ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಸಮಬಲ ಸಾಧಿಸಿದ ಕೇರಳ-ನಾರ್ಥ್ಈಸ್ಟ್

By Isl Media
ISL 2020-21: Sylla’s late strike deny Kerala Blasters full points

ಗೋವಾ, ನವೆಂಬರ್ 26: ಕೇರಳ ಬ್ಲಾಸ್ಟರ್ಸ್ ಪರ ಸರ್ಗಿಯೋ ಸಿಡೊಂಚ (5ನೇ ನಿಮಿಷ) ಹಾಗೂ ಗ್ಯಾರಿ ಹೂಪರ್ (45ನೇ ನಿಮಿಷ) ಗಳಿಸಿದ ಗೋಲು ಹಾಗೂ ದ್ವಿತಿಯಾರ್ಧದಲ್ಲಿ ದಿಟ್ಟ ಹೋರಾಟ ನೀಡಿದ ನಾರ್ಥ್ ಈಸ್ಟ್ ಯುನೈಟೆಡ್ ಪರ ಕ್ವಿಸ್ಸಿ ಅಪಿಯ್ಯ (51ನೇ ನಿಮಿಷ) ಮತ್ತು ಇಡ್ರಿಸ್ಸಾ ಸಿಲ್ಲಾ (90ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಪಂದ್ಯ 2-2 ಗೋಲುಗಳಿಂದ ಸಮಬಲಗೊಂಡು ತಂಡಗಳು ಅಂಕ ಹಂಚಿಕೊಂಡವು.

ಭಾರತ vs ಆಸ್ಟ್ರೇಲಿಯಾ ಸರಣಿಗಳನ್ನು ಉಚಿತವಾಗಿ ನೋಡೋದು ಹೇಗೆ?ಭಾರತ vs ಆಸ್ಟ್ರೇಲಿಯಾ ಸರಣಿಗಳನ್ನು ಉಚಿತವಾಗಿ ನೋಡೋದು ಹೇಗೆ?

ಸರ್ಗಿಯೊ ಸಿಡೋಂಚಾ (5ನೇ ನಿಮಿಷ) ಹೆಡರ್ ಮೂಲಕ ಗಳಿಸಿದ ಗೋಲು ಹಾಗೂ ಗ್ಯಾರಿ ಹೂಪರ್ (45ನೇ ನಿಮಿಷ) ಪೆನಾಲ್ಟಿ ಮೂಲಕ ಗಳಿಸಿದ ಗೋಲಿನ ನೆರವಿನಿಂದ ಕೇರಳ ಬ್ಲಾಸ್ಟರ್ಸ್ ತಂಡ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧದ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯದ ಪ್ರಥಮಾರ್ಧದಲ್ಲಿ 2-0 ಗೋಲಿನಿಂದ ಮುನ್ನಡೆ ಸಾಧಿಸಿದೆ.

ನಾಪೋಲಿ ಸ್ಟೇಡಿಯಂಗೆ ದಂತಕತೆ ಡಿಯಾಗೋ ಮರಡೋನಾ ಹೆಸರುನಾಪೋಲಿ ಸ್ಟೇಡಿಯಂಗೆ ದಂತಕತೆ ಡಿಯಾಗೋ ಮರಡೋನಾ ಹೆಸರು

ನಾರ್ಥ್ ಈಸ್ಟ್ ತಂಡದ ಡಿಫೆನ್ಸ್ ವಿಭಾಗ ದರ್ಬಲಗೊಂಡಿರುವುದು ಪಂದ್ಯದುದ್ದಕ್ಕೂ ಕಂಡುಬಂತು. ಗೋಲು ಗಳಿಸುವ ಅವಕಾಶಗಳು ನಿರ್ಮಾಣಗೊಂಡರೂ ನಾರ್ಥ್ ಈಸ್ಟ್ ಅದನ್ನು ಗೋಲಾಗಿಸುವಲ್ಲಿ ವಿಫಲವಾಗಿತ್ತು.

ಮಡಿದ ಮರಡೋನಾಗೆ ಸಂತಾಪ

ಮಡಿದ ಮರಡೋನಾಗೆ ಸಂತಾಪ

ಪಂದ್ಯಕ್ಕೂ ಮುನ್ನ ನಿನ್ನೆ ನಿಧನರಾದ ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ಡಿಗೋ ಮರಡೋನಾ ಅವರಿಗೆ ಮೌನಾಚರಣೆಯ ಮೂಲಕ ಅಂತಿಮ ನಮನ ಸಲ್ಲಿಸಲಾಯಿತು. ಮೊದಲ ಜಯದ ಗುರಿಯಲ್ಲಿ ಕೇರಳ: ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಪಂದ್ಯದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ ಕೇರಳ ಬ್ಲಾಸ್ಟರ್ಸ್ ಎಫ್ ಸಿ ಮೊದಲ ಜಯದ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಎರಡೂ ತಂಡಗಳು ಪರಸ್ಪರ ವಿರುದ್ಧವಾದ ಫಲಿತಾಂಶವನ್ನು ಮೊದಲ ಪಂದ್ಯದಲ್ಲಿ ಕಂಡಿದ್ದವು.

