ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಎಟಿಕೆ ಮೋಹನ್ ಬಾಗನ್‌ಗೆ ಕೃಷ್ಣಾನುಗ್ರಹ

By Isl Media
ISL 2020: Mariners reinvent to outsmart Goa with Krishna penalty

ಗೋವಾ, ಡಿಸೆಂಬರ್ 16: ಪ್ರತಿಯೊಂದು ಪಂದ್ಯದಲ್ಲೂ ಗೋಲು ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡುತ್ತಿದ್ದ ರಾಯ್ ಕೃಷ್ಣ ಗೋವಾ ವಿರುದ್ಧದ ಪಂದ್ಯದಲ್ಲೂ ಪೆನಾಲ್ಟಿ ಮೂಲಕ ಗೋಲು ಗಳಿಸಿ 1-0 ಅಂತರದ ಜಯಕ್ಕೆ ಕಾರಣರಾದರು. ಇದರೊಂದಿಗೆ ಪ್ರತಿ ಬಾರಿಯೂ ದ್ವಿತಿಯಾರ್ಧದಲ್ಲಿ ಗೋಲು ಗಳಿಸುವ ಎಟಿಕೆಎಂಬಿ ಮತ್ತೊಮ್ಮೆ ಯಶಸ್ಸು ಕಂಡಿತು. ಈ ಜಯದೊಂದಿಗೆ ಎಟಿಕೆಎಂಬಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ಸೈಯದ್ ಮುಷ್ತಾಕ್ ಅಲಿ: ತಮಿಳುನಾಡು ತಂಡದಲ್ಲಿ ಕಾರ್ತಿಕ್, ಶಂಕರ್ಸೈಯದ್ ಮುಷ್ತಾಕ್ ಅಲಿ: ತಮಿಳುನಾಡು ತಂಡದಲ್ಲಿ ಕಾರ್ತಿಕ್, ಶಂಕರ್

ಉತ್ತಮ ಆಟಗಾರರಿಂದ ಕೂಡಿದ ತಂಡಗಳೆರಡು ಪರಸ್ಪರ ಮುಖಾಮುಖಿಯಾದಾಗ ಅಲ್ಲಿ ಗೋಲಿಗೆ ಅವಕಾಶ ಕಡಿಮೆ ಇರುತ್ತದೆ ಎಂಬುದಕ್ಕೆ ಎಟಿಕೆ ಮೂಹನ್ ಬಾಗನ್ ಮತ್ತು ಎಫ್ ಸಿ ಗೋವಾ ನಡುವಿನ ಪಂದ್ಯದ ಪ್ರಥಮಾರ್ಧ ಸಾಕ್ಷಿಯಾಯಿತು. ಈ ಮೂಲಕ ಎಟಿಕೆಎಂಬಿ ಮತ್ತೊಮ್ಮೆ ಪ್ರಥಮಾರ್ಧದಲ್ಲಿ ಗೋಲು ಗಳಿಸುವಲ್ಲಿ ವಿಫಲವಾಯಿತು.

ಹಳದಿ ಕಾರ್ಡಿನ ಫಲ

ಹಳದಿ ಕಾರ್ಡಿನ ಫಲ

ಆರಂಭದಲ್ಲೇ ಎಟಿಕೆಎಂಬಿ ಆಕ್ರಮಣಕಾರಿ ಆಟಕ್ಕೆ ಮನಮಾಡಿತು ಪರಿಣಾಮ ತಿರಿ ಮತ್ತು ಡೇವಿಡ್ ವಿಲಿಯಮ್ಸ್ ಗೆ ಹಳದಿ ಕಾರ್ಡಿನ ಫಲ. ಎಟಿಕೆ ಮೋಹನ್ ಬಾಗನ್ ತಂಡಕ್ಕೆ ಎರಡು ಬಾರಿ ಫ್ರೀ ಕಿಕ್ ಅವಕಾಶ ಸಿಕ್ಕಿತ್ತು. ಆದರೆ ಡೇವಿಡ್ ವಿಲಿಯಮ್ಸ್ ಅದರ ಸದುಪಯೋಗ ಪಡೆಯುವಲ್ಲಿ ವಿಫಲವಾದರು. ಗೋವಾಕ್ಕೆ ಸಿಕ್ಕಿದ ಅವಕಾಶ ಕಡಿಮೆ. ಒಂದು ನಿಮಿಷದ ವಿರಾಮದ ನಂತರವೂ ಡೇವಿಡ್ ವಿಲಿಯಮ್ಸ್ ಗೆ ಅದ್ಭುತ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು. ಆದರೆ ಅದೃಷ್ಟ ಇರಲಿಲ್ಲ. ತುಳಿದ ಚೆಂಡು ಗೋಲ್ ಕೀಪರ್ ನನ್ನು ವಂಚಿಸಿದರೂ ಗೋಲ್ ಬಾಕ್ಸ್ ನ ಕಂಬಕ್ಕೆ ಬಡೆದು ಹೊರ ಸಾಗಿತು. ಇದರೊಂದಿಗೆ ಪ್ರಥಮಾರ್ಧ ಗೋಲಿಲ್ಲದೆ ಕೊನೆಗಗೊಂಡಿತು.

