ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಮೊದಲ ಜಯದ ನಿರೀಕ್ಷೆಯಲ್ಲಿ ಈಸ್ಟ್ ಬೆಂಗಾಲ್

By Isl Media
ISL 2020: Fowler plots East Bengal revival against NorthEast

ಗೋವಾ: ಎಟಿಕೆ ಮತ್ತು ಮುಂಬೈ ಸಿಟಿ ಎಫ್ ಸಿ ವಿರುದ್ಧ ಸತತ ಸೋಲಿನ ನಂತರ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಶನಿವಾರ ಇಲ್ಲಿನ ನಾರ್ಥ್ ಈಸ್ಟ್ ಯುನೈಟೆಡ್ ತಂಡದ ವಿರುದ್ಧ ನಡೆಯಲಿರುವ ಹೀರೊ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮೊದಲ ಜಯ ಗಳಿಸುವ ಗುರಿ ಹೊಂದಿದೆ. ಕೋಚ್ ರಾಬೀ ಫ್ಲವರ್ ಅವರ ಪಡೆ, ಇದುವೆರೆಗೂ ಎದುರಾಳಿಗಳಿಗೆ 5 ಗೋಲು ಗಳಿಸುವ ಅವಕಾಶ ನೀಡಿರುವ ರಾಬೀ ಫ್ಲವರ್ ಪಡೆ ಇನ್ನೂ ಗೋಲಿನ ಖಾತೆ ತೆರೆಯಲಿಲ್ಲ.

ಐಎಸ್‌ಎಲ್ ಯಶಸ್ಸು ಕೋವಿಡ್ ಭಯ ದೂರವಿಡುತ್ತದೆ: ಸೌರವ್ ಗಂಗೂಲಿಐಎಸ್‌ಎಲ್ ಯಶಸ್ಸು ಕೋವಿಡ್ ಭಯ ದೂರವಿಡುತ್ತದೆ: ಸೌರವ್ ಗಂಗೂಲಿ

ವೈಯಕ್ತಿಕ ಪ್ರಮಾದಗಳು ತಂಡದ ಸೋಲಿಗೆ ಕಾರಣವಾಯಿತು ಎಂದಿರುವ ಲಿವರ್ ಫೂಲ್ ತಂಡದ ಮಾಜಿ ಸ್ಟ್ರೈಕರ್ ಹೇಳಿದ್ದಾರೆ. "ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇಂಥ ಆಟಗಾರರನ್ನು ಪಡೆದಿರುವುದಕ್ಕೆ ಖುಷಿಯಾಗುತ್ತಿದೆ. ಅಂಗಣದ ಪ್ರತಿಯೊಂದು ವಿಭಾಗದಲ್ಲೂ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಪಂದ್ಯದ ಬಳಿಕದ ತಮಾಷೆಯ ಟ್ವೀಟ್‌ಗಳುಭಾರತ vs ಆಸ್ಟ್ರೇಲಿಯಾ: ಪಂದ್ಯದ ಬಳಿಕದ ತಮಾಷೆಯ ಟ್ವೀಟ್‌ಗಳು

ಆದರೆ ತಂಡದ ವೈಫಲ್ಯಗಳ ಬಗ್ಗೆ ನಾನು ದೂರು ನೀಡಲಾರೆ, ವೈಯಕ್ತಿಕ ಪ್ರಮಾದಗಳು ನಮ್ಮ ಹಿನ್ನಡೆಗೆ ಕಾರಣವಾಯಿತು," ಎಂದು ಫ್ಲವರ್ ಹೇಳಿದರು.

ಮುಂದುವರಿಸುವ ಗುರಿ ಹೊಂದಿದೆ

ಮುಂದುವರಿಸುವ ಗುರಿ ಹೊಂದಿದೆ

ಈ ಋತುವಿನಲ್ಲಿ ಉತ್ತಮ ಆರಂಭ ಕಂಡಿರುವ ನಾರ್ಥ್ ಈಸ್ಟ್ ಯುನೈಟೆಡ್ ಅದೇ ರೀತಿಯ ಆಟವನ್ನು ಮುಂದುವರಿಸುವ ಗುರಿ ಹೊಂದಿದೆ, "ನಾವು ಸ್ಪರ್ಧೆ ನೀಡುತ್ತೇವೆ. ನಾವು ಉತ್ತಮ ರೀತಿಯ ನಿರ್ದೇಶನದಲ್ಲಿ ಮುಂದೆ ಸಾಗುತ್ತಿದ್ದೇವೆ. ನಾವು ಸಾಕಷ್ಟು ಸುಧಾರಣೆ ಕಂಡುಕೊಳ್ಳಬೇಕಾಗಿದೆ. ಈ ಋತುವಿನಲ್ಲಿ ಗೋಲ್ ಸಾಕಷ್ಟು ಸ್ಪರ್ಧೆಯಿಂದ ಕೂಡಿರುತ್ತದೆ. ನಾವು ಒಂದು ಪಂದ್ಯದ ಬಗ್ಗೆ ಮಾತ್ರ ಗಮನಹರಿಸಬೇಕು. ಜಯಕ್ಕಾಗಿ ನಮ್ಮಿಂದಾದ ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ," ಎಂದು ನಾರ್ಥ್ ಈಸ್ಟ್ ಯುನೈಟೆಡ್ ನ ಕೋಚ್ ಗೆರಾರ್ಡ್ ನಸ್ ಹೇಳಿದ್ದಾರೆ.

