ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಗೋವಾಕ್ಕೆ ಮೊದಲ ಜಯ, ಮಿಂಚಿದ ಐಗರ್

By Isl Media
ISL 2020: Angulo shines again as FC Goa beat Kerala to secure first win of the season

ಗೋವಾ, ಡಿಸೆಂಬರ್ 6: ಐಗರ್ ಏಂಗುಲೋ (30 ಮತ್ತು 90ನೇ ನಿಮಿಷ) ಮತ್ತು ಜಾರ್ಜ್ ಆರ್ಟಿಜ್ ಮೆಂಡೊನ್ಜಾ (52ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಎಫ್ ಸಿ ಗೋವಾ ತಂಡ ಕೇರಳ ಬ್ಲಾಸ್ಟರ್ಸ್ ವಿರುದ್ಧದ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ 3-1 ಗೋಲುಗಳ ಅಂತರದಲ್ಲಿ ಜಯ ಗಳಿಸಿತು. ಕೇರಳದ ಪರ ವಿನ್ಸೆಂಟ್ ಗೊಮೇಜ್ (90ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ಐಗರ್ ಏಂಗುಲೋ 30ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಎಫ್ ಸಿ ಗೋವಾ 1-0 ಗೋಲಿನಿಂದ ಮೇಲುಗೈ ಸಾಧಿಸಿದೆ.

ಎಫ್‌-2 ರೇಸ್‌ನಲ್ಲಿ ಇತಿಹಾಸ ನಿರ್ಮಿಸಿದ ಭಾರತದ ಜೇಹನ್ ದಾರುವಾಲಎಫ್‌-2 ರೇಸ್‌ನಲ್ಲಿ ಇತಿಹಾಸ ನಿರ್ಮಿಸಿದ ಭಾರತದ ಜೇಹನ್ ದಾರುವಾಲ

ಕೇರಳ ಕೂಡ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿತ್ತು, ಆದರೆ ಗೋಲು ದಾಖಲಾಗಲಿಲ್ಲ. 10ನೇ ನಿಮಿಷದಲ್ಲಿ ಗೋವಾದ ಮೆಡೊನ್ಜಾ ಅವರಿಗೆ ನೇರವಾಗಿ ಗೋಲು ಗಳಿಸುವ ಅವಕಾಶ ಇದ್ದಿತ್ತು, ಆದರೆ ತುಳಿದ ಚೆಂಡು ಗೋಲ್ ಬಾಕ್ಸನ ಅಂಚಿಗೆ ತಾಗಿ ಹೊರ ನಡೆಯಿತು.

ಅವಕಾಶ ಸಿಕ್ಕರೂ ಗೋಲಾಗಲಿಲ್ಲ

ಅವಕಾಶ ಸಿಕ್ಕರೂ ಗೋಲಾಗಲಿಲ್ಲ

15, 20 ಮತ್ತು 25ನೇ ನಿಮಿಷಗಳಲ್ಲೂ ಗೋವಾಕ್ಕೆ ಅವಕಾಶ ಸಿಕ್ಕರೂ ಗೋಲಾಗಲಿಲ್ಲ. ಆದರೆ 30ನೇ ನಿಮಿಷದಲ್ಲಿ ಸಿಕ್ಕ ಅವಕಾಶ ಗೋವಾಕ್ಕೆ ಯಶಸ್ಸು ತಂದಿತು. ಸಾವಿಯರ್ ನೀಡಿದ ಪಾಸ್ ಮೂಲಕ ಐಗರ್ ಗಳಿಸಿದ ಗೋಲು ಗೋವಾಕ್ಕೆ ಮುನ್ನಡೆ ತಂದುಕೊಟ್ಟಿತು. ಐಗರ್ ಗಳಿಸಿದ ನಾಲ್ಕನೇ ಗೋಲಿನಿಂದಾಗಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದರು.

