ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಅಜೇಯ ಬೆಂಗಳೂರಿಗೆ ಎಟಿಕೆಎಂಬಿ ಸವಾಲು

By Isl Media
ISL 2020: ATK Mohun Bagan out to end Bengalurus unbeaten run

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿರುವ ತಂಡ ಬೆಂಗಳೂರು ಎಫ್ ಸಿ ತಂಡ ಸೋಮವಾರ ಫಟೋರ್ಡಾ ಅಂಗಣದಲ್ಲಿ ಕೋಲ್ಕೊತಾದ ಬಲಿಷ್ಠ ತಂಡ ಎಟಿಕೆ ಮೋಹನ್ ಬಾಗನ್ ಎದುರಾಗಲಿದೆ. ಅಂಕಪಟ್ಟಿಯಲ್ಲಿ 2 ಮತ್ತು 3ನೇ ಸ್ಥಾನದಲ್ಲಿರುವ ಎಟಿಕೆಎಂಬಿ ಮತ್ತು ಬೆಂಗಳೂರು ತಂಡದ ಹೋರಾಟದಲ್ಲಿ ಗೆಲ್ಲುವ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ತಲುಪಲಿದೆ. ಆಡಿರುವ ಆರು ಪಂದ್ಯಗಳಲ್ಲಿ ಮೂರು ಜಯ ಮತ್ತು ಮೂರು ಡ್ರಾ ಕಂಡಿರುವ ಬೆಂಗಳೂರು ಎಫ್ ಸಿ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ, ನಾಳೆಯ ಜಯ ಸುನಿಲ್ ಛೆಟ್ರಿ ಪಡೆಯನ್ನು ಅಗ್ರಸ್ಥಾನಕ್ಕೆ ಕೊಂಡೊಯ್ಯಲಿದೆ.

ಟೀಮ್ ಇಂಡಿಯಾಗೆ ಮಾರ್ಗದರ್ಶನ ನೀಡಲು ಆಸ್ಟ್ರೇಲಿಯಾಗೆ ದ್ರಾವಿಡ್ ತೆರಳಲಿ: ದಿಲೀಪ್ ವೆಂಗ್‌ಸರ್ಕಾರ್ಟೀಮ್ ಇಂಡಿಯಾಗೆ ಮಾರ್ಗದರ್ಶನ ನೀಡಲು ಆಸ್ಟ್ರೇಲಿಯಾಗೆ ದ್ರಾವಿಡ್ ತೆರಳಲಿ: ದಿಲೀಪ್ ವೆಂಗ್‌ಸರ್ಕಾರ್

ಆರು ಪಂದ್ಯಗಳಲ್ಲಿ ನಾಲ್ಕು ಜಯ ಮತ್ತು 1 ಡ್ರಾ ಮತ್ತು 1 ಸೋಲು ಕಂಡಿರುವ ಎಟಿಕೆಎಂಬಿ ಎರಡನೇ ಸ್ಥಾನದಲ್ಲಿದ್ದು ನಾಳೆಯ ಪಂದ್ಯದಲ್ಲಿ ಜಯ ಗಳಿಸಿ ಮುನ್ನಡೆಯುವ ಹಂಬಲದಲ್ಲಿದೆ. ಲೀಗ್ ನ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾದಾಗ ಅಲ್ಲಿ ಕುತೂಹಲ ಮನೆ ಮಾಡುವುದು ಸಹಜ. ಎಟಿಕೆಎಂಬಿ ಉತ್ತಮ ಆಕ್ರಮಣಕಾರಿ ಆಟಗಾರರಿಂದ ಕೂಡಿದೆ., ಅದೇ ರೀತಿ ಡಿಫೆನ್ಸ್ ವಿಭಾಗದಲ್ಲೂ ಯಶಸ್ಸು ಕಂಡಿದೆ. ಬೆಂಗಳೂರಿನ ಅಂಕಿಅಂಶಗಳು ಕೂಡ ಉತ್ತಮವಾಗಿದೆ. ಎರಡೂ ತಂಡಗಳು ಟಾಪ್ 4ರಲ್ಲಿ ಇರುವುದರಿಂದ ಪಂದ್ಯ ಉತ್ತಮ ಹೋರಾಟದಿಂದ ಕೂಡಿರುವುದು ಸಹಜ.