ಸ್ವಲ್ಪ ಮಟ್ಟಿನ ಹಿನ್ನಡೆ ಕಂಡಿದೆ

ಸ್ವಲ್ಪ ಮಟ್ಟಿನ ಹಿನ್ನಡೆ ಕಂಡಿದೆ

ನಾರ್ಥ್ ಈಸ್ಟ್ ಯುನೈಟೆಡ್ ತಂಡ ಎಲ್ಲ ರೀತಿಯಲ್ಲೂ ಯಶಸ್ಸಿನ ಹೆಜ್ಜೆ ಇಟ್ಟಿರಬಹುದು, ಆದರೆ, ಓಪನ್ ಪ್ಲೇ ವಿಭಾಗದಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆ ಕಂಡಿದೆ. ಗಳಿಸಿರುವ ನಾಲ್ಕು ಗೋಲುಗಳಲ್ಲಿ ಮೂರು ಗೋಲು ಸೆಟ್-ಪೀಸ್ ಮೂಲಕ ದಾಖಲಾಗಿತ್ತು. "ನಾವು ಓಪನ್ ಪ್ಲೇ ಮತ್ತು ಸೆಟ್ ಪೀಸ್ ಮೂಲಕ ಗೋಲು ಗಳಿಸುವ ಕುರಿತು ಯತ್ನಿಸುತ್ತಿದ್ದೇವೆ. ನಾವು ಕೇವಲ ಒಂದು ಯೋಜನೆಗೆ ಆತುಕೊಂಡಿಲ್ಲ. ನಾವು ನಮ್ಮ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದೇವೆ. ನಾವು ಈಸ್ಟ್ ಬೆಂಗಾಲ್ ತಂಡದ ಆಟವನ್ನು ಗಮನಿಸಿದ್ದೇವೆ, ಅವರು ನಿರೀಕ್ಷಿಸಿದ ಫಲಿತಾಂಶ ಅವರಿಗೆ ಸಿಗಲಿಲ್ಲ. ಆದರೆ ಅದೊಂದು ಅಪಾಯಕಾರಿ ತಂಡ, ಚೆಂಡಿನೊಂದಿಗೆ ಅವರೆಷ್ಟು ಉತ್ತಮ ತಂಡ ಎಂಬುದನ್ನು ನಾವು ಬಲ್ಲೆವು, ಇದು ಕಠಿಣ ಪಂದ್ಯ ಎನಿಸಲಿದೆ. ಅವರದ್ದು ಉತ್ತಮ ರೀತಿಯಲ್ಲಿ ಸಂಘಟಿತ ತಂಡ. ಅವರನ್ನು ತಡೆದು ಅವರ ವಿರುದ್ಧವೇ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಗುರಿ,'' ಎಂದರು.

ಅನೇಕ ಹೊಸ ಮುಖಗಳಿವೆ

ಅನೇಕ ಹೊಸ ಮುಖಗಳಿವೆ

"ನಮ್ಮಲ್ಲಿ ಅನೇಕ ಹೊಸ ಮುಖಗಳಿವೆ. ನಮ್ಮಲ್ಲಿ ಆರು ಮಂದಿ ವಿದೇಶಿ ಆಟಗಾರಿದ್ದಾರೆ, ಉಳಿದವರೆಲ್ಲ ಭಾರತದ ಆಟಗಾರರು. ಇದೊಂದು ಅಲ್ಪ ಅವಧಿಯ ಫುಟ್ಬಾಲ್ ಋತು. ಮೊದಲ ದಿನದಿಂದ ನಾವು ಯೋಜನೆಗಳನ್ನು ರೂಪಿಸುತ್ತಿದ್ದೇವೆ.," ಎಂದು ನಸ್ ಹೇಳಿದರು.

Story first published: Saturday, December 5, 2020, 10:47 [IST]
Other articles published on Dec 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X