ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಗಾಯಗೊಂಡ ಚೆನ್ನೈಯಿನ್ ವಿರುದ್ಧ ನಾರ್ಥ್ ಈಸ್ಟ್ ಜಯದ ಗುರಿ

By Isl Media
ISL 2020: NEUFC look to stay unbeaten against wounded Chennaiyin

ಗೋವಾ, ಡಿಸೆಂಬರ್ 12: ಇಲ್ಲಿನ ತಿಲಕ್ ಮೈದಾನದಲ್ಲಿ ಭಾನುವಾರ ಚೆನ್ನೈಯಿನ್ ಎಫ್ ಸಿ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ತನ್ನ ಅಜೇಯದ ನಡೆಯನ್ನು ಮುಂದುವರಿಸುವ ಗುರಿ ಹೊಂದಿದೆ. ಪರ್ವತತಪತಪ್ಪಲಿನ ತಂಡ ಈ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರಿ ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದರಲ್ಲಿ 2 ಜಯ ಹಾಗೂ 3 ಡ್ರಾ ಸೇರಿದೆ. ಜತೆಯಲ್ಲಿ ಹೈದರಾಬಾದ್ ಹಾಗೂ ಬೆಂಗಳೂರು ಸೇರಿದೆ.

ಭಾರತದಿಂದಲೇ ಆಡಿ, 520 ಮಿ ಡಾಲರ್ ಪವರ್‌ಬಾಲ್ ಜಾಕ್‌ಪಾಟ್‌ ಗೆಲ್ಲಿಭಾರತದಿಂದಲೇ ಆಡಿ, 520 ಮಿ ಡಾಲರ್ ಪವರ್‌ಬಾಲ್ ಜಾಕ್‌ಪಾಟ್‌ ಗೆಲ್ಲಿ

ಈ ತಂಡಗಳು ಕೂಡ ಇನ್ನೂ ಸೋಲಿನ ಆಘಾತ ಕಂಡಿಲ್ಲ. ನಾರ್ಥ್ ಈಸ್ಟ್ ಹಾಗೂ ಚೆನ್ನೈಯಿನ್ ಎಫ್ ಸಿ ಈ ಹಿಂದೆ 12 ಬಾರಿ ಮುಖಾಮುಖಿಯಾಗಿವೆ. ಗೆರಾರ್ಡ್ ನಸ್ ಪಡೆ ಆರು ಜಯ ಹಾಗೂ ಮೂರು ಡ್ರಾಗಳೊಂದಿಗೆ ಮೇಲುಗೈ ಸಾಧಿಸಿದೆ. ಯಾವುದೇ ತಂಡದ ವಿರುದ್ಧ ನಾರ್ಥ್ ಈಸ್ಟ್ ಈ ರೀತಿಯಲ್ಲಿ ಉತ್ತಮ ದಾಖಲೆಯನ್ನು ಹೊಂದಿಲ್ಲ, ಅದೇ ಪ್ರದರ್ಶನವನ್ನು ಮುಂದುವರಿಸುವ ಗುರಿಯನ್ನು ನಾರ್ಥ್ ಈಸ್ಟ್ ಹೊಂದಿದೆ.

ನಾಲ್ಕು ಅಂಕಗಳನ್ನು ಗಳಿಸಿದೆ

ನಾಲ್ಕು ಅಂಕಗಳನ್ನು ಗಳಿಸಿದೆ

ಸತತ ಸೋಲಿನ ಆಘಾತ ಕಂಡಿರುವ ಚೆನ್ನೈಯಿನ್ ಎಫ್ ಸಿ ನಾಲ್ಕು ಪಂದ್ಯಗಳನ್ನಾಡಿ ನಾಲ್ಕು ಅಂಕಗಳನ್ನು ಗಳಿಸಿದೆ. ಆದರೆ ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಚೆನ್ನೈಯಿನ್ ಹಲವು ಧನಾತ್ಮಕ ಅಂಶಗಳನ್ನು ಒಡಗೂಡಿಸಿಕೊಂಡಿದೆ. ಎಲ್ಲ ಎದುರಾಳಿ ತಂಡಗಳಿಗೂ ನಿರಂತರವಾಗಿ ಆತಂಕವನ್ನು ಒಡ್ಡಿರುವುದು ಗಮನಾರ್ಹ. ಮುಂಬೈ ಸಿಟಿ ವಿರುದ್ಧ ಸೋತ ನಂತರ ಚೆನ್ನೈಯಿನ್ ತಂಡ ತಿರುಗೇಟು ನೀಡಲು ಸಜ್ಜಾಗಿದೆ, ಏಕೆಂದರೆ ಕೊನೆಯ ವಿಝಿಲ್ ಊದುವವರೆಗೂ ಹೋರಾಟ ನೀಡುವ ಛಾತಿ ಆ ತಂಡಕ್ಕೆ ಇದೆ.

