ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಕೇರಳದ ನಿಯಂತ್ರಣಕ್ಕೆ ಎಟಿಕೆ ಮೋಹನ್ ಬಾಗನ್ ಸಜ್ಜು

By Isl Media
isl 2020 21, kerala blasters vs atk mohun bagan, match 78, preview

ಗೋವಾ, ಜನವರಿ 30: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ 14 ಪಂದ್ಯಗಳ ನಂತರ ಎಟಿಕೆ ಮೋಹನ್ ಬಾಗನ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರಬಹುದು, ಆದರೆ ಹಾಲಿ ಚಾಂಪಿಯನ್ ತಂಡ ಇತ್ತೀಚಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಋತುವಿನ ಮೂರನೇ ಆಘಾತ ಕಂಡಿತ್ತು.
ಭಾನುವಾರ ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ತನ್ನ ನೈಜ ಹೋರಾಟವನ್ನು ಮುಂದುವರಿಸಿ ಅಂಕಪಟ್ಟಿಯಲ್ಲಿ ಮುಂಬೈ ಸಿಟಿ ಎಫ್ ಸಿ ತಂಡವನ್ನು ಸಮೀಪಿಸುವ ಗುರಿಹೊಂದಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಕೇರಳ ಬ್ಲಾಸ್ಟರ್ಸ್ ಪಡೆ ಎರಡು ಬಾರಿ ಸೋಲು ಕಂಡು ಕೇವಲ ಒಮ್ಮೆ ಜಯ ಗಳಿಸಿತ್ತು. ನಾಲ್ಕು ಗೋಲುಗಳನ್ನು ಎದುರಾಳಿ ತಂಡಕ್ಕೆ ಗಳಿಸುವ ಅವಕಾಶ ನೀಡಿರುವುದು ತಂಡದ ಡಿಫೆನ್ಸ್ ವಿಭಾಗದ ಸಮಸ್ಯೆಯನ್ನು ಸ್ಪಷ್ಟಪಡಿಸುತ್ತದೆ ಆರಂಭದ ಒಂಬತ್ತು ಪಂದ್ಯಗಳಲ್ಲಿ ಬಾಗನ್ ಪಡೆ ಮೂರು ಗೋಲುಗಳನ್ನು ನೀಡಿತ್ತು, ಇದು ತಂಡದ ಡಿಫೆನ್ಸ್ ವಿಭಾಗದ ಚಿತ್ರಣವನ್ನು ನೀಡುತ್ತದೆ.

ಬಯಲಾಯಿತು ಮೆಸ್ಸಿಯ ಕಾಂಟ್ರಾಕ್ಟ್ ಡೀಲ್: ಕ್ರೀಡಾ ಇತಿಹಾಸದಲ್ಲಿ ದಾಖಲೆ ಮೊತ್ತದ ಒಪ್ಪಂದ
ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ತಂಡ ವಿಫಲವಾಗಿರುವುದು ತಂಡದ ಅಂಕ ಗಳಿಕೆಗೆ ಹೊಡೆತ ಬಿದ್ದಂತಾಗಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಕೋಲ್ಕೊತಾ ಗಳಿಸಿದ್ದು ಕೇವಲ ನಾಲ್ಕ ಗೋಲುಗಳನ್ನು. ಇದುವರೆಗೂ 13 ಗೋಲುಗಳನ್ನು ಗಳಿಸಿರುವ ಕೋಲ್ಕೊತಾ ಎಲ್ಲಾ ಋತುಗಳಿಗಿಂತ ಕಡಿಮೆ ಗೋಲು ಗಳಿಕೆಯ ದಾಖಲೆಯನ್ನು ಹೊಂದಿದೆ.

