ಐಎಎಸ್‌ಎಲ್: ಮೋಹನ್ ಬಾಗನ್ ಗೆ ಸತತ ಎರಡನೇ ಜಯ

By Isl Media

ಗೋವಾ, ನವೆಂಬರ್, 27, 2020: ರಾಯ್ ಕೃಷ್ಣ (49ನೇ ನಿಮಿಷ) ಹಾಗೂ ಮನ್ವೀರ್ ಸಿಂಗ್ (84ನೇ ನಿಮಿಷ) ಅವರು ಗಳಿಸಿದ ಗೋಲಿನ ನೆರವಿನಿಂದ ಎಟಿಕೆ ಮೋಹನ್ ಬಾಗನ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ. ಐಎಸ್ಎಲ್ ನಲ್ಲಿ ಕೋಲ್ಕೊತಾ ಡರ್ಬಿ ಎಂದೇ ಬಿಂಬಿಸಲ್ಪಟ್ಟ ಈ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ಪ್ರಥಮಾರ್ಧದಲ್ಲಿ ತೋರಿದ ಚುರುಕಿನ ಆಟವನ್ನು ದ್ವಿತಿಯಾರ್ಧದಲ್ಲಿ ತೋರಲಿಲ್ಲ. ತಪ್ಪಿನ ಪಾಸ್ ಗಳಿಗೆ ತಕ್ಕ ಬೆಲೆ ತೆತ್ತು ಮೊದಲ ಪಂದ್ಯದಲ್ಲೇ ಸೋಲನುಭವಿಸಿತು.

ಗೋಲಿಲ್ಲದ ಪ್ರಥಮಾರ್ಧ: ಪಂದ್ಯ ಕುತೂಹಲಕ್ಕೆ ಮುನ್ನ ಸಾಕಷ್ಟು ಕುತೂಹಲ ಮನೆ ಮಾಡಿತ್ತು. ಆದರೆ ಅಷ್ಟೇ ಕುತೂಹಲ ಪಂದ್ಯದಲ್ಲಿ ಇದ್ದಂತೆ ಕಾಣಲಿಲ್ಲ. ಈಸ್ಟ್ ಬೆಂಗಾಲ್ ತಂಡದ ಗೋಲ್ ಕೀಪರ್ ಅರಿಂದಂ ಭಟ್ಟಾಚಾರ್ಯ ತಂಡವನ್ನು ಅಪಾಯದಿಂದ ಪಾರು ಮಾಡಿದರು ಎಂದರೆ ತಪ್ಪಾಗಲಾರದು, ಮೂರು ಬಾರಿ ಎಟಿಕೆ ಮೋಹನ್ ಬಾಗನ್ ನ ಗೋಲಾಗುವ ಅವಕಾಶಕ್ಕೆ ಅಡ್ಡಿ ಮಾಡಿದರು. ಈಸ್ಟ್ ಬೆಂಗಾಲ್ ಮೊದಲ ಬಾರಿಗೆ ಐಎಸ್ ಎಲ್ ನಲ್ಲಿ ಆಡುತ್ತಿದ್ದರೂ ಚೆಂಡಿನ ಮೇಲೆ ಉತ್ತಮ ರೀತಿಯಲ್ಲಿ ನಿಯಂತ್ರಣ ಸಾಧಿಸಿತ್ತು. ಉತ್ತಮ ಅವಕಾಶಗಳು ಸಿಕ್ಕರೂ ಗೋಲಾಗಿ ಪರಿವರ್ತಿಸುವಲ್ಲಿ ತಂಡದ ಆಟಗಾರರು ವಿಫಲರಾದರು. ಈಸ್ಟ್ ಬೆಂಗಾಲ್ ಆಟಗಾರರು ಚೆಂಡನ್ನು ಪಾಸ್ ಮಾಡಲು ಬಳಸುವ ತಂತ್ರ ಫುಟ್ಬಾಲ್ ಆಭಿಮಾನಿಗಳನ್ನು ಖುಷಿಕೊಟ್ಟಿತು.

