ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಜೆಮ್ಷೆಡ್ಪುರದ ದೌರ್ಬಲ್ಯದ ಮೇಲೆ ಯಶಸ್ಸು ಕಾಣಲು ಗುರಿ ಇಟ್ಟ ಬೆಂಗಳೂರು

By Isl Media
ISL 2020: Bengaluru FC vs Jamshedpur FC, 41 Match, Preview

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ಬೆಂಗಳೂರು ಎಫ್ ಸಿ ಮತ್ತು ಜೆಮ್ಷೆಡ್ಪುರ ಎಫ್ ಸಿ ತಂಡಗಳು ಸೋಮವಾರ ಮುಖಾಮುಖಿಯಾಗುತ್ತಿದ್ದು, ಅಂತಿಮ ಕ್ಷಣದವರೆಗೂ ಹೋರಾಟ ನೀಡುವ ಇತ್ತಂಡಗಳು ಜಯವನ್ನೇ ಗುರಿಯಾಗಿಸಿಕೊಂಡಿವೆ. ದ್ವಿತಿಯಾರ್ಧದಲ್ಲಿ ಗೋಲು ಗಳಿಸಿ ಜಯವನ್ನು ತನ್ನದಾಗಿಸಿಕೊಳ್ಳುವ ಬೆಂಗಳೂರು ತಂಡ ಇದುವರೆಗೂ ದ್ವಿತಿಯಾರ್ಧದಲ್ಲಿ ಗೋಲು ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಸೋಮವಾರ ಎದುರಾಗಲಿರುವ ಜೆಮ್ಷೆಡ್ಪುರ ಎಫ್ ಸಿ ದ್ವಿತಿಯಾರ್ಧದಲ್ಲಿ ಗೋಲು ನೀಡಿ ಸೋಲಿಗೆ ಶರಣಾದದ್ದೇ ಹೆಚ್ಚು.

ಐಸಿಸಿ ಟಿ20 ದಶಕದ ತಂಡದಲ್ಲಿ 4 ಭಾರತೀಯರು, 4 ಎಂಐ ಆಟಗಾರರು!ಐಸಿಸಿ ಟಿ20 ದಶಕದ ತಂಡದಲ್ಲಿ 4 ಭಾರತೀಯರು, 4 ಎಂಐ ಆಟಗಾರರು!

6ನೇ ಸ್ಥಾನದಲ್ಲಿರುವ ಜೆಮ್ಷೆಡ್ಪುರ ತಂಡ ದ್ವಿತಿಯಾರ್ಧದಲ್ಲಿ ಶೇ. 66.67 ರಷ್ಟು ಪ್ರಮಾಣದಲ್ಲಿ ಗೋಲನ್ನು ನೀಡಿದೆ. ಕೇರಳ ಬ್ಲಾಸ್ಟರ್ಸ್ (8) ಮತ್ತು ಎಸ್ ಸಿ ಈಸ್ಟ್ ಬೆಂಗಾಲ್ (11) ದ್ವಿತಿಯಾರ್ಧದಲ್ಲಿ ಅತಿ ಹೆಚ್ಚು ಗೋಲು ನೀಡಿರುವ ತಂಡಗಳು. ಇದರ ಜತೆಯಲ್ಲಿ ಓವೆನ್ ಕಾಯ್ಲ್ ಪಡೆ ಅಂತಿಮ 15 ನಿಮಿಷಗಳಲ್ಲಿ ಇದುವರೆಗೂ ನಾಲ್ಕು ಗೋಲುಗಳನ್ನು ನೀಡಿ ಸೋಲಿಗೆ ಶರಣಾಗಿದೆ.

ಐಸಿಸಿ ದಶಕದ ಟೆಸ್ಟ್ ತಂಡದಲ್ಲಿ ಇಬ್ಬರು ಟೀಮ್ ಇಂಡಿಯಾ ಆಟಗಾರರುಐಸಿಸಿ ದಶಕದ ಟೆಸ್ಟ್ ತಂಡದಲ್ಲಿ ಇಬ್ಬರು ಟೀಮ್ ಇಂಡಿಯಾ ಆಟಗಾರರು

ಯಾವುದೇ ತಂಡವು ಈ ರೀತಿಯಲ್ಲಿ ಎದುರಾಳಿ ತಂಡಕ್ಕೆ ಗೋಲು ನೀಡಿರಲಿಲ್ಲ. ಬೆಂಗಳೂರು ತಂಡ ಟಾಟಾ ಪಡೆಯ ಈ ದೌರ್ಬಲ್ಯವನ್ನು ಸದುಪಯೋಗಪಡಿಸಿಕೊಳ್ಳಲು ಸಜ್ಜಾಗಿದೆ.

