ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಚೆನ್ನೈನಲ್ಲಿ ಬಲಿಷ್ಠ ತಂಡಗಳ ಸೆಮಿಫೈನಲ್ ಕದನ

By Isl Media
ISL 2020: Battle of the attackers as Chennaiyin face FC Goa

ಚೆನ್ನೈ, ಫೆಬ್ರವರಿ 29: ಹೀರೋ ಇಂಡಿಯನ್ ಸೂಪರ್ ಲೀಗ್ ನ ಮೊದಲ ಹಂತದ ಸೆಮಿಫೈನಲ್ ಪಂದ್ಯದಲ್ಲಿ ಎರಡು ಬಾರಿ ಚಾಂಪಿಯನ್ ಚೆನ್ನೈಯಿನ್ ಎಫ್ ಸಿ ತಂಡ ಎರಡು ಬಾರಿ ಫೈನಲಿಸ್ಟ್ ಎಫ್ ಸಿ ಗೋವಾ ತಂಡಕ್ಕೆ ಆತಿಥ್ಯ ನೀಡಲಿದೆ. ಇಲ್ಲಿನ ಜವಹರಲಾಲ್ ನೆಹರು ಅಂಗಣದಲ್ಲಿ ಶನಿವಾರ ಪಂದ್ಯ ನಡೆಯಲಿದೆ.

ಟೂರ್ನಿಯಲ್ಲಿ ಆತಂಕಕಾರಿ ಹೆಜ್ಜೆ ಇಟ್ಟಿದ್ದ ಚೆನ್ನೈಯಿನ್ ತಂಡ ಕೋಚ್ ಬದಲಾವಣೆಯ ನಂತರ ಹೊಸ ಹೋರಾಟ ನೀಡಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿತು. ಗೋವಾ ಈ ಬಾರಿ ಉತ್ತಮ ಪ್ರದರ್ಶನ ತೋರಿ ಅಗ್ರ ಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿ, ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದೆ. ಗೋವಾ ತಂಡ ಈಗಾಗಲೇ ಲೀಗ್ ವಿಜೇತ ಶೀಲ್ಡ್ ತನ್ನದಾಗಿಸಿಕೊಂಡಿದೆ.

ಇದುವರೆಗೂ ನಾಕೌಟ್ ಹಂತದಲ್ಲಿ ನಡೆದ ಪಂದ್ಯಗಳಲ್ಲಿ ಚೆನ್ನೈಯಿನ್ ತಂಡ ಗೋವಾದ ಮೇಲೆ ಮೇಲುಗೈ ಸಾಧಿಸಿದೆ. 2015ರಲ್ಲಿ ಫೈನಲ್ ಗೆದ್ದಿತ್ತು. ಲೀಗ್ ಹಂತದಲ್ಲಿ ಗೊವಾ ತಂಡ ಚೆನ್ನೈಯಿನ್ ವಿರುದ್ಧ ಆಡಿರುವ ಎರಡು ಪಂದ್ಯಗಳಲ್ಲಿ ಜಯ ಗಳಿಸಿಸಿದೆ. ಇದುವರೆಗೂ ಇತ್ತಂಡಗಳ ನಡುವೆ 15 ಪಂದ್ಯಗಳು ನಡೆದಿದ್ದು, ಗೋವಾ 8 ಪಂದ್ಯಗಳಲ್ಲಿ ಜಯ ಗಳಿಸಿದ್ದರೆ, ಚೆನ್ನೈಯಿನ್ 6 ಪಂದ್ಯಗಳಲ್ಲಿ ಯಶಸ್ಸು ಕಂಡಿದ್ದು, 1 ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಇತ್ತೀಚಿನ ಪಂದ್ಯಗಳಲ್ಲಿ ಇತ್ತಂಡಗಳು ತೋರಿದ ಪ್ರದರರ್ಶನವನ್ನು ಗಮನಿಸಿದಾಗ ನಾಳೆಯ ಪಂದ್ಯದಲ್ಲಿ ಗೋಲಿನ ಮಳೆಯಾಗುವುದು ಸಹಜ.

