ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಸಂಕಷ್ಟದಲ್ಲಿರುವ ಒಡಿಶಾಕ್ಕೆ ಮತ್ತೊಂದು ಕಠಿಣ ಸವಾಲು

By Isl Media
ISL 2020-21, Odisha FC vs ATK Mohun Bagan: Preview

ಗೋವಾ: ಈಗಾಗಲೇ ಸೋತು ಸುಣ್ಣವಾಗಿರುವ ಒಡಿಶಾ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನ 84ನೇ ಪಂದ್ಯದಲ್ಲಿ ಬಲಿಷ್ಠ ಎಟಿಕೆ ಮೋಹನ್ ಬಾಗನ್ ವಿರುದ್ಧ ಮತ್ತೊಂದು ಪಂದ್ಯವನ್ನಾಡಲಿದೆ. ನಾಳೆಯ ಪಂದ್ಯ ಒಡಿಶಾದ ಪಾಲಿಗೆ ಹೋರಾಟದ ಕೊನೆಯ ಪಂದ್ಯವೆಂದರೆ ತಪ್ಪಾಗಲಾರದು. 14 ಪಂದ್ಯಗಳ ನಂತರ ಕೇವಲ 1 ಜಯ ಗಳಿಸಿ ಕೇವಲ 8 ಅಂಕಗಳನ್ನು ಗಳಿಸಿರುವ ಒಡಿಶಾ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಒಡಿಶಾ ತಂಡ ಪ್ರತಿಯೊಂದು ಋತುವಿನಲ್ಲೂ ಸಂಕಷ್ಟವನ್ನು ಎದುರಿಸಿದೆ. ಕೇವಲ ಒಂದು ಪಂದ್ಯ ಗೆದ್ದಿರುವ ಒಡಿಶಾ ಈ ದಾಖಲೆಯನ್ನು ಹೊಂದಿರುವ ಏಕೈಕ ತಂಡವೆನಿಸಿದೆ. 21 ಗೋಲುಗಳನ್ನು ನೀಡಿರುವ ತಂಡ ಇಲ್ಲಿಯೂ ಅತಿ ಹೆಚ್ಚು ಗೋಲುಗಳನ್ನು ನೀಡಿರುವ ಎರಡನೇ ತಂಡವೆನಿಸಿದೆ. 11 ಗೋಲುಗಳನ್ನು ಗಳಿಸಿದೆ.

ಸತತ ಐದು ಪಂದ್ಯಗಳಲ್ಲಿ ಜಯ ಕಾಣದ ಒಡಿಶಾಕ್ಕೆ ಈಗ ಜಯವಲ್ಲದೆ ಬೇರೇನು ಬೇಕಾಗಿಲ್ಲ. ಇಲ್ಲವಾದಲ್ಲಿ ಪ್ಲೇ ಆಫ್ ಆಸೆ ಇಲ್ಲಿಗೆ ಅಧಿಕೃತವಾಗಿ ಕೊನೆಗೊಳ್ಳಲಿದೆ. ಗೆರಾರ್ಡ್ ಪೈಟಾನ್ ತಂಡದ ನೂತನ ಕೋಚ್ ಆಗಿ ಸೇರ್ಪಡೆಗೊಂಡಿದ್ದು ಇದರಿಂದಾಗಿ ತಂಡದ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ.

