ಐಎಸ್‌ಎಲ್: ಫೈನಲ್‌ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್

By Isl Media

ಗೋವಾ: ಮೊದಲ ಲೆಗ್ ನ ಸೆಮಿಫೈನಲ್ ಪಂದ್ಯದಲ್ಲಿ 2-2 ಗೋಲುಗಳಿಂದ ಸಮಬಲ ಸಾಧಿಸಿದ್ದ ಎಟಿಕೆ ಮೋಹನ್ ಬಾಗನ್ ಹಾಗೂ ನಾರ್ಥ್ ಈಸ್ಟ್ ತಂಡಗಳು ಫಟೋರ್ಡಾ ಅಂಗಣದಲ್ಲಿ ಮಂಗಳವಾರ ಫೈನಲ್ ಸ್ಥಾನಕ್ಕಾಗಿ ಅಂತಿಮ ಹೋರಾಟ ನಡೆಸಲಿವೆ. ನಾರ್ಥ್ ಈಸ್ಟ್ ನ ಇಡ್ರಿಸ್ಸಾ ಸಿಲ್ಲಾ ಕೊನೆಯ ಕ್ಷಣದಲ್ಲಿ ಗಳಿಸಿದ ಗೋಲಿನಿಂದ ಮೋಹನ್ ಬಾಗನ್ ಮೇಲೆ ಒತ್ತಡ ಉಂಟಾಗಿದೆ ಎಂಬ ನಿಲುವನ್ನು ತಂಡದ ಕೋಚ್ ಆಂಟೋನಿಯೊ ಹಬ್ಬಾಸ್ ತಳ್ಳಿ ಹಾಕಿದ್ದಾರೆ.

ಋತುವಿನುದ್ದಕ್ಕೂ ಕೋಲ್ಕೊತಾದ ತಂಡ ಉತ್ತಮ ಡಿಫೆನ್ಸ್ ಪ್ರದರ್ಶನ ನೀಡಿತ್ತು. ಲೀಗ್ ಹಂತದಲ್ಲಿ ಕೇವಲ 15 ಗೋಲುಗಳನ್ನು ನೀಡಿರುವುದೇ ಇದಕ್ಕೆ ನಿದರ್ಶನ. ಆದರೆ ಲೀಗ್ ನ ಕೊನೆಯ ಮೂರು ಪಂದ್ಯಗಳಲ್ಲಿ ತಂಡ ಐದು ಗೋಲುಗಳನ್ನು ನೀಡಿತ್ತು, ಇದು ತಂಡದ ಲೀಗ್ ವಿನ್ನರ್ ಶೀಲ್ಡ್ ಕೈಜಾರಲು ಪ್ರಮುಖ ಕಾರಣವಾಗಿತ್ತು. ಮೊದಲ ಲೆಗ್ ನ ವಿಷಯಗಳನ್ನು ಬದಿಗಿಟ್ಟು ಆಡಲಿದ್ದೇವೆ, ಎಂದು ಕೋಚ್ ಹಬ್ಬಾಸ್ ಹೇಳಿದ್ದಾರೆ.

ವಿಶ್ರಾಂತ ಮನಸ್ಥಿತಿ

ವಿಶ್ರಾಂತ ಮನಸ್ಥಿತಿ

"ಎರಡನೇ ಲೆಗ್ ಪಂದ್ಯಕ್ಕೆ ಮುನ್ನ ಹಬ್ಬಾಸ್ ಅವರು ಬಹಳ ವಿಶ್ರಾಂತ ಮನಸ್ಥಿತಿಯಲ್ಲಿರುವುದು ಕಂಡುಬಂತು, "ಯಾವುದೇ ರೀತಿಯ ಒತ್ತಡವಿಲ್ಲ. ಇದು ಒಂದು ಉತ್ತಮ ಅವಕಾಶದ ಕುರಿತಾಗಿದೆ. ಇದು ಮತ್ತೆ ಸಿಗುವುದಿಲ್ಲ. ನಾವು ಅದನ್ನು ಸಂಭ್ರಮಿಸಬೇಕು. ನಾವು ನಮ್ಮಲ್ಲಿರುವ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ ಹಂತವನ್ನು ಸಂಭ್ರಮಿಸಬೇಕು," ಎಂದಿದ್ದಾರೆ.

