ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಗೋವಾಕ್ಕೆ ಸೋಲುಣಿಸಿ ಜಯದ ಲಯಕ್ಕೆ ಮರಳಿದ ಚೆನ್ನೈ

By Isl Media
ISL 2020: Chennaiyin rise to the cause as Goa lose again

ಗೋವಾ, ಡಿಸೆಂಬರ್ 20: ನಾಯಕ ರೆಫಾಯಲ್ ಕ್ರೆವೆಲ್ಲಿರೋ (5ನೇ ನಿಮಿಷ) ಹಾಗೂ ಬದಲಿ ಆಟಗಾರ ರಹೀಂ ಆಲಿ (53ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಬಲಿಷ್ಠ ಎಫ್ ಸಿ ಗೋವಾ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಚೆನ್ನೈಯಿನ್ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ಜಯದ ಲಯ ಕಂಡುಕೊಂಡಿದೆ. ಗೋವಾ ಪರ ಜಾರ್ಜ್ ಮೆಂಡೋನ್ಸಾ (9ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ಗೋವಾ ತಂಡ ಹಿಂದಿನ ಋತುವಿನ ಸೋಲಿನ ಸೇಡನ್ನು ತೀರಿಸಿಕೊಳ್ಳುವಲ್ಲಿ ವಿಫಲವಾಯಿತು.

ಮುನ್ನಡೆದ ಚೆನ್ನೈಯಿನ್: 53ನೇ ನಿಮಿದಲ್ಲಿ ಚೆನ್ನೈಯಿನ್ ತಂಡಕ್ಕೆ ಮತ್ತೊಂದು ಯಶಸ್ಸು. ಈ ಬಾರಿಯ ಗೋಲಿನಲ್ಲೂ ಕ್ರೆವೆಲ್ಲೆರೋ ಪಾತ್ರ ಪ್ರಮುಖವಾಗಿತ್ತು. ಕ್ರೆವೆಲ್ಲಿರೋ ನೀಡಿದ ಪಾಸ್ ಗೆ ರಹೀಂ ಅಲಿ ಉತ್ತಮ ರೀತಿಯಲ್ಲಿ ಸ್ಪಂದಿಸಿ 53ನೇ ನಿಮಿಷದಲ್ಲಿ ತಂಡದ ಪರ ಎರಡನೇ ಗೋಲು ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದರೊಂದಿಗೆ ಚೆನ್ನೈಯಿನ್ ತಂಡ ಜಯಕ್ಕೆ ಅಗತ್ಯ ಇರುವ 2-1 ಮುನ್ನಡೆ ಕಾಯ್ದಕೊಂಡಿತು.

ಐಎಸ್‌ಎಲ್: ಹೈದರಾಬಾದ್ ಎಫ್‌ಸಿ, ಮುಂಬೈ ಸಿಟಿ ನಡುವೆ ರೋಚಕ ಪಂದ್ಯಐಎಸ್‌ಎಲ್: ಹೈದರಾಬಾದ್ ಎಫ್‌ಸಿ, ಮುಂಬೈ ಸಿಟಿ ನಡುವೆ ರೋಚಕ ಪಂದ್ಯ

ಪಂದ್ಯದ ಗತಿ ಬದಲಾಯಿಸಿದ ರಹೀಂ

ಪಂದ್ಯದ ಗತಿ ಬದಲಾಯಿಸಿದ ರಹೀಂ

ಬದಲಿ ಆಟಗಾರ ರಹೀಂ ಅಲಿ ಪಂದ್ಯದ ಗತಿಯನ್ನೇ ಬದಲಾಯಿಸಿರುವುದು ವಿಶೇಷ. ನಿರಂತರ ಶ್ರಮ ಯಶಸ್ಸು ತಂದು ಕೊಡುತ್ತದೆ ಎಂಬುದಕ್ಕೆ ರಫಾಯಲ್ ಅವರ ಹೋರಾಟ ಉದಾಹರಣೆಯಾಗಿತ್ತು. ದ್ವಿತಿಯಾರ್ಧದಲ್ಲಿ ಚೆನ್ನೈಯಿನ್ ಮೇಲುಗೈ ಸಾಧಿಸಿತು. ಗೋವಾ ಸೇಡು ತೀರಿಸಿಕೊಳ್ಳಲು ಮತ್ತೆ ತೀವ್ರ ಹಯಪೋಟಿ ನೀಡಿತು, ಪಾಸೊಂದು ರಫಾಯೆಲ್ ಕ್ರೆವೆಲ್ಲಿರೋ ಅವರ ನಿಯಂತ್ರಣಕ್ಕೆ ಸಿಕ್ಕಿತು. ಅವರು ಚೆಂಡನ್ನು ಮುಂದುವರಿಸಿಕೊಂಡು ಮುಂದೆ ಸಾಗಿದರು, ನೇರವಾಗಿ ಗೋಲ್ ಬಾಕ್ಸ್ ಗೆ ತುಳಿದರೆ ಅದರಿಂದ ಯಶಸ್ಸು ಸಿಗುವುದು ಸಂಶಯವೆಂದು ತಿಳಿದು ಚೆಂಡನ್ನು ರಹೀಂ ಇರುವಲ್ಲಿಗೆ ತಳ್ಳಿದರು. ನಾಯಕನ ಜಾಣ್ಮೆಯ ಆಟ ಇಲ್ಲಿ ಕೆಲಸ ಮಾಡಿತು. ರಹೀಂ ಅವರನ್ನು ತಡೆಯಲು ಯಾರೂ ಇಲ್ಲದ ಕಾರಣ ಸುಲಭವಾಗಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು.

