ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಮುಂಬೈ ದಾಖಲೆಗೆ ಬ್ರೇಕ್ ಹಾಕಿದ ದಿಶ್ರಾನ್ ಬ್ರೌನ್!

By Isl Media
ISL 2020 21, mumbai city fc vs northeast united highlights, match 76

ಗೋವಾ ಜನವರಿ 30: ಸತತ 13 ಪಂದ್ಯಗಳಲ್ಲಿ ಸೋಲರಿಯದೆ ಮುಂದೆ ಸಾಗಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ದಾಖಲೆ ಬರೆಯಬೇಕೆಂದಿದ್ದ ಮುಂಬೈ ಎಫ್ ಸಿ ತಂಡಕ್ಕೆ ನಾರ್ಥ್ ಈಸ್ಟ್ ಯುನೈಟೆಡ್ 2-1 ಗೋಲಿನಿಂದ ಸೋಲುಣಿಸಿದೆ. ದಿಶ್ರಾನ್ ಬ್ರೌನ್ ( 6 ಮತ್ತು 9ನೇ ನಿಮಿಷ) ಪ್ರಥಮಾರ್ಧದಲ್ಲಿ ಗಳಿಸಿದ ಎರಡು ಗೋಲುಗಳು ಮುಂಬೈ ತಂಡದ ಅಜೇಯದ ದಾಖಲೆಯನ್ನು ನುಚ್ಚು ನೂರು ಮಾಡಿತಲ್ಲದೆ, ಸೋಲಿನ ಆಘಾತವನ್ನೂ ನೀಡಿತು. ಕಾಕತಾಳೀಯವೆಂಬಂತೆ ನಾರ್ಥ್ ಈಸ್ಟ್ ತಂಡ ಮುಂಬೈ ವಿರುದ್ಧದ ಮೊದಲ ಪಂದ್ಯದಲ್ಲೂ ಜಯ ಗಳಿಸಿತ್ತು.

ಮುಂಬೈ ಪರ ಜೇಮ್ಸ್ ಲೆ ಫಾಂಡ್ರೆ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ಈ ಜಯದೊಂದಿಗೆ 21 ಅಂಕ ಗಳಿಸಿದ ನಾರ್ಥ್ ಈಸ್ಟ್ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಿತು. ಹೈದರಾಬಾದ್ ಎಫ್ ಸಿ ಐದನೇ ಸ್ಥಾನಕ್ಕೆ ಕುಸಿಯಿತು.
ಮುಂಬೈಗೆ ಆರಂಭದಲ್ಲೇ ಶಾಕ್: 13 ಪಂದ್ಯಗಳಲ್ಲಿ ಅಜೇಯವಾಗಿ ಮುನ್ನಡೆದು ದಾಖಲೆ ಬರೆಯಲು ಅಂಗಣಕ್ಕಿಳಿದ ಮುಂಬೈ ತಂಡಕ್ಕೆ ಆರಂಭದಲ್ಲೇ ಶಾಕ್!. ದಾಖಲೆ ಒತ್ತಟ್ಟಿಗಿರಲಿ ಈಗ ದ್ವಿತಿಯಾರ್ಧದಲ್ಲಿ ಎರಡು ಗೋಲುಗಳನ್ನು ಗಳಿಸಿ ಪಂದ್ಯವನ್ನು ಸಮಬಲಗೊಳಿಸಬೇಕಾದ ಸಂದಿಗ್ಧತೆಗೆ ಸಿಲುಕಿದೆ ಕಾರಣ ದಿಶ್ರಾನ್ ಬ್ರೌನ್ (6 ಮತ್ತು 9ನೇ ನಿಮಿಷ) ಗಳಿಸಿದ ಎರಡು ಅದ್ಭುತ ಗೋಲುಗಳು. ಮುಂಬೈ ತಂಡಕ್ಕೆ ಮೊದಲಾರ್ಧವನ್ನು ಶಾಕ್ ನಿಂದ ಚೇತರಿಸಿಕೊಳ್ಳಲು ವಿನಿಯೋಗಿಸಿತು. ದೆಶ್ರಾನ್ ಗೆ ಮತ್ತೊಂದು ಗೋಲು ಗಳಿಸುವ ಅವಕಾಶವಿದ್ದಿತ್ತು, ಸಮಯವೂ ಇದ್ದಿತ್ತು ಆದರೆ ತರಾತುರಿಯಲ್ಲಿ ಚೆಂಡನ್ನು ಹೊರತಳ್ಳಿ ಆ ಮೇಲೆ ತಮ್ಮ ಪ್ರಮಾದಕ್ಕೆ ಬೇಸರ ವ್ಯಕ್ತಪಡಿಸಿದರು.

