ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಅಜೇಯ ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಎಟಿಕೆಎಂಬಿ

By Isl Media
ISL 2020: Mariners ride Williams strike to give Bengaluru the blues

ಗೋವಾ: ಡೇವಿಡ್ ವಿಲಿಯಮ್ಸ್ (33ನೇ ನಿಮಿಷ) ಗಳಿಸಿದ ಏಕೈಕ ಗೋಲಿನಿಂದ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿದ ಹಾಲಿ ಚಾಂಪಿಯನ್ ಎಟಿಕೆ ಮೋಹನ್ ಬಾಗನ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ 36ನೇ ಪಂದ್ಯದಲ್ಲಿ ಬಲಿಷ್ಠ ಬೆಂಗಳೂರು ವಿರುದ್ಧ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿತು, ಸಮಾನ ಆಂಕಗಳನ್ನು ಹೊಂದಿದ್ದರೂ ಗೋಲುಗಳ ಸರಾಸರಿಯಲ್ಲಿ ಮುಂಬೈ ಸಿಟಿ ಎಫ್ ಅಗ್ರ ಸ್ಥಾನದಲ್ಲಿ ಉಳಿಯಿತು.

ಆಸ್ಟ್ರೇಲಿಯಾಗೆ ರಾಹುಲ್ ದ್ರಾವಿಡ್ ಕಳುಹಿಸುವ ಬಗ್ಗೆ ಸ್ಪಷ್ಟನೆ ನೀಡಿದ ರಾಜೀವ್ ಶುಕ್ಲಆಸ್ಟ್ರೇಲಿಯಾಗೆ ರಾಹುಲ್ ದ್ರಾವಿಡ್ ಕಳುಹಿಸುವ ಬಗ್ಗೆ ಸ್ಪಷ್ಟನೆ ನೀಡಿದ ರಾಜೀವ್ ಶುಕ್ಲ

ಇದುವರೆಗೂ ಸೋಲೇ ಕಾಣದ ಬೆಂಗಳೂರು ತಂಡ ಋತುವಿನಲ್ಲಿ ಮೊದಲ ಬಾರಿ ಸೋಲುಂಡಿತು. ಮೊದಲ ಸೋಲುಂಡ ಬೆಂಗಳೂರು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಲ್ಲೇ ಉಳಿಯಿತು. 33ನೇ ನಿಮಿಷದಲ್ಲಿ ಡೇವಿಡ್ ವಿಲಿಯಮ್ಸ್ ಗಳಿಸಿದ ಗೋಲಿನಿಂದ ಎಟಿಕೆ ಮೋಹನ್ ಬಾಗನ್ ತಂಡ ಪ್ರಥಮಾರ್ಧದಲ್ಲಿ 1-0 ಗೋಲಿನಿಂದ ಮೇಲುಗೈ ಸಾಧಸಿತು.

ಎಟಿಕೆಎಂಬಿ ಆಕ್ರಮಣಕಾರಿ ಆಟ

ಎಟಿಕೆಎಂಬಿ ಆಕ್ರಮಣಕಾರಿ ಆಟ

ಆರಂಭದಿಂದಲೂ ಎಟಿಕೆಎಂಬಿ ಆಕ್ರಮಣಕಾರಿ ಆಟವನ್ನೇ ಮುಂದುವರಿಸಿತು. ಬೆಂಗಳೂರಿನ ಡಿಫೆನ್ಸ್ ವಿಭಾಗವನ್ನು ಉತ್ತಮ ರೀತಿಯಲ್ಲಿ ನಿಯಂತ್ರಸಿತು. 30 ನಿಮಿಷಗಳ ವರೆಗೂ ಇತ್ತಂಡಗಳಿಗೆ ಉತ್ತಮವಾದ ಅವಕಾಶವೇ ಸಿಗಲಿಲ್ಲ. ಒಂದು ನಿಮಿಷಗಳ ವಿಶ್ರಾಂತಿಯ ನಂತರ ಆಸ್ಟ್ರೇಲಿಯಾ ಸಂಜಾತ ಡೇವಿಡ್ ವಿಲಿಯಮ್ಸ್ ತಮಗೆ ದೊರೆತ ಪಾಸನ್ನು ಬೆಂಗಳೂರಿನ ಗೋಲ್ ಬಾಕ್ಸ್ ಕಡೆಗೆ ಕೊಂಡೊಯದ್ದರು. ಬೆಂಗಳೂರಿನ ಗೋಲ್ ಕೀಪರ್ ಸಂದೂಗೆ ಯವುದೇ ರೀತಿಯಲ್ಲಿ ಚೆಂಡನ್ನು ತಡೆಯಲಾಗಲಿಲ್ಲ. ಹಾಲಿ ಚಾಂಪಿಯನ್ ಕೋಲ್ಕೊತಾ ತನ್ನ ಆಟದ ಶೈಲಿಗೆ ತಕ್ಕಂತೆ ಮೇಲುಗೈ ಸಾಧಸಿ ವಿಶ್ರಾಂತಿ ಪಡೆಯಿತು. ದ್ವಿತಿಯಾರ್ಧದಲ್ಲಿ ಬೆಂಗಳೂರಿನ ನಾಯಕ ಸುನಿಲ್ ಛೆಟ್ರಿ ಅವಕಾಶವನ್ನು ಯಾವ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುತ್ತರೆ ಎಂಬುದು ಕುತೂಹಲದ ನಿರೀಕ್ಷೆಯಾಯಿತು.

