ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌: ಹೈದರಾಬಾದ್‌ಗೆ ಬಲಿಷ್ಠ ಮುಂಬೈ ಸಿಟಿ ಎಫ್‌ಸಿ ಸವಾಲು

By Isl Media
ISL 2020-21, Mumbai City FC vs Hyderabad FC: Preview, Team News

ಗೋವಾ: ಇಂಡಿಯನ್ ಸೂಪರ್‌ ಲೀಗ್‌ ಇತಿಹಾಸದಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡ ತನ್ನ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದು, ಯಶಸ್ಸಿನ ಅಲೆಯಲ್ಲಿ ಮುನ್ನಡೆಯುತ್ತಿದೆ. ಮುಂಬೈ ತಂಡ ಈವರೆಗೆ ಆಡಿದ 10 ಪಂದ್ಯಗಳಿಂದ ಒಟ್ಟು25 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯ ಅಗ್ರಸ್ಥಾನ ಕಾಯ್ದುಕೊಂಡಿದೆ. ಆದರೂ ಪಂದ್ಯದ ಸುಧಾರಿತ ಪ್ರದರ್ಶನವೇ ಇಲ್ಲಿ ಮುಖ್ಯ ಎಂದು ಹೇಳಿರುವ ಕೋಚ್‌ ಸರ್ಗಿಯೊ ಲೊಬೆರಾ, ಶನಿವಾರ ಹೈದರಾಬಾದ್‌ ಎಫ್‌ಸಿ ವಿರುದ್ಧ ಜಿಎಮ್‌ಸಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವನ್ನು ಎದುರು ನೋಡುತ್ತಿದ್ದಾರೆ.

 ಮೆಗಾ ಮಿಲಿಯನ್ ಜಾಕ್‌ಪಾಟ್‌ ಮೌಲ್ಯ ಈಗ 640 ಮಿಲಿಯನ್‌ ಡಾಲರ್‌ ಮೆಗಾ ಮಿಲಿಯನ್ ಜಾಕ್‌ಪಾಟ್‌ ಮೌಲ್ಯ ಈಗ 640 ಮಿಲಿಯನ್‌ ಡಾಲರ್‌

"ಈವರೆಗೆ ಲಭ್ಯವಾಗಿರುವ ಫಲಿತಾಂಶದಿಂದ ತೃಪ್ತಿ ಸಿಕ್ಕಿದೆ. ಆದರೆ, ಈಗ ಇದೇ ಸ್ಥಿತಿಯನ್ನು ಕಾಯ್ದುಕೊಳ್ಳುವುದೇ ನಮ್ಮೆದುರಿ ಇರುವ ಬಹುದೊಡ್ಡ ಸವಾಲಾಗಿದೆ. ಸುಧಾರಿತ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿನ ಉನ್ನತ ಸ್ಥಾನವನ್ನು ಕಾಯ್ದುಕೊಳ್ಳುವ ಅಗತ್ಯವಿದೆ," ಎಂದು ಲೊಬೆರಾ ಹೇಳಿದ್ದಾರೆ.

ಬಹಳಷ್ಟು ಆಟಗಾರರ ಗಾಯಕ್ಕೆ ಭಾರತ ಕಾರಣ ಹುಡುಕಬೇಕು: ಗಿಲ್‌ಕ್ರಿಸ್ಟ್ಬಹಳಷ್ಟು ಆಟಗಾರರ ಗಾಯಕ್ಕೆ ಭಾರತ ಕಾರಣ ಹುಡುಕಬೇಕು: ಗಿಲ್‌ಕ್ರಿಸ್ಟ್

