ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಬಲಿಷ್ಠ ಎಟಿಕೆ ಮೋಹನ್‌ ಬಗಾನ್ ತಂಡಕ್ಕೆ ಚೆನ್ನೈಯಿನ್‌ ಎಫ್‌ಸಿ ಸವಾಲು

By Isl Media
ISL 2020: High Flying ATK Mohun Bagan Aim for Top Spot Against Chennaiyin FC

ಗೋವಾ: ಪ್ರಸಕ್ತ ಇಂಡಿಯನ್ ಸೂಪರ್‌ ಲೀಗ್‌ ಟೂರ್ನಿಯಲ್ಲಿ ಎರಡು ಗೆಲುವಿನ ಬಳಿಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಚೆನ್ನೈಯಿನ್‌ ಎಫ್‌ಸಿ ತಂಡ ಇದೀದ ಬಲಿಷ್ಠ ಎಟಿಕೆ ಮೋಹನ್‌ ಬಗಾನ್‌ ತಂಡದ ವಿರುದ್ಧವೂ ದಿಟ್ಟ ಪ್ರದರ್ಶನ ನೀಡಲಿದೆ ಎಂದು ತಂಡದ ಮುಖ್ಯ ಕೋಚ್ ಸಾಬಾ ಲಾಝ್ಲೊ ವಿಶ್ವಾಸ ಹೊರಹಾಕಿದ್ದಾರೆ. ಇಲ್ಲಿನ ಜಿಎಮ್‌ಸಿ ಕ್ರೀಡಾಂಗಣದಲ್ಲಿ ಮಂಗಳವಾರ ಅಂಕಪಟ್ಟಿಯ 7ನೇ ಸ್ಥಾನಿ ಚೆನ್ನೈಯಿನ್‌ ಎಫ್‌ಸಿ ತಂಡವು ಅಂಕಪಟ್ಟಿಯ 2ನೇ ಸ್ಥಾನದಲ್ಲಿರುವ ಎಟಿಕೆ ಮೋಹನ್‌ ಬಗಾನ್‌ ತಂಡದ ವಿರುದ್ಧ ಪೈಪೋಟಿ ನಡೆಸಲಿದೆ.

ಮ್ಯಾಥ್ಯೂ ವೇಡ್-ರಿಷಭ್ ಪಂತ್ ಮಧ್ಯೆ ಬಿಸಿ ಬಿಸಿ ಸಂಭಾಷಣೆ: ವಿಡಿಯೋಗಳುಮ್ಯಾಥ್ಯೂ ವೇಡ್-ರಿಷಭ್ ಪಂತ್ ಮಧ್ಯೆ ಬಿಸಿ ಬಿಸಿ ಸಂಭಾಷಣೆ: ವಿಡಿಯೋಗಳು

ಚೆನ್ನೈ ತಂಡ ಟೂರ್ನಿಯಲ್ಲಿ ಈವರೆಗೆ 7 ಫಮದ್ಯಗಳನ್ನು ಆಡಿದ್ದು ತಲಾ 2 ಗೆಲುವು ಮತ್ತು ಸೋಲಿನೊಂದಿಗೆ 3 ಪಂದ್ಯಗಳಲ್ಲಿ ಡ್ರಾ ಫಲಿಲಾಂಶ ಕಂಡು ಒಟ್ಟು 9 ಅಂಕಗಳನ್ನು ಪಡೆದುಕೊಂಡಿದೆ. ವಿಶೇಷವೆಂದರೆ ಚೆನ್ನೈ ತಂಡದ ಪರ ಎಲ್ಲಾ ವಿಭಾಗಗಳಿಂದಲೂ ಗೋಲ್‌ ಹರಿದುಬರುತ್ತಿದ್ದು, ಈವರೆಗೆ ಒಟ್ಟು ಆರು ಆಟಗಾರರು ಚೆಂಡನ್ನು ಗೋಲ್‌ ಪೆಟ್ಟಿಗೆ ಸೇರಿಸಿ ಗಮನ ಸೆಳೆದಿದ್ದಾರೆ. ಆದರೆ, ತಂಡದ ಪ್ರಮುಖ ಸ್ಟ್ರೈಕರ್‌ಗಳು ಯಶಸ್ಸು ಕಾಣದೇ ಇರುವುದು ಚೆನ್ನೈ ತಂಡದ ಪ್ರಮುಖ ತಲೆಬಿಸಿಯಾಗಿದೆ.

