ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್ ಮತ್ತು ಬೆಂಗಳೂರು ತಂಡಗಳ ಅದೃಷ್ಟ ಪರೀಕ್ಷೆ

By Isl Media
ISL 2020 21 kerala blasters vs bengaluru fc match preview.

ಗೋವಾ, ಜನವರಿ 19: ಈ ಬಾರಿಯ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕೆಂತೆ ಪ್ರದರ್ಶನ ತೋರುವಲ್ಲಿ ವಿಫಲವಾಗಿರುವ ಮಾಜಿ ಚಾಂಪಿಯನ್ ಬೆಂಗಳೂರು ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಸಾಮಾನ್ಯವಾಗಿ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿದ್ದರೆ ಕೊಚ್ಚಿಯ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಅಥವಾ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಆಭಿಮಾನಿಗಳು ಕಿಕ್ಕಿರಿದು ಸೇರುತ್ತಿದ್ದರು. ಆದರೆ ಈಗ ಕತೆಯೇ ಬೇರೆ.

ಜಿಎಂಸಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಪಂದ್ಯದ ವೇಳೆ ಪ್ರೇಕ್ಷಕರೇ ಇರುವುದಿಲ್ಲ. ಆದರೆ ಎರಡೂ ತಂಡಗಳಿಗೆ ನಾಳೆಯ ಪಂದ್ಯ ಅತ್ಯಂತ ಪ್ರಮುಖವಾಗಿದೆ, ಏಕೆಂದರೆ ಎರಡೂ ತಂಡಗಳಿಗೂ ಇಲ್ಲಿ ಜಯದ ಅಗತ್ಯ ಇದೆ. ಎಸ್ ಸಿ ಈಸ್ಟ್ ಬೆಂಗಾಲ್ ವಿರುದ್ಧದ ಪಂದ್ಯದಲ್ಲಿ ಅಂತಿಮ ಕ್ಷಣದಲ್ಲಿ ಗೋಲು ದಾಖಲಾದ ಪರಿಣಾಮ ಕೇರಳ ಜಯದಿಂದ ವಂಚಿತವಾಗಿತ್ತು. ಮುನ್ನಡೆಯನ್ನು ಕೊನೆಯವರೆಗೂ ಉಳಿಸಿಕೊಳ್ಳಲು ವಿಫಲವಾದ ಕೇರಳಕ್ಕೆ ಈ ಋತುವಿನಲ್ಲಿ ಹಿನ್ನಡೆ ಕಾಣಲು ಪ್ರಮುಖ ಕಾರಣವಾಯಿತು. ಮೊದಲಿಗೆ ಗೋಲು ಗಳಿಸಿದ ನಂತರ ಕೇರಳ 10 ಅಂಕಗಳನ್ನು ಕಳೆದುಕೊಂಡಿದೆ. ಲೀಗ್ ನಲ್ಲಿ ತಂಡವೊಂದು ಈ ರೀತಿಯ ದಾಖಲೆ ಹೊಂದಿರುವುದು ಮೊದಲಾಗಿದೆ.

ಐಎಸ್‌ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್ಐಎಸ್‌ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್

ಬೆಂಗಳೂರು ಉತ್ತಮ ತಂಡ

ಬೆಂಗಳೂರು ಉತ್ತಮ ತಂಡ

"ಬೆಂಗಳೂರು ಉತ್ತಮ ತಂಡ. ಅಲ್ಲದೆ ಉತ್ತಮ ಆಟಗಾರರಿಂದ ಕೂಡಿದೆ." ಎಂದು ಕೇರಳದ ಕೋಚ್ ಕಿಬು ವಿಕುನಾ ಹೇಳಿದ್ದಾರೆ, "ಈಗ ಪರಿಸ್ಥಿತಿ ಭಿನ್ನವಾಗಿದೆ. ಆದರೆ ನಾವು ಈ ಹಿಂದೆ ಇತರ ಪಂದ್ಯಗಳಿಗೆ ಯಾವ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವೋ ಅದೇ ರೀತಿಯಲ್ಲಿ ಸಜ್ಜಾಗಿದ್ದೇವೆ," ಎಂದು ಹೇಳಿದರು. ವಿಕುನಾ ಅವರು ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಅವರ ತಂಡ 20 ಗೋಲುಗಳನ್ನು ಎದುರಾಳಿ ತಂಡಕ್ಕೆ ಗಳಿಸಲು ಅವಕಾಶ ಮಾಡಿಕೊಟ್ಟಿದೆ. ತಂಡವೊಂದು ನೀಡಿದ ಅತಿ ಹೆಚ್ಚು ಗೋಲು ಇದಾಗಿದೆ. ಪೆನಾಲ್ಟಿ ಮುಲಕವೇ ತಂಡ 5 ಗೋಲುಗಳನ್ನು ನೀಡಿದೆ. "ನಮ್ಮ ತಂಡ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾವು ಕಠಿಣ ಶ್ರಮವನ್ನು ಮುಂದುವರಿಸಬೇಕಾಗಿದೆ. ನಿರಂತರ ಶ್ರಮಮಾತ್ರ ತಂಡವನ್ನು ಉತ್ತಮಗೊಳಿಸಲಿದೆ," ಎಂದು ವಿಕುನಾ ಹೇಳಿದರು.