ಐಲ್ಯಾಂಡರ್ಸ್‌ ಖ್ಯಾತಿಯ ಮುಂಬೈ ತಂಡ ಕಳೆದ 9 ಪಂದ್ಯಗಳಲ್ಲಿ ಗೋಲ್‌ ದಾಖಲಿಸಿದ್ದು, ಸೋಲಿಲ್ಲದಂತೆ ಮುನ್ನಡೆದು ಬಂದಿದೆ. ಈ 9 ಪಂದ್ಯಗಳಲ್ಲಿ ಮುಂಬೈ ತಂಡ ಒಟ್ಟು 17 ಗೋಲ್‌ ಬಾರಿಸಿದೆ ಎಂಬುದು ವಿಶೇಷ. ತಂಡದ ಡಿಫೆನ್ಸ್‌ ಕೂಡ ಅಷ್ಟೇ ಉತ್ತಮವಾಗಿದ್ದು, ಲೀಗ್‌ನ ಟಾಪ್‌ 3 ತಂಡಗಳ ಎದುರು ಒಂದು ಗೋಲ್‌ ಕೂಡ ಬಿಟ್ಟುಕೊಟ್ಟಿಲ್ಲ. ಇದಕ್ಕೆ ತಂಡದ ಸಂಘಟಿತ ಪ್ರದರ್ಶನವೇ ಕಾರಣ ಎಂದು ಲೊಬೆರಾ ಹೇಳಿದ್ದಾರೆ.

ಪ್ರದರ್ಶನದ ಬಗ್ಗೆ ಹೆಮ್ಮೆಯಿದೆ

ಪ್ರದರ್ಶನದ ಬಗ್ಗೆ ಹೆಮ್ಮೆಯಿದೆ

"ನಮ್ಮ ಆಟಗಾರರ ಪ್ರದರ್ಶನದ ಬಗ್ಗೆ ನನಗೆ ಹೆಮ್ಮೆಯಿದೆ. ಅಲ್ಪಾವಧಿಯಲ್ಲಿ ನಮ್ಮ ಆಟದ ಶೈಲಿಯನ್ನು ಅಳವಡಿಸಿಕೊಂಡಿದ್ದು ಅಷ್ಟು ಸುಲಭವಾಗಿರಲಿಲ್ಲ. ನಾವು ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬೇಕಾದರೆ, ತಂಡದಲ್ಲಿ ಇರುವ ಭಾರತೀಯ ಆಟಗಾರರ ಪ್ರದರ್ಶನ ಉನ್ನತ ಮಟ್ಟದಲ್ಲಿ ಇರಬೇಕು," ಎಂದಿದ್ದಾರೆ.
ಮುಂಬೈ ತಂಡದ ತನ್ನ ಹಿಂದಿನ ಪಂದ್ಯದಲ್ಲಿ ಹೈದರಾಬಾದ್‌ ಎದುರು 2-0 ಅಂತರದ ಜಯ ದಾಖಲಿಸಿತ್ತು. ಆದರೆ, ಹೈದರಾಬಾದ್‌ ತಂಡ ಈಗ ಮತ್ತಷ್ಟು ಅಪಾಯಕಾರಿ ಆಗಿದೆ ಎಂದು ಲೊಬೆರಾ ಹೇಳಿದ್ದಾರೆ. ಐಎಸ್‌ಎಲ್‌ 7ರಲ್ಲಿ ಹೈದರಾಬಾದ್‌ನ ಭಾರತೀಯ ಆಟಗಾರರು ಅತ್ಯುತ್ತಮವಾಗಿ ಆಡಿದ್ದರು. ತಂಡದ ವಿದೇಶಿ ಆಟಗಾರರು ಅಸ್ಥಿರ ಪ್ರದರ್ಶನ ನೀಡಿದರೂ ಹೈದರಾಬಾದ್‌ ಯಶಸ್ಸಿನ ಹೆಜ್ಜೆ ಇಡಲು ಭಾರತೀಯ ಆಟಗಾರರ ಸ್ಥಿರತೆಯೇ ಕಾರಣ ಎಂದು ತಿಳಿಸಿದ್ದಾರೆ.

