ಐಎಸ್‌ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್

By Isl Media

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಸೋಲ ಮೇಲೆ ಸೋಲುಂಡ ಜೆಮ್ಷೆಡ್ಪುರ ಎಫ್ ಸಿ ತಂಡ ಈಗ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನಗಳಿಂದ ಕುಸಿದಿದೆ. ಆದರೆ ತಮ್ಮ ತಂಡ ಇತ್ತೀಚಿನ ಪಂದ್ಯಗಳಲ್ಲಿ ಸೋಲನುಭವಿಸಿದರೂ ಪುಟಿದೇಳುವ ಗುಣವನ್ನು ಹೊಂದಿದೆ ಎಂದು ಕೋಚ್ ಓವೆನ್ ಕೊಯ್ಲ್ ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಭಾನುವಾರದ ಮೊದಲ ಪಂದ್ಯದದಲ್ಲಿ ಜೆಮ್ಷೆಡ್ಪುರ ತಂಡ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ ಮತ್ತೊಂದು ಪಂದ್ಯವನ್ನಾಡಲಿದೆ.

ಭಾರತೀಯ ಆಟಗಾರನ ನಿಂದಿಸಿದ ಆಸ್ಟ್ರೇಲಿಯನ್ ಫ್ಯಾನ್ಸ್: ವಿಡಿಯೋ

ಸದ್ಯದ ಸ್ಥತಿಯಲ್ಲಿ ಇತ್ತಂಡಗಳನ್ನು ಬೇರ್ಪಡಿಸುವ ಯಾವುದೇ ವಿಶೇಷ ಅಂಶ ಕಾಣುತ್ತಿಲ್ಲ. ಆದರೆ ಜೆಮ್ಷೆಡ್ಪುರ ತಂಡ ಅಂಕ ಗಳಿಕೆಯಲ್ಲಿ ನಾರ್ಥ್ ಈಸ್ಟ್ ಗಿಂತ ಒಂದು ಅಂಕ ಮೇಲುಗೈ ಸಾಧಿಸಿದೆ. ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲವಾಗುತ್ತಿರುವ ನಾರ್ಥ್ ಈಸ್ಟ್ ವಿರುದ್ಧ ಜೆಮ್ಷೆಡ್ಪುರ ಗೆಲ್ಲುವ ಫೇವರಿಟ್ ಎನಿಸಿದೆ.

ಏಳು ಪಂದ್ಯಗಳಲ್ಲಿ ಜಯ ಗಳಿಸಿರಲಿಲ್ಲ

ಏಳು ಪಂದ್ಯಗಳಲ್ಲಿ ಜಯ ಗಳಿಸಿರಲಿಲ್ಲ

ಪರ್ವತತಪ್ಪಲಿನ ತಂಡ ಕಳೆದ ಏಳು ಪಂದ್ಯಗಳಲ್ಲಿ ಜಯ ಗಳಿಸಿರಲಿಲ್ಲ. ಇದರ ಜತೆಯಲ್ಲಿ ಕೋಚ್ ಗೆರಾರ್ಡ್ ನಸ್ ಅವರು ತಂಡವನ್ನು ತೊರೆದಿದ್ದು ಅವರ ಸ್ಥಾನದಲ್ಲಿ ಖಲೀದ್ ಅಹಮ್ಮದ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೆಮ್ಷೆಡ್ಪುರ ತಂಡ ನಾರ್ಥ್ ಈಸ್ಟ್ ವಿರುದ್ಧ ಏಳು ಪಂದ್ಯಗಳಲ್ಲಿ ಸೋಲು ಅನುಭವಿಸಿರಲಿಲ್ಲ. ಎರಡು ಪಂದ್ಯಗಳಲ್ಲಿ ಜಯ ಗಳಿಸಿದೆ. ಆದರೆ ಎದುರಾಳಿ ತಂಡವನ್ನು ತಾವು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸುವುದಿಲ್ಲ ಎಂದು ಕೊಯ್ಲ್ ಹೇಳಿದ್ದಾರೆ.

