ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಟಾಪ್‌ 4 ಸ್ಥಾನಕ್ಕೆ ಕಣ್ಣಿಟ್ಟಿರುವ ಹೈಲ್ಯಾಂಡರ್ಸ್‌ಗೆ ಹೈದರಾಬಾದ್ ಸವಾಲು

By Isl Media
isl 2020 21: northeast united vs hyderabad fc preview

ಗೋವಾ, ಜನವರಿ 07: ತನ್ನ ಶ್ರೇಷ್ಠ ಲಯಕ್ಕೆ ಮರಳುವ ಪ್ರಯತ್ನದಲ್ಲಿರುವ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡ ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್‌ ಲೀಗ್‌ ಟೂರ್ನಿಯ 51ನೇ ಲೀಗ್‌ ಪಂದ್ಯದಲ್ಲಿ ಹೈದರಾಬಾದ್‌ ಎಫ್‌ಸಿ ಎದುರು ಗೆದ್ದು ಅಂಕಪಟ್ಟಿಯ ಅಗ್ರ ನಾಲ್ಕರ ಸ್ಥಾನಕ್ಕೇರುವ ಲೆಕ್ಕಾಚಾರದಲ್ಲಿದೆ. ಶುಕ್ರವಾರ ಇಲ್ಲಿನ ವಾಸ್ಕೊದಲ್ಲಿರುವ ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಟೂರ್ನಿಯಲ್ಲಿ ಅದ್ಭುತ ಆರಂಭ ಕಂಡಿದ್ದ ಹೈಲ್ಯಾಂಡರರ್ಸ್‌ ಬಿರುದಿನ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡ ಮೊದಲ ಆರು ಪಂದ್ಯಗಳಲ್ಲಿ ಅಜೇಯ ಗೆಲುವಿನ ಓಟ ನಡೆಸಿತ್ತು. ಆದರೆ, ನಂತರದ ಕೆಲ ಪಂದ್ಯಗಳಲ್ಲಿನ ಕಳಾಹೀನ ಪ್ರದರ್ಶನದ ಫಲವಾಗಿ ಅಂಕಪಟ್ಟಿಯ ಅಗ್ರ ನಾಲ್ಕರ ಸ್ಥಾನದಿಂದ ಹೊರಬೀಳುವಂತ್ತಾಯಿತು. ಜೆರಾಡ್ ನಸ್‌ ಮಾಗ್ದರ್ಶನದ ನಾರ್ತ್‌ಈಸ್ಟ್‌ ತಂಡಕ್ಕೆ ಈಗ ಕಳೆದ ಐದು ಪಂದ್ಯಗಳಲ್ಲಿ ಗೆಲುವಿನ ಬರ ಎದುರಾಗಿದ್ದು, ಎರಡು ಪಂದ್ಯಗಳಲ್ಲಿ ಸೋಲನ್ನೂ ಅನುಭವಿಸಿದೆ.

ಮುಂಬೈ ಎದುರು ಮುಗ್ಗರಿಸಿ ಹ್ಯಾಟ್ರಿಕ್‌ ಸೋಲಿನ ಆಘಾತಕ್ಕೊಳಗಾದ ಬಿಎಫ್‌ಸಿ!ಮುಂಬೈ ಎದುರು ಮುಗ್ಗರಿಸಿ ಹ್ಯಾಟ್ರಿಕ್‌ ಸೋಲಿನ ಆಘಾತಕ್ಕೊಳಗಾದ ಬಿಎಫ್‌ಸಿ!

ಅಂದಹಾಗೆ ಕಳೆದ ಆವೃತ್ತಿಯಲ್ಲಿ ನಾರ್ತ್‌ಈಸ್ಟ್‌ ಮತ್ತು ಹೈದರಾಬಾದ್‌ ಎಫ್‌ಸಿ ತಂಡಗಳು ಅಂಕಪಟ್ಟಿಯ ಕೊನೆಯ ಎರಡು ಸ್ಥಾನ ಪಡೆದಿದ್ದವು. ಆದರೆ, ಈ ಬಾರಿ ಎರಡೂ ತಂಡಗಳಿಗೆ ಪ್ಲೇಆಫ್ಸ್‌ ಅರ್ಹತೆ ಪಡೆಯುವ ಉತ್ತಮ ಅವಕಾಶವಿದೆ. 7ನೇ ಸ್ಥಾನದಲ್ಲಿರುವ ನಾರ್ತ್‌ಈಸ್ಟ್‌ ತಂಡ ಕೇವಲ ಒಂದು ಅಂಕದಿಂದ ಹೈದರಾಬಾದ್‌ಗಿಂತಲೂ ಹಿನ್ನಡೆಯಲ್ಲಿದೆ.