ರನ್ ಮಷಿನ್ ವಿರಾಟ್ ಕೊಹ್ಲಿಗೆ ಐಸಿಸಿ ದಶಕದ ಒಡಿಐ ಕ್ರಿಕೆಟರ್ ಗೌರವರನ್ ಮಷಿನ್ ವಿರಾಟ್ ಕೊಹ್ಲಿಗೆ ಐಸಿಸಿ ದಶಕದ ಒಡಿಐ ಕ್ರಿಕೆಟರ್ ಗೌರವ

ಈ ಬಾರಿ ಅದ್ಭುತ ಆಟವಾಡುತ್ತಿರುವ ಮೋಹನ್‌ ಬಗಾನ್‌ ತಂಡದ ಎದುರು ಚೆನ್ನೈಯಿನ್‌ ಯಶಸ್ಸು ಕಾಣಬೇಕಾದರೆ ಮುಖ್ಯ ಸ್ಟ್ರೈಕರ್‌ ಯಾಕುಬ್‌ ಸಿಲ್ವೆಸ್ಟರ್‌ ತಮ್ಮ ಹಿಂದಿನ ವೈಫಲ್ಯಗಳಿಂದ ಹೊರಬಂದು ಚೆಂಡನ್ನು ಗುರಿ ಮುಟ್ಟಿಸುವ ಕಡೆಗೆ ಕಾಲ್ಚಳಕ ಪ್ರದರ್ಶಿಸಬೇಕಿದೆ.

ಗೋಲ್‌ಗಳು ಬರುತ್ತಿರುವುದಕ್ಕೆ ಸಂತಸ

ಗೋಲ್‌ಗಳು ಬರುತ್ತಿರುವುದಕ್ಕೆ ಸಂತಸ

ಈ ಬಗ್ಗೆ ಮಾತನಾಡಿರುವ ತಂಡದ ಮುಖ್ಯ ಕೋಚ್‌ ಲಾಝ್ಲೊ, ಎಲ್ಲಾ ವಿಭಾಗಗಳಿಂದ ಗೋಲ್‌ಗಳು ಬರುತ್ತಿರುವುದಕ್ಕೆ ಸಂತಸ ಹೊರಹಾಕಿದ್ದಾರೆ. "ನಮ್ಮ ತಂಡದಲ್ಲಿ ಕೇವಲ ಒಬ್ಬ ಆಟಗಾರ ಮಾತ್ರ ಗೋಲ್‌ ಗಳಿಸುತ್ತಿಲ್ಲ. ಎಲ್ಲಾ ಮೂಲೆಗಳಿಂದಲೂ ನಮಗೆ ಗೋಲ್‌ಗಳು ಬರುತ್ತಿವೆ. ಎಡ, ಬಲ ಮಧ್ಯ ಎಲ್ಲ ವಿಭಾಗಗಳಲ್ಲೂ ಆಟಗಾರರು ಗೋಲ್‌ ತಂದುಕೊಟ್ಟಿದ್ದಾರೆ. ಇದು ಒಂದು ರೀತಿ ನಮ್ಮ ತಂಡದ ರಣತಂತ್ರ ಕೂಡ," ಎಂದು ಲಾಝ್ಲೊ ಹೇಳಿದ್ದಾರೆ. ಹೇಳಿದ್ದಾರೆ.
ಆದರೆ, ಇದೇ ವೇಳೆ ಪ್ರಮುಖ ಸ್ಟ್ರೈಕರ್‌ಗಳು ಅವಕಾಶ ಬಳಸಿಕೊಳ್ಳದೇ ಇರುವ ಬಗ್ಗೆಯೂ ಲಾಝ್ಲೊ ಮಾತನಾಡಿದ್ದಾರೆ. ಅದರಲ್ಲಿ ಸ್ಟ್ರೈಕರ್‌ ಲಾಲಿಯಾನ್ಜುವಾಲ ಚಾಂಗ್ಟೆ ಹಲವು ಬಾರಿ ಗೋಲ್‌ ಗಳಿಸುವ ಉತ್ತಮ ಸ್ಥಿತಿಯಲ್ಲಿ ಇದ್ದರೂ ಕೂಡ ಅದನ್ನು ಪರಿವರ್ತಿಸದೇ ಹೋದರು. ಆದರೂ ಎಸ್‌ಸಿ ಈಸ್ಟ್‌ ಬೆಂಗಾಲ್‌ ಎದುರು ಯಶಸ್ಸು ಕಂಡರು. ಮತ್ತೊಂದೆಡೆ ಸಿಲ್ವೆಸ್ಟರ್‌ ಹೀನಾಯ ಪ್ರದರ್ಶನ ನೀಡಿದ್ದುಅತ್ಯಂತ ಕಡಿಮೆ ಗೋಕ್‌ ಗಳಿಕೆಯ ಸರಾಸರಿ (5.26) ಹೊಂದಿದ್ದಾರೆ.