ಹೋರಾಟ ನೀಡಬಲ್ಲರು

ಹೋರಾಟ ನೀಡಬಲ್ಲರು

"ಚೆನ್ನೈಯಿನ್ ಒಂದು ಉತ್ತಮ ಹೋರಾಟ ನೀಡುವ ತಂಡ" ಎಂದಿರುವ ನಸ್, "ಅವರು ಯಾವ ರೀತಿಯಲ್ಲಿ ಹೋರಾಟ ನೀಡಬಲ್ಲರು ಎಂಬುದು ನಮಗೆ ಗೊತ್ತು. (ಮುಂಬೈ ಸಿಟಿ ವಿರುದ್ಧದ ಪಂದ್ಯದಲ್ಲಿ) ಅವರಿಗೆ ಫಲಿತಾಂಶ ಸಿಗಲಿಲ್ಲ, ಆದರೆ ಅವರು ಸಾಕಷ್ಟು ಅವಕಾಶಗಳನ್ನು ನಿರ್ಮಿಸಿದ್ದರು. ಮತ್ತು ಅಪಾಯಕಾರಿ ತಂಡ. ಅನರು ನಮ್ಮ ವಿರುದ್ಧ ಬದ್ಧತೆಯೊಂದಿಗೆ ಮತ್ತು ಆಕ್ರಮಣಕಾಯಾಗಿ ಅಂಗಣಕ್ಕಿಳಿಯಲಿದ್ದಾರೆ. ನಾವು ಅದಕ್ಕೆ ಸಜ್ಜಾಗಿರಬೇಕು," "ನಾವು 90 ನಿಮಿಷಗಳ ವರೆಗೂ ಗಮನಹರಿಸಬೇಕು, ನಮ್ಮ ಸ್ಥಿರ ಪ್ರದರ್ಶನಕ್ಕೆ ಇದು ಪ್ರಮುಖವಾಗಿ ಬೇಕು." ಎಂದಿದ್ದಾರೆ. ನಾರ್ಥ್ ಈಸ್ಟ್ ಯುನೈಟೆಡ್ ಈ ಋತುವಿನಲ್ಲಿ ಇದುವರೆಗೂ ಜಂಟಿಯಾಗಿ ಅತಿ ಹೆಚ್ಚು ಗೋಲು (8) ಗಳಿಸಿದ ತಂಡವೆನಸಿದೆ. ಡಿಫೆನಸ್ಸ್ ವಿಭಾಗ ಎದುರಾಳಿ ತಂಡಗಳಿಗೆ ಕಠಿಣ ಸವಾಲಾಗಿದೆ. ಎರಡು ಕ್ಲೀನ್ ಶೀಟ್ ಸಾಧನೆ ಮಾಡಿರುವುದೇ ಇದಕ್ಕೆ ನಿದರ್ಶನವಾಗಿದೆ.

ಅಪಾಯ ತಂದೊಡ್ಡಬಹುದು

ಅಪಾಯ ತಂದೊಡ್ಡಬಹುದು

ಗವಾಹಟಿ ಮೂಲದ ತಂಡ ಯಾವ ರೀತಿಯಲ್ಲಿ ಅಪಾಯ ತಂದೊಡ್ಡಬಹುದು ಎಂಬುದು ಚೆನ್ನೈಯಿನ್ ಕೋಚ್ ಸಾಬಾ ಲಾಜ್ಲೊ ಅವರಿಗೆ ಚೆನ್ನಾಗಿ ತಿಳಿದಿದೆ. ಕೆಲವು ಗಾಯದ ಸಮಸ್ಯೆಗಳ ಹುರತಾಗಿಯೂ ತಂಡ ಉತ್ತಮ ರೀತಿಯಲ್ಲಿ ಸವಾಲು ನೀಡಲಿದೆ ಎಂಬ ನಂಬಿಕೆ ಅವರಿಗಿದೆ. "ನಾರ್ಥ್ ಈಸ್ಟ್ ತಂಡ ಉತ್ತಮ ರೀತಿಯಲ್ಲಿ ಆರಂಭ ಕಂಡಿದೆ. ಅವರದ್ದೊಂದು ಸ್ಥಿರ ತಂಡ. ಅಫೆನ್ಸ್ ವಿಭಾಗದಲ್ಲಿ ಅವರು ಹೊಸ ಆಟಗಾರರನ್ನು ಹೊಂದಿದ್ದಾರೆ, ಅವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇದು ಎಲ್ಲ ಎದುರಾಳಿಗಳ ವಿರುದ್ಧ ಗೋಲು ಗಳಿಸುವ ಸಾಮರ್ಥ್ಯ ಹೊಂದಿರುವ ತಂಡ. ಅದು ಅತ್ಯಂತ ಅಪಾಯಕಾರಿ ತಂಡ. ಅದಕ್ಕೆ ನಾವು ಸಜ್ಜಾಗಿರಬೇಕು. ಅದೇ ಸಂದರ್ಭದಲ್ಲಿ ನಾನು ನನ್ನ ತಂಡದ ಮೇಲೆ ನಂಬಿಕೆ ಇಟ್ಟಿದ್ದೇನೆ. ನಾವು ನಮ್ಮದೇ ಆದ ಶೈಲಿ ಮತ್ತು ಶಕ್ತಿ ಹೊಂದಿದ್ದೇವೆ. ಅವರ ವಿರುದ್ಧ ಇದನ್ನು ಪ್ರಯೋಗಿಸಲಿದ್ದೇವೆ," ಎಂದರು.

Story first published: Saturday, December 12, 2020, 21:56 [IST]
Other articles published on Dec 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X