ಐಎಸ್‌ಎಲ್: ಅಂಕ ಹಂಚಿಕೊಂಡ ಕೇರಳ ಬ್ಲಾಸ್ಟರ್ಸ್ ಮತ್ತು ಗೋವಾ

By Isl Media

ಗೋವಾ, ಜನವರಿ 23: ಎಫ್ ಸಿ ಗೋವಾ ಪರ ಜಾರ್ಜ್ ಮೆಂಡೋನ್ಸಾ (25ನೇ ನಿಮಿಷ) ಹಾಗೂ ಕೇರಳ ಬ್ಲಾಸ್ಟರ್ಸ್ ಪರ ರಾಹುಲ್ ಕೆ.ಪಿ. (57ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ 68ನೇ ಪಂದ್ಯ 1-1 ಗೋಲಿನಿಂದ ಡ್ರಾಗೊಂಡಿದ್ದು ಇತ್ತಂಡಗಳು ಅಂಕ ಹಂಚಿಕೊಂಡವು. ಈ ಸಮಬಲದ ಹೋರಾಟ ಗೋವಾ ತಂಡವನ್ನು ಮೂರನೇ ಸ್ಥಾನದಲ್ಲೇ ಉಳಿಯುವಂತೆ ಮಾಡಿತು. ಕೇರಳ ಮಾತ್ರ 7ನೇ ಸ್ಥಾನಕ್ಕೇರಿ ಬೆಂಗಳೂರು ಎಂಟಕ್ಕೆ ತಳ್ಳಿತು.

ಬೆಂಗಳೂರು ವಿರುದ್ಧದ ಪಂದ್ಯದಲ್ಲೂ ರಾಹುಲ್ ಅಂತಿಮ ಕ್ಷಣದಲ್ಲಿ ಜಯದ ರೂವಾರಿ ಎನಿಸಿದ್ದರು. ಈಗ ಗೋವಾದ ವಿರುದ್ಧವೂ ಅವರು ಗಳಿಸಿದ ಗೋಲು ತಂಡವನ್ನು ಸೋಲಿನಿಂದ ಪಾರುಮಾಡಿತು. 65ನೇ ನಿಮಿಷದಲ್ಲಿ ಇವಾನ್ ಗೊನ್ಸಾಲೀಸ್ ರೆಡ್ ಕಾರ್ಡ್ ಪಡೆದು ಅಂಗಣದಿಂದ ಹೊರನಡೆದ ಕಾರಣ ಗೋವಾ ಉಳಿದ ಸಮಯವನ್ನು ಕೇವಲ 10 ಮಂದಿ ಆಟಗಾರರನ್ನೊಳಗೊಂಡು ಮುಂದುವರಿಸಿತು. ಆದರೆ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಕಾರಣ ಕೇರಳಕ್ಕೆ ಗೋಲು ಗಳಿಸುವ ಅವಕಾಶ ಸಿಗಲಿಲ್ಲ.

'ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾದ ಯೋಜನೆ ಸಿದ್ಧವಾಗಿದೆ'

ಮುನ್ನಡೆದ ಗೋವಾ: 25ನೇ ನಿಮಿಷದಲ್ಲಿ ಜಾರ್ಜ್ ಮೆಂಡೊನ್ಸಾ ಗಳಿಸಿದ ಗೋಲಿನಿಂದ ಎಫ್ ಸಿ ಗೋವಾ ಪ್ರಥಮಾರ್ಧದಲ್ಲಿ ಮೇಲುಗೈ ಕಂಡಿತು. ಫ್ರೀಕಿಕ್ ಮೂಲಕ ದಾಖಲಾದ ಗೋಲಿನ ಜತೆಯಲ್ಲೇ ಗೋವಾ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಕೇರಳದ ಗೋಲ್ ಕೀಪರ್ ಅಲ್ಬಿನೊ ಗೋಮ್ಸ್ ಅದನ್ನು ತಡೆಯಬಹುದಾಗಿತ್ತು, ಆದರೆ ಆ ಕ್ಷಣಕ್ಕೆ ಅದು ಸಾಧ್ಯವಾಗಲಿಲ್ಲ. 40ನೇ ನಿಮಿಷದಲ್ಲಿ ಕೇರಳ ಬ್ಲಾಸ್ಟರ್ಸ್ ಗೋಲು ಗಳಿಸಿತ್ತು ಆದರೆ ಬಕಾರಿ ಕೋನ್ ಗಳಿಸಿದ ಈ ಗೋಲಿಗೆ ಸಹಾಯಕ ರೆಫರಿ ಅಕ್ರಮ ಗೋಲೆಂದು ತೀರ್ಪು ನೀಡಿದರು.