ಧನಾತ್ಮಕ ಲಕ್ಷಣಗಳನ್ನು ತೋರಿಸಿದ್ದೇವೆ

ಧನಾತ್ಮಕ ಲಕ್ಷಣಗಳನ್ನು ತೋರಿಸಿದ್ದೇವೆ

"ಕಳೆದ ಆರು ಪಂದ್ಯಗಳಲ್ಲಿ ನಾವು ಧನಾತ್ಮಕ ಲಕ್ಷಣಗಳನ್ನು ತೋರಿಸಿದ್ದೇವೆ. ಆದಷ್ಟು ಹೆಚ್ಚಿನ ಪಂದ್ಯಗಳನ್ನು ಗೆದ್ದು ತಂಡವನ್ನು ಮುನ್ನಡೆಸಬೇಕಿದೆ," ಎಂದು ಕೋಚ್ ಪೈಟಾನ್ ಹೇಳಿದ್ದಾರೆ. " ನಾವು ಆಡಿರುವ ಎಲ್ಲಾ ಪಂದ್ಯಗಳನ್ನು ಗಮನಿಸಿದಾಗ ಅಲ್ಪ ಅಂತರದಲ್ಲಿ ನಾವು ಜಯದಿಂದ ವಂಚಿತರಾಗಿದ್ದೇವೆ. ನಾವು ಪ್ರತಿಯೊಂದು ಪಂದ್ಯದಲ್ಲೂ ಒಂದು ಗೋಲು ಗಳಿಸಿರುತ್ತೇವೆ. ನಾವು ಖಂಡಿತವಾಗಿಯೂ ಜಯ ಗಳಿಸಲಿದ್ದೇವೆ," ಎಂದು ನೂತನ ಕೋಚ್ ಹೇಳಿದರು.
ತಂಡದ ನಾಯಕ ಸ್ಟೀವನ್ ಟೇಲರ್ ಅಮಾನತುಗೊಂಡಿರುವುದು ತಂಡವನ್ನು ಮತ್ತಷ್ಟು ಚಿಂತೆಗೆ ಈಡುಮಾಡಿದೆ. ಎರಡನೇ ಸ್ಥಾನದಲ್ಲಿರುವ ಬಾಗನ್ ತಂಡ ಅಗ್ರ ಸ್ಥಾನದಲ್ಲಿರುವ ಮುಂಬೈ ಸಿಟಿ ನಡುವಿನ ಅಂತರವನ್ನು ಕಡಿಮೆ ಮಾಡಲು ಯತ್ನಿಸಲಿದೆ.

ಜಯವನ್ನು ಕಸಿದುಕೊಂಡಿತ್ತು

ಜಯವನ್ನು ಕಸಿದುಕೊಂಡಿತ್ತು

ಈ ಋತುವಿನ ಹಿಂದಿನ ಪಂದ್ಯದಲ್ಲಿ ತಂಡಗಳು ಮುಖಾಮುಖಿಯಾಗಿದ್ದಾಗ, ರಾಯ್ ಕೃಷ್ಣ ಅಂತಿಮ ಕ್ಷಣದಲ್ಲಿ ಗಳಿಸಿದ ಗೋಲು ಜಯವನ್ನು ಕಸಿದುಕೊಂಡಿತ್ತು, ಸಾಕಷ್ಟು ಅವಕಾಶಗಳನ್ನು ನಿರ್ಮಿಸಿದ್ದ ತಂಡ ಮೋಹನ್ ಬಾಗನ್ ಪಾಳಯದಲ್ಲಿ ಆತಂಕವನ್ನು ನಿರ್ಮಿಸಿತ್ತು. ಎಟಿಕೆಎಂಬಿ ಕೋಚ್ ಆಂಟೋನಿಯೋ ಹಬ್ಬಾಸ್ ಈ ಬಾರಿ ಒಡಿಶಾ ಜಯದ ಹಸಿವಿನಲ್ಲಿದ್ದು ಬಾಕ್ಸ್ಟರ್ ಇಲ್ಲದೆ ತಂಡ ಹೋರಾಟ ನೀಡಲಿದೆ ಎಂದಿದ್ದಾರೆ.

ವಿಶೇಷವಾದ ಒಂದು ಹಂತದಲ್ಲಿದ್ದಾರೆ

ವಿಶೇಷವಾದ ಒಂದು ಹಂತದಲ್ಲಿದ್ದಾರೆ

"ನಾವು ಮುಂಬೈ ವಿರುದ್ಧ ಯಾವ ರೀತಿಯಲ್ಲಿ ಆಡಿದ್ದೇವೋ ಅದೇ ರೀತಿಯಲ್ಲಿ ಒಡಿಶಾ ವಿರುದ್ಧ ಆಡಲಿದ್ದೇವೆ. ಅವರು ಈಗ ವಿಶೇಷವಾದ ಒಂದು ಹಂತದಲ್ಲಿದ್ದಾರೆ. ಏಕೆಂದರೆ ಕೋಚ್ ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ. ಕೋಚ್ ಬದಲಾಗಲಿ ಅಥವಾ ತಂಡ ಬದಲಾಗಲಿ ಅಲ್ಲಿ ಸ್ಫೂರ್ತಿ ಇಮ್ಮಡಿಗೊಳ್ಳುತ್ತದೆ," ಎಂದರು.

Story first published: Saturday, February 6, 2021, 2:35 [IST]
Other articles published on Feb 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X