ISL 2020: Battle of the attackers as Chennaiyin face FC Goa

ಚೆನ್ನೈಯಿನ್ ಎಫ್ಸಿ ತಂಡಕ್ಕೆ ಮನೆಯಂಗಣದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಹೆಚ್ಚಿನ ಲಾಭ ಪಡೆಯುವ ಸಾಧ್ಯತೆ ಇದೆ. ಎರಡೂ ತಂಡಗಳು ಆಕ್ರಮಣಕಾರಿ ಆಟಕ್ಕೆ ಖ್ಯಾತಿ ಪಡೆದಿದ್ದು ಪಂದ್ಯ ಸಾಕಷ್ಟು ಕುತೂಹಲಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಹೆಚ್ಚಿದೆ.

ಓವೆನ್ ಕೊಯ್ಲ್ ಸೇರ್ಪಡೆಯ ನಂತರ ಚೆನ್ನೈಯಿನ್ ತಂಡದ ಅದೃಷ್ಟವೇ ಬದಲಾಗಿದೆ. ಎಂಟು ಪಂದ್ಯಗಳಲ್ಲಿ ಅಜಯದ ನಾಗಾಲೋಟ ಮುಂದುವರಿಸಿದೆ. ಅವುಗಳಲ್ಲಿ ಆರು ಪಂದ್ಯಗಳಲ್ಲಿ ಜಯ ಸಾಧಿಸಿದೆ, ಕಳೆದ ಐದು ಪಂದ್ಯಗಳಲ್ಲಿ ಸತತ ಜಯ ಕಂಡಿರುವ ಗೋವಾ 18 ಪಂದ್ಯಗಳಲ್ಲಿ 39 ಅಂಕಗಳನ್ನು ಗಳಿಸಿ ಅಗ್ರಸ್ಥಾನಿಯಾಗಿತ್ತು.

ಚೆನ್ನೈಯಿನ್ ಪರ ರಫಾಯಲ್ ಕ್ರಿವೆಲ್ಲರೊ ಹಾಗೂ ನೆರಿಜುಸ್ ವಾಸ್ಕಿಸ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಇಬ್ಬರೂ ಸೇರಿಇ 20 ಗೋಲುಗಳನ್ನು ಗಳಿಸಿರುವುದಲ್ಲದೆ, 11 ಗೋಲು ಗಳಿಸಲು ನೆರವಾಗಿದ್ದಾರೆ.

''ಪ್ಲೇಆಫ್ ನಲ್ಲಿರುವ ತಂಡಗಳಲ್ಲಿ ಚೆನ್ನೈಯಿನ್ ತಂಡ ಅತ್ಯಂತ ಕಠಿಣವಾದುದು, ನಾವು ತಪ್ಪಿಸಿಕೊಳ್ಳುತ್ತಿರುವ ತಂಡ ಅದಾಗಿತ್ತು, ಲೀಗ್ ನಲ್ಲಿ ಉತ್ತಮ ರೀತಿಯಲ್ಲಿ ಸುಧಾರಣೆ ಕಂಡ ತಂಡ ಚೆನ್ನೈಯಿನ್, ಕಳೆದ ಎಂಟು ಪಂದ್ಯಗಳಲ್ಲಿ ಸೋಲು ಕಾಣದೆ, ಆರು ಪಂದ್ಯಗಳಲ್ಲಿ ಜಯಗಳಿಸಿದೆ. ಅಲ್ಲದೆ ಎರಡು ಡ್ರಾ ಕಂಡಿದೆ. ನಮಗೆ ನಾಳೆಯ ಪಂದ್ಯ ಕಠಿಣ ಎನಿಸುವುದು ಸಹಜ, ಆದರೆ ನಾವು ನಮ್ಮನೈಜ ಆಟವನ್ನು ಆಡಲಿದ್ದೇವೆ,'' ಎಂದು ಗೋವಾ ತಂಡದ ಮಧ್ಯಂತರ ಕೋಚ್ ಕ್ಲಿಫೋರ್ಡ್ ಮಿರಾಂಡ ಹೇಳೀದ್ದಾರೆ.