ಐಎಸ್‌ಎಲ್: ಗೆದ್ದ ಆತ್ಮವಿಶ್ವಾಸದಲ್ಲಿರುವ ಹೈದರಾಬಾದ್‌ಗೆ ಬೆಂಗಳೂರು ಸವಾಲು

ಕುತೂಹಲದ ಕೋಲ್ಕೊತಾ ಡರ್ಬಿ: ಹೀರೋ ಇಂಡಿಯನ್ ಸೂಪರ್ ಲೀಗ್ ಇತಿಹಾಸದಲ್ಲಿ ಇದುವರೆಗೂ ಪಂದ್ಯವೊಂದರ ಬಗ್ಗೆ ಈ ರೀತಿಯ ಸುದ್ದಿ, ಚರ್ಚೆ, ನಡೆದಿರಲಿಲ್ಲ. ಆದರೆ ಎಟಿಕೆ ಮೋಹನ್ ಬಾಗನ್ ಮತ್ತು ಎಸ್ ಸಿ ಈಸ್ಟ್ ಬೆಂಗಾಲ್ ನಡುವಿನ ಪಂದ್ಯಕ್ಕೆ ಅತ್ಯಂತ ಮಹತ್ವ ನೀಡಲಾಗಿದೆ, ಏಕೆಂದರೆ ಇಂದು ನಡೆಯುತ್ತಿರುವುದು ಕೋಲ್ಕೊತಾ ಡರ್ಬಿ. ಐಎಸ್ಎಲ್ ನಲ್ಲಿ ಹೊಸದಾಗಿ ಪ್ರವೇಶ ಕಂಡಿರುವ ಈಸ್ಟ್ ಬೆಂಗಾಲ್ ತನ್ನ ಮೊದಲ ಪಂದ್ಯವನ್ನಾಡುತ್ತಿದೆ. ಕೋಚ್ ರಾಬಿ ಫ್ಲವರ್ ತಮ್ಮ ತಂಡ ಈಸ್ಟ್ ಬೆಂಗಾಲ್ ಜಯದೊಂದಿಗೆ ಆರಂಭ ಕಾಣಲಿದೆ ಎಂಬ ದೃಢ ನಂಬಿಕೆ ಹೊಂದಿದ್ದಾರೆ. ಜೆಜೆ ಲಾಲ್ಪೆಖ್ಲುವಾ, ಯುಗೇನ್ಸನ್ ಲಿಂಗ್ಡೋ, ಬಲ್ವಂತ್ ಸಿಂಗ್, ನಾರಾಯಣ್ ದಾಸ್ ಮತ್ತು ಬಿಕಾಶ್ ಜೈರು ಅವರಂಥ ಆಟಗಾರರು ತಂಡದಲ್ಲಿದ್ದು, ಇವರೆಲ್ಲರೂ ಐಎಸ್ಎಲ್ ಅನುಭವ ಹೊಂದಿರುವ ಭಾರತದ ಆಟಗಾರರು. ದೇಶಿಯ ಆಟಗಾರರ ಜತೆಯಲ್ಲಿ ವಿದೇಶಿ ಆಟಗಾರರಾದ ಆಂಥೊನಿ ಪಿಲ್ಕಿಂಗ್ಟನ್, ಡೇನಿಯಲ್ ಫಾಕ್ಸ್, ಜಾಕ್ವೆಸ್ ಮಘೊಮಾ ಮತ್ತು ಅರೋನ್ ಅಮಾಡಿ ಹಾಲಿವೇ ತಂಡದ ಶಕ್ತಿಯನ್ನು ಹೆಚ್ಚಿಸಿದ್ದಾರೆ.

ಐಎಸ್‌ಎಲ್ 2020: ಸಮಬಲ ಸಾಧಿಸಿದ ಕೇರಳ-ನಾರ್ಥ್ಈಸ್ಟ್

ಆಂಟೋನಿಯೋ ಹಬ್ಬಾಸ್ ಅವರಲ್ಲಿ ಪಳಗಿರುವ ಚಾಂಪಿಯನ್ ತಂಡ ಎಟಿಕೆ ಮೋಹನ್ ಬಾಗನ್ ಎರಡು ಬಾರಿ ಐಎಸ್ಎಲ್ ಕಿರೀಟ ಧರಿಸಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಜಯ ಗಳಿಸಿರುವ ಎಟಿಕೆ ಮೋಹನ್ ಬಾಗನ್ ಪರ ಫಿಜಿ ಸ್ಟ್ರೈಕರ್ ರಾಐ್ ಕೃಷ್ಣ ತಂಡದ ಪರ ಗೋಲಿನ ಖಾತೆ ತೆರೆದಿದ್ದಾರೆ. ಡಿಫೆಂಡರ್ ಗಳಾದ ತಿರಿ, ಸಂದೇಶ್ ಜಿಂಗಾನ್ ಮತ್ತು ಪ್ರೀತಂ ಕೊಟಾಲ್ ತಂಡದ ಆಧಾರ ಸ್ತಂಭ. ಕ್ಸೇವಿಯರ್ ಹೆರ್ನಾಂಡೀಸ್, ಎಡು ಗಾರ್ಸಿಯಾ, ಕಾರ್ಲ್ ಮೆಕ್ ಹಗ್, ಜಯೇಶ್ ರಾಣಾ ಮಿಡ್ ಫೀಲ್ಡ್ ನಲ್ಲಿ ತಂಡದ ಶಕ್ತಿ ಎನಿಸಿದ್ದಾರೆ. ಅ

For Quick Alerts
ALLOW NOTIFICATIONS
For Daily Alerts
Story first published: Friday, November 27, 2020, 22:09 [IST]
Other articles published on Nov 27, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X