ಉತ್ತಮವಾಗಿಯೇ ಆಡಿದರು

ಉತ್ತಮವಾಗಿಯೇ ಆಡಿದರು

"ಅವರು ಉತ್ತಮ ಫಾರ್ಮ್ ನಲ್ಲಿ ಇದ್ದಾರೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಹಿಂದಿನ ಪಂದ್ಯದಲ್ಲಿ ಅವರು ಉತ್ತಮವಾಗಿಯೇ ಆಡಿದರು." ಎಂದು ಹೇಳಿರುವ ಕೊಯ್ಲ್, "ನಾರ್ಥ್ ಈಸ್ಟ್ ಅತ್ಯಂತ ಅಪಾಯಕಾರಿ ಎದುರಾಳಿ, ಪ್ರತಿಬಾರಿಯೂ ವಿಭಿನ್ನ ರೀತಿಯ ಸವಾಲುಗಳನ್ನು ಈ ತಂಡ ನೀಡುತ್ತದೆ. ಆ ತಂಡ ಚೆಂಡನ್ನು ಪಾಸ್ ಮಾಡುವಲ್ಲಿ ನೈಪುಣ್ಯತೆ ತೋರುವಲ್ಲಿ ಹಿಂದೇಟು ಬಿದ್ದಿರಬಹುದು, ಆದರೆ ತಂಡ ಇತರ ವಿಭಾಗಗಳಲ್ಲಿ ವೈಪುಣ್ಯತೆ ಹೊಂದಿದೆ, ಅದನ್ನು ನಾವು ಗುರುತಿಸಬೇಕಾಗಿದೆ. ನಾವು ಎದುರಾಳಿ ತಂಡವನ್ನು ಗೌರವಿಸುತ್ತೇವೆ, ಆದರೆ ನಾವು ಉತ್ತಮ ರೀತಿಯಲ್ಲಿ ಆಡಿ ಜಯದೊಂದಿಗೆ ಪ್ಲೇ ಆಫ್ ತಲಪುವ ಗುರಿ ಹೊಂದಿದ್ದೇವೆ," ಎಂದರು.

ನಿರಾಸೆಗೊಂಡಿರುವ ನಾರ್ಥ್ ಈಸ್ಟ್

ನಿರಾಸೆಗೊಂಡಿರುವ ನಾರ್ಥ್ ಈಸ್ಟ್

ಮಿಡ್ ಫೀಲ್ಡ್ರ್ ಅಲೆಕ್ಸಾಂಡ್ರೆ ಲಿಮಾ ಅಮಾನತುಗೊಂಡಿರುವ ಹಿನ್ನೆಲೆಯಲ್ಲಿ ಸ್ಟೀಫನ್ ಹಾರ್ಟ್ಲೆ ಅವರು ಜವಾಬ್ದಾರಿ ನಿಭಾಯಿಸುತ್ತಾರೆಂಬ ನಂಬಿಕೆ ಕೊಯ್ಲ್ ಅವರಲ್ಲಿದೆ.

ಇತ್ತೀಚಿನ ಫಲಿತಾಂಶಗಳಲ್ಲಿ ನಿರಾಸೆಗೊಂಡಿರುವ ನಾರ್ಥ್ ಈಸ್ಟ್ ತಂಡ ಗೆಲ್ಲಲೇಬೇಕಾದ ಅನೆವಾರ್ಯತೆಯಲ್ಲಿದೆ. ನಸ್ ಅವರ ನಿರ್ಗಮನ ತಂಡದ ಪ್ರದರ್ಶನದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದು ಎಂದು ಅಲಿಸನ್ ಖಾರ್ಸಿನ್ಟಿವ್ ಹೇಳಿದ್ದಾರೆ. ಅಲ್ಲದೆ ತಮ್ಮ ತಂಡ ಪ್ಲೇ ಆಫ್ ತಲುಪಲು ಉತ್ಸುಕವಾಗಿದೆ ಎಂದಿದ್ದಾರೆ.

"ನಾವು ಸ್ಥಿರ ಪ್ರದರ್ಶನ ತೋರಬೇಕಾಗಿದೆ, ನಾವು ಉತ್ತಮ ಪ್ರದರ್ಶನ ತೋರಿ ಜಯದ ಹೆಜ್ಜೆ ಇಟ್ಟರೆ ಖಂಡಿತವಾಗಿಯೂ ಪ್ಲೇ ಆಫ್ ತಲುಪುತ್ತೇವೆ ಎಂಬ ನಂಬಿಕೆ ಇದೆ. ಎಲ್ಲರೂ ಸಂಘಟಿತ ಹೋರಾಟ ನೀಡಿದರೆ ನಮಗೆ ಯಶಸ್ಸು ಸಿಗಲಿದೆ," ಎಂದರು.

For Quick Alerts
ALLOW NOTIFICATIONS
For Daily Alerts
Story first published: Saturday, January 16, 2021, 20:46 [IST]
Other articles published on Jan 16, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X