ಅನಿರುಧ್ ತಾಪಾ ಹಾಗೂ ಎಡ್ವಿನ್ ವಾನ್ಸ್ ಪೌಲ್ ಅವರಿಗೆ ಅಹಮದ್ ಜೊಹವ್, ಹ್ಯುಗೋ ಬೌಮಾಸ್ ಮತ್ತು ಬ್ರೆಂಡಾನ್ ಫೆರ್ನಾಂಡೀಸ್ ಅವರ ಸವಾಲನ್ನು ಎದುರಿಸುವುದು ಕುಲೂಹಲದ ಕ್ಷಣವೆನಿಸಲಿದೆ, ಗೋವಾದ ಜಯಲ್ಲಿ ಬೌಮಾಸ್ ಹಾಗೂ ಕೊರೊಮಿನಾನಸ್ ಅವರ ಪಾತ್ರ ಪ್ರಮುಖವಾಗಿತ್ತು. ಲಾಲ್ರಿಯಾಂಜುವಾಲ ಜಾಂಗ್ಟೆ ಹಾಗೂ ಜಾಕಿಚಾಂದ್ ಸಿಂಗ್, ಲೂಸಿಯಾನ ಗೊಯೆನ್ ಮತ್ತು ಫೆರಾನ್ ಕೊರೊಮಿನಾಸ್ ಇವರ ನಡುವಿನ ಮಿಂಚಿನಾಟ ಫುಟ್ಬಾಲ್ ಅಭಿಮಾನಿಗಳಿಗೆ ರಸದೌತಣ ನೀಡುವುದು ಸಹಜ.

''ಪ್ಲೇಆಫ್ ನಲ್ಲಿ ಆಡುತ್ತಿರುವುದು ನಿಜವಾಗಿಯೂ ಉತ್ತಮ ಸಾಧನೆ, ಆದರೆ ಈ ಬಾರಿ ನಾವು ಉತ್ತಮ ತಂಡದ ವಿರುದ್ಧ ಆಡುತ್ತಿದ್ದೇವೆ, ಉತ್ತಮ ಆಟಗಾರರು, ಉತ್ತಮ ತರಬೇತುದಾರರಿಂದ ಕೂಡಿದ ತಂಡದ ವಿರುದ್ಧ ಆಡುತ್ತಿದ್ದೇವೆ. ತಂಡದ ಫಾರ್ವರ್ಡ್ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ, ಆದರೆ ನಾವು ದಿಟ್ಟ ಸವಾಲನ್ನು ನೀಡಬಲ್ಲೆವು ಎಂಬುದನ್ನು ತೋರಿಸಿದ್ದೇವೆ, ಇತ್ತಂಡಗಳ ಡಿಫೆನ್ಸ್ ವಿಭಾಗ ಬಲಿಷ್ಠವಾಗಿದೆ, ಆಕ್ರಮಣಕಾರಿ ಮಿಡ್ ಫೀಲ್ಡ್ ಕೂಡ ಇತ್ತಂಡಗಳ ಶಕ್ತಿಯಾಗಿದೆ, ನಾವು ಯಾವ ರೀತಿಯಲ್ಲಿ ಎದುರಾಳಿ ತಂಡವನ್ನು ನಿಯಂತ್ರಿಸುತ್ತೇವೆ ಎಂಬುದು ಮುಖ್ಯವಾಗಿದೆ,''ಚೆನ್ನೈಯಿನ್ ತಂಡದ ಕೋಚ್ ಓವೆನ್ ಕೊಯ್ಲ್ ಹೇಳಿದ್ದಾರೆ.

Story first published: Saturday, February 29, 2020, 8:46 [IST]
Other articles published on Feb 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X