ಸಮಬಲದ ಪ್ರಥಮಾರ್ಧ

ಸಮಬಲದ ಪ್ರಥಮಾರ್ಧ

ಚೆನ್ನೈಯಿನ್ ಎಫ್ ಸಿ ಮತ್ತು ಎಫ್ ಸಿ ಗೋವಾ ನಡುವಿನ ಪಂದ್ಯ ನಿರೀಕ್ಷೆಯಂತೆ ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಯಿತು. ಪಂದ್ಯ ಆರಂಭಗೊಂಡ ಹತ್ತು ನಿಮಿಷಗಳಲ್ಲೇ ಇತ್ತಂಡಗಳು ತಲಾ ಒಂದೊಂದು ಗೋಲು ಗಳಿಸಿ 1-1ರಲ್ಲಿ ಸಮಬಲ ಸಾಧಿಸಿದವು. ರಫಾಯೆಲ್ ಕ್ರಿವೆಲ್ಲಿರೋ ಪಂದ್ಯ ಆರಂಭಗೊಂಡ 5ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ನಿರೀಕ್ಷೆಯಂತೆ ಮುನ್ನಡೆ ಕಲ್ಪಿಸಿದರು. ಕಾರ್ನರ್ ನಲ್ಲಿ ಸ್ಥಿತರಾಗಿದ್ದ ಕ್ರೆವೆಲ್ಲಿರೋ ಅವರಿಗೆ ಉತ್ತಮ ಪಾಸ್ ದೊರೆತು ಅದ್ಭುತವಾದ ಗೋಲು ಗಳಿಸಿ ಎದುರಾಳಿ ತಂಡದಲ್ಲಿ ಅಚ್ಚರಿ ಮೂಡಿಸಿದರು.

ಇತ್ತಂಡಗಳ ಅದ್ಭುತ ಹೋರಾಟ

ಇತ್ತಂಡಗಳ ಅದ್ಭುತ ಹೋರಾಟ

ಹಿಂದಿನ ಋತುವಿನ ಎರಡನೇ ಸೆಮಿಫೈನಲ್ ನಲ್ಲಿ ಚೆನ್ನೈಯಿನ್ ತಂಡ ಗೋವಾಕ್ಕೆ ಸೋಲುಣಿಸಿ ಫೈನಲ್ ಗೆ ಲಗ್ಗೆ ಇಟ್ಟಿತ್ತು. ಇದರ ಸೇಡು ತೀರಿಸಿಕೊಳ್ಳಬೇಕೆಂಬ ತವಕದಲ್ಲಿದ್ದ ಗೋವಾಕ್ಕೆ ಆರಂಭದಲ್ಲೇ ಆಘಾತ ಅನುಭವಿಸುವಂತಾಯಿತು. ಈ ರೀತಿಯ ಹೋರಾಟ ನಿತ್ಯವೂ ಕಾಣಸಿಗುವುದು ಕಷ್ಟ ಸಾಧ್ಯ. ಇದು ಚೆನ್ನೈಯಿನ್ ದಾಖಲಿಸಿದ ಅದ್ಭುತ ಗೋಲಾಗಿತ್ತು. ಆದರೆ ಹೋರಾಟವನ್ನು ಮುಂದುವರಿಸಿದ ಗೋವಾಕ್ಕೆ 9ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಜಾರ್ಜ್ ಮೆಡೊನ್ಸಾ 9ನೇ ನಿಮಿಷದಲ್ಲಿ ಗಳಿಸಿದ ಗೋಲು ಚೆನ್ನೈಯಿನ್ ತಂಡದ ಮುನ್ನಡೆಯ ಸಂಭ್ರಮವನ್ನು ಹೆಚ್ಚು ಕಾಲ ಉಳಿಯದಂತೆ ಮಾಡಿತು. ಇದು ಫುಟ್ಬಾಲ್ ಪಂದ್ಯವೊಂದರ ಇತ್ತಮ ಆರಂಭ ಎಂದರೆ ತಪ್ಪಾಗಲಾರದು. ಇತ್ತಂಡಗಳು ತಮ್ಮ ಅವಕಾಶಕ್ಕಾಗಿ ಹೋರಾಟದ ಆಟವನ್ನು ಮುಂದುವರಿಸಿದವು. 26ನೇ ನಿಮಿಷದಲ್ಲಿ ಲಾಲ್ರಿಯಾನ್ಜುವಾಲಾ ಚಾಂಗ್ಟಡಗೆ 2-1ರ ಮುನ್ನಡೆ ಕಾಣುವ ಅವಕಾಶವಿದ್ದಿತ್ತು. ಆದರೆ ಗೋಲ್ ಬಾಕ್ಸ್ ಗೆ ಗುರಿ ಇಟ್ಟು ತುಳಿದ ಚೆಂಡು ಗಾಳಿಯಲ್ಲಿ ಹಾದು ಕ್ರಾಸ್ ಬಾರ್ ಗೆ ತಗಲಿತು.

Story first published: Sunday, December 20, 2020, 10:40 [IST]
Other articles published on Dec 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X