ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಜಯದ ಅನಿವಾರ್ಯತೆಯಲ್ಲಿ ಒಡಿಶಾ ಮತ್ತು ಜೆಮ್ಷೆಡ್ಪುರ

By Isl Media
ISL 2020-21: Odisha FC vs Jamshedpur FC: Preview, Team News

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಹೆಚ್ಚಿನ ತಂಡಗಳು ಅಂತಿಮ ನಾಲ್ಕನೇ ಸ್ಥಾನ ತಲಪುವ ತವಕದಲ್ಲಿವೆ. ಆದರೆ ಒಡಿಶಾ ಎಫ್ ಸಿ ತಂಡದ ಕೋಚ್ ಸ್ಟುವರ್ಟ್ ಬಾಕ್ಸ್ಟರ್ ಪಡೆ ಅಂಕಪಟ್ಟಿಯಲ್ಇ ಕೊನೆಯ ಸ್ಥಾನದಲ್ಲಿದ್ದು, ಬಹಳ ಅಂತರವನ್ನು ಕಾಯ್ದುಕೊಂಡಿದೆ. 8 ಅಂಕಗಳನ್ನು ಗಳಿಸಿರುವ ತಂಡಕ್ಕೆ ಅಂತಿನ ನಾಲ್ಕರಲ್ಲಿ ಸ್ಥಾನ ಪಡೆಯಲು ಇನ್ನೂ 13 ಅಂಕಗಳು ಬೇಕಾಗಿವೆ, ಇದನ್ನೆ ಗಮನದಲ್ಲಿರಿಸಕೊಂಡಿರುವ ತಂಡ ಸೋಮವಾರ ಜಿಎಂಸಿ ಕ್ರೀಡಾಣಗಣದಲ್ಲಿ ಜೆಮ್ಷೆಡ್ಪುರ ತಂಡದ ವಿರುದ್ಧ ಮತ್ತೊಂದು ಹೋರಾಟಕ್ಕೆ ಮುಂದಾಗಿದೆ. ಇಲ್ಲಿ ಗುರಿಗಿಂತ ಗುರಿ ತಲಪುವ ಹಾದಿಯೇ ಮುಖ್ಯವಾಗಿದೆ.

"ನಾವು ಎರಡು ಮೂರು ವಾರಗಳ ತನಕ ಪ್ಲೇ ಆಫ್ ಬಗ್ಗೆ ಮಾತನಾಡುವುದಿಲ್ಲ. ನಾವು ಮುಂದಿನ ಪಂದ್ಯದ ಬಗ್ಗೆ ಮಾತನಾಡುತ್ತಿದ್ದೇವೆ. ನಾವು ಜಯವೊಂದನ್ನು ದಾಖಲಿಸುತ್ತೇವೆ ಎಂಬ ನಂಬಿಕೆಯನ್ನು ಹೊಂದಿದ್ದೇವೆ. ಇದಕ್ಕಾಗಿ ನಾವು ಋತು ಆರಂಭವಾದಾಗಿನಿಂದ ಯತ್ನಿಸುತ್ತಿದ್ದೇವೆ," ಎಂದು ಬಾಕ್ಸ್ಟರ್ ಹೇಳಿದ್ದಾರೆ.

ಕಳಿಂಗ ವಾರಿಯರ್ಸ್ ಗೆದ್ದಿರುವುದು ಕೇವಲ ಒಂದು ಪಂದ್ಯ ಹಾಗೂ ಏಳು ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ. ಈ ಋತುವಿನಲ್ಲಿ ಮಾಡಿರುವುದೇ ಒಂದು ಕ್ಲೀನ್ ಶೀಟ್. ಆದರೆ ಉತ್ತಮ ತಂಡಗಳ ವಿರುದ್ಧ ಎರಡು ಡ್ರಾ ಸಾಧಿಸಿರುವುದು ಇತ್ತೀಚಿನ ಭರವಸೆಯ ಸಾಧನೆ. ಸಿಡಿದೆದ್ದು ಮುಂದಿನ ಪಂದ್ಯಗಳಲ್ಲಿ ಜಯ ದಾಖಲಿಸಿ ಎಂದು ಬಾಕ್ಸ್ಟರ್ ತಮ್ಮ ತಂಡಕ್ಕೆ ಕರೆ ನೀಡಿದ್ದಾರೆ.

