ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಉಡುಗೊರೆ ಗೋಲು ನೀಡಿದರೂ ಗೆಲ್ಲದ ಈಸ್ಟ್ ಬೆಂಗಾಲ್

By Isl Media
ISL 2020: Jeakson’s last-minute goal helps Kerala salvage a point against SCEB

ಗೋವಾ, ಡಿಸೆಂಬರ್ 20: ಆರಂಭದಲ್ಲಿ ಕಾರಿ ಕೋನ್ (13ನೇ ನಿಮಿಷ) ಎದುರಾಳಿ ತಂಡಕ್ಕೆ ಉಡುಗೊರೆ ಗೋಲು ನೀಡಿದರೂ ಅಂತಿಮ ಕ್ಷಣದಲ್ಲಿ ಜೇಕ್ಸನ್ ಸಿಂಗ್ (90ನೇ ನಿಮಿಷ) ಗಳಿಸಿದ ಗೋಲಿನಿಂದ ಈಸ್ಟ್ ಬೆಂಗಾಲ್ ವಿರುದ್ಧದ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ 1-1 ಗೋಲಿನಿಂದ ಸಮಬಲ ಸಾಧಿಸಿ ಅಂಕ ಹಂಚಿಕೊಂಡಿದೆ. ಎದುರಾಳಿ ತಂಡವು ನೀಡಿದ ಉಡುಗೊರೆ ಗೋಲಿನ ಲಾಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾದ ಈಸ್ಟ್ ಬೆಂಗಾಲ್ ಮತ್ತೊಮ್ಮೆ ಜಯ ಗಳಿಸುವಲ್ಲಿ ವಿಫಲವಾಯಿತು.

ಟೆಸ್ಟ್‌ನಲ್ಲಿ ಅತೀ ಕಡಿಮೆ ರನ್ ದಾಖಲೆಗಳ ಪಟ್ಟಿಗೆ ಭಾರತ ಸೇರ್ಪಡೆಟೆಸ್ಟ್‌ನಲ್ಲಿ ಅತೀ ಕಡಿಮೆ ರನ್ ದಾಖಲೆಗಳ ಪಟ್ಟಿಗೆ ಭಾರತ ಸೇರ್ಪಡೆ

ತಾವೇ ಗೋಲು ಗಳಿಸುತ್ತಿಲ್ಲ, ಅದರಲ್ಲಿ ಎದುರಾಳಿ ತಂಡಕ್ಕೆ ಗೋಲು ನೀಡಿದರೆ? ಎಸ್ ಸಿ ಈಸ್ಟ್ ಬೆಂಗಾಲ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ಕೇರಳದ ಬಕಾರಿ ಕೋನ್ ನೀಡಿದ ಉಡುಗೊರೆ ಗೋಲು ಕೇರಳ ತಂಡದ ಹಿನ್ನಡೆಗೆ ಕಾರಣವಾಯಿತು.

ಉತ್ತಮ ಪೈಪೋಟಿಯುತ ಹೋರಾಟ

ಉತ್ತಮ ಪೈಪೋಟಿಯುತ ಹೋರಾಟ

ಮೊದಲ 10 ನಿಮಿಷಗಳ ಆಟದಲ್ಲಿ ಇತ್ತಂಡಗಳು ಉತ್ತಮ ಪೈಪೋಟಿಯುತ ಹೋರಾಟ ನೀಡಿದವು. 11ನೇ ನಿಮಿಷದಲ್ಲಿ ಕೋಸ್ಟಾ ಅವರಿಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ಹೆಡರ್ ಗೋಲ್ ಬಾಕ್ಸ್ ನಿಂದ ಹೊರನಡೆಯಿತು. ಆದರೆ 13ನೇ ನಿಮಿಷದ ಪ್ರಮಾದ ಈಸ್ಟ್ ಬೆಂಗಾಲ್ ಗೆ ಮುನ್ನಡೆ ತಂದುಕೊಟ್ಟಿತು. ಪ್ರಮಾದದಲ್ಲಿ ತಮ್ಮದೇ ಗೋಲ್ ಬಾಕ್ಸ್ ಗೆ ಚೆಂಡನ್ನು ತಳ್ಳಿದ ಬಕಾರಿ ಕೋನ್ ತಲೆಯ ಮೇಲೆ ಕೈಇಟ್ಟು ಪಶ್ಚಾತ್ತಾಪ ಪಟ್ಟರು. ನಂತರ ಕೇರಳ ತಂಡ ಉತ್ತಮ ರೀತಿಯಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದರೂ ಗೋಲು ಗಳಿಸಲಾಗಲಿಲ್ಲ.