ಸ್ಥಿರ ಪ್ರದರ್ಶನ ನೀಡುತ್ತ ಬಂದಿದೆ

ಸ್ಥಿರ ಪ್ರದರ್ಶನ ನೀಡುತ್ತ ಬಂದಿದೆ

ಮೂರನೇ ಸ್ಥಾನದಲ್ಲಿರುವ ಬೆಂಗಳೂರು ಈ ಋತುವಿನಲ್ಲಿ ಸ್ಥಿರ ಪ್ರದರ್ಶನ ನೀಡುತ್ತ ಬಂದಿದೆ. ಎಟಿಕೆ ಮೋಹನ್ ಬಾಗನ್ ವಿರುದ್ಧ 0-1 ಗೋಲಿನ ಅಂತರದಲ್ಲಿ ಸೋಲುವ ಮೂಲಕ ಬೆಂಗಳೂರು ತಂಡವನ್ನು ಸೋಲಿಸಮಬಹುದು ಎಂಬುದು ಸಾಬೀತಾಗಿದೆ. ಇದು ಪ್ರಸಕ್ತ ಋತುವಿನಲ್ಲಿ ಬೆಂಗಳೂರು ತಂಡ ಕಂಡ ಮೊದಲ ಸೋಲಾಗಿದೆ. ಜೆಮ್ಷೆಡ್ಪುರ ತಂಡ ಗೋವಾ ವಿರುದ್ಧದ ಪಂದ್ಯದಲ್ಲಿ ಅಂಕವನ್ನು ಹಂಚಿಕೊಂಡಿತ್ತು. ಗಾಯಗೊಂಡಿರುವ ಮತ್ತು ಜಯದ ಹಸಿವಿನಲ್ಲಿರುವ ಜೆಮ್ಷೆಡ್ಪುರ ತಂಡ ಜಯಕ್ಕಾಗಿ ಹಾತೊರೆಯುತ್ತಿದೆ ಎಂದು ಬೆಂಗಳೂರು ತಂಡದ ಕೋಚ್ ಕಾರ್ಲ್ಸ್ ಕ್ಬಾಡ್ರಾಟ್ ಹೇಳಿದ್ದಾರೆ.
"ಜೆಮ್ಷೆಡ್ಪುರ ತಂಡದ ಆಟಗಾರರು ಉತ್ತಮ ರೀತಿಯಲ್ಲಿ ಆಡುತ್ತಿದ್ದಾರೆ. ಅವರು ಹೆಚ್ಚು ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿರಲು ನಿಜವಾಗಿಯೂ ಅರ್ಹರು. ನಾವು ಜೆಮ್ಷೆಡ್ಪುರವನ್ನು ನಿಯಂತ್ರಿಸಬೇಕಾಗಿದೆ. ಅವರ ವಿದೇಶಿ ಆಟಗಾರರು ಉತ್ತಮ ರೀತಿಯಲ್ಲಿ ಪ್ರಸರ್ಶನ ನೀಡುತ್ತಿದ್ದಾರೆ. ಅವರಲ್ಲಿರುವ ಭಾರತದ ಯುವ ಆಟಗಾರರೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೆಮ್ಷೆಡ್ಪುರ ತಂಡ ಒಂದು ಕಠಿಣ ಎದುರಾಳಿ ತಂಡ. ಆದರೆ ನಮ್ಮಲ್ಲಿ ನಮ್ಮದೇ ಆದ ಯೋಜನೆ ಇದೆ, ಆ ಮೂಲಕ ನಾವು ಮೂರು ಆಂಕಗಳನ್ನು ಗಳಿಸಲಿದ್ದೇವೆ," ಎಂದು ಕ್ಬಾಡ್ರಾಟ್ ಹೇಳಿದ್ದಾರೆ.

ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನವಿಲ್ಲ

ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನವಿಲ್ಲ

ಗೋಲುಗಳನ್ನು ಗಳಿಸುವುದು ಬೆಂಗಳೂರು ತಂಡಕ್ಕೆ ಕಷ್ಟದ ಕೆಲಸವಲ್ಲದಿದ್ದರೂ, ತಂಡದ ಡಿಫೆನ್ಸ್ ವಿಭಾಗ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿಲ್ಲ. ತಂಡ ಆಡಿರುವ 7 ಪಂದ್ಯಗಳಲ್ಲಿ ಈಗಾಗಲೇ 8 ಗೋಲುಗಳನ್ನು ಎದುರಾಳೀ ತಂಡಕ್ಕೆ ಗಳಿಸಲು ಅವಕಾಶ ನೀಡಿದೆ. ಆದರೆ 2019-20ರ ಋತುವಿನಲ್ಲಿ ತಂಡ ನೀಡಿದ್ದು ಬರೇ 9 ಗೋಲುಗಳನ್ನು.
ಜೆಮ್ಷೆಡ್ಪುರ ತಂಡ ಎದುರಾಳಿ ತಂಡದ ಭದ್ರತಾ ಕೋಟೆಯನ್ನು ಮುರಿಯಲು ನೆರಿಜಸ್ ವಾಸ್ಕೀಸ್ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಲಿಥುವೇನಿಯಾದ ಆಟಗಾರ ಇದುವೆರಗೂ ಆರು ಗೋಲುಗಳನ್ನು ಗಳಿಸಿ ತಂಡಕ್ಕೆ ನೆರವಾಗಿದ್ದಾರೆ. ಆದರೆ ಬಿಎಫ್ ಸಿ ವಿರುದ್ಧ ಅವರು ಇನ್ನೂ ಗೋಲು ಗಳಿಸಬೇಕಾಗಿದೆ, "ನಮ್ಮಲ್ಲಿ ಗೋಲನ್ನು ನಿಯಂತ್ರಿಸುವ ಯೋಜನೆ ಇದೆ. ಕಳೆದ ಋತುವಿನಲ್ಲಿ ನಾವು ಕಡಿಮೆ ಗೋಲುಗಳನ್ನು ಬಿಟ್ಟುಕೊಟ್ಟಿದ್ಸೇವೆ. ವಾಸ್ಕಿಸ್ ಅವರಿಗೆ ನಮ್ಮ ವಿರುದ್ಧ ಕಳೆದ ಋತುವಿನಲ್ಲಿ ಗೋಲು ಗಳಿಸಲು ಕಷ್ಟವಾಗಿತ್ತು. ಮುಂದಿನ ಪಂದ್ಯಕ್ಕೂ ನಾವು ಅದೇ ರೀತಿಯ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದ್ದೇವೆ," ಎಂದರು.

ಕೊಯ್ಲ್ ಧನಾತ್ಮಕವಾಗಿದ್ದಾರೆ

ಕೊಯ್ಲ್ ಧನಾತ್ಮಕವಾಗಿದ್ದಾರೆ

ಮುಂಬರುವ ಪಂದ್ಯದ ಬಗ್ಗೆ ಓವೆನ್ ಕೊಯ್ಲ್ ಧನಾತ್ಮಕವಾಗಿದ್ದಾರೆ. ಜೆಮ್ಷೆಡ್ಪುರ ತಂಡಕ್ಕೆ ಹೆಚ್ಚು ಅವಕಾಶಗಳನ್ನು ಕಲ್ಪಿಸುವ ಐಟರ್ ಮನ್ರಾಯ್ ಕೂಡ ವಾಸ್ಕಿಸ್ ಅವರಂತೆ ಪ್ರಮುಖ ಆಟಗಾರ. "ಎರಡೂ ತಂಡಗಳೀಗೂ ಇದು ಅತ್ಯಂತ ಕಠಿಣ ಪಂದ್ಯ. ಬಿಎಫ್ ಸಿ ಬಗ್ಗೆ ಸಾಕಷ್ಟು ಗೌರವಿಸುವ ತಂಡ. ಅವರಲ್ಲಿ ಉತ್ತಮ ಕೋಚ್ ಹಾಗೂ ಉತ್ತಮ ಆಟಗಾರರಿದ್ದಾರೆ. ಉತ್ತಮ ರೀತಿಯಲ್ಲಿ ಕಠಿಣ ಅಭ್ಯಾಸ ನಡೆಸುವ ಮತ್ತು ಸಂಘಟಿತ ತಂಡವಾಗಿದೆ. ನಾವು ಬಲಿಷ್ಠ ತಂಡದ ವಿರುದ್ಧ ಆಡಲು ಉತ್ಸುಕರಾಗಿದ್ದೇವೆ. ನಮ್ಮಲ್ಲಿ ಪಂದ್ಯ ಗೆಲ್ಲುವ ಸಾಮರ್ಥ್ಯ ಇದೆ ಆದರೆ ಬಿಎಫ್ ಸಿ ವಿರುದ್ಧ ನಾವು ನಮ್ಮ ಉತ್ತಮ ಪ್ರದರ್ಶನ ನೀಡಬೇಕಾಗಿದೆ," ಎಂದು ಕೊಯ್ಲ್ ಹೇಳಿದ್ದಾರೆ.

Story first published: Monday, December 28, 2020, 15:13 [IST]
Other articles published on Dec 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X