ಐಎಸ್‌ಎಲ್: ಸಮಬಲ ಸಾಧಿಸಿದ ಗೋವಾ ಎಫ್‌ಸಿ, ಮುಂಬೈ ಎಫ್‌ಸಿ

By Isl Media

ಗೋವಾ, ಮಾರ್ಚ್ 5: ಹೀರೊ ಇಂಡಿಯನ್ ಸೂಪರ್ ಲೀಗ್ 7ನೇ ಆವೃತ್ತಿಯ 1ನೇ ಲೆಗ್ ನ ಮೊದಲ ಸೆಮಿಫೈನಲ್ ಪಂದ್ಯ 2-2 ಗೋಲುಗಳಿಂದ ಡ್ರಾಗೊಂಡಿದೆ. ಮುಂಬೈ ಸಿಟಿ ಎಫ್ ಸಿ ಹಾಗೂ ಗೋವಾ ಎಫ್ ಸಿ ತಂಡಗಳು ಸಮಬಲದ ಹೋರಾಟ ನೀಡಿದ ಕಾರಣ ಮುಂದಿನ ಮುಖಾಮುಖಿ ಹೆಚ್ಚು ಪ್ರಾಮುಖ್ಯತೆ ಪಡೆಯಲಿದೆ.

ಮುಂಬೈ ಸಿಟಿ ಎಫ್ ಸಿ ಪರ ಹ್ಯುಗೋ ಬೌಮಾಸ್ (38) ಹಾಗೂ ಮೌರ್ಥದಾ ಫಾಲ್ (62ನೇ ನಿಮಿಷ) ಗೋಲು ಗಳಿಸಿದರೆ, ಎಫ್ ಸಿ ಗೋವಾ ಪರ ಐಗರ್ ಆಂಗುಲೋ (20ನೇ ನಿಮಿಷ) ಹಾಗೂ ಸೇವಿಯರ್ ಗಾಮಾ (59ನೇ ನಿಮಿಷ) ಗಳಿಸಿದ ಗೋಲು ಪಂದ್ಯವನ್ನು 2-2 ಗೋಲಿನಿಂದ ಸಮಬಲಗೊಳಿಸಿತು. 85ನೇ ನಿಮಿಷದಲ್ಲಿ ಐಗರ್ ಆಂಗುಲೋ ಗೋಲು ಗಳಿಸಿದ್ದರು, ಆದರೆ ಚೆಂಡು ಕೈಗೆ ತಗಲಿದ ಕಾರಣ ರೆಫರಿ ಅದು ಅಸಮರ್ಪಕ ಗೋಲೆಂದು ಘೋಷಿಸಿದರು.

ಸಮಬಲದ ಹೋರಾಟ

ಸಮಬಲದ ಹೋರಾಟ

ಗೋವಾ ತಂಡ ಪೆನಾಲ್ಟಿ ಮೂಲಕ ಗೋಲು ಗಳಿಸಿ ಆರಂಭಿಕ ಮುನ್ನಡೆ ಕಂಡಿತು. ನಂತರ ಮುಂಬೈ ತಕ್ಕ ತಿರುಗೇಟು ನೀಡಿ ಸಮಬಲ ಸಾಧಿಸಿತು. ಇದರೊಂದಿಗೆ ಸೆಮಿಫೈನಲ್ ಮೊದಲ ಲೆಗ್ ನ ಪ್ರಥಮಾರ್ಧ 1-1ರಲ್ಲಿ ಸಮಬಲಗೊಂಡಿತು. 20ನೇ ನಿಮಿಷದಲ್ಲಿ ಐಗರ್ ಆಂಗುಲೋ ಗಳಿಸಿದ ಗೋಲಿನಿಂದ ಗೋಲಿನಿಂದ ಗೋವಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಪೆನಾಲ್ಟಿ ವಲಯದಲ್ಲಿ ಮುಂಬೈ ಆಟಗಾರರು ಮಾಡಿದ ಪ್ರಮಾದ ಗೊವಾದ ಮುನ್ನಡೆಗೆ ಅವಕಾಶ ಮಾಡಿಕೊಟ್ಟಿತು. ಆ ನಂತರ ಗೋವಾ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿತ್ತು. ಆದರೆ ಮುಂಬೈಯ ಗೋಲು ಗಳಿಕೆಯನ್ನು ನಿಂತ್ರಿಸಲು ಗೋವಾದ ಡಿಫೆನ್ಸ್ ವಿಭಾಗಕ್ಕೆ ಸಾಧ್ಯವಾಗಲಿಲ್ಲ. 38ನೇ ನಿಮಿಷದಲ್ಲಿ ಹ್ಯುಗೋ ಬೌಮಾಸ್ ಗಳಿಸಿದ ಗೋಲು ಪಂದ್ಯವನ್ನು 1-1ರಲ್ಲಿ ಸಮಬಲಗೊಳಿಸಿತು. ನಂತರ ಗೋವಾ ಹಾಗೂ ಮುಂಬೈ ತಂಡಗಳಿಗೆ ಅವಕಾಶ ಸಿಕ್ಕರೂ ಅದು ಗೋಲಾಗಿ ರೂಪುಗೊಳ್ಳಲಿಲ್ಲ. ಈಗ ಕುತೂಹಲ ದ್ವಿತಿಯಾರ್ಧಕ್ಕೆ ತಲುಪಿತು.

