ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಮೋಹನ್ ಬಾಗನ್‌ಗೆ ಅಂತಿಮ ಕ್ಷಣದಲ್ಲಿ ಒಲಿದ ಕೃಷ್ಣ!

By Isl Media
ISL 2020: Krishna nets winner against Odisha as ATKMB continue perfect run

ಗೋವಾ, ಡಿಸೆಂಬರ್ 3: ಅಂತಿಮ ಕ್ಷಣದಲ್ಲಿ ರಾಯ್ ಕೃಷ್ಣ (94ನೇ ನಿಮಿಷ) ಗಳಿಸಿದ ಏಕೈಕ ಗೋಲಿನಿಂದ ಒಡಿಶಾ ತಂಡವನ್ನು 1-0 ಗೋಲಿನಿಂದ ಮಣಿಸಿದ ಎಟಿಕೆ ಮೂಹನ್ ಬಾಗನ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು, ಪ್ರಥಮ ಹಾಗೂ ದ್ವಿತಿಯಾರ್ಧಗಳ ಪ್ರತಿಯೊಂದು ಹಂತದಲ್ಲೂ ಒಡಿಶಾ ತಂಡ ಮೇಲುಗೈ ಸಾಧಿಸಿತ್ತು. ಆದರೆ ಅಂತಿಮ ಕ್ಷಣದಲ್ಲಿ ದಾಖಲಾದ ಈ ಗೋಲು ಇಡೀ ಪಂದ್ಯದ ಶ್ರಮವನ್ನು ಬೆಲೆ ಇಲ್ಲದಂತೆ ಮಾಡಿತು.

1960 ಒಲಿಂಪಿಕ್ ಡೆಕಾಥ್ಲಾನ್ ಚಾಂಪಿಯನ್ ರಾಫರ್ ಜಾನ್ಸನ್ ನಿಧನ1960 ಒಲಿಂಪಿಕ್ ಡೆಕಾಥ್ಲಾನ್ ಚಾಂಪಿಯನ್ ರಾಫರ್ ಜಾನ್ಸನ್ ನಿಧನ

ಒಡಿಶಾ ಉತ್ತಮ ಪ್ರದರ್ಶನ: ಬಲಿಷ್ಠ ಎಟಿಕೆ ವಿರುದ್ಧ ಪಂದ್ಯದಲ್ಲಿ ಒಡಿಶಾ ಎಫ್ ಸಿ ಪ್ರಥಮಾರ್ಧದಲ್ಲಿ ಗೋಲು ಗಳಿಸುವಲ್ಲಿ ವಿಫಲವಾಗಿರಬಹುದು, ಆದರೆ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಯಿತು. ಎರಡು ಉತ್ತಮ ಅವಕಾಶಗಳನ್ನು ಒಡಿಶಾ ಕೈ ಚೆಲ್ಲಿತು.

ಆಕ್ರಮಣಕಾರಿ ಆಟ

ಆಕ್ರಮಣಕಾರಿ ಆಟ

ಎಟಿಕೆಎಂಬಿ ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ ಮನ ಮಾಡಿತು. ಮಾರ್ಸೆಲೊ ಪೆರೆರಾ ಗಾಯಗೊಂಡರು. ಆದರೆ ಕೆಲ ಹುತ್ತಿನಲ್ಲೇ ಅಂಗಣ ಪ್ರವೇಶಿಸಿದರು. 24ನೇ ನಿಮಿಷದಲ್ಲಿ ರಾಯ್ ಕೃಷ್ಣ ಅವರಿಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ಹೆಡರ್ ಮೂಲಕ ಚಿಮ್ಮಿದ ಚೆಂಡು ಗೋಲ್ ಬಾಕ್ಸ್ ನ ಮೇಲಿಂದ ಸಾಗಿತು. 35ನೇ ನಿಮಿಷದಲ್ಲಿ ಒಡಿಶಾಕ್ಕೆ ಸುಲಭವಾಗಿ ಗೋಲು ಗಳಿಸಬಹುದಾಗಿತ್ತು, ಆದರೆ ಜಾಕೋಬ್ ಅವರ ಹೆಡರ್ ಗುರಿ ತಲುಪಲಿಲ್ಲ. ಒಎಫ್ ಸಿ ಇದೇ ರೀತಿಯ ಆಟವನ್ನು ಪ್ರದರ್ಶಿಸಿದರೆ ಗೋಲು ದಾಖಲಾಗುವುದು ಖಚಿತ.