ಕಠಿಣ ಸವಾಲಿನ ನಿರೀಕ್ಷೆಯಲ್ಲಿ ಕೇರಳ: ಬೆಂಗಳೂರು ಎಫ್ ಸಿ ವಿರುದ್ಧ ಜಯ ಗಳಿಸಿದ ಆತ್ಮವಿಶ್ವಾಸದಲ್ಲಿರುವ ಕೇರಳ ಬ್ಲಾಸ್ಟರ್ಸ್ ಎಫ್ ಸಿ ಬಲಿಷ್ಠ ಗೋವಾ ವಿರುದ್ಧ ಜಯ ಗಳಿಸುವ ಆತ್ಮವಿಶ್ವಾದೊಂದಿಗೆ ಅಂಗಣಕ್ಕಿಳಿಯಿತು. ಕಳೆದ ಮೂರು ಪಂದ್ಯಗಳಿಂದ ಕೇರಳ ಬ್ಲಾಸ್ಟರ್ಸ್ ಸೋಲು ಕಂಡಿರಲಿಲ್ಲ. ಅದರಲ್ಲಿ ಎರಡು ಜಯ ಮತ್ತು ಒಂದು ಡ್ರಾಆ ಸೇರಿತ್ತು. ದಕ್ಷಿಣದ ಡರ್ಬಿ ಎಂದೇ ಜನಜನಿತವಾಗಿರುವ ಬೆಂಗಳೂರು ಎಫ್ ಸಿ ವಿರರುದದ್ಧದ ಪಂದ್ಯದ ಅಂತಿಮ ಕ್ಷಣದಲ್ಲಿ ಗಳಿಸಿದ ಗೋಲು ಕೇರಳ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಜಾರ್ಡನ್ ಮರ್ರೆ ಗಾಯಗೊಂಡಿರದೆ ಇರುತ್ತಿದ್ದರೆ ಕೇರಳದ ಶಕ್ತಿ ಮತ್ತಷ್ಟು ಹೆಚ್ಚುತ್ತಿತ್ತು, ಆಸ್ಟ್ರೇಲಿಯಾ ಮೂಲದ ಆಟಗಾರ 6 ಗೋಲುಗಳನ್ನು ಗಳಿಸಿ ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರೆನಿಸಿದ್ದಾರೆ. ಗೋವಾ ಎಫ್ ಸಿ ಇದುವರರೆಗೂ ಸತತ ಐದು ಪಂದ್ಯಗಳಲ್ಲಿ ಸೋಲನುಭವಿಸಸದೆ ಮುನ್ನಡೆದಿದೆ. ಅದರಲ್ಲಿ ಮೂರು ಜಯ ಇದೆ.

ಮೊದಲಾರ್ಧದಲ್ಲಿ ಗೋಲು ನೀಡಿಯೂ ಜಯ ಗಳಿಸಿರುವುದು ಗೋವಾದ ವಿಶೇಷ. ಈ ಮೂಲಕ ಗೋವಾ 10 ಅಂಕಗಳನ್ನು ಗಳಿಸಿದೆ. ಕಳೆದ ಎರಡು ಪಂದ್ಯಗಳಲ್ಲಿ ಐಗರ್ ಆಂಗುಲೋ ಅವರ ಬದಲಿಗೆ ಜಾರ್ಜ್ ಮೆಂಡೋನ್ಸಾ ಅವರು ಕಾರ್ಯವನಿರ್ವಹಿಸಿರುವ ಬಗ್ಗೆ ಕೋಚ್ ಜುವಾನ್ ಫೆರಾಂಡಡೊ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 9 ಗೋಲುಗಳನ್ನು ಗಳಿಸಿರುವ ಐಗರ್ ಅವರನ್ನು ನಿಯಂತ್ರಿಸುವುದು ಕೇರಳದ ಕಠಿಣ ಸವಾಲಾಗಿದೆ. ಗೋವಾ ಇಲ್ಲಿ ಜಯ ಗಳಿಸಿದರೆ ಎರಡನೇ ಸ್ಥಾನ ಮತ್ತು ಮೂರನೇ ಸ್ಥಾನದ ನಡುವಿನ ಅಂತರವನ್ನು ಕೇವಲ 2 ಅಂಕಗಳಿಗೆ ಸೀಮಿತಗೊಳಿಸಲಿದೆ.

For Quick Alerts
ALLOW NOTIFICATIONS
For Daily Alerts
Story first published: Sunday, January 24, 2021, 11:11 [IST]
Other articles published on Jan 24, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X