ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಗೌರವ ಹಂಚಿಕೊಂಡ ಕೇರಳ ಬ್ಲಾಸ್ಟರ್ಸ್-ಚೆನ್ನೈಯಿನ್

ISL 2020-21: Kerala and Chennaiyin share spoils in Southern derby

ಗೋವಾ: ಚೆನ್ನೈಯಿನ್ ಎಫ್ ಸಿ ಪರ ಫಾಟ್ಕುಲೊ ಫಾಟ್ಕುಲೋವ್ (10ನೇ ನಿಮಿಷ) ಹಾಗೂ ಕೇರಳ ಬ್ಲಾಸ್ಟರ್ಸ್ ಪರ ಗ್ಯಾರಿ ಹೂಪರ್ (29ನೇ ನಿಮಿಷ) ಗಳಿಸಿದ ಗೋಲು ಹೀರೋ ಇಂಡಿಯನ್ ಸೂಪರ್ ಲೀಗ್ ನ 102ನೇ ಪಂದ್ಯ 1-1ರಲ್ಲಿ ಸಬಲಗೊಂಡು ಇತ್ತಂಡಗಳು ಅಂಕ ಹಂಚಿಕೊಂಡವು. ಇದರೊಂದಿಗೆ ಚೆನ್ನೈಯಿನ್ ಎಫ್ ಸಿ ತಂಡ 7ನೇ ಆವೃತ್ತಿಯ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ 8ನೇ ಸ್ಥಾನ ಗಳಿಸಿ ನಿರ್ಗಮಿಸಿತು.

ಗೆದ್ದು ಗೌರವದೊಂದಿಗೆ ನಿರ್ಗಮಿಸಬೇಕೆಂದಿದ್ದ ದಕ್ಷಿಣದ ಎರಡು ತಂಡಗಳು ಗೌರವವನ್ನು ಹಂಚಿಕೊಂಡವು. ಕೇರಳಕ್ಕೆ ಇನ್ನೊಂದು ಪಂದ್ಯ ಬಾಕಿ ಇದ್ದು ಜಯದೊಂದಿಗೆ ನಿರ್ಗಮಿಸುವ ಅವಕಾಶವನ್ನು ಕಾಯ್ದುಕೊಂಡಿತು.

ಸಮಬಲದ ಹೋರಾಟ
ಎರಡೂ ತಂಡಗಳಿಗೆ ಇಲ್ಲಿ ಗೆದ್ದು ಗೌರವದೊಂದಿಗೆ ನಿರ್ಗಮಿಸುವ ಹಂಬಲ. ಅದಕ್ಕಾಗಿ ಆಕ್ರಮಣಕಾರಿ ಆಟವನ್ನೇ ಪ್ರದರ್ಶಿಸಿದವು. ಪರಿಣಾಮ ಚೆನ್ನೈಯಿನ್ ಆರಂಭದಲ್ಲೇ ಗೋಲು ಗಳಿಸಿದರೆ, ಕೇರಳ ಪೆನಾಲ್ಟಿ ಮೂಲಕ ಗೋಲು ಗಳಿಸುವ ಮೂಲಕ ಪ್ರಥಮಾರ್ಧ 1-1 ಗೋಲಿನಿಂದ ಸಮಬಲಗೊಂಡಿತು. ಚೆನ್ನೈಯಿನ್ ಪರ ಫಾಟ್ಕುಲೊ ಫಾಟ್ಕುಲೋವ್ (10ನೇ ನಿಮಿಷ) ಗಳಿಸಿದ ಗೋಲಿನಿಂದ ಚೆನ್ನೈಯಿನ್ ತಂಡ ಮೇಲುಗೈ ಸಾಧಿಸಿತು. ಕೇರಳ ತನ್ನ ಆಕ್ರಮಣಕಾರಿ ಆಟವನ್ನು ಮುಂದುವರಿಸಿತ್ತು. 29ನೇ ನಿಮಿಷದಲ್ಲಿ ಗ್ಯಾರಿ ಹೂಪರ್ ಪೆನಾಲ್ಟಿ ಮೂಲಕ ಗಳಿಸಿದ ಗೋಲಿನಿಂದ ಪಂದ್ಯ 1-1ರಲ್ಲಿ ಸಮಬಲಗೊಂಡಿತು.

Story first published: Sunday, February 21, 2021, 23:50 [IST]
Other articles published on Feb 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X