ಕೇರಳ ಏಕೈಕ ಗೋಲಿನಿಂದ ಸೋತಿತ್ತು

ಕೇರಳ ಏಕೈಕ ಗೋಲಿನಿಂದ ಸೋತಿತ್ತು

ಕೇರಳ ಬ್ಲಾಸ್ಟರ್ಸ್ ಎಟಿಕೆ ಮೋಹನ್ ಬಾಗನ್ ವಿರುದ್ಧ ಏಕೈಕ ಗೋಲಿನಿಂದ ಸೋಲನುಭವಿಸಿತ್ತು. ನಾರ್ಥ್ ಈಸ್ಟ್ ಯುನೈಟೆಡ್ ಎಫ್ ಸಿ ಏಕೈಕ ಗೋಲಿನಿಂದ ಮುಂಬೈ ಸಿಟಿ ವಿರುದ್ಧ ಸೋಲನುಭವಿಸಿತ್ತು. ಇತ್ತಂಡಗಳು ಪರಸ್ಪರ 7 ಬಾರಿ ಮುಖಾಮುಖಿಯಾಗಿದ್ದವು. ಕೇರಳ ತಂಡ 5 ಬಾರಿ ಜಯ ಗಳಿಸಿದ್ದರೆ, ನಾರ್ಥ್ ಈಸ್ಟ್ 3 ಬಾರಿ ಯಶಸ್ಸು ಕಂಡಿತ್ತು. ಮೊದಲ ಪಂದ್ಯದಲ್ಲಿ ನಾರ್ಥ್ ಈಸ್ಟ್ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಮುಂಬೈಗೆ ಒಮ್ಮೆಯೂ ಟಾರ್ಗೆಟ್ ಮಾಡಲು ಬಿಡಲಿಲ್ಲ.

ಡಿಫೆನ್ಸ್ ವಿಭಾಗ ಮತ್ತಷ್ಟು ಬಲಿಷ್ಠ

ಡಿಫೆನ್ಸ್ ವಿಭಾಗ ಮತ್ತಷ್ಟು ಬಲಿಷ್ಠ

ಖಾಸ್ಸಾ ಕಮರಾ ಹಿಂದಿನ ಪಂದ್ಯದ ಹೀರೋ ಎನಿಸಿದ್ದು, ಡೈಲಾನ್ ಫಾಕ್ಸ್ ಮತ್ತು ಅಶುತೋಶ್ ಮೆಹ್ತಾ ಅವರಿಂದ ಡಿಫೆನ್ಸ್ ವಿಭಾಗ ಮತ್ತಷ್ಟು ಬಲಿಷ್ಠವಾಯಿತು. ಮೊದಲ ಪಂದ್ಯದಲ್ಲಿ ಗೋಲು ಗಳಿಸಿದ್ದ ಕ್ವೆಸಿ ಅಪಿಯ್ಯ ಎದುರಾಳಿ ತಂಡಕ್ಕೆ ನಿಜವಾಗಿಯೂ ಆತಂಕ ಒಡ್ಡಬಲ್ಲ ಆಟಗಾರ. ನಾರ್ಥ್ ಈಸ್ಟ್ ಕೋಚ್ ಗೆರಾರ್ಡ್ ನಸ್ ಕೇರಳ ವಿರುದ್ಧವೂ ತಮ್ಮ ತಂಡ ಸ್ಥಿರ ಪ್ರದರ್ಶನ ನೀಡುತ್ತದೆ ಎಂಬ ನಂಬಿದ್ದಾರೆ. ಮೊದಲ ಪಂದ್ಯದಲ್ಲಿ ಕೇರಳ ಪಡೆ 9 ಬಾಗಿ ಗೋಲ್ ಬಾಕ್ಸ್ ಗೆ ಗುರಿ ಇಟ್ಟರೂ ಎದುರಾಳಿಯ ಗೋಲ್ ಕೀಪರ್ ಗೆ ಯಾವುದೇ ರೀತಿಯಲ್ಲಿ ಗೊಂದಲ ಮಾಡಲಿಲ್ಲ.

ತಂಡಕ್ಕೆ ಚಿಂತೆಯಾಗಿದೆ

ತಂಡಕ್ಕೆ ಚಿಂತೆಯಾಗಿದೆ

ಸ್ಟಾರ್ ಸ್ಟ್ರೈಕರ್ ಗ್ಯಾರಿ ಹೂಪರ್ ಉತ್ತಮ ಪ್ರದರ್ಶನವನ್ನು ತೋರಬೇಕಾದ ಒತ್ತಡದಲ್ಲಿದ್ದಾರೆ. 15 ಪಾಸ್ ಗಳಲ್ಲಿ ಅವರು ಯಶಸ್ಸು ಕಂಡಿದ್ದು ಕೇವಲ 5 ಪಾಸ್ ಗಳಲ್ಲಿ ಎಂಬುದು ತಂಡಕ್ಕೆ ಚಿಂತೆಯಾಗಿದೆ. ವಿಸೆಂಟೆ ಗೊಮೇಜ್, ಪ್ರಶಾಂತ್ ಕರುಥಾಡತ್ಖುನಿ, ಮತ್ತು ಸರ್ಗಿಯೋ ಸಿಡೋಂಚಾ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಪ್ರಧಾನ ಕೋಚ್ ಕಿಬು ವಿಕುನಾ ಅವರಿಗೆ ಖುಷಿಯಾದೀತು.

Story first published: Thursday, November 26, 2020, 22:38 [IST]
Other articles published on Nov 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X