ಬಾಕ್ಸಿಂಗ್ ರಿಂಗ್‌ನಲ್ಲೊಂದು ರೋಚಕ ಕದನ: ಕಾಲಮ್ ಸ್ಮಿತ್ ವಿರುದ್ಧ ಗೆದ್ದು ಬೀಗಿದ ಅಲ್ವರೇಜ್ಬಾಕ್ಸಿಂಗ್ ರಿಂಗ್‌ನಲ್ಲೊಂದು ರೋಚಕ ಕದನ: ಕಾಲಮ್ ಸ್ಮಿತ್ ವಿರುದ್ಧ ಗೆದ್ದು ಬೀಗಿದ ಅಲ್ವರೇಜ್

ತಮ್ಮ ತಂಡದ ಸಾಮರ್ಥ್ಯದ ಬಗ್ಗೆ ನಂಬಿಕೆ ಇಟ್ಟುಕೊಂಡಿರುವ ಎಟಿಕೆಎಂಬಿ ಕೋಚ್ ಅಂಟೋನಿಯೋ ಹಬ್ಬಾಸ್ ತಮ್ಮ ತಂಡ ಮೂರು ಅಂಕ ಗಳಿಸುವ ಗುರಿ ಹೊಂದಿದೆ ಎಂದಿದ್ದಾರೆ.

ಜಯ ಗಳಿಸುವುದು ಕಷ್ಟ

ಜಯ ಗಳಿಸುವುದು ಕಷ್ಟ

"ಎಲ್ಲ ಪಂದ್ಯಗಳಲ್ಲೂ ಜಯ ಗಳಿಸುವುದು ಕಷ್ಟ. ತಂಡಗಳು ಉತ್ತಮ ರೀತಿಯಲ್ಲಿ ಸಮತೋಲನದಲ್ಲಿವೆ. ಆದ್ದರಿಂದ ಎಲ್ಲ ಪಂದ್ಯಗಳಲ್ಲೂ ಗೆಲ್ಲುವುದು ಕಷ್ಟ. ಫುಟ್ಬಾಲ್ ನ ಮುಖ್ಯ ಗುರಿ ಮೂರು ಅಂಕಗಳನ್ನು ಗೆಲ್ಲುವುದು. ನಾನು ಡ್ರಾ ಅಥವಾ ಸೋಲಿನ ಬಗ್ಗೆ ಯೋಚಿಸುವುದಿಲ್ಲ," ಎಂದು ಹಬ್ಬಾಸ್ ಹೇಳಿದ್ದಾರೆ. ಕೋಲ್ಕತಾದ ಆಟಗಾರರು ಲೀಗ್ ನಲ್ಲಿ ಅತಿ ಹೆಚ್ಚು ಟ್ಯಾಕಲ್ (233) ಮತ್ತು ಎರಡನೇ ಅತಿ ಹೆಚ್ಚು ಕ್ಲಿಯರೆನ್ಸ್ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಬೆಂಗಳೂರು ಬಲಿಷ್ಠ ತಂಡ

ಬೆಂಗಳೂರು ಬಲಿಷ್ಠ ತಂಡ

"ನಮ್ಮದೇ ಆದ ವಲಯವನ್ನು ನಿರ್ಮಿಸಿಕೊಳ್ಳುವುದು ಮತ್ತು ಅಂತರವನ್ನು ಮುಕ್ತಗೊಳಿಸುವುದು ಇದು ನಮ್ಮ ಯೋಜನೆ, ಚೆಂಡಿನ ಚಲನೆಗೆ ಅವಕಾಶ ಬೇಕಾಗುತ್ತದೆ. ಇದನ್ನು ನಿಯಂತ್ರಿಸಿದರೆ ಎದುರಾಳಿ ತಂಡದ ಅವಕಾಶಕ್ಕೆ ಅಡ್ಡಿ ತರಬಹುದು," ಎಂದರು. " ಬೆಂಗಳೂರು ಬಲಿಷ್ಠ ತಂಡ. ನಮಗೆ ಮೂರು ಅಂಕಗಳೆಂದರೆ ಇತರ ಪಂದ್ಯದಲ್ಲಿ ಗಳಿಸಿದಂತೆಯೇ. ಆದರೆ ಬೆಂಗಳೂರು ಮತ್ತ ಎಟಿಕೆ ಮೋಹನ್ ಬಾಗನ್ ನಡುವಿನ ಪಂದ್ಯವೆಂದರೆ ಅದು ಅತ್ಯಂತ ಪ್ರಮುಖವಾದುದು. ನಾವು ಎದುರಾಳಿಯನ್ನು ಯಾವಾಗಲೂ ಗೌರವಿಸುತ್ತೇವೆ, ಮತ್ತು 90 ನಿಮಿಷಗಳ ಪಂದ್ಯ ಫಲಿತಾಂಶವನ್ನು ತೀರ್ಮಾನಿಸಲಿದೆ," ಎಂದರು.