ಹೈದರಾಬಾದ್‌ 6ನೇ ಸ್ಥಾನ ಪಡೆದುಕೊಂಡಿದ್ದು, ಇದಕ್ಕೆ ಕಳೆದ ಪಂದ್ಯದಲ್ಲಿ ಚೆನ್ನೈಯಿನ್‌ ಎಫ್‌ಸಿ ಎದುರು ಸಿಕ್ಕಂತಹ 4-1 ಅಂತರದ ಭರ್ಜರಿ ಗೆಲುವು ಕಾರಣವಾಗಿದೆ. ತಂಡದ ಪ್ರಮುಖ ಸ್ಟ್ರೈಕರ್‌ ಅರಿದಾನೆ ಸ್ಯಾಂಟಾನ ಯಶಸ್ಸು ಗಳಿಸದೇ ಇದ್ದರೂ ಕೂಡ ಹೈದರಾಬಾದ್ ತಂಡ ಬ್ಯಾಕ್‌ ಟು ಬ್ಯಾಕ್‌ ಸೋಲಿನಿಂದ ಹೊರಬಂದು ಯಶಸ್ಸಿನ ಹಾದಿ ತುಳಿದಿದೆ.

ಆತ್ಮವಿಶ್ವಾಸದ ಅಲೆಯಲ್ಲಿರುವ ಹೈದರಾಬಾದ್‌ ಎಫ್‌ಸಿ ಎದುರು ಕಠಿಣ ಸವಾಲು ಎದುರಾಗುವುದನ್ನು ನಸ್‌ ಮನಗಂಡಿದ್ದಾರೆ. ಹೈದರಾಬಾದ್‌ ತಂಡದಲ್ಲಿ ಸ್ಯಾಂಟಾನ ಕಡೆಗಷ್ಟೇ ಗಮನ ನೀಡಿದರೆ ಸಾಲದು ಎಂಬುದು ನಾರ್ತ್‌ಈಸ್ಟ್‌ ತಂಡದ ಕೋಚ್‌ಗೆ ಚೆನ್ನಾಗಿಯೇ ತಿಳಿದಿದೆ, "ಚೆಂಡಿನ ನಿಯಂತ್ರಣ ಗಳಿಸುವಲ್ಲಿ ಹೈದರಾಬಾದ್‌ ತಂಡ ಉತ್ತಮವಾಗಿದೆ ಮತ್ತು ವಿವಿಧ ರೀತಿಯಲ್ಲಿ ಗೋಲ್‌ ಗಳಿಸುತ್ತಿದೆ ಎಂಬುದನ್ನು ಚೆನ್ನಾಗಿ ತಿಳಿದಿದ್ದೇವೆ," ಎಂದು ನಸ್‌ ಹೇಳಿಕೊಂಡಿದ್ದಾರೆ.

"ತಂಡ ವಿವಿಧ ರೀತಿಯಲ್ಲಿ ಗೋಲ್‌ ಗಳಿಸುತ್ತಿದೆ. ಆದರೂ ಸ್ಟ್ರೈಕರ್ ಅರಿದಾನೆ ಕಡೆಗೂ ಗಮನ ನೀಡಬೇಕು. ಏಕೆಂದರೆ ಗೋಲ್‌ ಗಳಿಸುವ ಅದ್ಭುತ ದಾಖಲೆ ಅವರದ್ದಾಗಿದೆ. ಈ ವರ್ಷವೂ ಅವರು 5 ಗೋಲ್‌ ಗಳಿಸಿದ್ದಾರೆ. ಆತ ದೊಡ್ಡ ಆಟಗಾರ, ಆದರೂ ಹೈದರಾಬಾದ್‌ ತಂಡದಲ್ಲಿ ದಾಳಿ ಮಾಡುವ ಹಲವು ಆಟಗಾರರಿದ್ದಾರೆ. ಹೀಗಾಗಿ ನಮ್ಮ ಶ್ರೇಷ್ಠ ಆಟವಾಡುವ ಮೂಲಕ ಅವಕಾಶಗಳನ್ನು ಸೃಷ್ಟಿಸಿ ಅದರಲ್ಲಿ ಯಶಸ್ಸು ಕಾಣುವ ಅಗತ್ಯವಿದೆ," ಎಂದಿದ್ದಾರೆ.

