ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಹೈದರಾಬಾದ್‌ಗೆ ಮನೆಯಂಗಣದಲ್ಲಿ ಕೊನೇ ಪಂದ್ಯ ಗೆಲ್ಲುವ ಹಂಬಲ

By Isl Media
ISL 2020: Hyderabad seek to stop the rot in final home game

ಹೈದರಾಬಾದ್, ಫೆಬ್ರವರಿ 13: ಗುರುವಾರ ಜಿಎಂಸಿ ಬಾಲಯೋಗಿ ಕ್ರೀಡಾಂಗಣದಲ್ಲಿ ಜೆಮ್ಷೆಡ್ಪುರ ಎಫ್‌ಸಿ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಹೈದರಾಬಾದ್ ತಂಡ ಮನೆಯಂಗಣದ ಕೊನೆಯ ಪಂದ್ಯದಲ್ಲಾದರೂ ಗೆದ್ದು ಗೌರವ ಕಾಯ್ದುಕೊಳ್ಳುವ ಗುರಿ ಹೊಂದಿದೆ.

ಆಡಿರುವ 16 ಪಂದ್ಯಗಳಲ್ಲಿ ಕೇವಲ ಎಂಟು ಅಂಕಗಳನ್ನು ಗಳಿಸಿರುವ ಹೈದರಾಬಾದ್ ಈ ಋತುವಿನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿರುವುದು ಸ್ಪಷ್ಟ. 13 ಪಂದ್ಯಗಳು ಬಾಕಿ ಇರುವಾಗ ಮೊದಲ ಜಯ ಗಳಿಸಿದ್ದ ಹೈದರಾಬಾದ್ ಎಫ್ ಸಿ ಆ ನಂತರ ಜಯ ಗಳಿಸಿರಲೇ ಇಲ್ಲ. ಐಎಸ್ ಎಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ಪ್ರದರ್ಶನ ತೋರಿರುವ ತಂಡವೆಂಬ ಕುಖ್ಯಾತಿಯಿಂದ ತಪ್ಪಿಸಿಕೊಳ್ಳಲು ಹೈದರಾಬಾದ್ ಈಗ ಜಯ ಗಳಿಸಲೇಬೇಕಾಗಿದೆ. ಕಳೆದ ಋತುವಿನಲ್ಲಿ ಚೆನ್ನೈಯಿನ್ ತಂಡ 9 ಅಂಕಗಳನ್ನು ಗಳಿಸಿದ್ದು ಇದುವರೆಗಿನ ಕಳಪೆ ಪ್ರದರ್ಶನಕ್ಕೆ ನಿದರ್ಶನವಾಗಿದೆ.

1
2026505

ಜೆಮ್ಷೆಡ್ಪುರ ಎಫ್ ಸಿ ತಂಡದ ಕತೆ ಹೇಳವಷ್ಡು ಉತ್ತಮವಾಗಿಲ್ಲ. ಕಳೆದ ಬಾರಿಯಂತೆ ಈ ಬಾರಿಯೂ ಪ್ಲೇ ಆಫ್ ಹಂತ ತಲಪುವಲ್ಲಿ ವಿಫಲವಾಗಿದೆ. 16 ಪಂದ್ಯಗಳನ್ನು ಆಡಿರುವ ಟಾಟಾ ಪಡೆ 17 ಅಂಕಗಳನ್ನು ಗಳಿಸಿ ಏಳನೇ ಸ್ಥಾನದಲ್ಲಿದೆ. ಈಗ ಉಳಿದಿರುವ ಪಂದ್ಯದಲ್ಲಿ ಗೌರವಕ್ಕಾಗಿ ಅಡಬೇಕಾಗಿದೆ.

