ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಎಟಿಕೆಎಂಬಿ ಜಯದ ಓಟಕ್ಕೆ ಬ್ರೇಕ್ ಹಾಕಲು ಟಾಟಾ ಪಡೆ ಸಜ್ಜು

By Isl Media
ISL 2020: Jamshedpur FC vs ATK Mohun Bagan FC: Preview, Team News

ಗೋವಾ: ನಾಲ್ಕನೇ ಪಂದ್ಯದಲ್ಲೂ ಜಯದ ಓಟವನ್ನು ಮುಂದುವರಿಸುವ ಗುರಿಯನ್ನು ಎಟಿಕೆ ಮೋಹನ್ ಬಾಗನ್ ಹೊಂದಿದ್ದರೆ ಜೆಮ್ಷೆಡ್ಪುರ ತಂಡ ಸೋಮವಾರದ ಪಂದ್ಯದಲ್ಲಿ ಮೋಹನ್ ಬಾಗನ್ ಪಡೆಗೆ ಸೋಲುಣಿಸುವ ಗುರಿಹೊಂದಿದೆ. ಎಟಿಕೆ ತಂಡ ಅಟ್ಯಾಕ್ ಮತ್ತು ಡಿಫೆನ್ಸ್ ವಿಭಾಗದಲ್ಲಿ ಇದುವರೆಗೂ ಅದ್ಭುತ ಪ್ರದರ್ಶನ ತೋರಿದೆ. ಇದುವರೆಗೂ ಎದುರಾಳಿ ತಂಡಕ್ಕೆ ಗೋಲು ನೀಡದ ಎಟಿಕೆ ಇದುವರೆಗೂ 4 ಟಾರ್ಗೆಟ್ ನಲ್ಲಿ ಯಶಸ್ಸು ಕಂಡಿದೆ.

ಐಎಸ್‌ಎಲ್: ಜಯದೊಂದಿಗೆ ಅಗ್ರಸ್ಥಾನಕ್ಕೇರಿದ ಮುಂಬೈ ಸಿಟಿಐಎಸ್‌ಎಲ್: ಜಯದೊಂದಿಗೆ ಅಗ್ರಸ್ಥಾನಕ್ಕೇರಿದ ಮುಂಬೈ ಸಿಟಿ

ಜೆಮ್ಷೆಡ್ಪುರ ತಂಡ ಇದುವರೆಗೂ ಉತ್ತಮ ಆರಂಭ ಕಂಡಿರಲಿಲ್ಲ. ಎರಡು ಡ್ರಾ ಮತ್ತು ಮತ್ತು ಒಂದು ಸೋಲನ್ನು ಕಂಡಿರುವ ತಂಡ ಈಗ ಜಯದ ನಿರೀಕ್ಷೆಯಲ್ಲಿದೆ. ಕೋಚ್ ಓವೆನ್ ಕೊಯ್ಲ್ ತಂಡ ಯಾವುದೇ ಎದುರಾಳಿ ವಿರುದ್ಧ ಗೆಲ್ಲಲ್ಲಿದೆ ಎಂದು ಆತ್ಮವಿಶ್ವಾಸದಿಂದ ನುಡಿದಿದ್ದಾರೆ.