ಇನ್ನು ಹೈದರಾಬಾದ್‌ ತಂಡ ಕೋಚ್‌ ಮ್ಯಾನುಯೆಲ್‌ ಮಾರ್ಕಸ್‌ಗೆ ಇರುವ ಬಹುದೊಡ್ಡ ತಲೆಬಿಸಿ ಎಂದರೆ ತಂಡದ ಡಿಫೆನ್ಸ್‌ ವಿಭಾಗ. ತಂಡದ ಡಿಫೆನ್ಸ್‌ ವೈಫಲ್ಯದ ಕಾರಣ ಹೈದರಾಬಾದ್‌ ತಂಡ ಈವರ್ಷ ಒಟ್ಟು 11 ಗೋಲ್‌ಗಳನ್ನು ಬಿಟ್ಟುಕೊಟ್ಟಿದೆ. ಹೀಗಾಗಿ ನಾರ್ತ್‌ಈಸ್ಟ್‌ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ಮಾರ್ಕಸ್‌ ಎದುರು ನೋಡುತ್ತಿದ್ದಾರೆ.

ಐಎಸ್‌ಎಲ್: ಗೋವಾ ವಿರುದ್ಧವೂ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿ ಈಸ್ಟ್‌ ಬೆಂಗಾಲ್!ಐಎಸ್‌ಎಲ್: ಗೋವಾ ವಿರುದ್ಧವೂ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿ ಈಸ್ಟ್‌ ಬೆಂಗಾಲ್!

"ನಾರ್ತ್‌ಈಸ್ಟ್‌ ತಂಡದಲ್ಲಿ ಉತ್ತಮ ವ್ಯವಸ್ಥೆಯಿದೆ. ಫಲಿತಾಂಶಳ ಅನುಗುಣವಾಗಿ ಅವರು ಉತ್ತಮ ಲಯದಲ್ಲಿ ಇಲ್ಲ, ಆದರೆ, ದೊಡ್ಡ ತಂಡಗಳ ವಿರುದ್ಧ ಅವರು ಅಂಕ ಗಳಿಸಿದ್ದಾರೆ. ಅವರಲ್ಲಿ ಉತ್ತಮ ಆಟಗಾರರು ಮತ್ತು ಅತ್ಯುತ್ತಮ ಕೋಚ್‌ ಇದ್ದಾರೆ. ಜೊತೆಗೆ ಭವಿಷ್ಯದಲ್ಲಿ ಮಿಂಚಿವ ಹಲವು ಯುವ ಪ್ರತಿಭೆಗಳಿದ್ದಾರೆ. ಅವರ ಸ್ಟ್ರೈಲ್‌ ನನಗೆ ಇಷ್ಟ. ಅತ್ಯಂತ ವೇಗದ ಆಟ ಅವರದ್ದು. ಹೀಗಾಗಿ ಹೆಚ್ಚು ಅಪಾಯಕಾರಿ ತಂಡವಾಗಿದೆ," ಎಂದಿದ್ದಾರೆ.

ಈ ಪಂದ್ಯದಲ್ಲಿ ಯಾವುದೇ ತಂಡ ಗೆದ್ದರೂ ಆ ತಂಡಕ್ಕೆ ಅಂಕಪಟ್ಟಿಯ ಅಗ್ರ ನಾಲ್ಕರಲ್ಲಿ ಸ್ಥಾನ ಲಭ್ಯವಾಗಲಿದೆ ಎಂಬುದು ವಿಶೇಷ. ಈ ಮೂಲಕ ಜಮ್ಷೆದ್ಪುರ್ ಎಫ್‌ಸಿ ಮತ್ತು ಬೆಂಗಳೂರು ಎಫ್‌ಸಿ ತಂಡಗಳನ್ನು ಹಿಂದಿಕ್ಕಲಿವೆ.

Story first published: Friday, January 8, 2021, 10:14 [IST]
Other articles published on Jan 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X