ಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್‌ಗೆ ಜೆಮ್ಷೆಡ್ಪುರ ಎಫ್‌ಸಿ ಸವಾಲು: Live ಸ್ಕೋರ್

ಇಂಡಿಯನ್ ಸೂಪರ್ ಲೀಗ್‌ನ ಬುಧವಾರದ ಪಂದ್ಯದಲ್ಲಿ ಜೆಮ್ಷೆಡ್ಪುರ ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ಹಣಾಹಣಿಯನ್ನು ನಡೆಸುತ್ತಿದ್ದು ಈ ಪಂದ್ಯಕುತೂಹಲವನ್ನು ಮೂಡಿದಿದೆ. 13 ಪಂದ್ಯಗಳು ನಡೆದ ನಂತರ ಇತ್ತಂಡಗಳು ಅಂಕಪಟ್ಟಿಯಲ್ಲಿ ಅರ್ಧಕ್ಕಿಂತ ಕೆಳಭಾಗದಲ್ಲಿವೆ. ಮತ್ತು ಸಮಾನ ಅಂಕಗಳನ್ನು ಗಳಿಸಿವೆ. 9ನೇ ಸ್ಥಾನದಲ್ಲಿರುವ ಕೇರಳ ತನ್ನ ಎದುರಾಳಿ ತಂಡಕ್ಕಿಂತ ಒಂದು ಸ್ಥಾನ ಕೆಳಕ್ಕಿದೆ. ಅಗ್ರ ನಾಲ್ಕರಲ್ಲಿ ಎರಡೂ ತಂಡಗಳು ಸ್ಥಾನ ಪಡೆಯಬೇಕಾದರೆ ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ.

ಕೇರಳ ತಂಡ ಎದುರಾಳಿ ತಂಡಕ್ಕೆ ಹೆಚ್ಚು ಗೋಲುಗಳನ್ನು ಗಳಿಸುವ ಅವಕಾಶವನ್ನು ನೀಡುತ್ತಿದೆ. 22 ಗೋಲುಗಳನ್ನು ನೀಡಿರುವ ಕೇರಳ 10 ಪಂದ್ಯಗಳಲ್ಲಿ ಕೇವಲ ಒಂದು ಕ್ಲೀನ್ ಶೀಟ್ ಸಾಧನೆ ಮಾಡಿದೆ. ನಿರಂತರ ಗಾಯದ ಸಮಸ್ಯೆ ತಂಡದ ಈ ಸ್ಥಿತಿಗೆ ಕಾರಣವಾಗಿರಬಹುದು. ಅಮಾನತುಗೊಂಡಿರುವ ಕೋಚ್ ಕಿಬು ವಿಕುನಾ ಅವರ ಸ್ಥಾನದಲ್ಲಿ ಕಾರ್ಯವಿನರ್ವಹಿಸುತ್ತಿರುವ ಅಶ್ಫಕ್ ಅಹಮದ್ ಇನ್ನೂ ಹೆಚ್ಚಿನ ಕ್ಲೀನ್ ಶೀಟ್ ಸಾಧನೆಯನ್ನು ತಮ್ಮ ತಂಡ ಮಾಡಲಿದೆ ಎಂದಿದ್ದಾರೆ.

Live ಸ್ಕೋರ್ ಪಟ್ಟಿ ಹೀಗಿದೆ:

1
2183397

ಜೆಮ್ಞೆಡ್ಪುರ ಎಫ್‌ಸಿ ಆಡುವ ಬಳಗ: ಟಿ.ಪಿ.ರೆಹನೇಶ್ (ಗೋಲ್‌ಕೀಪರ್), ನರೇಂದರ್ ಗಹ್ಲೋಟ್, ರಿಕಿ ಲಲ್ಲಾವ್ಮಾ, ಸ್ಟೀಫನ್ ಈಜ್, ಲಾಲ್ಡಿನ್ಲಿಯಾನಾ ರೆಂತ್ಲೆ, ಐಟರ್ ಮನ್ರಾಯ್, ಅಲೆಕ್ಸಾಂಡ್ರೆ ಲಿಮಾ, ಸೀಮಿನ್ಲೆನ್ ಡೌಂಗೆಲ್, ಜಾನ್ ಫಿಟ್ಜ್‌ಗೆರಾಲ್ಡ್, ಫಾರೂಕ್ ಚೌಧರಿ, ನೆರಿಜಸ್ ವಾಲ್ಸ್ಕಿಸ್ (ನಾಯಕ)

ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಆಡುವ ಬಳಗ: ಅಲ್ಬಿನೋ ಗೋಮ್ಸ್ (ಗೋಲ್‌ಕೀಪರ್), ಸಂದೀಪ್ ಸಿಂಗ್, ಬೇಕರಿ ಕೋನ್, ಜೆಸ್ಸೆಲ್ ಕಾರ್ನೆರೊ (ನಾಯಕ), ಕೋಸ್ಟಾ ನಮೋನೈಸು, ರೋಹಿತ್ ಕುಮಾರ್, ಸಹಲ್ ಅಬ್ದುಲ್ ಸಮದ್, ವಿಸೆಂಟೆ ಗೊಮೆಜ್, ಲಾಲ್ತಥಂಗಾ ಖಾವ್ಲ್ರಿಂಗ್, ಜೋರ್ಡಾನ್ ಮುರ್ರೆ, ಗ್ಯಾರಿ ಹೂಪರ್.

For Quick Alerts
ALLOW NOTIFICATIONS
For Daily Alerts
Story first published: Wednesday, January 27, 2021, 19:21 [IST]
Other articles published on Jan 27, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X