ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಮನೆಯಂಗಣದಲ್ಲಿ ಗೆದ್ದು ಅಗ್ರಸ್ಥಾನಕ್ಕೇರಿದ ಎಫ್‌ಸಿ ಗೋವಾ

By Isl Media
ISL 2020: Erratic NorthEast help Goa reclaim top spot

ಗೋವಾ, ಜನವರಿ 8: ಮಿಸ್ಲಾವ್ ಕೊಮೊಸ್ಕಿ 68ನೇ ನಿಮಿಷದಲ್ಲಿ ನೀಡಿದ ಉಡುಗೊರೆ ಗೋಲು ಹಾಗೂ ಫೆರಾನ್ ಕೊರೊಮಿನಾಸ್ (82ನೇ ನಿಮಿಷ) ಗಳಿಸಿದ ಗೋಲು ಗೋವಾ ತಂಡಕ್ಕೆ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ 2-0 ಗೋಲಿನ ಜಯ ತಂದುಕೊಟ್ಟಿತು. ಈ ಜಯದೊಂದಿಗೆ ಗೋವಾ ಮತ್ತೆ ಅಗ್ರಸ್ಥಾನಕ್ಕೇರಿತು, ದ್ವಿತಿಯಾರ್ಧದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ಆಕ್ರಮಣಕಾರಿ ಆಟಕ್ಕೆ ಮನ ಮಾಡಿತು. ಪರಿಣಾಮ ಪ್ರಮಾದದ ಹೆಜ್ಜೆ ಇಟ್ಟಿತು. ಒಂದು ಉಡುಗೊರೆ ಗೋಲು ನೀಡಿತಲ್ಲದೆ, ಕೊನೆಯ 15 ನಿಮಿಷಗಳ ಆಟವನ್ನು ಕೇವಲ ಹತ್ತುಮಂದಿ ಆಡಬೇಕಾಯಿತು. ಫೆರಾನ್ ಕೊರೊಮಿನಾಸ್ ಪ್ರಸಕ್ತ ಋತುವಿನಲ್ಲಿ ಎಂಟನೇ ಗೋಲು ಗಳಿಸಿದರು.

ಗೋಲಿಲ್ಲದ ಪ್ರಥಮಾರ್ಧ
ಪ್ರಥಮಾರ್ಧದಲ್ಲಿ ಇತ್ತಂಡಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ಆರಂಭದಿಂದಲೂ ಗೋವಾ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆದರೆ ಗೋಲು ಗಳಿಸಲಾಗಲಿಲ್ಲ. ಪ್ರವಾಸಿ ನಾರ್ಥ್ ಈಸ್ಟ್ ಯುನೈಟೆಡ್ ಗೋವಾದ ಆಕ್ರಮಣವನ್ನು ಉತ್ತಮ ರೀತಿಯಲ್ಲಿ ತಡೆಯಿತು. ಪಂದ್ಯ ಆರಂಭಗೊಂಡ 9ನೇ ನಿಮಿಷದಲ್ಲಿ ಗೋವಾಕ್ಕೆ ಗೋಲು ಗಳಿಸುವ ಆವಕಾಶ ಉತ್ತಮವಾಗಿತ್ತು. ಆದರೆ ಫೆರಾನ್ ಕೊರೊಮಿನಾಸ್ ಅವರ ಗುರಿ ತಪ್ಪಿತ್ತು. 19ನೇ ನಿಮಿಷದಲ್ಲೂ ಹ್ಯುಗೋ ಬೌಮಾಸ್ ನೀಡಿದ ಉತ್ತಮ ಪಾಸ್ ಗೆ ಜಾಕಿಚಾಂದ್ ಸಿಂಗ್ ಉತ್ತಮ ರೀತಿಯಲ್ಲಿ ಪ್ರತಿಕ್ರಯಿಸುವಲ್ಲಿ ವಿಫಲರಾಗಿ ಗೋಲು ಗಳಿಸುವ ಅವಕಾಶ ತಪ್ಪಿಹೋಯಿತು.