ತಂಡದ ಪಾಲಿಗೆ ಅತ್ಯಂತ ಪ್ರಮುಖ

ತಂಡದ ಪಾಲಿಗೆ ಅತ್ಯಂತ ಪ್ರಮುಖ

"ನಮ್ಮ ತಂಡದ ಪ್ರಮುಖ ಸ್ಟ್ರೈಕರ್‌ಗಳು ಹೆಚ್ಚು ಗೋಲ್‌ಗಳನ್ನು ಗಳಿಸಿದರೆ ನನಗೆ ಸಂತಸ ಹೆಚ್ಚಲಿದೆ. ಕಳೆದ ಪಂದ್ಯದಲ್ಲೂ ಗೋಲ್‌ ಗಳಿಕೆಯ ಹಲವು ಅವಕಾಶಗಳನ್ನು ನಾವು ಕೈಚೆಲ್ಲಿದೆವು. ಆದರೆ ನಮ್ಮ ತಂಡದಲ್ಲಿ ಭಾರತೀಯ ಆಟಗಾರರು ಗೋಲ್‌ ಗಳಿಸುತ್ತಿರುವುದಕ್ಕೆ ಸಂಸತವಿದೆ. ರಹೀಮ್‌ ಅಲಿ, ಚಾಂಗ್ಟೆ ಮತ್ತು ಅನಿರುದ್ಧ ಥಾಪ ಯಶಸ್ಸು ಕಂಡಿರುವುದು ತಂಡದ ಪಾಲಿಗೆ ಅತ್ಯಂತ ಪ್ರಮುಖವಾದುದ್ದಾಗಿದೆ," ಎಂದು ಲಾಝ್ಲೊ ಹೇಳಿದ್ದಾರೆ.
ಎಟಿಕೆ ಮೋಹನ್‌ ಬಗಾನ್‌ ತಂಡ ಪಂದ್ಯದ ಕೊನೆಯ ನಿಮಿಷಗಳಲ್ಲಿ ಗೋಲ್‌ ಗಳಿಸುವ ತಂತ್ರ ಕಂಡುಕೊಂಡಿರುವ ಪರಿಣಾಮ ಚೆನ್ನೈಯಿನ್‌ ಎಫ್‌ಸಿ ಪಂದ್ಯ ಮುಗಿಯುವ ವರೆಗೂ ಕಟ್ಟೆಚ್ಚರ ವಹಿಸುವ ಅಗತ್ಯವಿದೆ. ಈ ಬಾರಿ ಒಟ್ಟು ನಾಲ್ಕು ಪಂದ್ಯಗಳಲ್ಲಿ ಕೊನೆಯ 15 ನಿಮಿಷಗಳಲ್ಲೊ ಬಾರಿಸಿದ ಗೋಲ್‌ಗಳಿಂದ ಎಟಿಕೆ ತಂಡ ಯಶಸ್ಸು ಕಂಡಿದೆ.