ಪ್ರತೀ ಪಂದ್ಯವೂ ಸವಾಲಿನದ್ದು

ಪ್ರತೀ ಪಂದ್ಯವೂ ಸವಾಲಿನದ್ದು

"ಪ್ರತಿಯೊಂದು ಪಂದ್ಯವೂ ಸವಾಲಿನಿಂದ ಕೂಡಿರುತ್ತದೆ. ಪ್ರತಿಯೊಂದು ಪಂದ್ಯವೂ ಅತ್ಯಂತ ರೋಚಕವಾಗಿರುತ್ತದೆ. ಅಂಕಗಳ ಆಧಾರದಲ್ಲಿ ನೋಡುವುದಾದರೆ ಎಟಿಕೆಎಂಬಿ ತಂಡ ಉತ್ತಮ ಆರಂಭ ಕಂಡಿದೆ. ಮತ್ತಮ ಫಲಿತಾಂಶವೂ ತಂಡಕ್ಕೆ ದಕ್ಕಿದೆ. ನಾವು ಪಂದ್ಯವನ್ನಾಡಲು ಉತ್ಸುಕರಾಗಿದ್ದೇವೆ. ಇತ್ತೀಚಿನ ಪಂದ್ಯಗಳಲ್ಲಿ ನಾವು ಯಾವುದೇ ತಂಡದೊಂದಿಗೆ ದಿಟ್ಟ ಹೋರಾಟ ನೀಡಿ ಆಡಬಲ್ಲೇವು ಎಂಬುದನ್ನು ತೋರಿಸಿದ್ದೇವೆ. ಡ್ರಾಗೊಳ್ಳುತ್ತಿರುವ ಪಂದ್ಯಗಳನ್ನು ಜಯವನ್ನಾಗಿ ಪರಿವರ್ತಿಸಿ ಆ ಮೂರು ಅಂಕಗಳನ್ನು ಗಳಿಸಬೇಕಾಗಿದೆ. ಹಾಆಗಾದಲ್ಲಿ ನಾವು ಅಂಕಪಟ್ಟಿಯಲ್ಲಿ ಮೇಲಕ್ಕೇರಬಹುದು, ಅದು ನಮ್ಮ ಗುರಿಯಾಗಿದೆ," ಎಂದು ಕೊಯ್ಲ್ ಹೇಳಿದ್ದಾರೆ.

ಪ್ರೇರಣೆ ಸಿಕ್ಕಂತಾಗುತ್ತದೆ

ಪ್ರೇರಣೆ ಸಿಕ್ಕಂತಾಗುತ್ತದೆ

ಈ ಹಂತದಲ್ಲಿ ಜಯ ಗಳಿಸಿದರೆ ತಂಡಕ್ಕೆ ಉತ್ತಮ ರೀತಿಯಲ್ಲಿ ಪ್ರೇರಣೆ ಸಿಕ್ಕಂತಾಗುತ್ತದೆ. ತಂಡಕ್ಕೆ ಈ ರೀತಿಯ ಆವೇಗ ಸಿಕ್ಕರೆ ಜಯದ ಹಾದಿ ಸುಗಮವಾಗುತ್ತದೆ. ಕೆಲವೊಂದು ವಿಭಾಗಗಳಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ. ನಾವು ಗೋಲು ಗಳಿಸಬಲ್ಲೆವು ಎಂಬುದನ್ನು ತೋರ್ಪಡಿಸಿದ್ದೇವೆ. ಗೋಲು ಗಳಿಸಲು ಸಿಗುವ ಅವಕಾಶಗಳನ್ನು ನಾವು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕಾಗಿದೆ ಎಂದು ಕೊಯ್ಲ್ ಹೇಳಿದರು.

ಡಿಫೆನ್ಸ್ ವಿಭಾಗ ಬಲಿಷ್ಠವಾಗಿದೆ

ಡಿಫೆನ್ಸ್ ವಿಭಾಗ ಬಲಿಷ್ಠವಾಗಿದೆ

ಎಟಿಕೆಎಂಬಿ ಕೋಚ್ ಆಂಟೊನಿಯೊ ಹಬ್ಬಾಸ್ ಅವರು ಡಿಫೆನ್ಸ್ ವಿಭಾಗ ಬಲಿಷ್ಠವಾಗಿರುವುದರಿಂದ ಉತ್ತಮ ಆರಂಭ ಕಾಣಲು ಸಾಧ್ಯವಾಯಿತು ಎಂದಿದ್ದಾರೆ., "ಕ್ಲೀನ್ ಶೀಟ್ ಮೂಲಕ ಚಾಂಪಿಯನ್ಷಿಪ್ ನಲ್ಲಿ ಆರಂಭಕಂಡಿರುವುದು ಪ್ರಮುಖವಾಗಿದೆ. ತಂಡದಲ್ಲಿ ಆತ್ಮವಿಶ್ವಾಸವಿದೆ, ಉತ್ತಮ ರೀತಿಯಲ್ಲಿ ಸುಧಾರಣೆ ಇದೆ ಮತ್ತು ಅಭಿವೃದ್ಧಿ ಕಾಣುತ್ತಿದೆ. ಶಿಸ್ತಿನ ಪರಶ್ರಮವೇ ನಮ್ಮ ಯಶಸ್ಸಿಗೆ ಕಾರಣ, " ಎಂದು ಹಬ್ಬಾಸ್ ಹೇಳಿದ್ದಾರೆ.

Story first published: Monday, December 7, 2020, 10:00 [IST]
Other articles published on Dec 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X