ಸೋಲು ಕಂಡಿರಲಿಲ್ಲ

ಸೋಲು ಕಂಡಿರಲಿಲ್ಲ

ಖಾಲೀದ್ ಜಮಿಲ್ ಅವರ ಪಡೆ ಕಳೆದ 10 ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ, ಈ ಬಗ್ಗೆ ಗಮನ ಸೆಳೆದಾಗ, ಹಬ್ಬಾಸ್ ಅವರ ಉತ್ತರದಲ್ಲಿ ತಾಳ್ಮೆ ಮನೆಮಾಡಿತ್ತು. "ತಾಳ್ಮೆಯಿಂದ ಇರುವುದೇ ನಮ್ಮ ರಣತಂತ್ರ. ಅತ್ಯಂತ ತಾಳ್ಮೆಯಿಂದ ಆಡಿ ಫೈನಲ್ ತಲುಪುವುದು ನಮ್ಮ ಗುರಿಯಾಗಿದೆ," ಎಂದರು.

ಬಾಗನ್ ತಂಡವು ಡೇವಿಡ್ ವಿಲಿಯಮ್ಸ್ ಮತ್ತು ರಾಯ್ ಕೃಷ್ಣ ಅವರನ್ನು ಹೆಚ್ಚು ಅವಲಂಭಿಸಿದ್ದು, ಇಬ್ಬರ ಋತುವಿನುದ್ದಕ್ಕೂ ಸ್ಥಿರ ಪ್ರದರ್ಶನ ತೋರಿದ್ದಾರೆ. ಜಮೀಲ್ ಅವರು ಆಗಮಿಸಿದಾಗಿನಿಂದ ಸೋಲನ್ನೇ ಕಂಡಿರದ ನಾರ್ಥ್ ಈಸ್ಟ್ ಎಟಿಕೆಎಂಬಿ ವಿರುದ್ಧ ಜಯ ಗಳಿಸಿ ಮೊದಲ ಬಾರಿಗೆ ಫೈನಲ್ ತಲಪುವ ಗುರಿ ಹೊಂದಿದೆ.

ಫಲಿತಾಂಶದ ಕಡೆಗೆ ಹೆಚ್ಚು ಗಮನ

ಫಲಿತಾಂಶದ ಕಡೆಗೆ ಹೆಚ್ಚು ಗಮನ

"ಇದು ಮಾಡು ಇಲ್ಲವೆ ಮಡಿ ಪಂದ್ಯವಾದ ಕಾರಣ ನಾವು ಫಲಿತಾಂಶದ ಕಡೆಗೆ ಹೆಚ್ಚು ಗಮನಹರಿಸಲಿದ್ದೇವೆ. ಒತ್ತಡ ಇದ್ದೇ ಇರುತ್ತದೆ. ಒತ್ತಡಕ್ಕೆ ಹೊಂದಿಕೊಂಡು ಖುಷಿ ಪಡಿ ಎಂದಿದ್ದೇನೆ. ಹಿಂದಿನ ಪಂದ್ಯದ ಗೋಲು ವ್ಯತ್ಯಯ ಇಲ್ಲದ ಕಾರಣ ಇತ್ತಂಡಗಳಿಗೆ ಗೆಲ್ಲಬೇಕಾಗಿದೆ. ಇದು ಇತ್ತಂಡಗಳಿಗೂ ಅನ್ವಯ,ಗೋಲು ಗಳಿಸಲು ಸಾಕಷ್ಟು ಅವಕಾಶಗಳನ್ನು ನಿರ್ಮಿಸಿ ಅವರ ಮೇಲೆ ಒತ್ತಡ ತರಬೇಕು. ಸಬಲ ಸಾಧಸಿಸಿದೆ 30 ನಿಮಿಷಗಳ ಅವಕಾಶ ಸಿಗುತ್ತದೆ, "ಎಂದು ಜಮೀಲ್ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, March 8, 2021, 22:21 [IST]
Other articles published on Mar 8, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X