ಮೋಹನ್ ಬಾಗನ್ ವಿರುದ್ಧ ಅದೃಷ್ಟ ಪರೀಕ್ಷಿಸಲಿರುವ ನಾರ್ಥ್ ಈಸ್ಟ್

By Isl Media

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಚ್ಚರಿಯ ಫಲಿತಾಂಶಗಳನ್ನು ಕಂಡು ಪ್ಲೇ ಆಫ್ ತಲುಪಿರುವುದು ನಾರ್ಥ್ ಈಸ್ಟ್ ಯುನೈಟೆಡ್ ಎಫ್ ಸಿ. ಎಲ್ಲ ಅಡೆತಡೆಗಳ ನಡುವೆಯೂ ಟೀಕಿಸುವವರಿಗೆ ಜಯದ ಮೂಲಕ ಉತ್ತರಕೊಟ್ಟ ತಂಡ ನಾರ್ಥ್ ಈಸ್ಟ್. ಲೀಗ್ ಒಂದು ಹಂತದಲ್ಲಿ ವೈಫಲ್ಯದ ಹಾದಿ ಹಿಡಿದಿದ್ದ ತಂಡ ಇದ್ದಕ್ಕಿದ್ದಂತೆ ಪ್ರಮುಖ ಪಂದ್ಯಗಳನ್ನು ಗೆದ್ದು, ಎರಡನೇ ಬಾರಿಗೆ ಪ್ಲೇ ಆಫ್ ತಲುಪಿತು.

ಖಾಲೀದ್ ಜಮೀಲ್ ಅವರ ಪಡೆ ಕಳೆದ ಒಂಬತ್ತು ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ. ಅದರಲ್ಲಿ ಆರು ಜಯ ಮತ್ತು ಮೂರು ಡ್ರಾ ಸೇರಿದೆ. ಶನಿವಾರ ಬಲಿಷ್ಠ ಎಟಿಕೆ ಮೋಹನ್ ಬಾಗನ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜಮೀಲ್ ಪಡೆ ಮತ್ತೊಮ್ಮೆ ತನ್ನ ನೈಜ ಸಾಮರ್ಥ್ಯವನ್ನು ತೋರಿಸಲು ಸಜ್ಜಾಗಿದೆ.

ಈ ಎಲ್ಲ ಯಶಸ್ಸಿನ ಫಲ ಆಟಗಾರರಿಗೆ ಸೇರಿದ್ದು ಎಂದು ಕೋಚ್ ಹೇಳಿದ್ದಾರೆ. " ಎಲ್ಲ ಆಟಗಾರರೂ ಕಠಿಣ ಶ್ರಮ ವಹಿಸಿದ್ದಾರೆ. ಅವರಿಂದಾಗಿ ನಾವು ಇಲ್ಲಿಗೆ ತಲುಪಿದ್ದೇವೆ. ಒಂಬತ್ತು ಪಂದ್ಯಗಳ ಬಗ್ಗೆ ನಾನು ಯೋಚಿಸುವುದಿಲ್ಲ. ಆರಂಭದಿಂದಲೂ ಹುಡುಗರು ಕಠಿಣ ಶ್ರಮತೋರಿದ್ದಾರೆ. ನಾನು ಇಲ್ಲಿ ಕೋಚ್ ಆಗಿ ಇರುವುದಕ್ಕೆ ಹೆಮ್ಮೆ ಪಡುತ್ತೇನೆ," ಎಂದರು.