ಯೋಜನೆಗಳು ಸ್ಪಷ್ಟವಾಗಿರುವುದು ಮುಖ್ಯ

ಯೋಜನೆಗಳು ಸ್ಪಷ್ಟವಾಗಿರುವುದು ಮುಖ್ಯ

"ನೀವು ನಿಮ್ಮ ತಂಡದ ಆಟಗಾರರಿಗೆ ಒಂದು ಸಂಗತಿಯನ್ನಷ್ಟೇ ಹೇಳಿಕೊಟ್ಟು ಸಿದ್ಧಪಡಿಸಬಹುದು. ಆದರೆ ಎದುರಾಳಿ ತಂಡ ವಿಭಿನ್ನವಾದುದ್ದನ್ನು ಮಾಡುವ ಸಾಧ್ಯತೆಯೂ ಇರುತ್ತದೆ. ಆದರೆ, ನಿಮ್ಮ ಗುರಿ ಮತ್ತು ಯೋಜನೆಗಳು ಇಲ್ಲಿ ಸ್ಪಷ್ಟವಾಗಿರುವುದು ಮುಖ್ಯ. ಬಳಿಕ ಎದುರಾಳಿ ತಂತ್ರಕ್ಕೆ ಪ್ರತಿತಂತ್ರ ಹೂಡಲು ಸಾಧ್ಯವಾಗುತ್ತದೆ," ಎಂದು ಎಟಿಕೆ ಮೋಹನ್‌ ಬಾಗನ್‌ ತಂಡದ ಕೋಚ್ ಆಂಟೊನಿಯೊ ಲೋಪೆಝ್ ಹಬಾಸ್ ಹೇಳಿದ್ದಾರೆ.
ಅಂದಹಾಗೆ ಎಟಿಕೆ ಮೋಹನ್‌ ಬಗಾನ್‌ ತಂಡ ಪಂದ್ಯದಲ್ಲಿ ಗೆಲ್ಲುವ ಹಾಟ್‌ ಫೇವರಿಟ್‌ ತಂಡವಾಗಿ ಕಣಕ್ಕಿಳಿಯಲಿದೆ. ಆದರೆ ಹೀರೊ ಐಎಸ್‌ಎಲ್‌ ಟೂರ್ನಿಯಲ್ಲಿ ಯಾವ ಪಂದ್ಯಗಳು ಸುಲಭವಲ್ಲ ಎಂಬುದು ಕೋಚ್‌ ಹಬಾಸ್‌ ಅವರ ಅನುಭವಕ್ಕೆ ಈಗಾಗಲೇ ಬಂದಾಗಿದೆ.
"ಚೆನ್ನೈಯಿನ್‌ ಎಫ್‌ಸಿ ತಂಡದಲ್ಲಿ ಅತ್ಯುತ್ತಮ ಆಟಗಾರರಿದ್ದಾರೆ. ಹೀಗಾಗಿ ಈ ಪಂದ್ಯ ನಮ್ಮ ಪಾಲಿಗೆ ಕಠಿಣವಾಗಿರಲಿದೆ. ಪಂದ್ಯದ ಅಂತಿಮ ಕ್ಷಣದ ವರೆಗೂ ನಮ್ಮ ತಂಡದ ಆಟಗಾರರು ಏಕಾಗ್ರತೆ ಕಾಯ್ದುಕೊಂಡು ಆಡುವ ಅಗತ್ಯವಿದೆ," ಎಂದಿದ್ದಾರೆ.

Story first published: Tuesday, December 29, 2020, 16:38 [IST]
Other articles published on Dec 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X