ಡಿಫೆನ್ಸ್ ವಿಭಾಗದತ್ತ ಬೆಂಗಳೂರು ಗಮನ

ಡಿಫೆನ್ಸ್ ವಿಭಾಗದತ್ತ ಬೆಂಗಳೂರು ಗಮನ

ಸತತ ಐದು ಪಂದ್ಯಗಳಲ್ಲಿ ಜಯ ಕಾಣದೆ ನಾಲ್ಕು ಸೋಲು ಕಂಡಿರುವ ಬೆಂಗಳೂರು ತಂಡದ ಮಧ್ಯಂತರ ಕೋಚ್, ನೌಶಾದ್ ಮೂಸಾ ಅವರಿಗೆ ಇಲ್ಲಿ ಜಯ ಗಳಿಸಬೇಕಾದ ಅನಿವಾರ್ಯತೆ ಇದೆ. ಎಂಟು ಪಂದ್ಯಗಳಲ್ಲಿ ಬೆಂಗಳೂರು ತಂಡ ಕ್ಲೀನ್ ಶೀಟ್ ಸಾಧನೆ ಮಾಡಿರಲಿಲ್ಲ. ಕಳೆದ ಋತುವಿನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿ ಎದುರಾಳಿ ತಂಡಕ್ಕೆ 16 ಗೋಲುಗಳನ್ನು ಗಳಿಸಲು ಅವಕಾಶ ನೀಡಿದ್ದ ಬೆಂಗಳೂರು ತಂಡ ಈ ಬಾರಿ ಈಗಾಗಲೇ 16 ಗೋಲುಗಳನ್ನು ನೀಡಿದೆ. ಇದು ತಂಡದ ಡಿಫೆನ್ಸ್ ವಿಭಾಗದ ಕಡೆಗೆ ಗಮನ ಹರಿಸುವಂತೆ ಮಾಡಿದೆ.

ಗೆಲುವಿನ ಆತ್ಮವಿಶ್ವಾಸ

ಗೆಲುವಿನ ಆತ್ಮವಿಶ್ವಾಸ

"ತಂಡದಲ್ಲಿ ಈಗ ಸಾಕಷ್ಟು ಧನಾತ್ಮಕ ಅಂಶಗಳು ಕಂಡುಬಂದಿದೆ. ನಮಗೆ ತರಬೇತಿಗಾಗಿ 5-6 ದಿನ ಸಿಕ್ಕಿದೆ. ನಮಗೆ ನಿಭಾಯಿಸಲು ಸಾಧ್ಯವಾಗದ ಹಲವಾರು ಅಂಶಗಳ ಕಡೆಗೆ ನಾವು ಗಮನ ಹರಿಸಿದ್ದೇವೆ. ನಾಳೆ ನಾವು ಉತ್ತಮ ಪಂದ್ಯವನ್ನು ಆಡಲಿದ್ದೇವೆ ಎಂಬ ನಂಬಿಕೆ ಇದೆ," ಎಂದು ಮೂಸಾ ಹೇಳಿದರು. ಕುಟುಂಬದ ತುರ್ತು ಕೆಲಸಕ್ಕಾಗಿ ಮಿಡ್ ಫೀಲ್ಡರ್ ದಿಮಾಸ್ ಡೆಲ್ಗಾಡೋ ಸ್ಪೇನ್ ಗೆ ಹಿಂದಿರುಗಿದ ಕಾರಣ ತಂಡದ ಸಾಮರ್ಥ್ಯದ ಮೇಲೆ ಸ್ವಲ್ಪ ಅಡ್ಡ ಪರಿಣಾಮ ಬೀರಲಿದೆ. ಆದರೆ ಡೆಲ್ಗಾಡೊ ಇಲ್ಲದೆಯೂ ತಮ್ಮ ತಂಡ ಉತ್ತಮ ಪ್ರದರ್ಶನ ತೋರಲಿದೆ" ಎಂದು ಮೂಸಾ ಅತ್ಯಂತ ಆತ್ಮವಿಶ್ವಾಸದಿಂದ ನುಡಿದಿದ್ದಾರೆ.

Story first published: Wednesday, January 20, 2021, 9:36 [IST]
Other articles published on Jan 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X