ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ನಾರ್ಥ್‌ಈಸ್ಟ್ ಯುನೈಟೆಡ್ ಪ್ಲೇ ಆಫ್‌ಗೆ ಒಂದೇ ಮೆಟ್ಟಿಲು

By Isl Media
ISL 2020-21: NorthEast United vs Kerala Blasters, Preview, Team News, Timings

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನ ಕಳೆದ ಎಂಟು ಪಂದ್ಯಗಳಲ್ಲಿ ಸೋಲು ಕಂಡಿರದ ನಾರ್ಥ್ ಈಸ್ಟ್ ಯುನೈಟೆಡ್ ತಂಡ, ಕಠಿಣ ಪಂದ್ಯಗಳಲ್ಲೂ ಜಯ ಗಳಿಸಿ ಅದ್ಭುತ ಪ್ರದರ್ಶನ ತೋರಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಡ್ರಾ ಗಳಿಸಿದರೂ ಪ್ಲೇ ಆಫ್ ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಖಾಲೀದ್ ಜಮೀಲ್ ಕೋಚ್ ಜವಾಬ್ದಾರಿ ವಹಿಸಿಕೊಂಡಾಗಿನಿಂದ ನಾರ್ಥ್ ಈಸ್ಟ್ ಉತ್ತಮ ಪ್ರದರ್ಶಶನ ತೋರುತ್ತಿರುವುದು ಗಮನಾರ್ಹ.

ಕೇರಳ ತಂಡ ಕೊನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಆ ತಂಡವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಜಮೀಲ್ ತಮ್ಮ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. "ಕೇರಳ ಬ್ಲಾಸ್ಟರ್ಸ್ ತಂಡ ಬಲಿಷ್ಠ ಮತ್ತು ಉತ್ತಮ ತಂಡವಾಗಿದೆ. ಅವರಲ್ಲಿ ಪ್ರತಿಭಾವಂತ ಆಟಗಾರಿದ್ದಾರೆ. ನಾವು ಅದಕ್ಕೆ ಸಜ್ಜಾಗಿರಬೇಕು. ನಾವು ಈ ಪಂದ್ವಯವನ್ನು ಹಗುರವಾಗಿ ಪರಿಗಣಿಸಬಾರದು, ನಾವು ಹೋರಾಟ ನೀಡಬೇಕು,' ಎಂದು ಹೇಳಿದ್ದಾರೆ.

ಜಯಕ್ಕಾಗಿಯೇ ಸಿದ್ಧತೆ ನಡೆಸಿದ್ದೇವೆ

ಜಯಕ್ಕಾಗಿಯೇ ಸಿದ್ಧತೆ ನಡೆಸಿದ್ದೇವೆ

ನಾರ್ಥ್ ಈಸ್ಟ್ ಯುನೈಟೆಡ್ ತಂಡಕ್ಕೆ ಕೇವಲ ಒಂದು ಅಂಕ ಬೇಕಾಗಿರಬಹುದು, ಆದರೆ ಕೇವಲ ಅದಕ್ಕೆ ಮಾತ್ರ ಸೀಮಿತವಾಗಿರಬಾರದು ಎಂದು ಜಮೀಲ್ ಹೇಳಿದ್ದಾರೆ, "ಏನಾದರೂ ಆಗಲಿ ಎಂದು ನಾವು ಯೋಚಿಸುವುದಿಲ್ಲ. ನಾವು ಜಯಕ್ಕಾಗಿಯೇ ಸಿದ್ಧತೆ ನಡೆಸಿದ್ದೇವೆ. ಏನಾದರು ಆಗಲಿ ಎಂಬುದಕ್ಕೆ ಈಗ ಅವಕಾಶ ಇಲ್ಲ. ಉತ್ತಮ ರೀತಿಯಲ್ಲಿ ಹೋರಾಟ ನೀಡಿ ಮೂರು ಅಂಕಗಳನ್ನು ಗಳಿಸುವುದು ನಮ್ಮ ಗುರಿ," ಎಂದು ಜಮೀಲ್ ಹೇಳಿದ್ದಾರೆ.

ಅಜೇಯರಾಗಿರುವುದು ಗುರಿಯಲ್ಲ

ಅಜೇಯರಾಗಿರುವುದು ಗುರಿಯಲ್ಲ

ಜಮೀಲ್ ಹಿಂದೆಯೂ ಯಶಸ್ಸನ್ನು ಕಂಡ ಕೋಚ್. ಜಯ ಅಥವಾ ಡ್ರಾ ಗಳಿಸಿ ಒಂಬತ್ತು ಪಂದ್ಯಗಳಲ್ಲಿ ಅಜೇಯರಾಗಿರುವುದು ಗುರಿಯಲ್ಲ. ಪ್ಲೇ ಆಫ್ ತಲುಪಿದ ಮೊದಲ ಭಾರತೀಯ ಮ್ಯಾನೇಜರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಬೇಕು. "ಐಎಸ್ ಎಲ್ ದೊಡ್ಟ ಸವಾಲು ಇದ್ದಂತೆ. ಇಲ್ಲಿ ನಾವು ಸಾಮಾನ್ಯವಾಗಿ ಉತ್ತಮ ತಂಡಗಳೊಂದಿಗೆ ಇರುತ್ತೇವೆ. ಅಲ್ಲಿ ಉತ್ತಮ ಆಟಗಾರರು ಮತ್ತು ಕೋಚ್ ಇರುತ್ತಾರೆ, ಆದ್ದರಿಂದ ಇದು ವಿಭಿನ್ನವಾದ ಸವಾಲು," ಎಂದರು.

ಕೇರಳ ಜಯ ಗಳಿಸಿರಲಿಲ್ಲ

ಕೇರಳ ಜಯ ಗಳಿಸಿರಲಿಲ್ಲ

ಕಳೆದ ಏಳು ಪಂದ್ಯಗಳಲ್ಲಿ ಕೇರಳ ಜಯ ಗಳಿಸಿರಲಿಲ್ಲ. ತಂಡ ಈಗ ಕೇವಲ ಗೌರವಕ್ಕಾಗಿ ಆಡುತ್ತಿದೆ. ಇಶ್ಫಾಕ್ ಅಹಮ್ಮದ್ ಅವರು ಋತುವನ್ನು ಮುಗಿಸುವ ಉದ್ದೇಶದಿಂದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. " ಪಂದ್ಯಗಳು ಪ್ರತಿಯೊಬ್ಬರಿಗೂ ಸಮಾನವಾಗಿರುತ್ತದೆ. ನಮಗೆ ಪಂದ್ಯ ಗೆಲ್ಲಲೇಬೇಕಾಗಿದೆ. ಅವರಿಗೂ ಗೆಲ್ಲಬೇಕಾಗಿದೆ. ಅವರಿಗೆ ಗೆಲ್ಲಬೇಕಾದ ಒತ್ತಡವಿದೆ. ನಮಗೆ ಗೆದ್ದು ಋತುವನ್ನು ಗೌರವದೊಂದಿಗೆ ಮುಗಿಸಲು ಮತ್ತೊಂದು ಅವಕಾಶ," ಎಂದರು. "ನಾವು ಅವರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಯೋಚಿಸುವುದಿಲ್ಲ, ನಾವು ನಮಗಾಗಿ ಏನು ಮಾಡಬೇಕೆಂಬುದರ ಬಗ್ಗೆ ಯೋಚಿಸುತ್ತೇವೆ," ಎಂದರು.

Story first published: Friday, February 26, 2021, 3:54 [IST]
Other articles published on Feb 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X