆನ್ಸ್‌ ಕಡೆಗೆ ಮಹತ್ವ ನೀಡಿರುವಾಗ ಯಾವ ಸಮಯದಲ್ಲಿ ಅಟ್ಯಾಕ್‌ ಮಾಡಬೇಕು ಎಂಬುದು ಇಲ್ಲಿ ಮುಖ್ಯ ವಾಗುತ್ತದೆ. ತಂಡದಲ್ಲಿ ಅಗತ್ಯದ ಆಟಗಾರರ ಬದಲಾವಣೆ ಸಲುವಾಗಿ ಸಮಯ ಬೇಕಾಗುತ್ತದೆ. ಪಂದ್ಯದಿಂದ ಪಂದ್ಯಕ್ಕೆ ಇದರಲ್ಲಿ ಸುಧಾರಣೆ ಆಗಲಿದೆ. ಯಾವ ಎದುರಾಳಿ ವಿರುದ್ಧ ಆಡುತ್ತಿದ್ದೇವೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ," ಎಂದಿದ್ದಾರೆ.

Story first published: Wednesday, December 30, 2020, 8:26 [IST]
Other articles published on Dec 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X