ಜಯದ ನಿರೀಕ್ಷೆ

ಜಯದ ನಿರೀಕ್ಷೆ

ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಸತತ ಎರಡು ಜಯ ಕಂಡಿರುವ ಎಟಿಕೆ ಮೋಹನ್ ಬಾಗನ್ ತಂಡ ಸಂಕಷ್ಟಟದಲ್ಲಿರುವ ಒಡಿಶಾ ಎಫ್ ಸಿ ವಿರುದ್ಧ ಮತ್ತೊಂದು ಜಯದ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಎರಡೂ ಜಯಗಳಲ್ಲಿ ಆಂಟೋನಿಯೋ ಹಬ್ಬಾಸ್ ಪಡೆ ಕ್ಲೀನ್ ಶೀಟ್ ಸಾಧನೆ ಮಾಡಿರುವುದು ವಿಶೇಷವಾಗಿದೆ. ತಿರಿ, ಪ್ರೀತಮ್ ಕೊತಾಲ್ ಮತ್ತು ಸಂದೇಶ್ ಜಿಂಗಾನ್ ಅವರನ್ನೊಳಗೊಂಡ ಡಿಫೆನ್ಸ್ ಘಟಕ ಎಟಿಕೆ ಮೋಹನ್ ಬಾಗನ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಬ್ಯಾಕ್ ಲೈನ್ ನಲ್ಲಿ ಅನುಭವಿ ಆಟಗಾರರು ಇರುವುದರಿಂದ ಚೆಂಡಿನ ನಿಯಂತ್ರಣದಲ್ಲೂ ಎಟಿಕೆ ಮೋಹನ್ ಬಾಗನ್ ಮೇಲುಗೈ ಸಾಧಿಸಿದೆ. ರಾಯ್ ಕೃಷ್ಣ ತಂಡದ ಜಯದಲ್ಲಿ ಇದುವರೆಗೂ ಪ್ರಮುಖ ಪಾತ್ರವಹಿಸಿದ್ದಾರೆ.

ಗೋಲಾಗಿಸುವಲ್ಲಿ ಎಟಿಕೆ ಮೇಲು

ಗೋಲಾಗಿಸುವಲ್ಲಿ ಎಟಿಕೆ ಮೇಲು

ಮೂರು ಪಂದ್ಯಗಳಲ್ಲಿ ಮೂರು ಗೋಲು ಗಳಿಸಿ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಎಟಿಕೆ ಮೋಹನ್ ಬಾಗನ್ ಉತ್ತಮ ತಂಡಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಡಿಫೆನ್ಸ್ ವಿಭಾಗದಲ್ಲಿ ದುರ್ಬಲವಾಗಿರುವ ಒಡಿಶಾ ವಿರುದ್ಧ ಕೋಲ್ಕೊತಾದ ತಂಡ ಮತ್ತಷ್ಟು ಗೋಲಿನ ಯಶಸ್ಸು ಕಾಣುವ ಸಾಧ್ಯತೆ ಇದೆ. ಆಡಿರುವ ಎರಡು ಪಂದ್ಯಗಳಲ್ಲಿ ಒಡಿಶಾ ಈಗಾಗಲೇ ಮೂರು ಗೋಲುಗಳನ್ನು ನೀಡಿದೆ. ಹಿಂದಿನ ಪಂದ್ಯದಲ್ಲಿ ಡಿಗೋ ಮೌರಿಸಿಯೊ ಗಳಿಸಿದ ಗೋಲು ತಂಡವನ್ನು ಸೋಲಿನಿಂದ ಪಾರು ಮಾಡಿತ್ತು. ಕೋಚ್ ಸ್ಟುವರ್ಟ್ ಬಾಕ್ಸ್ಟರ್ ಬಲಿಷ್ಠ ಎಟಿಕೆ ಮೋಹನ್ ಬಾಗನ್ ವಿರುದ್ಧ ತಮ್ಮ ತಂಡ ಯಶಸ್ಸು ಕಾಣಲಿದೆ ಎಂಬ ನಂಬಿಕೆಯಲ್ಲಿ ಸಜ್ಜುಗೊಳಿಸಿದ್ದಾರೆ.

Story first published: Thursday, December 3, 2020, 23:35 [IST]
Other articles published on Dec 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X