ಎಟಿಕೆ ಮೋಹನ್ ಬಾಗನ್ ತಂಡದ ಆಟಗಾರರು ಆಕ್ರಮಣಕಾರಿ ಆಟವನ್ನು ಆಡುವುದರಿಂದ ಬೆಂಗಳೂರು ತಂಡದ ಕೋಚ್ ಕಾರ್ಲಸ್ ಕ್ವಾಡ್ರಾಟ್ ಅವರಿಗೆ ಈ ಅಜೇಯವನ್ನು ಕಾಯ್ದುಕೊಳ್ಳುವುದು ಸವಾಲಾಗಿದೆ.

ಆಕ್ರಮಣಕಾರಿಯಾಗಿ ಆಡಬಲ್ಲರು

ಆಕ್ರಮಣಕಾರಿಯಾಗಿ ಆಡಬಲ್ಲರು

"ಎಟಿಕೆ ಮೋಹನ್ ಬಾಗನ್ ಕಠಿಣ ಆಟಗಾರರಿಂದ ಕೂಡಿದ ಬಲಿಷ್ಠ ತಂಡ. ಅವರ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ. ದೈಹಿಕವಾಗಿ ಬಲಿಷ್ಠರಾಗಿದ್ದು, ಅತ್ಯಂತ ಆಕ್ರಮಣಕಾರಿಯಾಗಿ ಆಡಬಲ್ಲರು. ಗೋವಾ ವಿರುದ್ಧದ ಪಂದ್ಯವನ್ನು ನಾವು ವೀಕ್ಷಿಸಿದ್ದೇವೆ. ಅವರ ಆಟಗಾರರು ಯಾವ ರೀತಿಯಲ್ಲಿ ಸಂಘಟಿತರಾಗಿ ಆಡುತ್ತಾರೆ ಎಂಬುದು ಗೊತ್ತಿದೆ. ಪ್ರತಿದಾಳಿಯ ಮೂಲಕ ಅವಕಾಶವನ್ನು ನಿರ್ಮಿಸುವಲ್ಲಿ ಅವರು ನಿಸ್ಸೀಮರು.," ಎಂದು ಕ್ಬಾಡ್ರಾಟ್ ಹೇಳಿದ್ದಾರೆ.

"ಹಬ್ಬಾಸ್ ತಂಡ ಹಲವು ಕಾರಣಕ್ಕೆ ಚಾಂಪಿಯನ್ ತಂಡವಾಗಿದೆ. ಅವರ ದಾಳಿ ಅಪಾಯದಿಂದ ಕೂಡಿರುತ್ತದೆ. ಅದನ್ನು ನಾವು ತಪ್ಪಿಸಿಕೊಳ್ಳಲು ಯತ್ನಿಸುವೆವು. ಅವರು ಡಿಫೆನ್ಸ್ ವಿಭಾಗದಲ್ಲಿ ಉತ್ತಮವಾಗಿರುವುದರಿಂದ ನಾವು ಸಾಕಷ್ಟು ಅವಕಾಶಗಳನ್ನು ನಿರ್ಮಿಸಬೇಕಿದೆ. ಇದುವರೆಗೂ ಅವರು ಎದುರಾಳಿ ತಂಡಕ್ಕೆ ಅತಿ ಕಡಿಮೆ ಸಂಖ್ಯೆಯಲ್ಲಿ ಗೋಲು ಗಳಿಸಲು ಅವಕಾಶ ನೀಡಿದ್ದಾರೆ. ಅವರನ್ನು ಸೋಲಿಸಲು ನಾವು ಪ್ರಯತ್ನಿಸುತ್ತೇವೆ," ಎಂದರು.

Story first published: Monday, December 21, 2020, 9:54 [IST]
Other articles published on Dec 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X