ನಾರ್ಥ್ ಈಸ್ಟ್ ಮತ್ತೊಂದು ಅವಕಾಶವನ್ನೂ ಕೈಚೆಲ್ಲಿತು. ಇದರೊಂದಿಗೆ ನಾರ್ಥ್ ಈಸ್ಟ್ ಪ್ರಥಮಾರ್ಧದಲ್ಲಿ 2-0 ಗೋಲಿನಿಂದ ಮುನ್ನಡೆ ಕಂಡಿತು. ಮುಂಬೈ ಮುಂದಿನ 45 ನಿಮಿಷಗಳಲ್ಲಿ ಯಾವ ರೀತಿಯಲ್ಲಿ ತಿರುಗೇಟು ನೀಡುತ್ತದೆ ಎಂಬುದು ಫುಟ್ಬಾಲ್ ಅಭಿಮಾನಿಗಳ ನಿರೀಕ್ಷೆ.
ದಾಖಲೆಯ ಹೊಸ್ತಿಲಲ್ಲಿ ಮುಂಬೈ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಸೋಲು ಕಂಡಿಲ್ಲ ಎಂಬ ದಾಖಲೆ ಬರೆಯಲು ಮುಂಬೈ ಸಿಟಿ ಎಫ್ ಸಿ ತಂಡಕ್ಕೆ ಬೇಕಾಗಿರುವುದು ನಾರ್ಥ್ ಈಸ್ಟ್ ವಿರುದ್ಧ ಒಂದು ಡ್ರಾ ಅಥವಾ ಒಂದು ಜಯ. ಗೋವಾದ ಜಿಎಂಸಿ ಕ್ರೀಡಾಂಗಣ ಈ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗಲಿದೆ. ಅಗ್ರ ಸ್ಥಾನದಲ್ಲಿರುವ ಮುಂಬೈ ತಂಡ ಈ ದಾಖಲೆಯನ್ನೇ ಗಮನದಲ್ಲಿರಿಸಿಕೊಂಡು ಆಡಲಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಸೋಲಿಗಿಂತ ಜಯ ಅಥವಾ ಡ್ರಾ ಪ್ರಮುಖವಾಗಿರುತ್ತದೆ. ಇವೆರಡರಿಂದಲೇ ಇತಿಹಾಸ ಬರೆಯಲು ಸಾಧ್ಯ. ವಿಶೇಷವೆಂದರೆ ಮುಂಬೈ ಸಿಟಿ ತಂಡ ಸೋತಿರುವುದು ಒಂದು ಬಾರಿ, ಅದು ಕೂಡ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ.

13 ಪಂದ್ಯಗಳಲ್ಲಿ ಕೇವನ 5 ಗೋಲುಗಳನ್ನು ಗಳಿಸಲು ಎದುರಾಳಿ ತಂಡಕ್ಕೆ ಅವಕಾಶ ನೀಡಿರುವ ತಂಡ ಈಗ ಅಗ್ರ ಸ್ಥಾನದಲ್ಲಿದ್ದು ಉತ್ತಮ ಪ್ರದರ್ಶನವನ್ನೇ ನೀಡಲಿದೆ ಎಂಬ ನಿರೀಕ್ಷೆ ಸಹಜ. 19 ಗೋಲುಗಳನ್ನು ಗಳಿಸಿರುವ ಮುಂಬೈ ಲೀಗ್ ನಲ್ಲಿ ಅತಿ ಹೆಚ್ಚು ಗೋಲು ಗಳಿಸಿರುವ ತಂಡಗಳಲ್ಲಿ ಒಂದು. ನಾರ್ಥ್ ಈಸ್ಟ್ ತಂಡದ ಮಧ್ಯಂತರ ಕೋಚ್ ಖಾಲೀದ್ ಜಮೀಲ್ ಹೆಜ್ಜೆ ಇಟ್ಟ ಘಳಿಗೆ ಉತ್ತಮವಾಗಿಯೇ ಇದೆ. ಆಡಿದ ಎರಡು ಪಂದ್ಯಗಳಲ್ಲಿ ಜಯ ದಕ್ಕಿದೆ. ಉರುಗ್ವೆ ಮೂಲದ ಆಟಗಾರ ಫೆಡರಿಕೊ ಗಲ್ಲೆಗೋ ಹಿಂದಿನ ಪಂದ್ಯದಲ್ಲಿ ಗೋಲು ಗಳಿಸಿರುವುದಲ್ಲದೆ, ಇನ್ನೊಂದು ಗೋಲು ಗಳಿಕೆಯಲ್ಲಿ ನೆರವಾಗಿದ್ದಾರೆ. ಸೆಟ್ ಪೀಸ್ ನಲ್ಲಿ ನಾರ್ಥ್ ಈಸ್ಟ್ 8 ಗೋಲುಗಳನ್ನು ನೀಡಿದೆ, ಮುಂಬೈ ಸೆಟ್ ಪೀಸ್ ಮೂಲಕ 12 ಗೋಲುಗಳನ್ನು ಗಳಿಸಿದೆ. ಇಲ್ಲಿ ನಾರ್ಥ್ ಈಸ್ಟ್ ಗೆ ಜಯದ ಅಗತ್ಯವಿದೆ. ಸೋಲು ಯಾರ ಪಾಲಾಗುತ್ತದೆ ಎಂಬುದು ಕುತೂಹಲ.

Story first published: Sunday, January 31, 2021, 8:52 [IST]
Other articles published on Jan 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X