ಒಡಿಶಾ ಎಫ್ ಸಿ ಯಿಂದ ಮಾರ್ಸೆಲಿನೋ ಅವರನ್ನು ಎರವಲಾಗಿ ಪಡೆದಿರುವ ಆಂಟಟೊನಿಯೊ ಹಬ್ಬಾಸ್ ತಮ್ಮ ತಂಡ ಇತ್ತೀಚಿನ ಫಲಿತಾಂಶಗಳ ನಡುವೆಯೂ ಉತ್ತಮ ಸಧಾರಣೆ ಕಂಡಿದೆ ಎಂದಿದ್ದಾರೆ. "ನಾವು ನಮ್ಮ ಪ್ರದರ್ಶನದಲ್ಲಿ ಸುಧಾರಣೆ ಕಂಡುಕೊಂಡಿದ್ದೇವೆ. ಆದರೆ ನಾವು ನಮ್ಮ ಉದ್ದೇಶವನ್ನು ಗಮನದಲ್ಲಿರಿಸಿಕೊಂಡು ಆಡಬೇಕಾಗಿದೆ. ಲೀಗ್ ನ ಕೆಲವು ಪಂದ್ಯಗಳು ಮತ್ತು ಕೆಲವು ಸುತ್ತುಗಳ ನಂತರ ತಂಡದ ಉದ್ದೇಶ ಮತ್ತು ಗುರಿ ಸ್ಪಷ್ಟವಾಗಿದೆ. ಈ ನಾವು ನಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸಬೇಕು," ಎಂದು ಹಬ್ಬಾಸ್ ಹೇಳಿದರು.

ಐಎಸ್‌ಎಲ್: ಮುಂಬೈ ದಾಖಲೆಗೆ ಬ್ರೇಕ್ ಹಾಕಿದ ದಿಶ್ರಾನ್ ಬ್ರೌನ್!ಐಎಸ್‌ಎಲ್: ಮುಂಬೈ ದಾಖಲೆಗೆ ಬ್ರೇಕ್ ಹಾಕಿದ ದಿಶ್ರಾನ್ ಬ್ರೌನ್!

ಕಳೆದ ಐದು ಪಂದ್ಯಗಳಲ್ಲಿ ಅಜೇಯವಾಗಿರುವ ಕೇರಳ ಬ್ಲಾಸ್ಟರ್ಸ್ ಪಡೆ, ಪ್ಲೇ ಆಫ್ ತಲುಪಲು ಇನ್ನು ಕೇವಲ ನಾಲ್ಕ ಅಂಕಗಳ ಅಗತ್ಯ ಹೊಂದಿದೆ. ಈ ಋತುವಿನ ಮೊದಲ ಪಂದ್ಯದಲ್ಲಿ ಎಟಿಕೆಎಂಬಿ ಜಯ ಗಳಿಸಿತ್ತು. ಆದರೆ ಹಿಂದಿನ ಫಲಿತಾಂಶ ನಾಳೆಪ ಪಂದ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದು ಎಂದು ಕೋಚ್ ಕಿಬು ವಿಕುನಾ ಹೇಳಿದ್ದಾರೆ. "ಅದು ಡಿಫೆನ್ಸ್ ವಿಭಾಗದಲ್ಲಿ ಆದ ಒಂದು ಪ್ರಮಾದದ ಪರಿಣಾಮ. ಹಾಗಂತ ಅವರ ತಂಡ ನಮಗಿಂತ ಉತ್ತಮ ತಂಡ ಅಲ್ಲವೆಂದಲ್ಲ. ಈಗ ಪರಿಸ್ಥತಿ ಬದಲಾಗಿದೆ. ಎಟಿಕೆಎಂಬಿ ಮಾಜಿ ಚಾಂಪಿಯನ್, ಅಂಕಪಟ್ಟಿಯಲ್ಲು ಎರಡನೇ ಸ್ಥಾನದಲ್ಲಿದೆ. ಉತ್ತಮ ಆಟಗಾರರು ಮತ್ತು ಉತ್ತಮ ಕೋಚ್ ಹೊಂದಿರುವ ತಂಡದ ವಿರುದ್ಧದ ಪಂದ್ಯ ನಮಗೆ ಸವಾಲಾಗುವುದು ಸಹಜ." ಎಂದರು.

Story first published: Sunday, January 31, 2021, 14:41 [IST]
Other articles published on Jan 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X