ಜಯದ ವಿಶ್ವಾಸದಲ್ಲಿ ಕೇರಳ

ಜಯದ ವಿಶ್ವಾಸದಲ್ಲಿ ಕೇರಳ

ಅಂಕಪಟ್ಟಿಯಲ್ಲಿ ಕೆಳ ಹಂತದಲ್ಲಿರುವ ಕೇರಳ ಬ್ಲಾಸ್ಟರ್ಸ್ ಹಾಗೂ ಕೊನೆಯ ಸ್ಥಾನದಲ್ಲಿರುವ ಈಸ್ಟ್ ಬೆಂಗಾಲ್ ತಂಡಗಳು ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಜಯ ಗಳಿಸಲು 35ನೇ ಪಂದ್ಯದಲ್ಲಿ ಮುಖಾಮುಖಿಯಾದವು. ಹಿಂದಿನ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ವಿರುದ್ಧ 2-4 ಅಂತರದಲ್ಲಿ ಸೋಲು ಅನುಭವಿಸಿದ ಕೇರಳ ತಂಡಕ್ಕೆ ಇಲ್ಲಿ ಜಯದ ಅಗತ್ಯ ಇದೆ. ಕಳೆದ ಎರಡು ಪಂದ್ಯಗಳಲ್ಲಿ ಕೇರಳ ತಂಡ ಒಟ್ಟು 7 ಗೋಲುಗಳನ್ನು ಎದುರಾಳಿ ತಂಡಕ್ಕೆ ಗಳಿಸಲು ಅವಕಾಶ ನೀಡಿದ್ದು ತಂಡದ ಡಿಫೆನ್ಸ್ ವಿಭಾಗದ ಸಾಮರ್ಥ್ಯವನ್ನು ಪ್ರಶ್ನಿಸುವಂತಿದೆ. ಇನ್ನೂ ಜಯ ಕಾಣದ ತಂಡಗಳ ಹೋರಾಟದಲ್ಲಿ ಕೇರಳ ಬ್ಲಾಸ್ಟರ್ಸ್ ಕೋಚ್ ಕಿಬು ವಿಕುನಾ ಮೊದಲ ಜಯದ ನಿರೀಕ್ಷೆಯಲ್ಲಿದ್ದಾರೆ. ಐದು ಮಂದಿ ಆಟಗಾರರು ಐದು ಗೋಲುಗಳನ್ನು ಕೇರಳದ ಪರ ಗಳಿಸಿದ್ದಾರೆ. ಗ್ಯಾರಿ ಹೂಪರ್ ಮತ್ತು ಜೊರ್ಡನ್ ಮರ್ರೆ ತಂಡದ ಪರ ಯಶಸ್ಸು ಕಂಡಿದ್ದಾರೆ.

ಬ್ಲಾಸ್ಟರ್ಸ್ ಡಿಫೆನ್ಸ್ ವಿಭಾಗ ದುರ್ಬಲ

ಬ್ಲಾಸ್ಟರ್ಸ್ ಡಿಫೆನ್ಸ್ ವಿಭಾಗ ದುರ್ಬಲ

ಬ್ಲಾಸ್ಟರ್ಸ್ ತಂಡದ ಡಿಫೆನ್ಸ್ ವಿಭಾಗ ದುರ್ಬಲಗೊಂಡಿರುವುದು ತಂಡದ ಈ ಸ್ಥಿತಿಗೆ ಪ್ರಮುಖ ಕಾರಣವಾಗಿದೆ. ಅಮಾನತಿನಲ್ಲಿದ್ದ ಕೋಸ್ಟಾ ನ್ಹೊಮೈನೆಸು ಅವರ ಆಗಮನ ತಂಡದ ಡಿಫೆನ್ಸ್ ವಿಭಾಗದ ಶಕ್ತಿಯನ್ನು ಹೆಚ್ಚಿಸಬಹುದು. ಮೊದಲ ಬಾರಿಗೆ ಐಎಸ್ಎಲ್ ನಲ್ಲಿ ಸ್ಪರ್ಧಿಸುತ್ತಿರುವ ಎಸ್ ಸಿ ಈಸ್ಟ್ ಬೆಂಗಾಲ್ ತಂಡ ಜೆಮ್ಷೆಡ್ಪುರ ವಿರುದ್ಧ ಗೋಲಿಲ್ಲದ ಡ್ರಾ ಸಾಧನೆಯ ಮೂಲಕ ಮೊದಲ ಅಂಕ ಗಳಿಸಿತ್ತು. ಜಾಕ್ವಿಸ್ ಮಘೋಮಾ ಅವರ ಮೂಲಕ ತಂಡ ಗೋಲಿನ ಖಾತೆ ತೆರೆದಿದೆ. ತಂಡದ ಆಟಗಾರರಲ್ಲಿ ಆತ್ಮವಿಶ್ವಾಸ ಮೂಡಿದೆ. ಈಸ್ಟ್ ಬೆಂಗಾಲ್ ತಂಡವನ್ನು ಕೇರಳ ಬ್ಲಾಸ್ಟರ್ಸ್ ಹಗುರವಾಗಿ ಪರಿಗಣಿಸಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಬಲ್ವಂತ್ ಸಿಂಗ್, ಜೆಜೆ ಲಾಲ್ಪೆಲ್ಖುವಾ ಮತ್ತು ಸಿಕೆ ವಿನೀತ್ ಉತ್ತಮ ಆಟ ಪ್ರದರ್ಶಿಸುವರು ಎಂಬ ವಿಶ್ವಾಸ ಕೋಚ್ ರಾಬ್ಬೀ ಫ್ಲವರ್ ಅವರಲ್ಲಿದೆ.

Story first published: Monday, December 21, 2020, 8:46 [IST]
Other articles published on Dec 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X