ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಎಲ್: ಮುಂಬೈ ಸಿಟಿ ತಂಡಕ್ಕೆ ಲೀಗ್ ವಿನ್ನರ್ಸ್ ಶೀಲ್ಡ್

By Isl Media
isl 2020 21, mumbai city fc vs atk mohun bagan, match 110 Highlights

ಗೋವಾ, ಫೆಬ್ರವರಿ 28: ಎಟಿಕೆ ಮೋಹನ್ ಬಾಗನ್ ತಂಡವನ್ನು 2-0 ಗೋಲಿನಿಂದ ಮಣಿಸಿದ ಮುಂಬೈ ಸಿಟಿ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಲೀಗ್ ವಿನ್ನರ್ಸ್ ಪಟ್ಟ ತನ್ನದಾಗಿಸಿಕೊಂಡು ಎಎಫ್ ಸಿ ಚಾಂಪಿಯನ್ಸ್ ಲೀಗ್ ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದೆ. ಮೌರ್ಥದಾ ಫಾಲ್ (7ನೇ ನಿಮಿಷ) ಹಾಗೂ ಬಾರ್ಥಲೋಮ್ಯೊ ಒಗ್ಬಚೆ (39ನೇ ನಿಮಿಷ) ಗೋಲು ಗಳಿಸಿ ಜಯದ ರೂವಾರಿ ಎನಿಸಿದರು.

ಮುನ್ನಡೆ ಕಂಡ ಮುಂಬೈ: ಮೌರ್ಥದಾ ಫಾಲ್ (7ನೇ ನಿಮಿಷ) ಹಾಗೂ ಬಾರ್ಥಲೋಮ್ಯೋ ಒಗ್ಬಚೆ (39ನೇ ನಿಮಿಷ) ಗಳಿಸಿದ ಗೋಲುಗಳ ನೆರವನಿಂದ ಮುಂಬೈ ಸಿಟಿ ಎಫ್ ಸಿ ಪ್ರಥಮಾರ್ಧದಲ್ಲೇ ಜಯಕ್ಕೆ ಬೇಕಾಗಿರುವ ವೇದಿಕೆ ನಿರ್ಮಿಸಿಕೊಂಡು ಮುನ್ನಡೆ ಕಂಡುಕೊಂಡಿತು. ಇಲ್ಲಿ ಜಯಕ್ಕಿಂತ ಮುಖ್ಯವಾಗಿ ಮುಂಬೈ ಲೀಗ್ ಚಾಂಪಿಯನ್ ಪಟ್ಟಕ್ಕೆ ಅಗತ್ಯವಿರುಗ ಅಂಕ ಗಳಿಸಿಕೊಂಡಿತು. ಅಹಮದ್ ಜೊಹುವಾ ಅವರು ನೀಡಿದ ಫ್ರೀ ಕಿಕ್ ಗೆ ಹೆಡರ್ ಮೂಲಕ ಫಾಲ್ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು.

ಐಎಸ್‌ಎಲ್: ಒಂದು ಅಂಕ ಗಳಿಸಿ ಸೆಮಿಫೈನಲ್ ತಲುಪಿದ ಗೋವಾಐಎಸ್‌ಎಲ್: ಒಂದು ಅಂಕ ಗಳಿಸಿ ಸೆಮಿಫೈನಲ್ ತಲುಪಿದ ಗೋವಾ

ಸಂದೇಶ್ ಜಿಂಗಾನ್ ಪ್ರಥಮಾರ್ಧದಲ್ಲಿ ಗಾಯಗೊಂಡಿದ್ದು ಮೆರಿನರ್ಸ್ ಖ್ಯಾತಿಯ ಬಾಗನ್ ತಂಡಕ್ಕೆ ತುಂಬಲಾರದ ನಷ್ಟವಾಯಿತು. 39ನೇ ನಿಮಿಷದಲ್ಲಿ ಹೆರ್ನಾನ್ ಸ್ಯಾಂಟಸಾ ನೀಡಿದ ಫ್ರೀಕಿಕ್ ಗೆ ಬಾರ್ಥಲೋಮ್ಯೋ ಒಗ್ಬಚೆ ಹೆಡರ್ ಮೂಲಕ ಗೋಲು ಗಳಿಸಿದರು. ದ್ವಿತಿಯಾರ್ಧದಲ್ಲಿ ಮೋಹನ್ ಬಾಗನ್ ತನ್ನ ನೈಜ ಸಾಮರ್ಥ್ಯ ತೋರಿ ಸಮಬಲ ಸಾಧಿಸಬೇಕಾಗಿದೆ.