ಕಳೆದ ಸಾರಿ ಪಂದ್ಯ ಡ್ರಾ

ಕಳೆದ ಸಾರಿ ಪಂದ್ಯ ಡ್ರಾ

ಕಳೆದ ಬಾರಿ ಇತ್ತಂಡಗಳು ಮುಖಾಮುಖಿಯಾಗಿದ್ದಾಗ ಪಂದ್ಯ ರೋಚಕವಾಗಿ 2-2 ಗೋಲುಗಳಿಂದ ಡ್ರಾಗೊಂಡಿತ್ತು. ಸೋಮವಾರ ಒಡಿಶಾ ಮತ್ತೊಂದು ಕಠಿಣ ಸವಾಲು ಎದುರಿಸಲಿದೆ ಎಂದು ಕೋಚ್ ಹೇಳಿದ್ದಾರೆ. "ಓವನ್ ಕೊಯ್ಲ್ ಅವರ ತಂಡ ಉತ್ತಮ ಸ್ಪರ್ಧೆಯನ್ನು ನೀಡುವ ತಂಡ. ಅವರು ಯಾವುದೇ ಕಾರಣಕ್ಕೂ ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವವರಲ್ಲ, ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ. ಕಠಿಣ ಪಂದ್ಯಕ್ಕಿಂತ ಬೇರೇನನ್ನೂ ನಾನು ನಿರೀಕ್ಷಿಸುವುದಿಲ್ಲ," ಎಂದು ಬಾಕ್ಸ್ಟರ್ ಹೇಳಿದ್ದಾರೆ.

ಜೆಮ್ಷೆಡ್ಪುರ ಜಯ ಕಂಡಿಲ್ಲ

ಜೆಮ್ಷೆಡ್ಪುರ ಜಯ ಕಂಡಿಲ್ಲ

ಜೆಮ್ಷೆಡ್ಪುರ ಕೂಡಾ ಇದೇ ಪರಿಸ್ಥಿತಿಯಲ್ಲಿದೆ. ಒಡಿಶಾ ಕಳೆದ ನಾಲ್ಕು ಪಂದ್ಯಗಳಲ್ಲಿ ಅಂಕ ಕಳೆದುಕೊಂಡಿದ್ದರೆ, ಕಳೆದ ಐದು ಪಂದ್ಯಗಳಿಂದ ಜೆಮ್ಷೆಡ್ಪುರ ಜಯ ಕಂಡಿಲ್ಲ. ಅಲ್ಲದೆ ಮೂರು ಪಂದ್ಯಗಳಲ್ಲಿ ಗೋಲನ್ನೇ ಗಳಿಸಿರಲಿಲ್ಲ. ನಾಲ್ಕನೇ ಸ್ಥಾನವನ್ನು ಗುರಿಯಾಗಿಸಿಕೊಂಡಿರುವ ತಂಡಕ್ಕೆ ಜಯದ ಅಗತ್ಯ ಇದೆ ಎಂದು ಕೋಚ್ ಕೊಯ್ಲ್ ಹೇಳಿದ್ದಾರೆ. "ನಾವು ಉಳಿದಿರುವ ಪಂದ್ಯಗಳಲ್ಲಿ ಜಯ ಗಳಿಸಬೇಕಾಗಿದೆ, ಇದರಿಂದ ಏನಾದರೂ ಬದಲಾವಣೆ ಆಗಬಹುದು. ಒಂದು ಅಂಕವನ್ನು ಮೂರು ಅಂಕಗಳಾಗಿ ಬದಲಾಯಿಸಬೇಕಾಗಿದೆ. ಪಂದ್ಯದಲ್ಲಿ ಜಯ ಗಳಿಸಿದರೆ ಅಂತಿಮ ನಾಲ್ಕರ ಹಂತ ತಲುಪಬಹುದು ಎಂಬುದನ್ನು ನಾವು ಕಳೆದ ವರ್ಷ ತೋರಿಸಿದ್ದೇವೆ. ನಮಗೆ ಒಡಿಶಾ ಸೇರಿಂದಂತೆ ಆರು ಪ್ರಮುಖ ಪಂದ್ಯಗಳಿವೆ ಅವುಗಳಲ್ಲಿ ಜಯ ಕಾಣಬೇಕಾದ ಅಗತ್ಯ ಇದೆ," ಎಂದು ಹೇಳಿದರು.

ಎರಡಕ್ಕೂ ಜಯವೇ ಗುರಿ

ಎರಡಕ್ಕೂ ಜಯವೇ ಗುರಿ

"ಒಡಿಶಾ ತಂಡದಲ್ಲಿ ಕೆಲವು ಉತ್ತಮ ಆಟಗಾರರಿದ್ದಾರೆ. ಫಾರ್ವರ್ಡ್ ಆಟಗಾರರನ್ನು ಗಮನಿಸಿದಾಗ ಅವರು ಗೋಲು ಗಳಿಸಬಲ್ಲ ಆಟಗಾರರು. ಎರಡೂ ತಂಡಗಳು ಜಯವನ್ನೇ ಗುರಿಯಾಗಿಸಿಕೊಂಡಿರುವುದರಿಂದ ನಾಳೆಯ ಪಂದ್ಯ ಕುತೂಹಲದಿಂದ ಕೂಡಲಿದೆ," ಎಂದರು.

Story first published: Monday, February 1, 2021, 16:51 [IST]
Other articles published on Feb 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X