ಐಎಸ್‌ಎಲ್: ಈಸ್ಟ್ ಬೆಂಗಾಲ್ ವಿರುದ್ಧವೂ ನಾರ್ಥ್ ಈಸ್ಟ್ ಬೆಸ್ಟ್

By Isl Media

ಗೋವಾ, ಫೆಬ್ರವರಿ 23: ಸುಹೈರ್ ವಾದಕೆಪೀದಿಕಾ (48ನೇ ನಿಮಿಷ) ಹಾಗೂ ಸಾರ್ಥಕ್ ಗಾವ್ಳಿ ನೀಡಿದ ಉಡುಗೊರೆ ಗೋಲು (55ನೇ ನಿಮಿಷ) ಇದರ ನೆರವಿನಿಂದ ಎಸ್ ಸಿ ಈಸ್ಟ್ ಬೆಂಗಾಲ್ ತಂಡವನ್ನು 2-1 ಗೋಲಿನಿಂದ ಮಣಿಸಿದ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಎರಡನೇ ಬಾರಿಗೆ ಪ್ಲೇ ಆಫ್ ತಲುಪಲು ಇನ್ನೊಂದೇ ಹೆಜ್ಜೆ ಬಾಕಿ. ಉಡುಗೊರೆ ಗೋಲು ನೀಡಿದರೂ ಸಾರ್ಥಕ್ ಗಾವ್ಳಿ 87ನೇ ನಿಮಿಷದಲ್ಲಿ ಹೆಡರ್ ಮೂಲಕ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆಮಾಡಿತು. ಈ ಜಯದೊಂದಿಗೆ ನಾರ್ಥ್ ಈಸ್ಟ್ ಯುನೈಟೆಡ್ ನಾಲ್ಕನೇ ಸ್ಥಾನ ತಲುಪಿತು. ಹೈದರಾಬಾದ್ ಮತ್ತೆ ಐದನೇ ಸ್ಥಾನಕ್ಕೆ ಕುಸಿಯಿತು.

ಗೋಲಿಲ್ಲದ ಪ್ರಥಮಾರ್ಧ: ಈಸ್ಟ್ ಬೆಂಗಾಲ್ ಗೋಲ್ ಕೀಪರ್ ಮಿರ್ಶಾದ್ ಮಿಚು ಉತ್ತಮ ರೀತಿಯಲ್ಲಿ ಎರಡು ಗೋಲುಗಳನ್ನು ತಡೆಯುವುದರೊಂದಿಗೆ ಮೊದಲಾರ್ಧದಲ್ಲಿ ನಾರ್ಥ್ ಈಸ್ಟ್ ಗೆ ಮುನ್ನಡೆ ಕಾಣಲು ಸಾಧ್ಯವಾಗಲಿಲ್ಲ. ಈಸ್ಟ್ ಬೆಂಗಾಲ್ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿತ್ತಾದರೂ ದೊಡ್ಡ ಯಶಸ್ಸು ಸಾಧ್ಯವಾಗಲಿಲ್ಲ.

'ಆರ್ ಅಶ್ವಿನ್ ವೈಟ್ ಬಾಲ್ ಕ್ರಿಕೆಟ್‌ನ ಭಾಗವಾಗದಿರುವುದು ದುರದೃಷ್ಟಕರ'

ನಾರ್ಥ್ ಈಸ್ಟ್ ಗೆ ನಾಲ್ಕನೆ ಸ್ಥಾನದ ಗುರಿ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಉಳಿದಿರುವುದು ಈಗ ಕೇವಲ ಏಳು ಪಂದ್ಯಗಳು. ಐದನೇ ಸ್ಥಾನದಲ್ಲಿರುವ ನಾರ್ಥ್ ಈಸ್ಟ್ ಈಗಾಗಲೇ ಪ್ಲೇ ಆಫ್ ಸ್ಪರ್ಧೆಯಿಂದ ವಂಚಿತವಾಗಿರುವ ಎಸ್ ಸಿ ಈಸ್ಟ್ ಬೆಂಗಾಲ್ ವಿರುದ್ಧ ಸೆಣಸಲಿದೆ. ಇಲ್ಲಿ ಜಯ ಗಳಿಸಿದರೆ ನಾರ್ಥ್ ಈಸ್ಟ್ ನಾಲ್ಕನೇ ಸ್ಥಾನ ತಲುಪಲಿದೆ. ಗೋಲ್ಡ್ ಬ್ರಿಗೇಡ್ ಕೇಲವ ಗೌರವಕ್ಕಾಗಿ ಆಡಲಿದೆ. ಮೊದಲ ಬಾರಿಗೆ ಇಂಡಿಯನ್ ಸೂಪರ್ ಲೀಗ್ ನಲ್ಲಿ ಸ್ಪರ್ಧಿಸಿದ ಈಸ್ಟ್ ಬೆಂಗಾಲ್ ಗೆದ್ದಿರುವುದು ಮೂರು ಪಂದ್ಯಗಳಲ್ಲಿ ಮಾತ್ರ. ಕೊನೆಯ ಪಂದ್ಯಗಳಲ್ಲಿ ಗೆದ್ದು ಗೌರವದೊಂದಿಗೆ ನಿರ್ಗಮಿಸುವುದು ತಂಡದ ಸದ್ಯದ ಗುರಿ.

18 ಪಂದ್ಯಗಳಲ್ಲಿ ಎದುರಾಳಿ ತಂಡಕ್ಕೆ 25 ಗೋಲುಗಳನ್ನು ಗಳಿಸಲು ಅವಕಾಶ ಮಾಡಿಕೊಟ್ಟ ಈಸ್ಟ್ ಬೆಂಗಾಲ್, 16 ಗೋಲುಗಳನ್ನು ಗಳಿಸಿದೆ. ಇದು ಋತುವಿನಲ್ಲಿಯೇ ತಂಡವೊಂದು ಗಳಿಸಿರುವ ಅತಿ ಕಡಿಮೆ ಗೋಲಾಗಿದೆ. ಹಿಂದೆ ಇತ್ತಂಡಗಳು ಮುಖಾಮುಖಿಯಾದಾಗ ನಾರ್ಥ್ ಈಸ್ಟ್ 2-0 ಗೋಲುಗಳಿಂದ ಜಯ ಗಳಿಸಿತ್ತು. ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರು ಡ್ರಾ ಕಂಡಿರುವ ನಾರ್ಥ್ ಈಸ್ಟ್ ಗೆ ಇಲ್ಲಿ ಜಯ ಗಳಿಸಲೇಬೇಕಾಗಿದೆ. ಖಾಲೀದ್ ಜಮೀಲ್ ಕೋಚ್ ಜವಾಬ್ದಾರಿ ವಹಿಸಿಕೊಂಡ ನಂತರ ನಾರ್ಥ್ ಈಸ್ಟ್ ಸೋಲು ಕಂಡಿರಲಿಲ್ಲ. ಈಗ ಉಳಿದಿರುವ ಎರಡು ಪಂದ್ಯಗಳಲ್ಲಿ ತಂಡ ಜಯ ಗಳಿಸಬೇಕಾಗಿದೆ. ಅಂಕ ಕಳೆದುಕೊಂಡರೆ ಇತರ ತಂಡಗಳ ಫಲಿತಾಂಶವನ್ನು ಆಧರಿಸಬೇಕಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, February 23, 2021, 22:21 [IST]
Other articles published on Feb 23, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X