ISL 2020: Erratic NorthEast help Goa reclaim top spot

ಅಗ್ರ ಸ್ಥಾನದ ಹಂಬಲ
ಇಂಡಿಯನ್ ಸೂಪರ್ ಲೀಗ್ ನ 54ನೇ ಪಂದ್ಯದಲ್ಲಿ ಎಫ್ ಸಿ ಗೋವಾ ತಂಡ ನಾರ್ಥ್ ಈಸ್ಟ್ ಯುನೈಟೆಡ್ ಗೆ ಆತಿಥ್ಯ ನೀಡಿತು. ಪ್ರವಾಸಿ ತಂಡಕ್ಕೆ ದಶಕದ ಮೊದಲ ಪಂದ್ಯವಾಗಿತ್ತು. ಗೋವಾ ವಿರುದ್ಧ ಗೆದ್ದು ಮನೆಯಿಂದ ಹೊರಗಡೆ ಅಜೇಯದ ಓಟವನ್ನು ಮುಂದುವರಿಸುವ ಹಂಬಲದೊಂದಿಗೆ ಅಂಗಣಕ್ಕಿಳಿಯಿತು. ಪರ್ವತ ಪ್ರದೇಶದ ತಂಡ ಈ ಋತುವನ್ನು ಉತ್ತಮ ರೀತಿಯಲ್ಲೇ ಆರಂಭಿಸಿತ್ತು. ಆದರೆ ಡಿಸೆಂಬರ್ ನಂತರ ತಂಡದ ಪ್ರದರ್ಶನದಲ್ಲಿ ಯಶಸ್ಸಿನ ಹೆಜ್ಜೆ ಮೂಡಲಿಲ್ಲ.

ಈ ಹಿಂದಿನ ಪಂದ್ಯದಲ್ಲಿ ಇತ್ತಂಡಗಳು ತಲಾ 2 ಗೋಲು ಗಳಿಸಿ ಸಮಬಲ ಸಾಧಿಸಿದ್ದವು. ಅಮಾನತಿನ ಕಾರಣ ಗೋಲ್ ಕೀಪರ್ ಸುಭಾಶೀಶ್ ರಾಯ್ ಈ ಪಂದ್ಯದಲ್ಲಿ ಆಡುತ್ತಿಲ್ಲ. 9 ಪಂದ್ಯಗಳನ್ನಾಡಿರುವ ನಾರ್ಥ್ ಈಸ್ಟ್ ಯುನೈಟೆಡ್ 8ನೇ ಸ್ಥಾನದಲ್ಲಿದೆ. ಅಸಮೋಹ್ ಗ್ಯಾನ್ ಗೋವಾ ತಂಡಕ್ಕೆ ಆತಂಕ ಹುಟ್ಟಿಸಬಲ್ಲ ಆಟಗಾರ. ರೆಡೀಮ್ ತ್ಲಾಂಗ್ ಮತ್ತು ಮಾರ್ಟಿನ್ ಚಾವೇಸ್ ಉತ್ತಮ ರೀತಿಯಲ್ಲಿ ಬೆಂಬಲ ನೀಡಿದರೆ ಗೋವಾಕ್ಕೆ ಜಯದ ಹಾದಿ ಕಠಿಣವಾಗಲಿದೆ.

ಆತಿಥೇಯ ಗೋವಾ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಹಂಚಿಕೊಂಡಿದ್ದು ಸುಸ್ಥಿತಿಯಲ್ಲಿದೆ. ಇಲ್ಲಿ ಮತ್ತೆ ಮೂರು ಅಂಕ ಗಳಿಸಿ ಅಗ್ರ ಸ್ಥಾನ ತಲಪುವ ಗುರಿ ಗೋವಾ ತಂಡದ್ದು. 23 ಗೋಲುಗಳನ್ನು ಗಳಿಸಿರುವ ಗೋವಾ ತಂಡ ಇದುವರೆಗೂ ಈ ಋತುವಿನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ತಂಡವೆನಿಸಿದೆ. ಫೆರಾನ್ ಕೊರೊಮಿನಾಸ್ 7 ಗೋಲುಗಳನ್ನು ಗಳಿಸಿ ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Story first published: Wednesday, January 8, 2020, 22:47 [IST]
Other articles published on Jan 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X