ಸಾಮರ್ಥ್ಯ ಒಂದೇ ರೀತಿಯದ್ದು

ಸಾಮರ್ಥ್ಯ ಒಂದೇ ರೀತಿಯದ್ದು

ಎರಡು ತಂಡಗಳು ಪರಸ್ಪರ ಹೋರಾಡಲಿದ್ದರೂ ಇತ್ತಂಡಗಳ ಶೈಲಿ ಮತ್ತು ಸಾಮರ್ಥ್ಯ ಒಂದೇ ರೀತಿಯದ್ದು. ಎರಡೂ ತಂಡಗಳು ಎದುರಾಳಿಗಳ ಜಯದ ಹಾದಿಯನ್ನು ಕಠಿಣಗೊಳಿಸುವವು. ಪ್ರತಿ ಬಾರಿಯೂ ಪರ್ವತಪ್ರದೇಶದ ಈ ತಂಡ ಆರಂಭದಲ್ಲಿ ಮುನ್ನಡೆದರೆ ಅದನ್ನು ಸೋಲಿಸುವುದು ಕಷ್ಟ. 13 ಪಂದ್ಯಗಳಲ್ಲಿ ಆರಂಭದಲ್ಲಿ ಮುನ್ನಡೆದ ತಂಡ ಎಂಟು ಪಂದ್ಯಗಳಲ್ಲಿ ಜಯ ಗಳಿಸಿದೆ. ಉಳಿದ ಪಂದ್ಯಗಳಲ್ಲಿ ಅಂಕ ಹಂಚಿಕೊಂಡಿದೆ. ಅದೇ ರೀತಿ ಬಾಗನ್ ತಂಡ 14 ಬಾರಿ ಆರಂಭಿಕ ಮುನ್ನಡೆ ಗಳಿಸಿ 12 ಪಂದ್ಯಗಳಲ್ಲಿ ಜಯ ಗಳಿಸಿ 2 ಪಂದ್ಯಗಳಲ್ಲಿ ಡ್ರಾ ಸಾಧಿಸಿತ್ತು. ಮೊದಲು ಗೋಲು ಗಳಿಸುವುದ ಪ್ರಾಮುಖ್ಯತೆಯನ್ನು ಜಮೀಲ್ ಚೆನ್ನಾಗಿ ಬಲ್ಲರು. " ನಾವು ಎಟಿಕೆ ಮೋಹನ್ ಬಾಗನ್ ಅಂಥ ಬಲಿಷ್ಠ ತಂಡದ ವಿರುದ್ಧ ಆಡಲಿದ್ದೇವೆ. ಅವರ ಡಿಫೆನ್ಸ್ ಮತ್ತು ಅಟ್ಯಾಕ್ ಎರಡೂ ಉತ್ತಮವಾಗಿದೆ. ಮೊದಲ ಪಂದ್ಯ ಪ್ರಮುಖವಾಗಿರುವುದರಿಂದ ನಾವು ಬಹಳ ಎಚ್ಚರಿಕೆ ವಹಿಸಬೇಕು. ಇದು ಲೀಗ್ ನ ಅತ್ಯಂತ ಕಠಿಣ ಪಂದ್ಯವಾಗಿದೆ. ಆದ್ದರಿಂದ ನಾವು ಉತ್ತಮ ರೀತಿಯಲ್ಲಿ ಸಜ್ಜಾಗಬೇಕು ಮತ್ತು ಬಲಿಷ್ಠರಾಗಿರಬೇಕು," ಎಂದು ಜಮೀಲ್ ಹೇಳಿದರು.

ಇತಿಹಾಸವನ್ನು ಗಮನಿಸಬೇಕು

ಇತಿಹಾಸವನ್ನು ಗಮನಿಸಬೇಕು

ನಾರ್ಥ್ ಈಸ್ಟ್ ತಂಡ ಇತಿಹಾಸವನ್ನು ಗಮನಿಸಬೇಕು. ಬಗಾನ್ ಕೋಚ್ ಆಂಟೋನಿಯೊ ಹಬ್ಬಾಸ್ ಐಎಸ್ ಎಲ್ ಸೆಮಿಫೈನಲ್ ನ ಮೊದಲ ಲೆಗ್ ನಲ್ಲಿ ಮೂರು ಬಾಗಿ ಜಯ ಕಂಡಿರಲಿಲ್ಲ. 2 ಸೋಲು ಹಾಗೂ 1 ಡ್ರಾ. "ಅದು ಲಾಭವೆಸುವ ವಿಷಯ, ಆದರೆ ನಾವು ನಾಳೆಯ ಪಂದ್ಯದ ಬಗ್ಗೆ ಯೋಚಿಸುತ್ತಿದ್ದೇವೆ. ಇದು ನಮ್ಮ ಮೊದಲ ಪಂದ್ಯ ಆದ್ದರಿಂದ ಎಚ್ಚರಿಕೆ ವಹಿಸಬೇಕಿದೆ," ಎಂದರು.

ಪ್ರಶಸ್ತಿ ಗೆಲ್ಲುವ ಫೇವರಿಟ್

ಪ್ರಶಸ್ತಿ ಗೆಲ್ಲುವ ಫೇವರಿಟ್

ಕೊನೆಯ ಮೂರು ಪಂದ್ಯಗಳ ಫಲಿತಾಂಶ ಎಟಿಕೆ ಮೋಹನ್ ಬಾಗನ್ ತಂಡ ಲೀಗ್ ವಿನ್ನರ್ಸ್ ಶೀಲ್ಡ್ ಕಳೆದುಕೊಳ್ಳುವಂತೆ ಮಾಡಿತು. ಆದರೆ ಕ್ಲಬ್ ಈಗಲೂ ಐಎಸ್ ಎಲ್ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದೆ. "ನಾರ್ಥ್ ಈಸ್ಟ್ ಯುನೈಟೆಡ್ ತಂಡ ಈ ಬಾರಿಯ ಐಎಸ್ಎಲ್ ನಲ್ಲಿ ಉತ್ತಮ ಪ್ರದರ್ಶನ ತೋರಿದೆ. ಡಿಫೆನ್ಸ್, ಮಿಡ್ ಫೀಲ್ಡ್ ಮತ್ತು ಅಟ್ಯಾಕ್ ನಲ್ಲಿ ಉತ್ತಮ ಆಟಗಾರರನ್ನು ಹೊಂದಿರುವುದರಿಂದ ಅದು ಅತ್ಯಂತ ಕಠಿಣ ತಂಡವೆನಿಸಿದೆ. ಪಿಚ್ ನಲ್ಲಿ ಅವರು 100 ಪ್ರತಿಶತ ಪ್ರದರ್ಶನ ತೋರುತ್ತಾರೆ," ಎಂದು ಬಾಗನ್ ಕೋಚ್ ಹಬ್ಬಾಸ್ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, March 6, 2021, 11:11 [IST]
Other articles published on Mar 6, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X