ಕುತೂಹಲದ ಸೆಮಿಫೈನಲ್ 1

ಕುತೂಹಲದ ಸೆಮಿಫೈನಲ್ 1

ಹೀರೋ ಇಂಡಿಯನ್ ಸೂಪರ್ ಲೀಗ್ ನ ಲೀಗ್ ಹಂತದ ಪಂದ್ಯಗಳು ಮುಗಿದು ಈಗ ಪ್ಲೇ ಆಫ್ ಹಂತ ತಲುಪಿದೆ. ಸೆಮಿಫೈನಲ್ ನ ಮೊದಲ ಲೆಗ್ ನಲ್ಲಿ ಮುಂಬೈ ಸಿಟಿ ಎಫ್ ಸಿ ಹಾಗೂ ಎಫ್ ಸಿ ಗೋವಾ ತಂಡಗಳು ಮುಖಾಮುಖಿಯಾದವು. ಗೋವಾ ತಂಡ 13 ಪಂದ್ಯಗಳಲ್ಲಿ ಸೋಲನುಭವಿಸದೆ ದಾಖಲೆ ನಿರ್ಮಿಸಿದೆ. ಜುವಾನ್ ಫೆರಾಂಡೋ ಪಡೆ ಲೀಗ್ ನ 20 ಪಂದ್ಯಗಳಲ್ಲಿ 31 ಗೋಲುಗಳನ್ನು ಗಳಿಸಿದೆ.

ನ್ಯುಗೆರಾ ಅಮಾನತು

ನ್ಯುಗೆರಾ ಅಮಾನತು

ಅಲ್ಬೆರ್ಟೋ ನ್ಯುಗೆರಾ ಅವರು ಅಮಾನತುಗೊಂಡ ಕಾರಣ ಈ ಪಂದ್ಯದಲ್ಲಿ ಆಡುವುದಿಲ್ಲ. ಮುಂಬೈ ಪರ ನ್ಯುಗೆರಾ ಎಂಟು ಗೋಲುಗಳನ್ನು ಗಳಿಸಲು ನೆರವಾಗಿದ್ದರು. ಗೋವಾ ಪರ ಗೊನ್ಸಾಲೀಸ್ ಕೂಡ ಆಡುತ್ತಿಲ್ಲ. ಮುಂಬೈ ಸಿಟಿ ತಂಡ 35 ಗೋಲುಗಳನ್ನು ಗಳಿಸಿದೆ. ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ತಂಡ ಮುಂಬೈ. ಬಾರ್ಥಲೋಮ್ಯೊ ಒಗ್ಬಚೆ ಮತ್ತು ಆಡಂ ಲೆ ಫೋಂಡ್ರೆ ಮುಂಬೈ ಪರ ಫಾರ್ವರ್ಡ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಹ್ಯುಗೋ ಬೌಮಾಸ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹಿಂದಿನ ಪಂದ್ಯದಲ್ಲಿ ಅಮಾನತುಗೊಂಡಿದ್ದ ಕಾರಣ ಅವರು ಆಡಿರಲಿಲ್ಲ. ಹಿಂದಿನ ಪಂದ್ಯದಲ್ಲಿ ಎರಡೂ ತಂಡಗಳು 3-3 ಗೋಲುಗಳಿಂದ ಡ್ರಾ ಸಾಧಿಸಿದ್ದವು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, March 5, 2021, 22:08 [IST]
Other articles published on Mar 5, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X