ಹೈದರಾಬಾದ್ ತಂಡದ ಮಧ್ಯಂತರ ಕೋಚ್ ಜೇವಿಯರ್ ಲೊಪೇಜ್ ಮನೆಯಂಗಣದ ಕೊನೆಯ ಪಂದ್ಯದಲ್ಲಿ ತಮ್ಮ ತಂಡ ಉತ್ತಮ ರೀತಿಯಲ್ಲಿ ಹೋರಾಟ ನಡೆಸುವುದೆಂಬ ನಿರೀಕ್ಷೆಯಲ್ಲಿದೆ. ಹೈದರಾಬಾದ್ ತಂಡ ಇದುವರೆಗೂ ಕ್ಲೀನ್ ಶೀಟ್ ಸಾಧನೆ ಮಾಡಿಲ್ಲ, ಈ ಋತುವಿನಲ್ಲಿ ಒಂದೂ ಕ್ಲೀನ್ ಶೀಟ್ ಸಾಧನೆ ಮಾಡದೆ ಕೊನೆಗೊಳ್ಳುವ ಆತಂಕ ಹೈದರಾಬಾದ್ ಗೆ ಇದೆ.

''ಮುಂದಿನ ಪಂದ್ಯ ಅತ್ಯಂತ ಪ್ರಮುಖವಾದುದು ಏಕೆಂದರೆ ಅದು ನಮ್ಮ ಕೊನೆಯ ಪಂದ್ಯವಾಗಿದೆ. ನಾವು ಗೋವಾದ ವಿರುದ್ಧ ಪಂದ್ಯವನ್ನಾಡಿ ಬಂದಿರುವಡವು, ಅಲ್ಲಿ ನಮ್ಮ ಪ್ರದರ್ಶನ ಉತ್ತಮವಾಗಿರಲಿಲ್ಲ. ನಾವು ನಮ್ಮ ಬೆಂಬಲಿಗರು ಮತ್ತು ಮಾಲೀಕರಿಗಾಗಿ ಮೂರು ಅಂಕಗಳನ್ನು ಗೆಲ್ಲಬೇಕಾಗಿದೆ. ಡ್ರೆಸ್ಸಿಂಗ್ ರೂಮಿನಲ್ಲಿ ನಮ್ಮ ಆಟಗಾರರು ಖುಷಿಯಾಗಿಯೇ ಇದ್ದಾರೆ, '' ಎಂದು ಲೊಪೇಜ್ ಹೇಳಿದ್ದಾರೆ.

ಮ್ಯಾಥ್ಯು ಕಿಲ್ಗಾಲ್ಲಾನ್ ಮತ್ತು ಆದಿಲ್ ಖಾನ್ ಅವರ ಪರಿಶ್ರಮಕ್ಕೆ ಯಾವುದೇ ರೀತಿಯ ಫಲ ಸಿಗಲಿಲ್ಲ.

'ಜೆಮ್ಷೆಡ್ಪುರ ತಂಡ ಸತತ ನಾಲ್ಕು ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಫಲವಾಗಿದೆ. ಈ ಅವಧಿಯಲ್ಲಿ 12 ಗೋಲುಗಳನ್ನೂ ನೀಡಿದೆ. ಹೈದರಾಬಾದ್ ತಂಡ ಗೋಲು ಗಳಿಸುವಲ್ಲಿ ವಿಫಲವಾದರೂ ಮಾರ್ಸೆಲಿನೋ ಮತ್ತು ಬೊಬೊ ಡಿಫೆನ್ಸ್ ವಿಭಾಗದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ.

''ಹೇಗಾದರೂ ಮಾಡಿ ನಾವು ಗೆಲ್ಲಬೇಕಾಗಿದೆ. ನಮಗೆ ಅಂತಿಮ ನಾಲ್ಕರ ಹಂತ ತಲುಪಲು ಅಸಾಧ್ಯವಾಗಿರಬಹುದು, ಆದರೆ ಉತ್ತಮ ಪಂದ್ಯವನ್ನು ಆಡಲಿದ್ದೇವೆ,'' ಎಂದು ಕೋಚ್ ಇರಿಯಾಂಡೋ ಹೇಳಿದ್ದಾರೆ.

Story first published: Thursday, February 13, 2020, 12:37 [IST]
Other articles published on Feb 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X