ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಚೊಚ್ಚಲ ಪ್ರಶಸ್ತಿಗಾಗಿ ಫೈನಲ್ ನಲ್ಲಿ ಎಟಿಕೆಎಂಬಿ ವಿರುದ್ಧ ಮುಂಬೈ ಸೆಣೆಸಾಟ: Live ಸ್ಕೋರ್

By Isl Media
ISL 2020 21, mumbai city fc vs atk mohun bagan, final match, Live score

ಗೋವಾ, ಮಾರ್ಚ್ 13: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಇದುವರೆಗೂ 114 ಪಂದ್ಯಗಳು, 295 ಗೋಲುಗಳು, 87,811 ಪಾಸ್ ಗಳು, 7307 ಟ್ಯಾಕಲ್ ಗಳು ಸಂಭವಿಸಿದೆ. ಇದರೊಂದಿಗೆ ಈ ಬಾರಿಯ ಹೀರೋ ಇಂಡಿಯನ್ ಸೂಪರ್ ಲೀಗ್ ಅದ್ಭುತವಾಗಿ ಸಾಗಿ ಬಂದಿದೆ, ಫರ್ಟೊಡಾ ಕ್ರೀಗಾಂಗಣದಲ್ಲಿ ಫೈನಲ್ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ಸಿ ತಂಡವು ಮೋಹನ್ ಬಾಗನ್ ವಿರುದ್ಧ ಹೋರಾಟಕ್ಕೆ ಇಳಿದಿದೆ. ಮುಂಬೈ ಜಯ ಗಳಿಸಿದರೆ ಮೊದಲ ಬಾರಿ ಪ್ರಶಸ್ತಿ ಗೆದ್ದ ಸಂಭ್ರಮ ಕಾಣಲಿದೆ.

ಫೈನಲ್ ಪಂದ್ಯದ Live ಸ್ಕೋರ್ ಪಟ್ಟಿ

1
2192432

ಮುಂಬೈ ಮತ್ತು ಬಾಗನ್ ಬದಲಿಗೆ ಬೇರೆ ಯಾವುದಾದರೂ ತಂಡ ಫೈನಲ್ ತಲುಪಬೇಕಾಗಿತ್ತು ಎಂದು ಕೆಲವರು ವಾದ ಮಾಡಬಹುದು. ಆದರೆ ಮೋಹನ್ ಬಾಗನ್ ಮತ್ತು ಮುಂಬೈ ಸಿಟಿ ಇತರ ತಂಡಗಳಿಗಿಂತ ತಾವೇ ಬಲಿಷ್ಠ ಎಂಬುದನ್ನು ಸಾಬೀತುಮಾಡಿ ಫೈನಲ್ ತಲುಪಿವೆ. 12ಜಯ ಹಾಗೂ ಕೇವಲ 4 ಸೋಲುಗಳನ್ನು ಕಂಡ ಈ ಎರಡೂ ತಂಡಗಳು ಅದ್ಭುತ ಪ್ರದರ್ಶನ ನೀಡಿ ಫೈನಲ್ ತಲುಪಿವೆ. ಗೋವಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶೂಟೌಟ್ ಮೂಲಕ ಜಯ ಗಳಿಸಿ ಫೈನಲ್ ತಲುಪಿರುವ ಮುಂಬೈ ಸಿಟಿ ಈಗ ಫೈನಲ್ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಲೀಗ್ ಹಂತದಲ್ಲಿ ಮುಂಬೈ ತಂಡ ಬಾಗನ್ ವಿರುದ್ಧ ಜಯ ಗಳಿಸಿತ್ತು. ಇದರಿಂದ ಲೀಗ್ ವಿನ್ನರ್ಸ್ ಶೀಲ್ಡ್ ಗೆದ್ದು ಸಂಭ್ರಮಿಸಿತ್ತು. ಮುಬೈ ಪಾಲಿಗೆ ಇದು ಮೊದಲ ಫೈನಲ್. ಆದರೆ ಕೋಚ್ ಸರ್ಗಿಯೊ ಲೊಬೆರಾ 2018-19ರಲ್ಲಿ ಎಫ್ ಸಿ ಗೋವಾದ ಪ್ರಧಾನ ಕೋಚ್ ಆಗಿದ್ದಾಗ ಗೋವಾ ಫೈನಲ್ ತಲುಪಿತ್ತು,. ನಂತರ ಬೆಂಗಳೂರು ವಿರುದ್ಧ ಸೋತಿತ್ತು.