ಬಲಿಷ್ಠರ ಹೋರಾಟ

ಬಲಿಷ್ಠರ ಹೋರಾಟ

ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಬಲಿಷ್ಠರೆನಿಸಿಕೊಂಡಿರುವ ತಂಡಗಳಾದ ಎಫ್ ಸಿ ಗೋವಾ ಹಾಗೂ ಎಟಿಕೆ ಮೂಹನ್ ಬಾಗನ್ ತಂಡಗಳು ಮುಖಾಮುಖಿಯಾದವು. ಹಿಂದಿನ ಎರಡು ಪಂದ್ಯಗಳಲ್ಲಿ ಜಯ ಗಳಿಸಲು ವಿಫಲವಾಗಿರುವ ಎಟಿಕೆ ಇಲ್ಲಿ ಗೆಲ್ಲುವ ಆತ್ಮವಿಶ್ವಾಸ ಹೊಂದಿದೆ. ಆತಿಥೇಯ ಎಟಿಕೆಎಂಬಿ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಉತ್ತಮ ರೀತಿಯಲ್ಲೇ ಋತುವನ್ನು ಆರಂಭಿಸಿತ್ತು. ಆದರೆ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ಅಗ್ರ ಸ್ಥಾನದಿಂದ ಕುಸಿಯಿತು. ಪ್ರಥಮಾರ್ಧದಲ್ಲಿ ಕೋಲ್ಕೊತಾ ಮೂಲದ ತಂಡ ಇದುವರೆಗೆ ನಡೆದ ಐದು ಪಂದ್ಯಗಳಲ್ಲಿ ಗೋಲು ಗಳಿಸಿರಲಿಲ್ಲ. ಗಳಿಸಿದ ಎಲ್ಲಾ ಗೋಲುಗಳು ದ್ವಿತಿಯಾರ್ಧದಲ್ಲೇ ದಾಖಲಾದವು. ಇಂದಿನ ಪಂದ್ಯದಲ್ಲಿ ಎಟಿಕೆಎಂಬಿ ದ್ವಿತಿಯಾರ್ಧದಲ್ಲೇ ಎದುರಾಳಿ ತಂಡಕ್ಕೆ ಹೆಚ್ಚು ಗೋಲುಗಳನ್ನು ನೀಡಿರುವ ತಂಡದ ವಿರುದ್ಧ ಆಡುತ್ತಿದೆ.

ಗೋಲು ಗಳಿಸುವಲ್ಲಿ ಯಶಸ್ವಿ

ಗೋಲು ಗಳಿಸುವಲ್ಲಿ ಯಶಸ್ವಿ

ಎಟಿಕೆಎಂಬಿ ತಂಡದ ಡಿಫೆನ್ಸ್ ವಿಭಾಗ ಉತ್ತಮವಾಗಿದ್ದರೂ ಪ್ರತಿಯೊಂದು ಪಂದ್ಯದಲ್ಲೂ ಎದುರಾಳಿ ತಂಡ ಗೋಲು ಗಳಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂಬುದು ಗಮನಾರ್ಹ. ಮಿಡ್ ಫೀಲ್ಡ್ ವಿಭಾಗದಲ್ಲಿ ಬಲಿಷ್ಠವೆನಸಿರುವ ಗೋವಾ ವಿರುದ್ಧ ಎಟಿಕೆಎಂಬಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಗೋವಾದ ಆರಂಭ ಉತ್ತಮವಾಗಿರಲಿಲ್ಲ, ಆದರೆ ಪಂದ್ಯದಿಂದ ಪಂದ್ಯಕ್ಕೆ ಚೇತರಿಸಿಕೊಳ್ಳುತ್ತಿದೆ. ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸುವ ಮೂಲಕ ತಂಡದ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಈಗಾಗಲೇ 6 ಗೋಲುಗಳನ್ನು ಗಳಿಸಿರುವ ಐಗರ್ ಆಂಗುಲೊ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

Story first published: Thursday, December 17, 2020, 10:06 [IST]
Other articles published on Dec 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X