ಬಲಿಷ್ಠರ ಹೋರಾಟ

ಬಲಿಷ್ಠರ ಹೋರಾಟ

ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿರುವ ತಂಡ ಬೆಂಗಳೂರು ಎಫ್ ಸಿ ತಂಡ ಫಟೋರ್ಡಾ ಅಂಗಣದಲ್ಲಿ ಕೋಲ್ಕೊತಾದ ಬಲಿಷ್ಠ ತಂಡ ಎಟಿಕೆ ಮೋಹನ್ ಬಾಗನ್ ಎದುರಾಯಿತು. ಅಂಕಪಟ್ಟಿಯಲ್ಲಿ 2 ಮತ್ತು 3ನೇ ಸ್ಥಾನದಲ್ಲಿರುವ ಎಟಿಕೆಎಂಬಿ ಮತ್ತು ಬೆಂಗಳೂರು ತಂಡದ ಹೋರಾಟದಲ್ಲಿ ಗೆಲ್ಲುವ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ತಲುಪಲಿದೆ. ಆಡಿರುವ ಆರು ಪಂದ್ಯಗಳಲ್ಲಿ ಮೂರು ಜಯ ಮತ್ತು ಮೂರು ಡ್ರಾ ಕಂಡಿರುವ ಬೆಂಗಳೂರು ಎಫ್ ಸಿ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ, ನಾಳೆಯ ಜಯ ಸುನಿಲ್ ಛೆಟ್ರಿ ಪಡೆಯನ್ನು ಅಗ್ರಸ್ಥಾನಕ್ಕೆ ಕೊಂಡೊಯ್ಯಲಿದೆ. ಆರು ಪಂದ್ಯಗಳಲ್ಲಿ ನಾಲ್ಕು ಜಯ ಮತ್ತು 1 ಡ್ರಾ ಮತ್ತು 1 ಸೋಲು ಕಂಡಿರುವ ಎಟಿಕೆಎಂಬಿ ಎರಡನೇ ಸ್ಥಾನದಲ್ಲಿದ್ದು ನಾಳೆಯ ಪಂದ್ಯದಲ್ಲಿ ಜಯ ಗಳಿಸಿ ಮುನ್ನಡೆಯುವ ಹಂಬಲದಲ್ಲಿದೆ.

ಬಲಿಷ್ಠ ತಂಡಗಳು ಮುಖಾಮುಖಿ

ಬಲಿಷ್ಠ ತಂಡಗಳು ಮುಖಾಮುಖಿ

ಲೀಗ್ ನ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾದಾಗ ಅಲ್ಲಿ ಕುತೂಹಲ ಮನೆ ಮಾಡುವುದು ಸಹಜ. ಎಟಿಕೆಎಂಬಿ ಉತ್ತಮ ಆಕ್ರಮಣಕಾರಿ ಆಟಗಾರರಿಂದ ಕೂಡಿದೆ., ಅದೇ ರೀತಿ ಡಿಫೆನ್ಸ್ ವಿಭಾಗದಲ್ಲೂ ಯಶಸ್ಸು ಕಂಡಿದೆ. ಬೆಂಗಳೂರಿನ ಅಂಕಿಅಂಶಗಳು ಕೂಡ ಉತ್ತಮವಾಗಿದೆ. ಎರಡೂ ತಂಡಗಳು ಟಾಪ್ 4ರಲ್ಲಿ ಇರುವುದರಿಂದ ಪಂದ್ಯ ಉತ್ತಮ ಹೋರಾಟದಿಂದ ಕೂಡಿರುವುದು ಸಹಜ. ತಮ್ಮ ತಂಡದ ಸಾಮರ್ಥ್ಯದ ಬಗ್ಗೆ ನಂಬಿಕೆ ಇಟ್ಟುಕೊಂಡಿರುವ ಎಟಿಕೆಎಂಬಿ ಕೋಚ್ ಅಂಟೋನಿಯೋ ಹಬ್ಬಾಸ್ ತಮ್ಮ ತಂಡ ಮೂರು ಅಂಕ ಗಳಿಸುವ ಗುರಿ ಹೊಂದಿದೆ ಎಂದಿದ್ದಾರೆ.

Story first published: Tuesday, December 22, 2020, 8:17 [IST]
Other articles published on Dec 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X