ಲೀಗ್ ಚಾಂಪಿಒಯನ್ಸ್ ಗಾಗಿ ಸೆಣಸು: ಇತ್ತಂಡಗಳ ಪ್ಲೇ ಆಫ್ ಸ್ಥಾನ ಖಚಿತವಾಗಿದೆ. ಅಂಕಪಟ್ಟಿಯಲ್ಲೂ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ಲೀಗ್ ನ ಕೊನೆಯ ಪಂದ್ಯಲ್ಲಿ ಮುಂಬೈ ಸಿಟಿ ಎಫ್ ಸಿ ಹಾಗೂ ಎಟಿಕೆ ಮೋಹನ್ ಬಾಗನ್ ತಂಡಗಳು ಲೀಗ್ ವಿನ್ನರ್ಸ್ ಶೀಲ್ಡ್ ಗಾಗಿ ಮುಖಾಮುಖಿಯಾದವು. ಲೀಗ್ ನಲ್ಲಿ ಇದುವರೆಗೂ ಸ್ಥಿರ ಪ್ರದರ್ಶನ ತೋರಿದ ಎರಡು ಪಂದ್ಯಗಳ ನಡುವಿನ ಹೋರಾಟವಾಗಿದೆ.

"ಮೈಲಿಗಲ್ಲುಗಳ ಬಗ್ಗೆ ಬಹಳಷ್ಟು ಹಿಂದೆಯೇ ಯೋಚಿಸುವುದು ಬಿಟ್ಟಿದ್ದೇನೆ"

ಋತುವಿನುದ್ದಕ್ಕೂ ಅಗ್ರ ಎರಡು ಸ್ಥಾನಗಳನ್ನು ಈ ಎರಡು ತಂಡಗಳೇ ಹಂಚಿಕೊಂಡಿವೆ ಋತುವಿನ ಪ್ರಥಮಾರ್ಧದಲ್ಲಿ ಮುಂಬೈ ಸಿಟಿ ತಂಡ ಅಗ್ರ ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು. ಆದರೆ ಅನಿರೀಕ್ಷಿತ ಕುಸಿತದಿಂದಾಗಿ ತಂಡದ ಪ್ರಥಮ ಸ್ಥಾನ ಎಟಿಕೆ ಮೋಹನ್ ಬಾಗನ್ ಪಾಲಾಯಿತು.ಈಗ ಕೊನೆಯ ಒಂದು ಪಂದ್ಯ ಬಾಕಿ ಉಳಿಸಿದ್ದು, ಮುಂಬೈ ತಂಡಕ್ಕೆ ತನ್ನ ಅಗ್ರ ಸ್ಥಾವನ್ನು ಮರಳಿ ಗಳಿಸಲು ಕೊನೆಯ ಅವಕಾಶ. ಒಂದು ಜಯ ತಂಡವನ್ನು ಅಗ್ರ ಸ್ಥಾನಕ್ಕೆ ಕೊಡೊಯ್ಯುವುದು ಮಾತ್ರವಲ್ಲ, ಎಎಫ್ ಸಿ ಚಾಂಪಿಯನ್ಸ್ ಲೀಗ್ ನಲ್ಲಿ ಸ್ಪರ್ಧಿಸಲು ತಂಡಕ್ಕೆ ಅವಕಾಶ ಕಲ್ಪಿಸಲಿದೆ. ಮೂರು ಅಂಕಗಳಿಗಿಂತ ಕಡಿಮೆಯಾದ ಯಾವುದೇ ಫಲಿತಾಂಶವು ಬಾಗನ್ ತಂಡಕ್ಕೆ ಆ ಎಲ್ಲ ಅವಕಾಶವನ್ನು ನೀಡಲಿದೆ.

Story first published: Monday, March 1, 2021, 8:50 [IST]
Other articles published on Mar 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X