ನಮ್ಮ ಶೈಲಿಯ ಆಟವನ್ನೇ ಆಡುತ್ತಿದೆ

ನಮ್ಮ ಶೈಲಿಯ ಆಟವನ್ನೇ ಆಡುತ್ತಿದೆ

"ಇದೊಂದು ಅತ್ಯುತ್ತಮ ಪಂದ್ಯವಾಗಲಿದೆ ಎಂಬ ವಿಶ್ವಾಸವಿದೆ. ಹೈದರಾಬಾದ್‌ ತಂಡ ನಮ್ಮ ಶೈಲಿಯ ಆಟವನ್ನೇ ಆಡುತ್ತಿದೆ. ಅವರಲ್ಲಿ ಉತ್ತಮ, ಭಾರತೀಯ ಆಟಗಾರರಿದ್ದಾರೆ. ಜೊತೆಗೆ ಅನುಭವಿ ವಿದೇಶಿ ಆಟಗಾರರಿದ್ದಾರೆ. ಹೀಗಾಗಿ ಈ ಬಾರಿ ಸಂಪೂರ್ಣ ವಿಭಿನ್ನ ಪಂದ್ಯ ಎದುರಾಗಲಿದೆ. ಅವರ ತಂಡ ಸಂಪೂರ್ಣ ಬಲದೊಂದಿಗೆ ಆಡುತ್ತಿದೆ. ನಮ್ಮ ತಂಡ ನಮ್ಮ ನೈಜ ಆಟ ಕಾಯ್ದುಕೊಳ್ಳುವ ಕಡೆಗಷ್ಟೇ ಗಮನ ನೀಡಬೇಕು," ಎಂದು ಲೊಬೆರಾ ಹೇಳಿದ್ದಾರೆ.

ಮುಂಬೈ ಅತ್ಯಂತ ಬಲಿಷ್ಠ ತಂಡ

ಮುಂಬೈ ಅತ್ಯಂತ ಬಲಿಷ್ಠ ತಂಡ

ಹೈದರಾಬಾದ್‌ ತಂಡದ ಕೋಚ್‌ ಮ್ಯಾನುಯೆಲ್‌ ಮಾರ್ಕಸ್‌ ಮುಂಬೈ ಅತ್ಯಂತ ಬಲಿಷ್ಠ ತಂಡ ಎಂದು ಒಪ್ಪಿಕೊಂಡಿದ್ದು, ಈ ಆವೃತ್ತಿಯಲ್ಲಿ ಮುಂಬೈ ಟ್ರೋಫಿ ಗೆಲ್ಲಲಿದೆ ಎಂದು ಭವಿಷ್ಯವನ್ನೂ ನುಡಿದಿದ್ದಾರೆ. "ಮುಂಬೈ ತಂಡ ಈ ಲೀಗ್‌ನಲ್ಲಿ ಖಂಡಿತಾ ಬಲಿಷ್ಠವಾಗಿದೆ. ಲೀಗ್‌ ಹಂತದಲ್ಲಿ ಈ ತಂಡವೇ ಚಾಂಪಿಯನ್ಸ್‌ ಆಗುವುದು ಖಚಿತ. ಆದರೆ, ನಾಕ್‌ಔಟ್‌ ಹಂತಗಳಲ್ಲಿ ಅತ್ಯುತ್ತಮ ಆಟವಾಡುವ ತಂಡಕ್ಕೆ ಯಶಸ್ಸು ಲಭ್ಯವಾಗಲಿದೆ," ಎಂದಿದ್ದಾರೆ.
ಹಲವು ಅಡಚಣೆಗಳು ಎದುರಾಗಿದ್ದರೂ ಕೂಡ ತಮ್ಮ ತಂಡ ಎಂದಿನ ಶೈಲಿಯನ್ನು ಕಾಯ್ದುಕೊಳ್ಳಲಿದೆ ಎಂದು ಮಾರ್ಕಸ್‌ ಇದೇ ವೇಳೆ ಹೇಳಿದ್ದಾರೆ. "ನಮ್ಮ ಮುಂದಿನ ಪಂದ್ಯದಲ್ಲಿ ಕೆಲ ಬದಲಾವಣೆಗಳನ್ನು ತಂದುಕೊಂಡಿದ್ದೇವೆ. ಎಷ್ಟೇ ಬದಲಾವಣೆಗಳನ್ನು ತಂದರು ಕೂಡ ಈ ಪಂದ್ಯ ಅತ್ಯಂತ ಕಠಿಣವಾಗಿ ಇರುವುದಂತೂ ನಿಜ," ಎಂದು ಹೇಳಿದ್ದಾರೆ.

Story first published: Friday, January 15, 2021, 22:21 [IST]
Other articles published on Jan 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X