"ಎಟಿಕೆ ಮೋಹನ್ ಬಾಗನ್ ಉತ್ತಮ ಆಟಗಾರರಿಂದ ಕೂಡಿ ಉತ್ತಮ ತಂಡ. ಈ ನಾವು ಮಾಡಬೇದ ಪ್ರಮುಖ ಕೆಲಸವೆಂದರೆ ನಮ್ಮ ಸಾಮರ್ಥ್ಯದ ಕಡೆಗೆ ಗಮನಹರಿಸಬೇಕು. ನಾವು ಉತ್ತಮವಾಗಿ ಆಡಬೇಕು. ನಮ್ಮದು ನಿಖರಾದ ಯೋಜನೆ ಇಲ್ಲ. ಎದುರಾಳಿಯ ಬಗ್ಗೆ ಚಿಕ್ಕ ವಿವರವಿದೆ. ನಾವು ನಮ್ಮದೇ ಶೈಲಿಯ ಫಟ್ಬಾಲ್ ನಲ್ಲಿ ಶೇ100 ರಷ್ಟ ಪರಿಶ್ರಮ ಹಾಕಬೇಕು," ಎಂದು ಲೊಬೆರಾ ಹೇಳಿದ್ದಾರೆ. ಫೈನಲ್ ಪಂದ್ಯಕ್ಕೆ ಗೋವಾದ ಆಟಗಾರ ಮಂದಾರ್ ದೇಸಾಯಿ ಅಮಾನತುಗೊಂಡಿದ್ದರಿಂದ ಅವರ ಬದಲಿಗೆ ಆಟಗಾರರನ್ನು ಆಯ್ಕೆ ಮಾಡಬೇಕಾಗಿದೆ.

ಮೋಹನ್ ಬಾಗನ್ ಕೋಚ್ ಆಂಟೊನಿಯೋ ಹಬ್ಬಾಸ್ ಎರಡು ಬಾರಿ ಪ್ರಶಸ್ತಿ ಗೆದ್ದ ಕೋಚ್. ನಾಳೆಯ ಪಂದ್ಯದಲ್ಲಿ ಜಯ ಗಳಿಸಿದರೆ ಹಬ್ಬಾಸ್ ಹೊಸ ದಾಖಲೆ ಬರೆಯಲಿದ್ದಾರೆ. ಸತತ ಎರಡನೇ ಬಾರಿಗೆ ಮತ್ತು ಒಟ್ಟಾರೆ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದ ಕೋಚ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. "ನಾವು ನಮ್ಮ ಎದುರಾಳಿ ತಂಡದ ವಿರುದ್ಧ ಜಯ ಗಳಿಸುವ ಗುರಿಯನ್ನು ಹೊಂದಿದ್ದೇವೆ ನನ್ನ ತಂಡ ಜಯ ಗಳಿಸಲು ಸಜ್ಜಾಗಿದೆ," ಎಂದು ಹಬ್ಬಾಸ್ ಹೇಳಿದ್ದಾರೆ. ನಾವು ಜಯ ಗಳಿಸುವುದಕ್ಕಾಗಿ ಯೋಜನೆಯನ್ನು ರೂಪಿಸುತ್ತೇವೆಯೇ ನಿನಃ ಎದುರಾಳಿ ತಂಡ ಯಾವ ರೀತಿಯಲ್ಲಿ ಆಡುತ್ತದೆ ಮತ್ತೆ ಅದನ್ನು ನಿಯಂತ್ರಿಸುವುದು ಹೇಗೆ ಎಂಬುದರ ಬಗ್ಗೆ ಯೋಜನೆ ಸೂಪಿಸುವದಿಲ್ಲ ಎಂದಿದ್ದಾರೆ.

ಗೋವಾದ ಐಗರ್ ಆಂಗುಲೊ ಮತ್ತು ಬಾಗನ್ ನ ರಾಯ್ ಕೃಷ್ಣ ತಲಾ 14 ಗೋಲುಗಳನ್ನು ಗಳಿಸಿ ಗೋಲ್ಡ್ ಬೂಟ್ ಸ್ಪರ್ಧೆಯಲ್ಲಿದ್ದಾರೆ. ಶನಿವಾರದ ಪಂದ್ಯ ಗೋಲ್ಡನ್ ಬೂಟ್ ವಿಜೇತರನ್ನೂ ನಿರ್ಧರಿಸಲಿದೆ.ರಾಯ್ ಕೃಷ್ಣ ಒಂದು ಗೋಲು ಗಳಿಸಿದರೂ ಗೋಲ್ಡನ್ ಬೂಟ್ ಅವರ ಪಾಲಾಗಲಿದೆ.

Story first published: Saturday, March 13, 2021, 18:30 [IST]
Other articles published on Mar 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X