ಜಯವೊಂದೇ ಮಂತ್ರ

ಜಯವೊಂದೇ ಮಂತ್ರ

ಎಫ್ ಸಿ ಗೋವಾ ಮತ್ತು ಕೇರಳ ಬ್ಲಾಸ್ಟರ್ಸ್ ತಂಡಗಳು ಹೀರೋ ಇಂಡಿಯನ್ ಸೂಪರ್ ಲೀಗ್ ನ ಸೂಪರ್ ಸಂಡೆಯ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾದವು. ಎರಡೂ ತಂಡಗಳಲ್ಲಿ ಯಾರು ಗೆದ್ದರೂ ಅದು ಆ ತಂಡಕ್ಕೆ ಮೊದಲ ಜಯವಾಗಿರುತ್ತದೆ. ಗೋವಾ ತಂಡ ನಾಲ್ಕು ಗೋಲುಗಳನ್ನು ಗಳಿಸಿದೆ. ಸೆಟ್ ಪೀಸ್ ಮೂಲಕ ನಾಲ್ಕು ಗೋಲುಗಳು ಎದುರಾಳಿಗಳ ಪಾಲಾಗಿದೆ. ಕೇರಳ ಕೂಡ ಸೆಟ್-ಪೀಸ್ ಮೂಲಕ ಎರಡು ಗೋಲುಗಳನ್ನು ಗಳಿಸಿದೆ. ಮಿಡ್ ಫೀಲ್ಡ್ ವಿಭಾಗದಲ್ಲಿ ಲೆನ್ನಿ ರಾಡ್ರಿಗಸ್ ಮತ್ತು ನಾಯಕ ಎಡು ಬೇಡಿಯಾ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿದ್ದಾರೆ. ಅಲ್ಬೆರ್ಟ್ ನೊಗ್ವೆರಾ, ಜಾರ್ಜ್ ಮೆಂಡೊನ್ಜಾ ಮತ್ತು ಬ್ರಂಡಾನ್ ಫೆರ್ನಾಂಡೀಸ್ ಗೋವಾದ ಕೋಚ್ ಜುವಾನ್ ಫೆರಾಂಡೊ ಅವರಿಗೆ ಯಾರನ್ನು ಆಯ್ಕೆ ಮಾಡಬೇಕೆಂಬ ಗೊಂದಲಕ್ಕೆ ಸಿಲುಕಿಸಿರುವುದು ಸ್ಪಷ್ಟ.

ಐಗರ್ ವಿಶ್ವಾಸ ಹೆಚ್ಚಿದೆ

ಐಗರ್ ವಿಶ್ವಾಸ ಹೆಚ್ಚಿದೆ

ಐಗರ್ ಏಂಗುಲೊ ಅವರು ಈಗಾಗಲೇ ಮೂರು ಗೋಲು ಗಳಿಸಿ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿದ್ದಾರೆ. ಚೆನ್ನೈಯಿನ್ ಎಫ್ ಸಿ ವಿರುದ್ಧ ನಡೆದ ಗೋಲಿಲ್ಲದ ಡ್ರಾ ಪಂದ್ಯದಲ್ಲಿ ಕಿಬು ವಿಕುನಾ ಪಡೆ ಅದ್ಭುತ ಪ್ರದರ್ಶನ ತೋರಿತ್ತು. ಗೋಲ್ ಕೀಪರ್ ಅಲ್ಬಿನೊ ಗೋಮ್ಸ್ ಪೆನಾಲ್ಟಿ ಕಿಕ್ ತಡೆದು ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಬಕಾರಿ ಕೊನ್ ಮತ್ತು ಕೊಸ್ಟಾ ನ್ಹಾಮೊಯ್ನಿಸು ಡಿಫೆನ್ಸ್ ವಿಭಾಗದಲ್ಲಿ ಕೇರಳದ ಶಕ್ತಿ. ಸತ್ಯಸೇನ್ ಸಿಂಗ್, ಸರ್ಗಿಯೊ ಸಿಡೊಂಚಾ ಮಿಡ್ ಫೀಲ್ಡ್ ವಿಭಾಗದ ಪ್ರಮುಖ ಅಸ್ತ್ರ. ಉತ್ತಮ ಆಟಗಾರರಿಂದ ಕೂಡಿದ ತಂಡಗಳ ಹೋರಾಟದಲ್ಲಿ ಉತ್ತಮ ಫುಟ್ಬಾಲ್ ಇರುವುದು ಸಹಜ.

Story first published: Monday, December 7, 2020, 13:39 [IST]
Other articles published on Dec 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X